For Quick Alerts
  ALLOW NOTIFICATIONS  
  For Daily Alerts

  'ಎನ್.ಟಿ.ಆರ್' ವಿಮರ್ಶೆ: ವಿಶ್ವರೂಪ ಪ್ರದರ್ಶಿಸಿದ ಬಾಲಯ್ಯ

  |

  ನಂದಮೂರಿ ತಾರಕ ರಾಮಾರಾವ್ ಅಂದ್ರೆ ಒಂದು ಚಿರಿತ್ರೆ. ತೆಲುಗು ಜನರ ಆತ್ಮಗೌರವ. ಕನ್ನಡಕ್ಕೆ ರಾಜ್ ಕುಮಾರ್ ಹೇಗೋ ತೆಲುಗಿನಲ್ಲಿ ಎನ್.ಟಿ.ಆರ್ ಹಾಗೆ. ಇಂತಹ ಮಹಾನ್ ನಟನ ಬಯೋಪಿಕ್ ಸಿನಿಮಾ ಈ ವಾರ ತೆರೆಕಂಡಿದೆ. ಎನ್.ಟಿ.ಆರ್ ಮಗ ಬಾಲಕೃಷ್ಣ ಅವರೇ ಈ ಚಿತ್ರದ ನಾಯಕನಾಗಿದ್ದು, ಸಿನಿಮಾ ಹೇಗಿದೆ ಎಂಬ ವಿಮರ್ಶೆ ಇಲ್ಲಿದೆ.

  Rating:
  3.0/5

  ಚಿತ್ರ: ಎನ್.ಟಿ.ಆರ್ ಕಥಾನಾಯಕುಡು

  ನಿರ್ದೇಶನ: ಕ್ರಿಶ್

  ಕಲಾವಿದರು: ಎನ್.ಟಿ.ಆರ್, ವಿದ್ಯಾಬಾಲನ್, ರಾಣಾ ಮತ್ತು ಇತರರು

  ಬಿಡುಗಡೆ: ಜನವರಿ 9, 2018

  ಎನ್.ಟಿ.ಆರ್ ಕಥಾನಾಯಕುಡು ಕಥೆ ಏನು?

  ಎನ್.ಟಿ.ಆರ್ ಕಥಾನಾಯಕುಡು ಕಥೆ ಏನು?

  ಸರ್ಕಾರಿ ಕಛೇರಿಯಲ್ಲಿ ತಹಸಿಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ನಂದಮೂರಿ ತಾರಕ ರಾಮಾರಾವ್, ಭ್ರಷ್ಟಚಾರ, ಅಕ್ರಮಗಳಿಂದ ಬೇಸತ್ತು ಆ ಕೆಲಸಕ್ಕೆ ರಾಜಿನಾಮೆ ನೀಡಿ, ಸಿನಿಮಾ ಪ್ರಪಂಚಕ್ಕೆ ಬರಲು ನಿರ್ಧರಿಸುತ್ತಾರೆ. ನಂತರ ಮದ್ರಾಸ್ ಗೆ ಬರುವ ಎನ್.ಟಿ.ಆರ್ ಹೀರೋ ಆಗುವುದಕ್ಕೆ ಎಷ್ಟು ಕಷ್ಟಪಟ್ಟರು, ನಂತರ ಯಶಸ್ಸಿನ ಪಲ್ಲಕ್ಕಿಯಲ್ಲಿ ರಾಜನಾಗಿ ಹೇಗೆ ಮರೆದರು ಎಂಬುದನ್ನ ಈ ಸಿನಿಮಾ ವಿವರವಾಗಿ ತೋರಿಸಿದೆ.

  ಬೆಂಗಳೂರಿಗೆ ಬಂದಿದ್ದ ಬಾಲಯ್ಯಗೆ ಪತ್ರಕರ್ತರು ಕೇಳಿದ 2 ಪ್ರಶ್ನೆ ಇಷ್ಟವಾಗಲಿಲ್ಲ.!

  ಸಾಮಾನ್ಯ ವ್ಯಕ್ತಿ ಸೂಪರ್ ಸ್ಟಾರ್ ಆದ ಕಥೆ

  ಸಾಮಾನ್ಯ ವ್ಯಕ್ತಿ ಸೂಪರ್ ಸ್ಟಾರ್ ಆದ ಕಥೆ

  ಸಾಮಾನ್ಯ ವ್ಯಕ್ತಿಯಾಗಿದ್ದ ಎನ್.ಟಿ.ಆರ್ ಭಾರತದ ಮೊದಲ ಸೂಪರ್ ಸ್ಟಾರ್ ಆಗಿದ್ಹೇಗೆ? ನಾಯಕನಾಗಿ ಯಶಸ್ಸು ಕಂಡಿದ್ದ ಎನ್.ಟಿ.ಆರ್ ನಿರ್ದೇಶಕನಾಗಿ, ನಿರ್ಮಾಪಕನಾಗಿ ಯಾಕೆ ಕೆಲಸ ಮಾಡಿದ್ರು? ಸಂಪೂರ್ಣವಾಗಿ ವೈಯಕ್ತಿಕ ಜೀವನವನ್ನ ಅನುಭವಿಸುತ್ತಿದ್ದ ಎನ್.ಟಿ.ಆರ್ ಪ್ರಜಾಸೇವೆ ಮಾಡಲು ಕಾರಣವಾದ ಆ ಪರಿಸ್ಥಿತಿ ಏನು? ರಾಜಕೀಯ ಪಕ್ಷವನ್ನ ಯಾಕೆ ಸ್ಥಾಪಿಸಿದ್ರು ಎಂಬುದನ್ನ ಕಥಾನಾಯಕುಡು ಸಿನಿಮಾ ಉತ್ತರ ನೀಡಿದೆ.

  ಪುಟ್ಟ ಮಗು ಅಪ್ಪು ಆಸೆಯನ್ನು ಕ್ಷಣದಲ್ಲೇ ಈಡೇರಿಸಿದ್ದ ಎನ್ ಟಿ ಆರ್

  ಮೊದಲಾರ್ಧದಲ್ಲಿ ಏನಿದೆ?

  ಮೊದಲಾರ್ಧದಲ್ಲಿ ಏನಿದೆ?

  ಚಿತ್ರದ ಮೊದಲಾರ್ಧದಲ್ಲಿ ಎನ್.ಟಿ.ಆರ್ ಸರ್ಕಾರಿ ನೌಕರನ ಜೀವನ ಮತ್ತು ಸಿನಿಮಾ ನಾಯಕನಾಗಬೇಕು ಎಂಬ ಆಸೆಯಿಂದ ಮದ್ರಾಸಿಗೆ ಬರುವ ಇಂಟ್ರೆಸ್ಟಿಂಗ್ ಕಥೆಯಿಂದ ಸಿನಿಮಾ ಆರಂಭವಾಗುತ್ತೆ. ಮಗ ರಾಮಕೃಷ್ಣನ ಸಾವು ಮೊದಲಾರ್ಧದ ಪ್ರಮುಖವಾಗಿ ಗಮನ ಸೆಳೆಯುವ ಸನ್ನಿವೇಶ. ಇನ್ನು ಕೃಷ್ಣನ ಪಾತ್ರದಲ್ಲಿ ಎಂಟ್ರಿ ಕೊಡುವ ಎನ್.ಟಿ.ಆರ್ ದೃಶ್ಯ ನೋಡ್ತಿದ್ರೆ ಒಂದು ಕ್ಷಣ ಮೈ ರೋಮಾಂಚನವಾಗುತ್ತೆ. ಈ ಕ್ಯಾರೆಕ್ಟರ್ ಸಿನಿಮಾವನ್ನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗುತ್ತೆ.

  ಸೆಕೆಂಡ್ ಹಾಫ್ ನಲ್ಲಿ ಏನಿದೆ?

  ಸೆಕೆಂಡ್ ಹಾಫ್ ನಲ್ಲಿ ಏನಿದೆ?

  ಅಸಲಿ ಕಥೆ ಶುರುವಾಗುವುದೇ ಸೆಕೆಂಡ್ ಹಾಫ್ ನಲ್ಲಿ. ಎನ್.ಟಿ.ಆರ್ ವೃತ್ತಿಜೀವನದ ಹಲವು ಅಂಶಗಳು ಇಲ್ಲಿ ತೆರೆದುಕೊಳ್ಳುತ್ತೆ. ಎನ್.ಟಿ.ಆರ್ ಮತ್ತು ಎ.ಎನ್.ಆರ್ ಸನ್ನಿವೇಶಗಳು ಪ್ರಮುಖ ಪಾತ್ರವಹಿಸುತ್ತೆ. ಜನರಿಗಾಗಿ ರಾಜ್ಯವ್ಯಾಪಿ ಎನ್.ಟಿ.ಆರ್ ಕೈಗೊಳ್ಳುವ ಯಾತ್ರೆಯ ಸನ್ನಿವೇಶಗಳು ಅದ್ಭುತವೆನ್ನುವಂತಿದೆ. ಈ ಮಧ್ಯೆ ರಾಜಕೀಯ ಪಾರ್ಟಿ ಘೋಷಣೆ ಮಾಡುವ ಸನ್ನಿವೇಶ ಹೈಲೈಟ್ ಎನ್ನಬಹುದು.

  'NTR' ಬಯೋಪಿಕ್ ನಲ್ಲಿ ಇರುತ್ತಾ ರಾಜ್ ಕುಮಾರ್ ಪಾತ್ರ?

  ಬಾಲಕೃಷ್ಣ ವಿಶ್ವರೂಪ

  ಬಾಲಕೃಷ್ಣ ವಿಶ್ವರೂಪ

  ಎನ್.ಟಿ.ಆರ್ ಪಾತ್ರದಲ್ಲಿ ಬಾಲಕೃಷ್ಣ ಅವರ ಅಭಿನಯದ ಅತ್ಯದ್ಭುತವಾಗಿದೆ. ಎಲ್ಲ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿರುವ ಬಾಲಯ್ಯ, ಎನ್.ಟಿ.ಆರ್ ರೀತಿಯೇ ಕಾಣ್ತಾರೆ. ಪಾತಾಳಬೈರವಿ, ಗುಂಡಮ್ಮ ಕಥಾ, ರಾವಣ ಬ್ರಹ್ಮ ಅಂತಹ ಸನ್ನಿವೇಶಗಳಲ್ಲಿ ಸೂಪರ್. ಮಗನ ಸಾವಿನ ಸನ್ನಿವೇಶದಲ್ಲಿ ಬಾಲಕೃಷ್ಣ ಅವರ ವಿಶ್ವರೂಪ ಪ್ರದರ್ಶನವಾಗುತ್ತೆ. ಸರ್ದಾರ್ ಪಾಪಾರಾಯುಡು, ಬೊಬ್ಬಿಲಿ ಪುಲಿ, ತುರ್ತುಪರಿಸ್ಥಿತಿಯಲ್ಲಿ, ಪದ್ಮಶ್ರೀ ಸ್ವೀಕಾರ ಸನ್ನಿವೇಶಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತೆ. ಕೆಲವು ಸನ್ನಿವೇಶಗಳಲ್ಲಿ ಚಿತ್ರಕ್ಕೆ ಮೇಕಪ್ ವಿಲನ್ ಆಗಿ ಪರಿಣಮಿಸಿದೆ.

  ವಿದ್ಯಾಬಾಲನ್ ಅಭಿನಯದ ವಾಹ್

  ವಿದ್ಯಾಬಾಲನ್ ಅಭಿನಯದ ವಾಹ್

  ವಿದ್ಯಾಬಾಲನ್ ಅವರ ಅಭಿನಯದಲ್ಲಿ ವಾಹ್ ಎನ್ನುವಂತಿದೆ. ಕೆಲಸ ಬಿಟ್ಟು ಸಿನಿಮಾ ಮಾಡ್ತೀನಿ ಅಂದಾಗ ಗಂಡನಿಗೆ ಬೆಂಬಲವಾಗಿ ನಿಲ್ಲುವ ಸನ್ನಿವೇಶ, ಮಗನನ್ನ ಕಳೆದುಕೊಂಡ ದುಃಖದ ಸ್ಥಿತಿ, ಯಮಗೋಲ ಚಿತ್ರದ ವೇಳೆ ಜಯಪ್ರದಾ ಡ್ಯಾನ್ಸ್ ಸನ್ನವೇಶ, ರಾಜಕೀಯ ಪ್ರವೇಶದ ಸಂದರ್ಭದಲ್ಲಿ ಹೀಗೆ ಪ್ರತಿ ಹಂತದಲ್ಲೂ ಎನ್.ಟಿ.ಆರ್ ಗೆ ಪತ್ನಿ ಹೇಗೆ ಜೊತೆಯಾಗಿದ್ದರು ಎಂಬುದನ್ನ ವಿದ್ಯಾ ಬಾಲನ್ ಕಣ್ಣಿಗೆ ಕಟ್ಟುವಂತೆ ನಟಿಸಿದ್ದಾರೆ.

  ಉಳಿದ ಪಾತ್ರಗಳು ಹೇಗೆ?

  ಉಳಿದ ಪಾತ್ರಗಳು ಹೇಗೆ?

  ಎನ್.ಟಿ.ಆರ್ ಜೀವನದಲ್ಲಿ ಎ.ಎನ್.ಆರ್ ಮಹತ್ವದ ಪಾತ್ರ. ಈ ಪಾತ್ರದಲ್ಲಿ ಸುಮಂತ್ ಜೀವಿಸಿದ್ದಾರೆ. ಇನ್ನುಳಿದಂತೆ ಮಿಕ್ಕೆಲ್ಲಾ ಪಾತ್ರಗಳಿಗೂ ಹೆಚ್ಚು ಮೌಲ್ಯವಿಲ್ಲ. ಹೀಗೆ ಬಂದು ಹಾಗೆ ಹೋಗ್ತಾರೆ. ನಿರ್ಮಾಪಕ ನಾಗಿ ರೆಡ್ಡಿ ಪಾತ್ರದಲ್ಲಿ ಪ್ರಕಾಶ್ ರಾಜ್, ಶ್ರೀದೇವಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಸಾವಿತ್ರಿ ಪಾತ್ರದಲ್ಲಿ ನಿತ್ಯಾ ಮೆನನ್, ಪ್ರಣಿತಾ ಸುಭಾಷ್, ಶ್ರಿಯಾ ಶರಣ್, ಹನ್ಸಿಕಾ ಮೊಟ್ವಾನಿ, ಶಾಲಿನಿ ಪಾಂಡೆ, ಬ್ರಹ್ಮಾನಂದಂ ಹೀಗೆ ಅನೇಕರ ಪಾತ್ರಗಳಿಗೆ ಜೀವ ನೀಡಿದ್ದಾರೆ. ಎಲ್ಲರೂ ಪಾತ್ರಕ್ಕೆ ತಕ್ಕ ಅಭಿನಯ ಮಾಡಿರುವುದು ಎನ್.ಟಿ.ಆರ್ ಗೆ ಸಾಥ್ ನೀಡಿದೆ. ಆದ್ರೆ, ಎಎನ್ಆರ್ ಬಿಟ್ಟರೇ ಉಳಿದ ಪಾತ್ರಗಳಿಗೆ ಹೆಚ್ಚಿನ ಬೆಲೆಯಿಲ್ಲ.

  ಡೈರೆಕ್ಟರ್ ಕ್ರಿಶ್ ಮತ್ತು ತಂಡ

  ಡೈರೆಕ್ಟರ್ ಕ್ರಿಶ್ ಮತ್ತು ತಂಡ

  ಎನ್.ಟಿ.ಆರ್ ಬಯೋಪಿಕ್ ತೆರೆಮೇಲೆ ಅಷ್ಟು ಅದ್ಭುತವಾಗಿ ಕಾಣಿಸಲು ನಿರ್ದೇಶಕ ಕ್ರಿಶ್ ಮತ್ತು ತಂಡದ ಪಾತ್ರ ಹೆಚ್ಚಿದೆ. ಕೆಲವು ದೃಶ್ಯಗಳಲ್ಲಿ ನಿರ್ದೇಶಕ ಕೆಲಸ ಬಹಳ ಮೆಚ್ಚುಗೆ ಪಡೆಯುತ್ತೆ. ಎರಡನೇ ಭಾಗ ಇರುವ ಕಾರಣದಿಂದ ಚಿತ್ರದ ಸೆಕೆಂಡ್ ಹಾಫ್ ಸ್ವಲ್ಪ ನಿಧಾನವಾಗಿದೆ. ಜನರನ್ನ ರಂಜಿಸಲು ಕ್ರಿಶ್ ಮಾಡಿರುವ ಪ್ರಯತ್ನ ಚೆನ್ನಾಗಿದೆ. ಇನ್ನುಳಿದಂತೆ ಜ್ಞಾನಶೇಖರ್ ಛಾಯಾಗ್ರಹಣ, ರಾಮಕೃಷ್ಣ ಎಡಿಟಿಂಗ್, ಚಿತ್ರಕ್ಕೆ ಉತ್ತಮ ಸಾಥ್ ನೀಡಿದೆ.

  ಚಿತ್ರದ ಪ್ಲಸ್ ಮತ್ತು ಮೈನಸ್ ನೋಡುವುದಾರೇ

  ಚಿತ್ರದ ಪ್ಲಸ್ ಮತ್ತು ಮೈನಸ್ ನೋಡುವುದಾರೇ

  ಪ್ಲಸ್ ಪಾಯಿಂಟ್

  ಬಾಲಕೃಷ್ಣ, ವಿದ್ಯಾಬಾಲನ್ ಅವರ ಅಭಿನಯ, ಕ್ರಿಶ್ ಅವರ ನಿರ್ದೇಶನ, ಸಾವಿ ಮಾಧವ್ ರಚನೆ, ಉಳಿದ ಕಲಾವಿದರ ನಟನೆ, ಇದೆಲ್ಲವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

  ಮೈನಸ್ ಪಾಯಿಂಟ್

  ಅದೇ ರೀತಿ ಸೆಕೆಂಡ್ ಹಾಫ್ ನಲ್ಲಿ ನಿಧಾನಗತಿಯ ಚಿತ್ರಕಥೆ ಪ್ರೇಕ್ಷಕರ ತಾಳ್ಮೆಯನ್ನ ಪರೀಕ್ಷಿಸುವಂತಿದೆ. ಉಳಿದ ಪಾತ್ರಗಳಿಗೆ ಹೆಚ್ಚಿನ ಅವಕಾಶ ಇಲ್ಲದೇ ಇರುವುದು ಮೈನಸ್ ಎನ್ನಬಹುದು.

  ಇದನ್ನೆಲ್ಲಾ ಮೀರಿ ಎನ್.ಟಿ.ಆರ್ ಜೀವನ ಕಥೆಯನ್ನ ಎಲ್ಲರೂ ನೋಡಬೇಕು. ಅವರ ಬಗ್ಗೆ ತಿಳಿಯದ ಇಂದಿನ ಯುವಜನಾಂಗ ಈ ಚಿತ್ರವನ್ನ ಮಿಸ್ ಮಾಡಿಕೊಳ್ಳಬಾರದು.

  English summary
  Legendary actor and former Andhra Pradesh Chief Minister Nandamuri Taraka Rama Rao (NTR), titled Kathanayakudu, is set to hit the screens today (January 9, 2019). here is the full review of movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X