»   » ವಿಮರ್ಶೆ: ನ್ಯಾಯ, ನಂಬಿಕೆ, ಪ್ರೀತಿಯ ಪ್ರತೀಕ ಈ ಕೌರವ

ವಿಮರ್ಶೆ: ನ್ಯಾಯ, ನಂಬಿಕೆ, ಪ್ರೀತಿಯ ಪ್ರತೀಕ ಈ ಕೌರವ

Posted By:
Subscribe to Filmibeat Kannada

ಆ 'ಕೌರವ' ಸಿನಿಮಾ ನೋಡಿ ಈ 'ಒನ್ಸ್ ಮೋರ್ ಕೌರವ' ಚಿತ್ರಕ್ಕೆ ಬಂದರೆ ನಿರಾಸೆ ಆಗುವುದಿಲ್ಲ. ನಿರ್ದೇಶಕ ಎಸ್.ಮಹೇಂದರ್ ಅವರ ಹಳೆಯ ಚಿತ್ರಗಳಂತೆ ಈ ಸಿನಿಮಾ ಕೂಡ ಒಂದು ಒಳ್ಳೆಯ ಕೌಟುಂಬಿಕ ಸಿನಿಮಾ.

Rating:
3.0/5

ಸಿನಿಮಾ : ಒನ್ಸ್ ಮೋರ್ ಕೌರವ

ನಿರ್ಮಾಣ: ನರೇಶ್ ಗೌಡ

ನಿರ್ದೇಶನ: ಎಸ್.ಮಹೇಂದರ್

ಸಂಗೀತ: ವಿ.ಶ್ರೀಧರ್ ಸಂಭ್ರಮ್

ಸಂಕಲನ: ಕೆ.ಎಂ.ಪ್ರಕಾಶ್

ಛಾಯಾಗ್ರಹಣ : ಕೃಷ್ಣ ಕುಮಾರ್

ತಾರಾಗಣ: ನರೇಶ್ ಗೌಡ, ಅನುಷಾ, ದೇವರಾಜ್, ಅನು ಪ್ರಭಾಕರ್ ಮತ್ತಿತರರು.

ಬಿಡುಗಡೆ: ನವೆಂಬರ್ 3 , 2017

'ಕೌರವ'ನ ಅಂತರಾಳ

ಒಂದು ಹಳ್ಳಿ.. ಅಲ್ಲಿ ಎರಡು ಧರ್ಮಗಳ ಜಗಳ. ಈ ಜಗಳಕ್ಕೆ ಪರಿಹಾರ ನೀಡಲು ಬರುವವನೇ ನಾಯಕ ಪೊಲೀಸ್ ಆಫೀಸರ್ ಕಿರಣ್ (ನರೇಶ್ ಗೌಡ). ನಿಷ್ಠಾವಂತ ಪೊಲೀಸ್ ಆಗಿರುವ ಕಿರಣ್ ಹಳ್ಳಿಯಲ್ಲಿ ನಡೆಯುವ ಎಲ್ಲ ಅಕ್ರಮಗಳನ್ನು ನಿಲ್ಲಿಸುತ್ತಾನೆ. ಇದರಿಂದ ಹಳ್ಳಿಯ ಗೌಡರನ್ನ ತನ್ನ ವಿರುದ್ದ ಕಟ್ಟಿಕೊಳ್ಳುತ್ತಾನೆ. ಅದರ ಮಧ್ಯೆ ಆತನಿಗೆ ಹಳ್ಳಿಯ ಹುಡುಗಿ ಎಲಿಜಿಬತ್ (ಅನುಪಾ) ನಡುವೆ ಪ್ರೀತಿ ಆಗುತ್ತದೆ. ಹೀಗೆ ಸಾಗುವ ಕಥೆಯಲ್ಲಿ ಮಧ್ಯಂತರದ ಸಮಯಕ್ಕೆ ಒಂದು ಟ್ವಿಸ್ಟ್ ಸಿಗುತ್ತದೆ. ಮುಂದೆ ಆ ಪೋಲಿಸ್ ಅಧಿಕಾರಿಗೂ ಆ ಹಳ್ಳಿಗೂ ಹಿಂದೆ ಇದ್ದ ನಂಟು ತಿಳಿಯುತ್ತದೆ. ಕೊನೆಗೆ ಹಳ್ಳಿಯ ಗೌಡರಿಗೂ ನಾಯಕನಿಗೂ ಇರುವ ದ್ವೇಷ ಯಾವ ಹಂತ ತಲುಪುತ್ತದೆ. ಹೇಗೆ ಆ ದುಷ್ಟರನ್ನು ಪೊಲೀಸ್ ಆಫೀಸರ್ ಕಿರಣ್ ಮಟ್ಟ ಹಾಕುತ್ತಾನೆ ಎನ್ನುವುದೇ ಚಿತ್ರದ ಕಥೆ.

ನಟನೆ

ನಟ ನರೇಶ್ ಗೌಡ ಮೊದಲ ಚಿತ್ರದಲ್ಲಿ ಪೊಲೀಸ್ ಆಗಿ ಖದರ್ ಆಗಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ನರೇಶ್ ನಟನೆ ಚೆನ್ನಾಗಿದೆ. ಆದರೆ ಸೆಂಟಿಮೆಂಟ್ ಸೇರಿದಂತೆ ಕೆಲ ದೃಶ್ಯಗಳಲ್ಲಿ ಇನ್ನು ಸಹಜವಾಗಿ ನಟಿಸಬಹುದಾಗಿತ್ತು. ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಳ್ಳಿ ಹುಡುಗಿ ಆಗಿ ಅನು‍ಷಾ ಅಭಿನಯ ಸೂಪರ್. ಚಿತ್ರದಲ್ಲಿ ನಟ ದೇವರಾಜ್ ಪಾತ್ರ ಹೈಲೈಟ್ ಆಗಿದೆ.

ಮಾನವೀಯ ಮೌಲ್ಯಗಳು

ಧರ್ಮದ ಜಗಳ, ಹೆಣ್ಣನ್ನು ಗೌರವದಿಂದ ಕಾಣಬೇಕು, ಮನುಷ್ಯನಿಗೆ ಸ್ನೇಹ, ಪ್ರೀತಿ, ನಂಬಿಕೆ ಮುಖ್ಯ ಹೀಗೆ ಸಾಕಷ್ಟು ಮಾನವೀಯ ಮೌಲ್ಯಗಳು ಚಿತ್ರದ ಕಥೆಯಲ್ಲಿ ಬೆರೆತಿದೆ. ಚಿತ್ರದ ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶವನ್ನು ಹೇಳಿದ್ದಾರೆ.

ಮಹೇಂದರ್ ಸಿನಿಮಾ

'ಒನ್ಸ್ ಮೋರ್ ಕೌರವ' ಮಹೇಂದರ್ ಸ್ಟೈಲ್ ಆಫ್ ಸಿನಿಮಾ. ಮಹೇಂದರ್ ಅವರ ಹಳೆಯ ಚಿತ್ರವನ್ನು ನೋಡಿ ಇಷ್ಟ ಪಟ್ಟವರಿಗೆ ಈ ಚಿತ್ರ ಕೂಡ ಹಿಡಿಸುತ್ತದೆ. ಎಂದಿನಂತೆ ಮಹೇಂದರ್ ಇಡೀ ಕುಟುಂಬ ಸೇರಿ ನೋಡುವ ಸಿನಿಮಾ ಮಾಡಿದ್ದಾರೆ.

ಸಿನಿಮಾದೊಳಗೊಂದು ನಾಟಕ

ಚಿತ್ರದ ಕಥೆಯ ಒಳಗೆ ಒಂದು ನಾಟಕ ಇದೆ. ಆ ನಾಟಕದ ಮೂಲಕ ಸಿನಿಮಾದ ಪ್ರಾರಂಭವಾಗಿ ನಾಟಕದ ಮೂಲಕವೇ ಸಿನಿಮಾ ಅಂತ್ಯವಾಗುತ್ತದೆ. ಸಿನಿಮಾದಲ್ಲಿ ನಾಟಕವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.

ಕ್ಯಾಮರಾ ಮ್ಯೂಸಿಕ್

ಚಿತ್ರದಲ್ಲಿ ಕೃಷ್ಣ ಕುಮಾರ್ ಕ್ಯಾಮರಾ ಕೈಚಳಕ ಸೊಗಸಾಗಿದೆ. ಹಳ್ಳಿಯ ಸೌಂದರ್ಯವನ್ನು ತುಂಬ ಸುಂದರವಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ವಿ.ಶ್ರೀಧರ್ ಸಂಭ್ರಮ್ ಹಾಡುಗಳು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ.

ಕ್ಲಾಸ್ ಸಿನಿಮಾ

ಸಿನಿಮಾದ ಅವಧಿ ಇನ್ನೂ ಸ್ವಲ್ಪ ಕಡಿಮೆ ಮಾಡಬೇಕಿತ್ತು ಎನ್ನುವುದನ್ನು ಬಿಟ್ಟರೆ ಚಿತ್ರದ ಬಗ್ಗೆ ತೆಗಳುವ ಅಂಶಗಳು ಕಡಿಮೆ. ಇನ್ನು ಯಾವುದೇ ಅಬ್ಬರ.. ಅಡಂಬರ ಇಲ್ಲದೆ ಒಂದು ಹಳ್ಳಿಯ ಪಕ್ಕಾ ಫ್ಯಾಮಿಲಿ ಕಥೆ ಈ 'ಒನ್ಸ್ ಮೋರ್ ಕೌರವ'.

English summary
Read 'Once More Kaurava' Kannada movie review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X