Just In
Don't Miss!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮರ್ಶಕ ಕೆಂಗಣ್ಣು ಕೂಡಾ ತಂಪಾಗಿಸಿದ 'ಪಿಕೆ' ಅಮೀರ
ಮಿ. ಪರ್ಫೆಕ್ಟ್ ಅಮೀರ್ ಖಾನ್ ಅವರ ಬಹುನಿರೀಕ್ಷಿತ 'ಪಿಕೆ' ಚಿತ್ರದ ಕಥೆಯೇನು? ರಾಜಕುಮಾರ್ ಹಿರಾನಿ ಮತ್ತೆ ಯಶಸ್ವಿಯಾಗುತ್ತಾರಾ? ಮತ್ತೆ ಬಾಕ್ಸಾಫೀಸ್ ನಲ್ಲಿ ಅಮೀರ್ ರಾಜನಾಗಿ ಮೆರೆಯುತ್ತಾನಾ? ಹೀಗೆ ನಾನಾ ಬಗೆಯ ಪ್ರಶ್ನೆಗಳು ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲದೆ ಪ್ರೇಕ್ಷಕರ ಮನಸ್ಸಿನಲ್ಲೂ ಸುಳಿದಾಡಿದ್ದು ಸುಳ್ಳಲ್ಲ.
ಎಲ್ಲರ ನಿರೀಕ್ಷೆಗೂ ಮೀರಿದ ಮನರಂಜನೆ ನಿಮಗೆ ಸಿಗಲಿದೆ ವರ್ಷಾಂತ್ಯದ ತನಕ 'ಪಿಕೆ' ನಶೆಯಲ್ಲಿ ನೀವು ತೇಲಾಡದಿದ್ದರೆ ನೋಡಿ ಎಂದು ವಿಮರ್ಶಕರೂ ಕೂಡಾ ಚಿತ್ರಕ್ಕೆ ಥಮ್ಸ್ ಅಪ್ ಹೇಳಿದ್ದಾರೆ. [ಅಮೀರ್ ತುಟಿ ರಂಗಿನ ರಹಸ್ಯ ಬಹಿರಂಗ]
ಈ ಚಿತ್ರದಲ್ಲಿ ಅಮೀರ್ ನಿಮ್ಮೆಲ್ಲರನ್ನು ರಂಜಿಸಲು ಅನ್ಯಗ್ರಹ ಜೀವಿಯಾಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ನಿಮಗೆ ತಿಳಿದಿದೆ. ಚಿತ್ರದಲ್ಲಿ ಅಮೀರ್ ತೊಡುವ ಲಂಗ, ಖಾಕಿ ಬಟ್ಟೆ ಬಗ್ಗೆ ಕೂಡಾ ಟ್ರೇಲರ್ ನಲ್ಲೇ ಸುಳಿವು ಸಿಕ್ಕಿತ್ತು. ಆದರೆ, ಪ್ರೇಕ್ಷಕರಿಗೆ ಅಮೀರ್ ಖಾನ್ ಅಲ್ಲದೆ ಚಿತ್ರದ ಉಳಿದ ಪಾತ್ರಗಳ ಬಗ್ಗೆ ಕೂಡಾ ಅಷ್ಟೇ ಕುತೂಹಲವಿತ್ತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ಈ ಚಿತ್ರದ ಕಥೆ ದೇವಮಾನವ ಸುತ್ತ ಸುತ್ತುತ್ತದೆ. ಓ ಮೈ ಗಾಡ್ ಚಿತ್ರದ ಎಳೆಯನ್ನು ಇಲ್ಲಿ ವಿಸ್ತರಿಸಲಾಗಿದ್ದರೂ ಚಿತ್ರ ತನ್ನದೇ ಆದ ರೀತಿಯಲ್ಲಿ ಪ್ರೇಕ್ಷಕರನ್ನು ಚಿಂತನೆ ಒಡ್ಡುತ್ತದೆ. ಅಮೀರ್ ಖಾನ್ ಅನುಷ್ಕಾ ಅಲ್ಲದೆ ಅತಿಥಿ ಪಾತ್ರಧಾರಿಗಳು ನಿಮ್ಮನ್ನು ಕಾಡುತ್ತಾರೆ. ಒಟ್ಟಾರೆ ವಿಮರ್ಶಕರಿಂದಲೂ ಹೊಗಳಿಸಿಕೊಂಡಿರುವ ಈ ಚಿತ್ರದ ಬಗ್ಗೆ ವಿವಿಧ ವೆಬ್ ವಿಮರ್ಶಕರು ನೀಡಿರುವ ವಿಮರ್ಶೆಗಳ ಸಂಗ್ರಹ ಇಲ್ಲಿದೆ ನೋಡಿ

ಅವರಿವರ ಮಾತು ಕೇಳ್ಬೇಡಿ ಒಮ್ಮೆ ನೋಡಿ : ಇಂಡಿಯಾ ಟುಡೇ
ಓ ಮೈ ಗಾಡ್ ಕಥೆ ಎಳೆ ಇದೆ ಎಂದ ಮಾತ್ರಕ್ಕೆ ಈ ಚಿತ್ರದ ಕಥೆ ನಕಲಿ ಎಂದು ಯಾರಾದರೂ ಹೇಳಿದರೆ ಅವರನ್ನು ಕರೆದುಕೊಂಡು ಮತ್ತೊಮ್ಮೆ ಚಿತ್ರಮಂದಿರಕ್ಕೆ ನುಗ್ಗಿ, ಪಿಕೆ ದೇವಮಾನವರ ಹುಳುಕು, ಮಾನವ ಸಹಜ ಅಳುಕು, ಎಲ್ಲಿಂದಲೋ ಭುವಿಗೆ ಧುಮುಕಿದ ಪಿಕೆ ಥಳಕು ಬಳಕು ಬಿಂಕ ಬಿನ್ನಾಣ ಹಾಗೂ ಪ್ರತಿ ಬಾರಿ ಎತ್ತುವ ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡತೊಡಗುತ್ತದೆ.
ಪಿಕೆ ಚಿತ್ರ ನಿಜಕ್ಕೂ ಮನರಂಜನೆಯ ಪ್ಯಾಕೇಜ್ ಆಗಿ ನಿಮ್ಮನ್ನು ತಣಿಸುವುದರಲ್ಲಿ ಯಶಸ್ವಿಯಾಗುತ್ತದೆ. ರಾಜಕುಮಾರ್ ಹಿರಾನಿ ಮತ್ತೆ ಗೆದ್ದಿದ್ದಾರೆ. -ರೋಹಿತ್ ಖಿಲಾನಿ 4.5/5

ಕೋಯಿಮೋಯಿ ವಿಮರ್ಶೆ 3.5/5
ಹಾಸ್ಯ ಕುಹಕದೊಂದಿಗೆ ಮೊದಲ ಅರ್ಧದ ಕಥೆ ಚೆಂದ ಎನಿಸುವಾಗಲೇ ಎರಡನೇ ಭಾಗ ಕೊಂಚ ಎಳೆದಂತೆ ಎನಿಸುತ್ತದೆ. ಅದರೆ, ಸಮಾಜಕ್ಕೆ ಸಂದೇಶವನ್ನು ನೀಡುವ ಹೊಸ ವಿಧಾನವನ್ನು ಹುಟ್ಟುಹಾಕಿರುವ ಹಿರಾನಿ ಪ್ರೇಕ್ಷಕರನ್ನು ಮತ್ತೊಮ್ಮೆ ಸೀಟಿನಲ್ಲೇ ಅಲುಗಾಡದಂತೆ ಕೂರಿಸುತ್ತಾರೆ.
ದಿನನಿತ್ಯ ನೀವು ನೋಡುವ ಜಗತ್ತನ್ನೇ ಪಿಕೆ ಕಂಗಳಿನಿಂದ ಹಿರಾನಿ ನಿಮಗೆ ತೋರಿಸುವ ರೀತಿ ಅನನ್ಯ. ಜೀವನ ಶೈಲಿ, ದೇವ, ದೇವಮಾನವರ ಬಗ್ಗೆ ಇರುವ ಅಣುಕು ಹೊಸ ಚಿಂತನೆಗೆ ನಿಮ್ಮನ್ನು ಅರೆಕ್ಷಣವಾದ್ರೂ ದೂಡಿದರೆ ಅಷ್ಟರ ಮಟ್ಟಿಗೆ ಹಿರಾನಿ ಶ್ರಮ ಸಾರ್ಥಕ. ಪಾತ್ರಧಾರಿಗಳು, ಸಂಗೀತ, ಚಿತ್ರ ಭಾಷೆ ಬಳಕೆ ಕಥೆಯ ಓಟಕ್ಕೆ ಪೂರಕವಾಗಿದೆ.

ಕ್ರಿಸ್ಮಸ್ ಗಿಫ್ಟ್ ಬಾಲಿವುಡ್ ಹಂಗಾಮ 4.5/5
ಪಿಕೆ ಚಿತ್ರದ ಸಂಗೀತಗಾರರಾದ ಶಂತನು ಮೋಯಿತ್ರಾ, ಅಜಯ್ ಅತುಲ್, ಅಂಕಿತ್ ತಿವಾರಿ, ಸಾಹಿತ್ಯ ಈಗಾಗಲೇ ಜನಪ್ರಿಯಗೊಂಡಿದೆ. 3 ಈಡಿಯಟ್ಸ್, ಮುನ್ನಾಭಾಯಿ ನಂತರ ಮತ್ತೊಮ್ಮೆ ಹಿರಾನಿ ಹಾಗೂ ಅಭಿಜಿತ್ ಜೋಶಿ ಉತ್ತಮ ಕಥೆ ಹೆಣೆದಿದ್ದಾರೆ ಹಾಗೂ ನಿರೂಪಿಸಿದ್ದಾರೆ.
ಜನರ ನಂಬಿಕೆಗಳ ಸುತ್ತ ಕಥೆ ಸುತ್ತಿದರೂ ವಿಭಿನ್ನವಾಗಿದೆ. 5000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡಿರುವ ಪಿಕೆ ಹೊಸ ದಾಖಲೆ ಬರೆಯುವುದಂತೂ ಖಂಡಿತ.

ಎನ್ ಡಿ ಟಿವಿ ವಿಮರ್ಶೆ ಥಮ್ಸ್ ಅಪ್
ರಾಜ್ ಕಪೂರ್, ಬಿಮಲ್ ರಾಯ್, ಗುರುದತ್ ರಂಥ ದಿಗ್ಗಜರು ಇಂದು ಬದುಕಿದ್ದರೆ ಹಿರಾನಿಯನ್ನು ಅಪ್ಪಿ ಮುದ್ದಾಡುತ್ತಿದ್ದರು. ದಿನನಿತ್ಯ ಜನಮನದಲ್ಲಿ ಸುಳಿಯುವ ಸಿಂಪಲ್ ಪ್ರಶ್ನೆಗಳನ್ನು ಇಟ್ಟುಕೊಂಡು ಕಥೆ ಹೆಣೆದು ಜನರನ್ನು ಮೆಚ್ಚಿಸುವುದು ಸುಲಭದ ಸಂಗತಿಯಲ್ಲ.
ದೇವರು ದಿಂಡರು ನಂಬಿಕೆ ಅಪನಂಬಿಕೆ ಬಗ್ಗೆ ಜನರು ಕೇಳಲು ಬಯಸುವ ಆದರೆ, ಕೇಳಲು ಆಗದ ಪ್ರಶ್ನೆಗಳಿಗೆ ಸೇತುವೆಯಾಗಿ ಅಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್, ರಣಬೀರ್ ಕಪೂರ್ ಪಾತ್ರವೂ ಮನದಲ್ಲಿ ಉಳಿಯುತ್ತದೆ. ಒಟ್ಟಾರೆ, ವರ್ಷಗಳಿಂದ ಕಾದಿದ್ದು ಸಾರ್ಥಕವಾಗಿದೆ.

ಇಂದೇ ನೋಡಿ ಆನಂದಿಸಿ: ಇಂಡಿಯಾ ಟಿವಿ ವಿಮರ್ಶೆ
ಸುಶಾಂತ್ ಸಿಂಗ್ ಪಾತ್ರವನ್ನು ಮೊಟಕುಗೊಳಿಸುವುದರ ಬದಲು ಚಿತ್ರದ ದ್ವಿತೀಯಾರ್ಧದಲ್ಲೂ ಬಳಸಿಕೊಳ್ಳಬಹುದಿತ್ತು. ಮುಖ ಗಂಟಿಕ್ಕಿಕೊಳ್ಳುವವರಿಗೆ ಈ ಚಿತ್ರ ಹೇಳಿ ಮಾಡಿಸಿದ್ದಲ್ಲ. ಸಣ್ಣ ಪುಟ್ಟ ಪಾತ್ರಗಳು ಕೂಡಾ ನೆನಪಲ್ಲಿ ಉಳಿಯುವಂತೆ ಮಾಡುವುದು ಹಿರಾನಿಗೆ ಕರಗತವಾಗಿದೆ.
ದೇವರು ದಿಂಡರ ಬಗ್ಗೆ ಬಾಲಿವುಡ್ ನಲ್ಲಿ ಅನೇಕ ಚಿತ್ರಗಳು ಬಂದಿರಬಹುದು ಅದರೆ, ಪೀಕೆಯಂಥ ಚಿತ್ರ ಹಿಂದೆ ಬಂದಿಲ್ಲ ಮುಂದೆ ಬರುವುದೋ ಇಲ್ಲವೋ ಗೊತ್ತಿಲ್ಲ. ಈಗ ನೋಡಿ ಆನಂದಿಸಿ- ಇಂಡಿಯಾ ಟಿವಿ ವಿಮರ್ಶೆ
