For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕ ದಿನಪತ್ರಿಕೆಯ ವಿಮರ್ಶಕರು ಕಂಡಂತೆ 'ದೇವಕಿ' ಹೇಗಿದೆ?

  |

  ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಸಿನಿಮಾ ಜುಲೈ 5 ರಂದು ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ದೇವಕಿ ಬಗ್ಗೆ ಖುಷಿಯಾಗಿದ್ದಾರೆ. ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ, ಒಳ್ಳೆಯ ಸಸ್ಪೆನ್ಸ್ ಮಿಸ್ಟರಿ ಕಥೆ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ನಿರ್ದೇಶಕ ಲೋಹಿತ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ತಾಂತ್ರಿಕವಾಗಿ ದೇವಕಿ ರೋಚಕತೆಯಿಂದ ಕೂಡಿದೆಯಂತೆ. ಮಮ್ಮಿ ಸಿನಿಮಾದ ನಂತರ ಒಂದಾಗಿದ್ದ ಲೋಹಿತ್ ಮತ್ತು ಪ್ರಿಯಾಂಕಾ ಉಪೇಂದ್ರ ಅವರಿಗೆ ದೇವಕಿ ಸಿನಿಮಾ ಇನ್ನೊಂದು ಸಕ್ಸಸ್ ಎಂದು ಹೇಳಲಾಗ್ತಿದೆ.

  Devaki Review : 'ರೆಡ್ ಲೈಟ್'ನಲ್ಲಿ ಅರಳಿದ ತಾಯಿ ಮಗಳ ಅನುಬಂಧ

  ಮೊದಲ ದಿನ ಮೊದಲ ಶೋ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡ ದೇವಕಿ ಚಿತ್ರ ವಿಮರ್ಶಕರಿಗೆ ಇಷ್ಟ ಆಯ್ತಾ? ದೇವಕಿ ನೋಡಿ ವಿಮರ್ಶಕರು ಕೂಡ ಥ್ರಿಲ್ ಆದ್ರಾ ಅಥವಾ ಇಷ್ಟ ಆಗಿಲ್ಲ ಅಂದ್ರಾ? ಇಲ್ಲಿದೆ ನೋಡಿ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ದೇವಕಿ ಚಿತ್ರದ ವಿಮರ್ಶೆ. ಮುಂದೆ ಓದಿ....

  ರೋಚಕತೆಯ ಗಣಿ ಹೊತ್ತ ಸಿನಿಮಾ

  ರೋಚಕತೆಯ ಗಣಿ ಹೊತ್ತ ಸಿನಿಮಾ

  ''ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪಾತ್ರ ಮಹತ್ವದ್ದು. ತಾಯಿಗೆ ಮಕ್ಕಳೆಂದರೆ ಪ್ರಾಣ. ಈ ಎರಡು ಜೀವಗಳ ಕಥನವನ್ನು ಹೇಳಲು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಮಾರ್ಗ ವಿಶೇಷವಾಗಿದೆ. ಅದು ನೋಡುಗನನ್ನು ಸೀಟಿನ ತುದಿ ಮೇಲೆ ಕೂರಿಸುತ್ತದೆ. ಶಬ್ದ ವಿನ್ಯಾಸ ಮತ್ತು ಹಿನ್ನೆಲೆ ಸಂಗೀತ ಅದಕ್ಕೆ ಸಖತ್‌ ಸಾಥ್ ನೀಡಿದೆ. ಕೆಲವೇ ಕೆಲವು ಹಾಡುಗಳು ಸಿನಿಮಾದಲ್ಲಿದ್ದರೂ, ಅವೆಲ್ಲವೂ ಮನಸ್ಸಿನಲ್ಲಿ ಉಳಿಯುವಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ ನೋಬಿನ್ ಪೌಲ್.ಈ ಸಿನಿಮಾದಲ್ಲಿ ಸಣ್ಣ ಪುಟ್ಟ ತಪ್ಪುಗಳಿವೆ. ಆದರೂ, ತಾಯಿಯ ಕಕ್ಕುಲಾತಿಗಾಗಿಯಾದರೂ ಈ ಸಿನಿಮಾ ನೋಡಲೇಬೇಕು'' - ವಿಜಯ ಕರ್ನಾಟಕ ವಿಮರ್ಶೆ

  ಕೊಲ್ಕತ ಸೊಗಡಿನ ಕಾಡುವ ಕಥೆ

  ಕೊಲ್ಕತ ಸೊಗಡಿನ ಕಾಡುವ ಕಥೆ

  ''ತಾಯಿ-ಮಗಳ ಹುಡುಕಾಟದ ಕಥೆಯೊಳಗೆ ಕೊಲ್ಕತದ ಮತ್ತೊಂದು ಮುಖದ ಅನಾವರಣ ಮಾಡಲಾಗಿದೆ. ನೈಜ ಲೋಕೆಷನ್​ಗಳಲ್ಲೇ ಚಿತ್ರೀಕರಣ ಮಾಡಿರುವ ರೀತಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಹೆಣ್ಣು ಮಕ್ಕಳ ಅಪಹರಣದ ಕೂಪ ಹೇಗೆಲ್ಲ ಕೆಲಸ ಮಾಡುತ್ತದೆ ಎಂಬುದು ಇಲ್ಲಿ ಜಗಜ್ಜಾಹೀರಾಗಿದೆ. ಪ್ರತಿ ದೃಶ್ಯವನ್ನೂ ಸೀಟಿನ ತುದಿಗೆ ಕುಳಿತು ಪ್ರೇಕ್ಷಕ ನೋಡಲಿ ಎನ್ನುವಂತೆ ನಿರ್ದೇಶಕರು ಕೆಲಸ ಮಾಡಿದ್ದಾರೆ. ಆದರಾಚೆಗೂ ಕೆಲವೊಂದು ಸಣ್ಣಪುಟ್ಟ ದೋಷಗಳು ಉಳಿದುಕೊಂಡಿವೆ. ಅದನ್ನೆಲ್ಲ ಬದಿಗಿರಿಸಿ ನೋಡಿದರೆ ಸಿನಿಮಾ ಇಷ್ಟವಾಗುತ್ತದೆ. ಎರಡು ದಿನಗಳಲ್ಲಿ ನಡೆಯುವ ಕಥೆ ಇದಾಗಿದ್ದು, ಹೆಚ್ಚಿನ ದೃಶ್ಯಗಳನ್ನು ರಾತ್ರಿಯೇ ಚಿತ್ರೀಕರಣ ಮಾಡಿರುವುದರಿಂದ ಛಾಯಾಗ್ರಾಹಕ ವೇಣು ಕೆಲಸ ಎದ್ದು ಕಾಣುತ್ತದೆ.'' - ವಿಜಯವಾಣಿ ವಿಮರ್ಶೆ

  ಭಾವುಕ ಹಳಿಯ ಮೇಲೆ ರೋಚಕ ಕಥೆ

  ಭಾವುಕ ಹಳಿಯ ಮೇಲೆ ರೋಚಕ ಕಥೆ

  ''ಕಮರ್ಷಿಯಲ್ ಚಿತ್ರವೊಂದನ್ನು ಭಾವನೆಗಳ ತಳಹದಿ ಮೇಲೆ ಗಟ್ಟಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಇಲ್ಲಿ ಜೀವನದ ಎರಡು ಆಯಾಮಗಳ ಗಾಢ ಚಿತ್ರಣವಿದೆ. ಇಡೀ ಚಿತ್ರ ನಡೆಯುವುದು ಕೊಲ್ಕತ್ತಾದಲ್ಲಿ. ಅಲ್ಲಿನ ನೆಲದ ಕಥೆಯನ್ನು ಕನ್ನಡದ ಪ್ರೇಕ್ಷಕರ ಜಾಯಮಾನಕ್ಕೆ ಒಗ್ಗಿಸಲು ನಿರ್ದೇಶಕರು ಪ್ರಯತ್ನ ಪಟ್ಟಿದ್ದಾರೆ. ತಾರಾಗಣದಲ್ಲಿ ಹೆಚ್ಚು ಅಂಕ ಗಿಟ್ಟಿಸುವುದು ಅಮ್ಮನ ಪಾತ್ರಧಾರಿ ಪ್ರಿಯಾಂಕಾ ಉಪೇಂದ್ರ. ಕಿಶೋರ್ ನಟನೆಯೂ ಚೆನ್ನಾಗಿದೆ. ಐಶ್ಚರ್ಯ ಪಾತ್ರ ಗಿಳಿಪಾಠ ಒಪ್ಪಿಸುವುದಕ್ಕೆ ಸೀಮಿತ. ಕೊಲ್ಕತ್ತದ ಬೀದಿಗಳನ್ನು ಎಚ್ ಸಿ ವೇಣು ಸೊಗಸಾಗಿ ಸೆರೆ ಹಿಡಿದಿದ್ದಾರೆ. ನೋಬಿನ್ ಪೌಲ್ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ.'' - ಪ್ರಜಾವಾಣಿ ವಿಮರ್ಶೆ

  This Priyanka Upendra film is a majestic thriller

  This Priyanka Upendra film is a majestic thriller

  ''Through Devaki he has opened new frontiers for Kannada cinema, inviting the audience to his kingdom of ingenuity. There is not an iota of mediocrity in his execution, which is enhanced by Kolkata's vibrant-yet-moody aura, as captured by HC Venugopal's cinematography, and Nobin Paul's music. Shooting in live locations, the director has paid equal attention to camera angles, sound, lighting, background score and music, all making the film admirably compelling. Priyanka Upendra too elevates the film with her excellent performance. Equal credit should also go to actor Kishore'' - ಇಂಡಿಯನ್ ಎಕ್ಸ್ ಪ್ರೆಸ್ ವಿಮರ್ಶೆ

  English summary
  Kannada actress Priyanka upendra starrer Devaki is a superb mystery thriller. movie has released yesterday (july 5th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X