For Quick Alerts
  ALLOW NOTIFICATIONS  
  For Daily Alerts

  ಪನ್ನಗ ಭರಣ 'ಹ್ಯಾಪಿ ನ್ಯೂ ಇಯರ್' ಆಚರಣೆಗೆ ಬೆನ್ನುತಟ್ಟಿದ ವಿಮರ್ಶಕರು

  By Suneel
  |

  ಟಿ.ಎಸ್.ನಾಗಾಭರಣ ರವರ ಪುತ್ರ ಪನ್ನಗ ಭರಣ ಚೊಚ್ಚಲ ನಿರ್ದೇಶನದಲ್ಲಿಯೇ ಬಹು ದೊಡ್ಡ ತಾರಾಬಳಗ ಮತ್ತು ಐದು ಕಥೆಗಳಿರುವ ಒಂದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ 'ಹ್ಯಾಪಿ ನ್ಯೂ ಇಯರ್' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಮೂಲಕ ಪನ್ನಗ ಭರಣ ರವರು ಹೇಳಿರುವ ಸಂದೇಶಕ್ಕೆ ಸಿನಿ ಪ್ರಿಯರು ಬೆನ್ನುತಟ್ಟಿದ್ದಾರೆ. 'ಹ್ಯಾಪಿ ನ್ಯೂ ಇಯರ್' ಸಿನಿಮಾ ನೋಡಿದವರು 'ನ್ಯೂ ಇಯರ್' ಆಚರಣೆ ಮಾಡಿದಕ್ಕಿಂತ ಹೆಚ್ಚು ಎಂಜಾಯ್ ಮಾಡಿದ್ದಾರೆ.

  ಸಿನಿಮಾ ನೋಡಿದ ಪ್ರೇಕ್ಷಕರು ಮನಸ್ಸಿಗೆ ಮುದ ನೀಡುತ್ತದೆ, ಕತೆ ಚೆನ್ನಾಗಿದೆ, ಕೆಲಸದ ನಡುವೆ ಸಂತೋಷ ಕಳೆದುಕೊಳ್ಳುವ ಮಧ್ಯಮವರ್ಗದ ಜನತೆ ಸಣ್ಣ ಸಣ್ಣ ಖುಷಿಯನ್ನೂ ಹೇಗೆ ಮಿಸ್ ಮಾಡಿಕೊಳ್ಳುತ್ತಾರೆ ಎಂಬುದನ್ನು ಚೆನ್ನಾಗಿ ತಿಳಿಸಲಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿ ಮೆಚ್ಚಿದ್ದಾರೆ. ಹಾಗಿದ್ರೆ 'ಹ್ಯಾಪಿ ನ್ಯೂ ಇಯರ್' ನೋಡಿದ ನಮ್ಮ ಚಿತ್ರ ವಿಮರ್ಶಕರು ಪ್ರೇಕ್ಷಕರಂತೆ ಹ್ಯಾಪಿ ಆದ್ರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.[ವಿಮರ್ಶೆ: ಒಳ್ಳೆಯದಕ್ಕೆ, ಹೊಸತನಕ್ಕೆ, ಸಂತೋಷಕ್ಕಾಗಿ 'ನ್ಯೂ ಇಯರ್'ವರೆಗೂ ಕಾಯದಿರಿ]

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ವಿಮರ್ಶಕರು ಚಿತ್ರದ ಕುರಿತು ಏನೆಲ್ಲ ಹೇಳಿದ್ದಾರೆ ಇಲ್ಲಿದೆ ಓದಿರಿ...

  ಹೊಸ ಹೂಗಾರನ ಪ್ರಯೋಗ ಮಾಲೆ - ಪ್ರಜಾವಾಣಿ

  ಹೊಸ ಹೂಗಾರನ ಪ್ರಯೋಗ ಮಾಲೆ - ಪ್ರಜಾವಾಣಿ

  ಪನ್ನಗ ಭರಣ ಮೊದಲ ಚಿತ್ರದಲ್ಲಿ ಮಾಲೆ ಕಟ್ಟಲು ಹೋಗಿ ಉಪಕಥೆಗಳನ್ನು ಹೇಳುತ್ತೇನೆಂಬ ಆತ್ಮ ವಿಶ್ವಾಸದಲ್ಲಿ ಉಪ ಪ್ರಸಂಗಗಳನ್ನು ಪೋಣಿಸಿದ್ದಾರೆ. ಅಲ್ಲಲ್ಲಿ ಪರಿಮಳವಿದೆ. ಹೂ ದಳಗಳ ಬಣ್ಣ ಕೂಡ ಅವರಂದುಕೊಂಡ ಹದದಲ್ಲಿ ಮಿಳಿತವಾಗಿಲ್ಲ. ಉಪ ಪ್ರಸಂಗಗಳನ್ನು ಗಟ್ಟಿಯಾದ ಸೂತ್ರದಲ್ಲಿ ಕಟ್ಟುವುದು ಅವರಿಗೆ ಸಾಧ್ಯವಾಗಿಲ್ಲ. ಪಾತ್ರಗಳು ಸಿನಿಮಾದಲ್ಲಿ ಭಾವತಂತಿಗಳನ್ನು ಮೀಟುತ್ತವೆಯಾದರೂ ನಿರ್ದಿಷ್ಟ ಬಂಧವಿಲ್ಲ. ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್ ಸಂಭಾಷಣೆ ಅಲ್ಲಲ್ಲಿ ಹೃದಯಕ್ಕೆ ಕೈಹಾಕುವಂತಿದೆ. ರಘು ದೀಕ್ಷಿತ್ ಸಂಯೋಜನೆಯ ಎರಡು ಹಾಡುಗಳು ಶ್ಲಾಘನೀಯ. ಹೊಸತೇನನ್ನೋ ಹೇಳುವ ಪನ್ನಗ ಅವರ ತುಡಿತವನ್ನು ಒಪ್ಪಿಕೊಂಡು, ಅವರ ಮುಂದಿನ ಪ್ರಯತ್ನಗಳ ಕುರಿತು ಕಣ್ಣರಳಿಸಿಕೊಂಡು ಕಾಯಬಹುದು - ವಿಶಾಖ ಎನ್.

  ನೋವು ನಲಿವಿನ ಏಣಿಯಾಟ: ವಿಜಯ ಕರ್ನಾಟಕ

  ನೋವು ನಲಿವಿನ ಏಣಿಯಾಟ: ವಿಜಯ ಕರ್ನಾಟಕ

  ಪನ್ನಗ ಭರಣ ಪಯತ್ನ ಮೆಚ್ಚವಂತದ್ದೆ. ಹಲವು ಕತೆಗಳಿರುವ ಚಿತ್ರದಲ್ಲಿ ಒಂದು ಕತೆ ದಿಕ್ಕುತಪ್ಪಿದರೂ ಚಿತ್ರ ಹಳ್ಳ ಹಿಡಿಯುತ್ತದೆ. ಈ ದಿಶೆಯಲ್ಲಿ ಪನ್ನಗ ಸ್ವಲ್ಪ ಎಡವಿದ್ದಾರೆ. ಐದರಲ್ಲಿ ಮೂರು ಕತೆಗಳು ಚಿತ್ರಕ್ಕೆ ನ್ಯಾಯ ಒದಗಿಸಿವೆ. ಪಾತ್ರದ ಆಯ್ಕೆಯಲ್ಲಿ ಜಾಣ್ಮೆಯಿದೆ. ಸಂಭಾಷಣೆಯಲ್ಲಿ ಇನ್ನಷ್ಟು ಕೃಷಿ ಮಾಡಬೇಕಿತ್ತು. ಪ್ರೀತಿಯೇ ಪ್ರಧಾನ ಅಂಶವಾದ್ದರಿಂದ ಚಿತ್ರಕ್ಕೆ ವೈವಿಧ್ಯತೆ ಕೊಡಲಾಗಿಲ್ಲ. ಅಂತಿಮವಾಗಿ ಸಂದೇಶಕ್ಕೆ ನ್ಯಾಯ ಒದಗಿಸಿದ್ದಾರೆ. ತಾರಾಗಣದ ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಂಗೀತ ಕುಳಿತಲ್ಲೇ ಹೆಜ್ಜೆಹಾಕುವಂತಿದೆ. ವಿಭಿನ್ನ ಆಲೋಚನೆ ಇಟ್ಟುಕೊಂಡು ಮಾಡಿದ ಚಿತ್ರ ತಕ್ಕಮಟ್ಟಿಗೆ ಪ್ರೇಕ್ಷಕನ ಮನಸ್ಸನ್ನು ತಟ್ಟುತ್ತದೆ.

  ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂಬ ಪುರಾತನ ಮಾತಿನಂತೆ!: ಕನ್ನಡಪ್ರಭ

  ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂಬ ಪುರಾತನ ಮಾತಿನಂತೆ!: ಕನ್ನಡಪ್ರಭ

  'ಜೀವನ ಬದಲಿಸುವ ಆಶಾದಾಯಕ ಕಥೆ'ಯನ್ನು ನಿರ್ದೇಶಕ ಮೂಡಿಸಿದ್ದರೂ, ಯಾವ ಕಥೆಗಳಲ್ಲೂ ತಾಜಾತನ ಇರದಿರುವುದು ಬೇಸರ ಮೂಡಿಸುತ್ತದೆ. ಪಾತ್ರಗಳ ಸೃಷ್ಟಿಗೆ ಕೂಡ ಕಾಡುವ ಶಕ್ತಿ ಇಲ್ಲ. ಪ್ರೇಕ್ಷಕನ ಮನಮಿಡಿಯುವಲ್ಲಿ ಕಥೆ ವಿಫಲವಾಗುತ್ತವೆ. ಕೆಲವು ಕಥೆಗಳು ರಿಪೀಟ್ ಆಗಿವೆ. ಪ್ರೇಕ್ಷಕ ಊಹಿಸಿದಂತೆಯೇ ಎಲ್ಲ ಕಥೆಗಳು ಅಂತ್ಯ ಕಾಣುತ್ತವೆ. ತಾಂತ್ರಿಕವಾಗಿ ಚಿತ್ರ ಸಹಕರಿಸಿದೆ. ಛಾಯಾಗ್ರಹಣ ಒಂದು ಕಥೆಯಿಂದ ಇನ್ನೊಂದು ಕಥೆಗೆ ಶ್ರಮವಿಲ್ಲದಿರುವುದು ಕಾಣುತ್ತದೆ. ತಾರಾಬಳಗ ಪಾತ್ರಕ್ಕೆ ನ್ಯಾಯ ಒಗದಿಸಿದೆ. ಬಹಳ ಸುಲಭವಾದ ಕಥೆಗಳನ್ನು ಆಯ್ಕೆ ಮಾಡಿಕೊಂಡು, ಸುಲಭ ಸಂಘರ್ಷಗಳನ್ನು ಮೂಡಿಸಿ, ಯಾವುದನ್ನು ಆಳಕ್ಕೆ ಕೊಂಡೊಯ್ಯದೆ, ಮಾತಿನ ಭಾರದಲ್ಲಿ ಸಿನೆಮಾ ಬೆಳೆಸಿ ಮಿಶ್ರ ಭಾವನೆ ಮೂಡಿಸಿದ್ದಾರೆ.

  ಏಳು ಬೀಳುಗಳ ಹೊಸ ವರ್ಷ: ಉದಯವಾಣಿ

  ಏಳು ಬೀಳುಗಳ ಹೊಸ ವರ್ಷ: ಉದಯವಾಣಿ

  'ಹ್ಯಾಪಿ ನ್ಯೂ ಇಯರ್' ಐದು ಜೋಡಿಗಳು, ಐದು ಕಥೆಗಳು, ಐದು ಸಂಘರ್ಷಗಳು. ಇದೊಂದು ಅದ್ಭುತ ಪ್ರಯೋಗ ಮತ್ತು ಈ ತರಹದ ಪ್ರಯೋಗ ಕನ್ನಡದಲ್ಲಿ ಆಗಿಯೇ ಇಲ್ಲ ಎಂದು ಹೇಳುವುದು ಕಷ್ಟ. ಆದರೆ ಪನ್ನಗ ರವರ ಮೊದಲ ನಿರ್ದೇಶನವೇ ಈ ರೀತಿ ಚಿತ್ರವಾದ್ದರಿಂದ ಪ್ರಯತ್ನ ಮೆಚ್ಚಬೇಕು. ಜೀವನದಲ್ಲಿ ಸಂತೋಷವಾಗಿರುವುದಕ್ಕೆ ಪ್ರಯತ್ನಿಸಬೇಕು ಮತ್ತು ಆ ಸಂತೋಷವನ್ನು ಮುಂದೂಡನೇ ಅನುಭವಿಸಬೇಕು ಎಂಬುದನ್ನ ಚಿತ್ರದುದ್ದಕ್ಕೂ ಹೇಳಿದ್ದಾರೆ. ಚಿತ್ರದ ಕೊನೆಯ 20 ನಿಮಿಷಗಳಲ್ಲಿ ಪ್ರತಿಯೊಂದು ಕಥೆಗೆ ಅರ್ಥ ಸಿಗುತ್ತದೆ. ಚಿತ್ರದಲ್ಲಿ ತರಹೇವಾರಿ ಎಮೋಷನ್ ಗಳಿದ್ದರೂ ಪ್ರೇಕ್ಷಕರನ್ನು ಹಿಡಿದಿಡುವುದಿಲ್ಲ. ಚಿತ್ರದಲ್ಲಿ ತಪ್ಪುಗಳನ್ನು ಕಂಡುಹಿಡಿಯುವುದು ಕಷ್ಟ. ಚಿತ್ರದಲ್ಲಿ ಅಭಿನಯ, ಛಾಯಾಗ್ರಹಣ, ಸಂಗೀತ ಎಲ್ಲಾ ವಿಷಯದಲ್ಲೂ ಪ್ಲಸ್ ಜಾಸ್ತಿಯಾಗಿಯೇ ಇದೆ. ಶ್ರೀಷ ಕೂದುವಳ್ಳಿ ಚಂದವಾದ ಪರಿಸರ ಕಟ್ಟಿಕೊಟ್ಟರೆ, ರಘು ದೀಕ್ಷಿತ್ ಸಂದರ್ಭಕ್ಕೆ ತಕ್ಕ ಸಂಗೀತ ಒದಗಿಸಿದ್ದಾರೆ.

  Happy New Year Movie Review: The Times Of India

  Happy New Year Movie Review: The Times Of India

  Debut director Pannaga Bharana's Happy New Year is much on the likes of Hollywood romances like Love Actually, Valentine's Day and the lot. The film is a feel-good entertainer that has many moments when you can feel that warm, fuzzy feeling. The candyfloss entertainer is visually delightful and is complemented with strong performances and good music. Pannaga shows a lot of promise with his debut directorial venture. The film has action, romance, comedy and some bittersweet moments, too. The fact that one gets to savour each of the five tales. The film is definitely worth that summer vacation watch, which you can watch with either your entire family or your special someone.

  An Interesting Anthology: Bangalore Mirror

  An Interesting Anthology: Bangalore Mirror

  The stories are interesting in themselves and are neatly packaged into one film. Pannaga has a grip on the narration - he seems seasoned for a debutant. The highlights of the film include the music by Raghu Dixit. He sustains different moods in each of the songs. The performances by veteran Sudharani and Vijay Raghavendra is a treat. Saikumar's comedy act too is endearing. Overall the film is a neat little package of a bit of everything. It is a slice of life from characters from different sections of the city.

  English summary
  Pannaga Bharana directorial, Sruthi Hariharan, Dhananjay, B C Patil, Sudharani, Diganth, Vijay Raghavendra Starrer 'Happy New Year' Film has hit the screens yesterday(May 5th). Here is the critics review of 'Happy New Year' Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X