twitter
    For Quick Alerts
    ALLOW NOTIFICATIONS  
    For Daily Alerts

    'ಒನ್ಸ್ ಮೋರ್ ಕೌರವ' ಸಿನಿಮಾ ನೋಡಿ ವಿಮರ್ಶಕರು ಏನಂದ್ರು?

    By Naveen
    |

    ಎಸ್.ಮಹೇಂದರ್ ನಿರ್ದೇಶನದ 'ಒನ್ಸ್ ಮೋರ್ ಕೌರವ' ಸಿನಿಮಾ ನಿನ್ನೆ(ನವೆಂಬರ್ 3) ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಪಕ್ಕಾ ಗ್ರಾಮಿಣ ಸೋಗಡಿನ ಈ ಚಿತ್ರವನ್ನು ಈಗಾಗಲೇ ಜನ ನೋಡಿ ಇಷ್ಟಪಟ್ಟಿದ್ದಾರೆ.

    ಇದರೊಂದಿಗೆ ವಿಮರ್ಶಕರು ಕೂಡ 'ಒನ್ಸ್ ಮೋರ್ ಕೌರವ' ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಇದೊಂದು ಸಂಪೂರ್ಣ ಕೌಟುಂಬಿಕ ಸಿನಿಮಾ ಎಂದು ವಿಮರ್ಶಕರು ಚಿತ್ರದ ಬಗ್ಗೆ ಬರೆದಿದ್ದಾರೆ.

    ಅಂದಹಾಗೆ, ಕನ್ನಡದ ಜನಪ್ರಿಯ ದಿನಪತ್ರಿಕೆಗಳಲ್ಲಿ ಬಂದ 'ಒನ್ಸ್ ಮೋರ್ ಕೌರವ' ಚಿತ್ರದ ವಿಮರ್ಶೆ ಮುಂದಿದೆ ಓದಿ...

    ಕೌರವನ ರಕ್ತಚರಿತ್ರೆ - ಉದಯವಾಣಿ

    ಕೌರವನ ರಕ್ತಚರಿತ್ರೆ - ಉದಯವಾಣಿ

    ''ಮೇಲ್ನೋಟಕ್ಕೆ ನಿಮಗೆ 'ಒನ್ಸ್ ಮೋರ್‌ ಕೌರವ' ಚಿತ್ರ ಒಂದು ಪೊಲೀಸ್‌ ಸ್ಟೋರಿಯಂತೆ ಕಂಡರೂ ಇಲ್ಲಿ ಅದರಿಂದ ಹೊರತಾದ ಒಂದು ಕಥೆ ಇದೆ. ಇಡೀ ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗೋದು ಕೂಡಾ ಅದೇ. ಆ ಮಟ್ಟಿಗೆ ನಿರ್ದೇಶಕ ಎಸ್‌.ಮಹೇಂದರ್‌ ಒಂದು ಗಟ್ಟಿಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ. ಸಾಮಾನ್ಯವಾಗಿ ಮಹೇಂದರ್‌ ಚಿತ್ರಗಳಿಂದ ನೀವು ಏನು ಬಯಸುತ್ತೀರೋ ಆ ಅಂಶಗಳು "ಕೌರವ'ದಲ್ಲೂ ಮುಂದುವರಿದಿದೆ. ಲವ್‌, ಸೆಂಟಿಮೆಂಟ್, ಆಕ್ಷನ್, ಗ್ರಾಮೀಣ ಸೊಗಡು, ಜೊತೆಗೆ ಕಾಮಿಡಿ... ಈ ಸರಕುಗಳನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಮಹೇಂದರ್‌. "ಒನ್ಸ್ ಮೋರ್‌ ಕೌರವ' ಯಾವುದೇ ಡಬಲ್ ಮೀನಿಂಗ್ ಇಲ್ಲದ, ಪಕ್ಕಾ ಗ್ರಾಮೀಣ ಹಿನ್ನೆಲೆಯ ಸಿನಿಮಾ.'' - ರವಿ ಪ್ರಕಾಶ್ ರೈ

    ಆ ಕೌರವನ ನೆನಪಿನಲ್ಲೊಂದು ಪ್ರಯತ್ನ - ವಿಜಯವಾಣಿ

    ಆ ಕೌರವನ ನೆನಪಿನಲ್ಲೊಂದು ಪ್ರಯತ್ನ - ವಿಜಯವಾಣಿ

    ''ಪಕ್ಕಾ ಫ್ಯಾಮಿಲಿ ಪ್ರೇಕ್ಷಕರಿಗಾಗಿ ಸಿನಿಮಾ ಮಾಡುವ ನಿರ್ದೇಶಕ ಎಸ್.ಮಹೇಂದರ್ ಈ ಬಾರಿ 'ಒನ್ಸ್ ಮೋರ್ ಕೌರವ' ಚಿತ್ರದಲ್ಲೂ ಅದೇ ಹಾದಿ ತುಳಿದಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯೊಬ್ಬನ ಕಥೆ ಹೇಳುತ್ತಲೇ ಜೊತೆಗೊಂದು ನವಿರಾದ ಪ್ರೇಮಕಥೆಯನ್ನು ಬಿತ್ತರಿಸುವ ಪ್ರಯತ್ನ ಮಾಡಿದ್ದಾರವರು. ಸೆಂಟಿಮೆಂಟ್, ಹಾಸ್ಯ, ಮೆಲೋಡ್ರಾಮ ಇತ್ಯಾದಿ ಅಂಶಗಳ ಪ್ಯಾಕೇಜ್​ನಂತೆ ಕಾಣುತ್ತಾನೆ ಈ '..ಕೌರವ'. ಕ್ಲೈಮ್ಯಾಕ್ಸ್ ಕೊಂಚ ಭಿನ್ನವಾಗಿದ್ದರೂ 90ರ ದಶಕದ ಕಥೆಗಳು ನೆನಪಿಗೆ ಬರುತ್ತವೆ. ಆಕ್ಷನ್ ದೃಶ್ಯಗಳಲ್ಲಿ ಇಷ್ಟವಾಗುವ ನರೇಶ್, ನಟನೆಯಲ್ಲಿ ಇನ್ನಷ್ಟು ಮಾಗಬೇಕಿದೆ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ ಅನುಷಾ. ಕೆಲವೇ ನಿಮಿಷಗಳು ತೆರೆಮೇಲೆ ಬಂದರೂ ದೇವರಾಜ್ ಮಿಂಚುತ್ತಾರೆ.'' - ಮದನ್ ಕುಮಾರ್ ಸಾಗರ

    ಮಹೇಂದರ್ - ಕೌರವ ಇಬ್ಬರೂ ವಾಪಸ್ಸು - ಕನ್ನಡ ಪ್ರಭ

    ಮಹೇಂದರ್ - ಕೌರವ ಇಬ್ಬರೂ ವಾಪಸ್ಸು - ಕನ್ನಡ ಪ್ರಭ

    ''ಎಸ್.ಮಹೇಂದರ್ ಅವರು ಎಲ್ಲೂ ತಮ್ಮ ಟ್ರೆಂಡ್ ಬಿಟ್ಟು ಕೊಡದೆ ಅಪ್ಪಟ್ಟ ಗ್ರಾಮಿಣ ಸೋಗಡಿನ ಸಿನಿಮಾ ಮಾಡಿದ್ದಾರೆ. ಕೇಳುವಂತಹ ಹಾಡುಗಳು, ಹಳ್ಳಿಯ ಹರಿಸು ಪರಿಸರವನ್ನು ನೋಡುವಂತೆ ತೋರಿಸಿರುವ ಕೃಷ್ಣಕುಮಾರ್ ಕ್ಯಾಮೆರಾ. ಹೀಗಾಗಿ ಕತೆ ಹಳ್ಳಿ ಬಿಟ್ಟು ಹೋಗದಿದ್ದರೂ ನೋಡುಗರಿಗೆ ಕೊಂಚ ಸಂಭ್ರಮ ಉಂಟು ಮಾಡುವುದು ಅದೇ ಹಾಡುಗಳು ಮತ್ತು ಕ್ಯಾಮೆರಾ. ಮೊದಲ ಸಿನಿಮಾದಲ್ಲಿಯೇ ಖಾಕಿ ತೊಟ್ಟಿರುವ ನರೇಶ್ ಗೌಡ ಮಾಸ್ ಲುಕ್ ಗೆ ಸೂಕ್ತ ನಟ ಅನಿಸುತ್ತಾರೆ. ಆದರೆ, ಅವರು ಬಾಡಿ ಲಾಂಗ್ವೇಜ್ ಜತೆಗೆ ಭಾವನೆಗಳ ಭಾಷೆಯೂ ಕಲಿತು, ನಟನೆ ತೋರುವ ತರಬೇತಿ ತೆಗೆದುಕೊಳ್ಳಬೇಕಿದೆ. ಎಸ್.ಮಹೇಂದರ್ ಸಿನಿಮಾ ಎಂದು ಹೋದವರಿಗೆ ನಿರಾಸೆಯೂ ಮಾಡಲ್ಲ. ಅದ್ಬುತ ಸಿನಿಮಾನೂ ಅನಿಸಲ್ಲ.'' - ಕೇಶವ ಮೂರ್ತಿ

    ವಿಮರ್ಶೆ: ನ್ಯಾಯ, ನಂಬಿಕೆ, ಪ್ರೀತಿಯ ಪ್ರತೀಕ ಈ ಕೌರವವಿಮರ್ಶೆ: ನ್ಯಾಯ, ನಂಬಿಕೆ, ಪ್ರೀತಿಯ ಪ್ರತೀಕ ಈ ಕೌರವ

    Once More Kaurava Review - Times of India

    Once More Kaurava Review - Times of India

    ''S Mahender is back on the screen telling the tale of another Kaurava. This time around, he has newbie Naresh Gowda playing the lead and he is the righteous policeman who is in a town full of corruption and hatred. Will this cop succeed in accomplishing what he hopes to eradicate? This story is akin to the tales of sentiment, familial ties and revenge and retribution that Mahender is known for.

    The story seems two decades too old, but it has nostalgia value of the old tales of the 90s and early 2000s. But this alone doesn't suffice enough entertainment and newbie Naresh, despite giving his all, seems a little too rigid in front of the camera. R Anusha is pleasing to watch and impresses. The film is for those who like their good old tales of emotion, melodrama and revenge. But do be warned that the film is can get too slow paced in parts.'' - Times of India

    English summary
    'Once More Kaurava' movie critics review. ಕನ್ನಡದ ದಿನಪತ್ರಿಕೆಗಳಲ್ಲಿ ಬಂದ 'ಒನ್ಸ್ ಮೋರ್ ಕೌರವ' ಸಿನಿಮಾದ ವಿಮರ್ಶೆ.
    Saturday, November 4, 2017, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X