»   » ಪೀಕು ವಿಮರ್ಶೆ: ಹೊಟ್ಟೆಪಾಡಿನ ಮನೆ ಮನೆ ಕಥೆ

ಪೀಕು ವಿಮರ್ಶೆ: ಹೊಟ್ಟೆಪಾಡಿನ ಮನೆ ಮನೆ ಕಥೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗ ಮತ್ತೊಮ್ಮೆ ಉತ್ತಮ ಹಾದಿ ಹಿಡಿದಿದೆ. ಸೆಕ್ಸ್, ಸಾಹಸ, ಮಸಾಲ ಚಿತ್ರಗಳ ನಡುವೆ ಸದಭಿರುಚಿ ಚಿತ್ರಗಳನ್ನು ನಿರ್ಮಿಸಿ ಜನರಿಗೆ ಮಾಹಿತಿ, ಮನರಂಜನೆ ನೀಡುವ ಚಿತ್ರಕರ್ಮಿಗಳು ಇನ್ನೂ ಚಾಲ್ತಿಯಲ್ಲಿದ್ದಾರೆ. ಹಠಕ್ಕೆ ಬಿದ್ದಂತೆ ವಿಭಿನ್ನ, ವಿಶಿಷ್ಟ ಪಾತ್ರಗಳ ದಿರಿಸಿನಲ್ಲಿ ತಮ್ಮನ್ನು ಕಾಣುತ್ತಿರುವ ಬಿಗ್ ಬಿ ಅಮಿತಾಬ್ ಮತ್ತೊಮ್ಮೆ ಗೆದ್ದಿದ್ದಾರೆ.

ನಿರ್ದೇಶಕ ಶೂಜಿತ್ ಸಿರ್ಕಾರ್ ಸೆನ್ಸಿಬಲ್ ಕಥೆಯನ್ನು ಹಾಸ್ಯಮಯ ಧಾಟಿಯಲ್ಲಿ ಜನ ಮನಕ್ಕೆ ಮುಟ್ಟಿಸುತ್ತಾರೆ. ಇದು ಮನೆ ಮನೆ ಕಥೆ. ಪ್ರಧಾನ ಪಾತ್ರಧಾರಿ ಪೀಕು ಬ್ಯಾನರ್ಜಿ(ದೀಪಿಕಾ ಪಡುಕೋಣೆ) ಹಾಗೂ ಆಕೆ ವಯೋವೃದ್ಧ ತಂದೆ (ಭಾಸ್ಕರ್ ಬ್ಯಾನರ್ಜಿ) ನಡುವಿನ ಮಾತುಕತೆ, ಒಡನಾಟ, ಆಪ್ತತೆ, ಅಸಹಾಯಕತೆ, ಅನೀರ್ವಚನೀಯ ಅನುಭವ ನೀಡುತ್ತದೆ.

ಮಲಬದ್ಧತೆಯನ್ನು ದೇಹಕ್ಕಷ್ಟೆ ಅಲ್ಲ ಮನಸ್ಸಿಗೂ ನಾಟಿಸಿಕೊಂಡ ಅಮಿತಾಬ್ ಪಾತ್ರ, ತಂದೆಯ ಅಗತ್ಯಗಳನ್ನು ಪೂರೈಸಲು ಸಿದ್ದಳಾದ ಮಗಳಾಗಿ ದೀಪಿಕಾ ಮನೋಜ್ಞ ಅಭಿನಯ ನೀಡಿದ್ದಾರೆ.

ತಂದೆ ಮಗಳ ಸಂಬಂಧದ ನಡುವೆ ಹೊಸ ಅನುಬಂಧ ಬೆಸೆಯಲು ಬರುವ ಇರ್ಫಾನ್ ಖಾನ್ ಹೇಗೆ ಈ ಕುಟುಂಬದಲ್ಲಿ ಒಬ್ಬರಾಗಿ ಪ್ರಯಾಣಿಸುತ್ತಾರೆ. ದೀಪಿಕಾ ಜೊತೆಗೆ ಪ್ರೇಮ ಸಂಬಂಧ ಮದುವೆ ತನಕ ಕರೆದೊಯ್ಯುವುದೇ, ಅಮಿತಾಬ್ ಅವರ ಹೊಟ್ಟೆ ಸಮಸ್ಯೆ ಸರಿ ಹೋಗುವುದೇ? ದೀಪಿಕಾಳಿಗೆ ತನ್ನಿಷ್ಟದ ಬದುಕು ಸಾಗಿಸಲು ಸಾಧ್ಯವಾಗುವುದೇ ಚಿತ್ರಮಂದಿರದಲ್ಲಿ ನೋಡಿ ಆನಂದಿಸಿ...

ಕಥೆ ನಿರೂಪಣೆಯಲ್ಲೇ ಗೆದ್ದಿದೆ: ಹಿಂದೂಸ್ತಾನ್ ಟೈಮ್ಸ್

ಪೀಕು ಕಥೆಗಿಂತ ಕಥೆ ನಿರೂಪಣೆಯಲ್ಲೇ ಶೂಜಿತ್ ಗೆದ್ದಿದ್ದಾರೆ. ಜೂಹಿ ಚತುರ್ವೇದಿ ಸ್ಕ್ರಿಪ್ ಪ್ಲೇ ವರ್ಕ್ ಔಟ್ ಆಗಿದೆ. ಪ್ರತಿಭಾವಂತರ ಸಮಾಗಮದಿಂದ ಪಾತ್ರಗಳು ಮನಸ್ಸಿಗೆ ನಾಟುವಂತೆ ಅನಗತ್ಯ ಡ್ರಾಮಾ ಇಲ್ಲಿಲ್ಲ. ಬೆಂಗಾಲಿ ಕುಟುಂಬದ ಸಮಸ್ಯೆ ,ಕೋಲ್ಕತ್ತಾದ ಹಾದಿ ಬೀದಿಯ ದೃಶ್ಯಗಳು ಅತಿಯೆನಿಸದಂತೆ ಚಿತ್ರೀತವಾಗಿದೆ. 3.5/5-ಶ್ವೇತಾಕೌಶಲ್, ಹಿಂದೂಸ್ತಾನ್ ಟೈಮ್ಸ್.

ರಾಜೀವ್ ಮಸಂದ್ ಮನಗೆದ್ದ ಪೀಕು

ನಿಮ್ಮ ಊಹೆಗೂ ನಿಲುಕದ ಹಾಸ್ಯಧಾಟಿಯಲ್ಲಿ ಸಾಗುವ ಪೀಕು ಚಿತ್ರ ನಿಮ್ಮ ಹೊಟ್ಟೆ ಹುಣ್ಣಾಗಿಸುತ್ತದೆ. ಹೊಟ್ಟೆ ಸಮಸ್ಯೆ ಸಾರ್ವತ್ರಿಕವಾಗಿರುವುದರಿಂದ ಈ ಚಿತ್ರ ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ಅಂಶಗಳನ್ನು ಹೊಂದಿದೆ. ವಿಕಿ ಡೋನರ್, ಮದ್ರಾಸ್ ಕೆಫೆಯಂಥ ಚಿತ್ರಗಳನ್ನು ನೀಡಿದ ಶೂಜಿತ್ ಮತ್ತೊಮ್ಮೆ ಸದಭಿರುಚಿ ಚಿತ್ರ ತಪ್ಪದೇ ನೋಡಿ -4/5, ಸಿಎನ್ಎನ್ ಐಬಿಎನ್

ಪೀಕು ಸಂಬಂಧಗಳ ಅನುಬಂಧ : ರೀಡಿಫ್

ಅಪ್ಪ-ಮಗಳ ಸಂಬಂಧ, ಸಂಸ್ಕೃತಿಗಳ ಸಂಘರ್ಷ, ಅತಿ ಎನಿಸದ ಭಾವನೆಗಳ ವೈರುಧ್ಯ, ದಿನ ನಿತ್ಯದ ಬದುಕಿನಲ್ಲಿ ಕಾಣುವ ದೃಶ್ಯಗಳನ್ನೇ ಸುಂದರವಾಗಿಸಿರುವ ಶೂಜಿತ್ ಸಿರ್ಕಾರ್ ಹಾಗೂ ತಂಡಕ್ಕೆ ನನ್ನ ಅಭಿನಂದನೆಗಳು 4/5, ಸುಕನ್ಯಾ, ರೀಡಿಫ್.ಕಾಮ್.

ತಂದೆ- ಮಗಳು- ಸಂಗಾತಿ ಬದುಕು ಅದ್ಬುತ ಚಿತ್ರ

ತಂದೆ- ಮಗಳು- ಸಂಗಾತಿ ಭವಿಷ್ಯದ ಬದುಕು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಾಟ ಸೂಕ್ತವಾಗಿ ಸಾಗುತ್ತದೆ. ಇರ್ಫಾನ್, ದೀಪಿಕಾ ಹಾಗೂ ಅಮಿತಾಬ್ ನಡುವಿನ ಪೈಪೋಟಿಯೇ ನಿಮ್ಮನ್ನು ಅಚ್ಚರಿಗೆ ದೂಡುತ್ತದೆ.ರಿಹರ್ಸಲ್ ಇಲ್ಲದೆ ಲೈವ್ ಸ್ಟೇಜ್ ಮೇಲೆ ನಾಟಕ ಪ್ರದರ್ಶನ ಮಾಡಿದ್ದಂತೆ ಅನಿಸುತ್ತದೆ. ಉತ್ತಮ ಚಿತ್ರ ನೋಡಿ ಮಿಸ್ ಮಾಡಿಕೊಳ್ಳಬೇಡಿ ಶೂಜಿತ್ ನಿಮಗೆ ನಿಮ್ಮದೇ ಲೋಕದ ಬೇರೆ ಆಯಾಮ ತೋರಿಸುತ್ತಾರೆ -4.5/5, ಸರಿತಾ, ಡಿಎನ್ ಎ

ಮನೆ ಮಂದಿ ಜೊತೆ ಕುಳಿತು ನೋಡಿ

ಶೂಜಿತ್ ಸಿರ್ಕಾರ್ ಮತ್ತೊಮ್ಮೆ ಗೆದ್ದಿದ್ದರೆ ಕಥೆ ನಿರೂಪಣೆ, ವಯೋವೃದ್ಧ ತಂದೆ ಹಾಗೂ ಮಧ್ಯ ವಯಸ್ಕ ಮಗಳ ಸಂಬಂಧ, ಜವಾಬ್ದಾರಿ ಆಕೆಯ ಕನಸುಗಳು, ಇವರ ಬಾಳ ಬಂಡಿಗೆ ಚಾಲಕನಾಗಿ ಬರುವ ಇರ್ಫಾನ್ ಎಲ್ಲವೂ ಅಚ್ಚುಕಟ್ಟಾಗಿದೆ. ಬೆಂಗಾಲಿ ಸಂಸ್ಕೃತಿ, ಕುಟುಂಬದ ಬಗ್ಗೆ ಹೆಚ್ಚಿನ ವಾಖ್ಯೆ ನೀಡಲು ಸರ್ಕಾರ್ ಕಾಲ ವ್ಯಯ ಮಾಡಿದ್ದು ಸ್ವಲ್ಪ ಇರುಸು ಮುರುಸಾಗಿಸಬಹುದು. ಅಮಿತಾಬ್ ಪಾತ್ರದಂತೆ ನಿಮಗೂ ಬೆಂಗಾಲಿ, ಇಂಗ್ಲೀಷ್ ಭಾಷೆ ಸಂಭಾಷಣೆ ಅರಗಿಸಿಕೊಳ್ಳಲು ಕಷ್ಟ. ಅದು ಬಿಟ್ಟರೆ ಚಿತ್ರವನ್ನು ನೋಡಿ ಆನಂದಿಸಿ ಜೀರ್ಣಿಸಿಕೊಳ್ಳಿ- 3.5/5, ಮೌಮಿತಾ ಭಟ್ಟಚಾರ್ಯ, ಬಾಲಿವುಡ್ ಲೈಫ್

English summary
Deepika Padukone starrer Piku has hit the theatres today and the movie has received quite a good response from the critics. Directed by Shoojit Sircar, Piku also features Amitabh Bachchan and Irrfan Khan and the trio, along with fine direction from Shoojit, have created a beautiful piece of cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada