For Quick Alerts
  ALLOW NOTIFICATIONS  
  For Daily Alerts

  ಗಂಧದ ಗುಡಿ ಟ್ರೈಲರ್ ಹೇಗಿದೆ? ಬಿಡುಗಡೆಗೆ 3 ದಿನ ಮುನ್ನವೇ ಟ್ರೈಲರ್ ನೋಡಿದವರು ಹೇಳಿದ್ದಿಷ್ಟು

  |

  ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಇದೇ ತಿಂಗಳ 29ಕ್ಕೆ ವರ್ಷ ಕಳೆಯಲಿದೆ. ಈ ದಿನದ ಹಿಂದಿನ ದಿನ ಅಂದರೆ ಅಕ್ಟೋಬರ್ 28ರಂದು ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿ ತೆರೆಗೆ ಅಪ್ಪಳಿಸಲಿದೆ.

  ಈ ಗಂಧದ ಗುಡಿ ಸಿನಿಮಾ ಕಮರ್ಷಿಯಲ್ ಚಿತ್ರವಾಗಿರದೇ ಒಂದು ಡಾಕ್ಯುಮೆಂಟರಿ ಚಿತ್ರವಾಗಿದ್ದು, ಯಾರೂ ಕಂಡಿರದ ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳನ್ನು ತೆರೆ ಮೇಲೆ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಸ್ವತಃ ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅಪ್ಪು ಅಭಿನಯಿಸದೇ ತಾವಾಗಿಯೇ ಜೀವಿಸಿರುವ ಗಂಧದ ಗುಡಿ ಚಿತ್ರದ ಮೇಲೆ ಅಪ್ಪು ಫ್ಯಾನ್ಸ್ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಇನ್ನು ಗಂಧದ ಗುಡಿ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು 4 ಮಿಲಿಯನ್ ಯೂಟ್ಯೂಬ್ ವೀಕ್ಷಣೆ ಪಡೆದುಕೊಂಡು ಸದ್ದು ಮಾಡಿತ್ತು. ಸದ್ಯ ಚಿತ್ರ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಕಾರಣ ಚಿತ್ರತಂಡ ಚಿತ್ರದ ಟ್ರೈಲರ್ ಅನ್ನು ಅಕ್ಟೋಬರ್ 9ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಹೌದು, ಇದೇ ಭಾನುವಾರ ಬೆಳಗ್ಗೆ 10.19ಕ್ಕೆ ಪಿಆರ್ ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಗಂಧದ ಗುಡಿ ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇನ್ನು ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, 3 ದಿನ ಮುನ್ನವೇ ಟ್ರೈಲರ್ ವೀಕ್ಷಿಸಿದ ಅಪ್ಪು ಅಭಿಮಾನಿಯೋರ್ವರು ಟ್ರೇಲರ್ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

  ಟ್ರೈಲರ್ ವೀಕ್ಷಿಸಿದೆ, ಅದು ನಿಮ್ಮನ್ನು ಖಂಡಿತ ಕಾಡುತ್ತದೆ

  ಟ್ರೈಲರ್ ವೀಕ್ಷಿಸಿದೆ, ಅದು ನಿಮ್ಮನ್ನು ಖಂಡಿತ ಕಾಡುತ್ತದೆ

  ಗಂಧದ ಗುಡಿ ಚಿತ್ರದ ಟ್ರೈಲರ್ ಅನ್ನು 3 ದಿನ ಮುಂಚಿತವಾಗಿಯೇ ವೀಕ್ಷಿಸಿರುವುದು ಪುನೀತ್ ರಾಜ್ ಕುಮಾರ್ ಅವರಿಗೆ ಇಂಡಸ್ಟ್ರಿ ಹಿಟ್ ರಾಜಕುಮಾರ ಚಿತ್ರ ನಿರ್ದೇಶಿಸಿದ ನಿರ್ದೇಶಕ ಹಾಗೂ ಅಪ್ಪು ಅಭಿಮಾನಿಯೂ ಆಗಿರುವ ಸಂತೋಷ್ ಆನಂದ್ ರಾಮ್. ಸಾಮಾಜಿಕ ಜಾಲತಾಣದಲ್ಲಿ ಗಂಧದ ಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಸಮಯ ಘೋಷಣೆಯ ಪೋಸ್ಟ್ ಹಂಚಿಕೊಂಡಿರುವ ಸಂತೋಷ್ ಆನಂದ್ ರಾಮ್ 'ಕನ್ನಡ ಸಿನಿಮಾ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ, ನಾನು ಈಗಾಗಲೇ ಚಿತ್ರದ ಟ್ರೈಲರ್ ವೀಕ್ಷಿಸಿದ್ದೇನೆ, ಟ್ರೈಲರ್ ನಿಮ್ಮನ್ನು ಕಾಡಲಿದೆ' ಎಂದು ಬರೆದುಕೊಂಡಿದ್ದಾರೆ. ಹಾಗೂ ದೊಡ್ಡ ವ್ಯಕ್ತಿತ್ವದ ಮನುಷ್ಯನನ್ನು ದೊಡ್ಡ ಪರದೆ ಮೇಲೆ ನೋಡುವುದೇ ದೊಡ್ಡ ಸಂಭ್ರಮ ಎಂದೂ ಸಹ ಸಂತೋಷ್ ಆನಂದ್ ರಾಮ್ ಬರೆದುಕೊಂಡಿದ್ದಾರೆ.

  ಯುವ ರಾಜ್‌ಕುಮಾರ್ ಚಿತ್ರಕ್ಕೆ ಸಂತೋಷ್ ನಿರ್ದೇಶನ

  ಯುವ ರಾಜ್‌ಕುಮಾರ್ ಚಿತ್ರಕ್ಕೆ ಸಂತೋಷ್ ನಿರ್ದೇಶನ

  ಇನ್ನು ಪುನೀತ್ ರಾಜ್ ಕುಮಾರ್ ಅವರಿಗೆ ರಾಜಕುಮಾರ ಹಾಗೂ ಯುವರತ್ನ ರೀತಿಯ 2 ಅತ್ಯದ್ಭುತ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೂ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ.

  ಗಂಧದ ಗುಡಿ ಟ್ರೈಲರ್ ಬಿಡುಗಡೆಗೆ ಶುಭಾಶಯಗಳ ಮಹಾಪೂರ

  ಗಂಧದ ಗುಡಿ ಟ್ರೈಲರ್ ಬಿಡುಗಡೆಗೆ ಶುಭಾಶಯಗಳ ಮಹಾಪೂರ

  ಇನ್ನು ಗಂಧದ ಗುಡಿ ಟ್ರೈಲರ್ ದಿನಾಂಕ ಹಾಗೂ ಸಮಯ ಘೋಷಣೆ ಆಗುತ್ತಿದ್ದಂತೆ ಈ ವಿಷಯವನ್ನು ಚಿತ್ರರಂಗದ ಹಲವಾರು ಖ್ಯಾತ ನಿರ್ದೇಶಕ, ಸಂಗೀತ ನಿರ್ದೇಶಕರು ಹಾಗೂ ಕಲಾವಿದರು ಹಂಚಿಕೊಂಡಿದ್ದಾರೆ. ಅದ್ಬುತ ಪಯಣಕ್ಕೆ ಕ್ಷಣಗಣನೆ ಎಂದು ಬರೆದುಕೊಂಡಿರುವ ಕಲಾವಿದರು ಅಪ್ಪು ಅಭಿನಯದ ಅಂತಿಮ ಚಿತ್ರದ ಟ್ರೈಲರ್ ವೀಕ್ಷಿಸಲು ಕಾತರರಾಗಿದ್ದಾರೆ.

  English summary
  Puneeth Rajkumar starrer Gandhada Gudi trailer will haunt you says Santhosh Ananddram. Read on
  Friday, October 7, 2022, 19:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X