»   » ಪ್ರೀತಿ-ಪ್ರೇಮ-ಪ್ರೇತದ 'ಜೆಸ್ಸಿ' ಕಥೆಗೆ ಮನಸೋತ ವಿಮರ್ಶಕರು!

ಪ್ರೀತಿ-ಪ್ರೇಮ-ಪ್ರೇತದ 'ಜೆಸ್ಸಿ' ಕಥೆಗೆ ಮನಸೋತ ವಿಮರ್ಶಕರು!

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಿರ್ದೇಶಕ ಪವನ್ ಒಡೆಯರ್ ಮತ್ತೊಮ್ಮೆ ವಿಮರ್ಶಕರ ಮನ ಗೆದ್ದಿದ್ದಾರೆ. 'ಗೋವಿಂದಾಯ ನಮಃ', 'ಗೂಗ್ಲಿ' ಹಾಗೂ 'ರಣವಿಕ್ರಮ' ಚಿತ್ರಗಳ ಮೂಲಕ ಜನ ಮೆಚ್ಚುಗೆ ಗಳಿಸಿದ್ದ ಪವನ್ ಒಡೆಯರ್ ಇದೀಗ 'ಜೆಸ್ಸಿ' ಸಿನಿಮಾದಿಂದ ಮತ್ತೊಮ್ಮೆ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದ್ದಾರೆ.

  ಹೌದು, ಕೊಂಚ ವಿಭಿನ್ನ ಕಥಾಹಂದರ ಹೊಂದಿರುವ 'ಜೆಸ್ಸಿ' ಸಿನಿಮಾ ಕಳೆದ ಶುಕ್ರವಾರವಷ್ಟೆ ತೆರೆಗೆ ಬಂದಿತ್ತು. ಲವ್ ಸ್ಟೋರಿಗೆ ಹಾರರ್ ಟಚ್ ಇರುವ 'ಜೆಸ್ಸಿ' ಸಿನಿಮಾ ನೋಡಿದ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆದರು.[ವಿಮರ್ಶೆ; 'ಜೆಸ್ಸಿ' ಸುಂದರ, ಅಷ್ಟೇ ಭಯಾನಕ ಪ್ರೇಮ ಕಾವ್ಯ!]

  ಸ್ಯಾಂಡಲ್ ವುಡ್ ಮಟ್ಟಿಗೆ ಹೊಸ ಪ್ರಯತ್ನವಾಗಿರುವ 'ಜೆಸ್ಸಿ' ಚಿತ್ರಕ್ಕೆ ವಿಮರ್ಶಕರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂದ್ರೆ ನೀವು ನಂಬಲೇಬೇಕು.

  ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳಲ್ಲಿ 'ಜೆಸ್ಸಿ' ಬಗ್ಗೆ ಪಾಸಿಟೀವ್ ವಿಮರ್ಶೆಗಳು ಪ್ರಕಟವಾಗಿದೆ. ಆ ಎಲ್ಲಾ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ಪ್ರೇಮಲೋಕದಲ್ಲಿ ಅಲ್ಲಕಲ್ಲೋಲ - ಪ್ರಜಾವಾಣಿ

  ಅದು ಮಾಲ್ಗುಡಿ ಎನ್ನುವ ಊರು. ಡಾ. ನಂದಿನಿ (ಪಾರುಲ್ ಯಾದವ್) ಮತ್ತು ಜೆಸ್ಸಿ (ಧನಂಜಯ್) ನಡುವೆ ಪ್ರೀತಿ ಹುಟ್ಟುತ್ತದೆ. ‘ಪರಸ್ಪರ ಮುಟ್ಟದೆಯೇ ಪ್ರೀತಿಸೋಣ' ಎನ್ನುವ ಜೆಸ್ಸಿ ಮಾತಿಗೆ ಆಕೆ ಒಪ್ಪಿದ್ದಾಳೆ! ಈ ನಡುವೆ ನಂದಿನಿಗೆ ವರಾನ್ವೇಷಣೆಯ ಪ್ರಯತ್ನದಲ್ಲಿದ್ದಾರೆ ಆಕೆಯ ಪೋಷಕರು. ‘ಅಲ್ಲಿ ಕಾಣುವುದು ನನ್ನ ಮನೆ. ನಾನು ನನ್ನ ತಾಯಿ ಅಲ್ಲಿ ಇರುತ್ತೇವೆ' ಎಂದು ‘ಜೆಸ್ಸಿ' ತೋರಿಸಿದ್ದ ಮನೆಗೆ ನಂದಿನಿ ಒಬ್ಬಳೇ ಬರುತ್ತಾಳೆ. ಆದರೆ, ಅಲ್ಲಿ ಕಾಣುವ ಚಿತ್ರಣ ಪ್ರೇಮಲೋಕದಲ್ಲಿ ಅಲ್ಲಕಲ್ಲೋಲ ಉಂಟುಮಾಡುತ್ತದೆ. ಪ್ರೇಮಕಥೆಯೊಳಗೊಂದು ರೋಚಕ ಕಥೆಯನ್ನು ನಿರ್ದೇಶಕ ಪವನ್ ಒಡೆಯರ್‌ ರೂಪಿಸಿದ್ದಾರೆ.

  ಪ್ರೀತಿಯ ಆತ್ಮಕತೆ, ಆತ್ಮದ ಪ್ರೇಮಕತೆ - ಉದಯವಾಣಿ

  'ಊರಲ್ಲಿ ಸಿಕ್ಕರೆ ಡೀಪ್ ಆಗಿ ಲವ್ ಮಾಡೋಕ್ಕಾಗಲ್ಲ. ನಾನು ಮೊಬೈಲ್ ಗಿಬೈಲ್ ಇಡೋಲ್ಲ. ನಾನು-ನೀನು ಯಾವತ್ತೂ ಒಂದಾಗಕ್ಕಾಗೋಲ್ಲ..!' - ಈ ಡೈಲಾಗ್ ರಿಪೀಟ್ ಆಗುವ ಹೊತ್ತಿಗೆ, ಆತಂಕದ ಟ್ವಿಸ್ಟ್ ಶುರುವಾಗಿರುತ್ತೆ. ನೋಡುವ ಪ್ರೇಕ್ಷಕನಲ್ಲೂ ನಿಗೂಢ ಸತ್ಯದ ಅರಿವಾಗಿರುತ್ತೆ. ಒಂದು ಕನ್ನಡ ಸಿನಿಮಾ ನೋಡೋಕೆ ಅಪಾರ ಅಭಿಮಾನ ಇರದಿದ್ದರೂ ಪರವಾಗಿಲ್ಲ. 'ಆತ್ಮಾ'ಭಿಮಾನವಿದ್ದರೆ ಸಾಕು! ಕನ್ನಡ ಚಿತ್ರಕ್ಕೊಂದು ಹೊಸ ಆಯಾಮ ಸಿಗುತ್ತೆ ಅನ್ನುವುದಕ್ಕೆ 'ಜೆಸ್ಸಿ'ಯೊಳಗಿನ 'ಆತ್ಮ' ಅಭಿಮಾನವೇ ಸಾಕ್ಷಿ. ನಿರ್ದೇಶಕ ಪವನ್ ಒಡೆಯರ್ ಇಲ್ಲಿ ತುಂಬಾ ನೀಟ್ ಆಗಿ ಬ್ಯಾಟಿಂಗ್ ಮಾಡಿದ್ದಾರೆ. - ವಿಜಯ್ ಭರಮಸಾಗರ

  ಪ್ರೀತಿ ಪ್ರೇಮಕ್ಕೆ ಸೋತ ಪ್ರೇತ - ವಿಜಯ ಕರ್ನಾಟಕ

  ಚಿತ್ರದಲ್ಲಿ ಹೊಸತನವಿದೆ. ಉತ್ತಮ ಸ್ಕ್ರಿಪ್ಟ್ ಮಾಡಿರುವ ಪವನ್ ಕುತೂಹಲ ಕೆರಳಿಸುವುದರಲ್ಲಿ, ನೋಡುಗರಿಗೆ ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದಿನಿಯನ್ನು ಇಬ್ಬರೂ ನಾಯಕರು ನೋಡಿದಾಕ್ಷಣ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಮಾತ್ರ ಸಹಜ ಅನ್ನಿಸುವುದಿಲ್ಲ. ಪ್ರೇತದೊಂದಿಗೆ ರೋಮಾನ್ಸ್ ಸಾಧ್ಯವೇ? ಸತ್ತ ಮೇಲೂ ಭಾವನೆಗಳಿರುತ್ತವೆಯೇ ಅನ್ನೋ ಪ್ರಶ್ನೆಬದಿಗಿಟ್ಟು ಫ್ಯಾಂಟಸಿ ಎಂದು ನೋಡೋದಾದ್ರೆ ನೀಟಾದ ಚಿತ್ರ ಇದು. ಸಿಲ್ಲಿ ವಿಷಯವನ್ನೂ ಸಿಲ್ಲಿ ಅನ್ನಿಸದ ಹಾಗೆ ತೋರಿಸಲಾಗಿದೆ. ಅರುಲ್ ಸೋಮಸುಂದರ್ ಛಾಯಾಗ್ರಹಣ, ಸುರೇಶ್ ಅರ್ಮುಗಂ ಸಂಕಲನ ಸುಂದರ. ಹಾರರ್ ಸಿನಿಮಾಗಳಲ್ಲಿ ಕಾಣುವ ವಿಕಾರ ಮತ್ತು ಅಬ್ಬರ ಇಲ್ಲಿಲ್ಲ. ಪ್ರೇತವನ್ನೂ ಡೀಸೆಂಟ್ ಆಗಿ ತೋರಿಸಲಾಗಿದೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಧನಂಜಯ್ ಡಲ್ ಅನ್ನಿಸುತ್ತಾರೆ. ಪಾರೂಲ್ ನಟನೆ ಓಕೆ. ಮೆಚ್ಯೂರ್ಡ್ ಗಂಡನಾಗಿ ರಘು ಮುಖರ್ಜಿ ಅಭಿನಯ ಎಕ್ಸಲೆಂಟ್. ಚಿಕ್ಕ ಕಾಮಿಡಿ ದೃಶ್ಯಗಳಲ್ಲಿ ಚಿಕ್ಕಣ್ಣ ಮತ್ತು ಸಾಧು ಸಿಳ್ಳೆ ಗಿಟ್ಟಿಸುತ್ತಾರೆ. ಗೌತಮಿ ಸೇರಿದಂತೆ ಉಳಿದೆಲ್ಲಾ ನಟರ ಅಭಿನಯ ಗುಡ್. - ಪದ್ಮಾ ಶಿವಮೊಗ್ಗ

  When spirit falls in love! - Deccan Chronicle

  Thankfully, a rare among the very few directors who strictly believes in straight subjects and vows never to do a remake, has webbed a simple story treating it with utmost care, and the technical support of background score which is always the 'soul' of an effective horror movie is at its best making Jessie a good watch. With no rocket science involved in the plot, it revolves around three characters - a beautiful young doctor Nandini (Parul Yadav), Jessie (Dhananjay) and Shyam Prasad (Raghu Mukherjee). A typical set up of a triangular love story but the catch here is around the third one who is beyond the reach. - Shashiprasad SM

  A SCARY LOVE TRIANGLE - Bangalore mirror

  The real entertainment starts post interval. The mild horror may not be unique (Even the master of this genre, director P Vasu, and the film Apthamitra are paid homage to) but the film has a good momentum to keep the audience engaged. The ghostly lover is in no mood to let go of the girl even as her love for him (or it?) turns to aversion. The biggest support for Wadeyar is the background score. It is nothing short of brilliant. The melodious songs and the street-smart dialogue pep up the proceedings. - Shyam Prasad S

  English summary
  Kannada Actor Dhananjay, Raghu Mukherjee and Kannada Actress Parul Yadav starrer Pawan Wadeyar directorial 'Jessie' movie has received positive response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more