Just In
Don't Miss!
- News
60 ವರ್ಷಗಳ ಹಿಂದೆ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿದ್ದ ಮಾನವ!
- Finance
ಸೆನ್ಸೆಕ್ಸ್ ಭಾರೀ ಕುಸಿತ: 1,200 ಪಾಯಿಂಟ್ಸ್ ಇಳಿಕೆ
- Automobiles
ಫೇಸ್ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ
- Lifestyle
ಇಂದು ಸೋಮಾವತಿ ಅಮಾವಾಸ್ಯೆ: ಇದರ ಮಹತ್ವ ಹಾಗೂ ಪ್ರಯೋಜನಗಳು
- Sports
ಐಪಿಎಲ್ 2021: ಕೊಲ್ಕತ್ತಾ ತಂಡದ ಹುರುಪಿನ ಆಟಗಾರನನ್ನು ಹೆಸರಿಸಿದ ಮಾರ್ಗನ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಯವರತ್ನ' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಶೋ ನೋಡಿ ಅಭಿಮಾನಿಗಳು ಹೇಳಿದ್ದೇನು?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಯುವರತ್ನ ಅಬ್ಬರ ಶುರುವಾಗಿದೆ. ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿದ್ದರು.
ಭಾರಿ ನಿರೀಕ್ಷೆಯೊಂದಿಗೆ ಬಂದ ಯುವರತ್ನ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮೊದಲ ಶೋ ನೋಡಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ನೋಡಿ ಟ್ವಿಟ್ಟರ್‌ನಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. ಅಭಿಮಾನಿಗಳ ಮೊದಲ ಪ್ರತಿಕ್ರಿಯೆ ಹೇಗಿದೆ ನೀವೆ ನೋಡಿ. ಮುಂದೆ ಓದಿ...

ಕರ್ನಾಟಕದ ಮೈಕಲ್ ಜಾಕ್ಸನ್
'ಯುವರತ್ನ ಸಿನಿಮಾ ಅದ್ಭುತವಾಗಿ. ಕರ್ನಾಟಕದ ಮೈಕಲ್ ಜಾಕ್ಸನ್. ಬ್ಲಾಕ್ ಬಸ್ಟರ್ ಸಿನಿಮಾ. 100 ದಿನ ಪಕ್ಕ' ಎಂದು ತೆಲುಗು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಪಕ್ಕಾ ಪೈಸಾ ವಸೂಲ್ ಸಿನಿಮಾ
'ಬ್ಲಾಕ್ ಬಸ್ಟರ್ ಪಕ್ಕಾ. ಡಾನ್ಯ್, ಫೈಟ್ ದೃಶ್ಯಗಳು ಮತ್ತು ಛಾಯಾಗ್ರಾಹಣ ತುಂಬಾ ಅದ್ದೂರಿಯಾಗಿದೆ. ಬೆಂಕಿ ಡೈಲಾಗ್‌ಗಳು. ಪಕ್ಕಾ ಪೈಸಾ ವಸೂಲ್ ಸಿನಿಮಾ. ತಮನ್ ಹಿನ್ನಲೆ ಸಂಗೀತ ಅದ್ಭುತವಾಗಿ' ಎಂದು ಮತ್ತೊಬ್ಬ ಅಭಿಮಾನಿ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.

ಡೈಲಾಗ್ಸ್ ಬೆಂಕಿ
'ಸಂತೋಷ್ ಆನಂದ್ ರಾಮ್ ನೆಸ್ಟ್ ಲೆವೆಲ್ ಸಿನಿಮಾ. ಪುನೀತ್ ಸೂಪರ್ ಅಭಿನಯ ಸೂಪರ್. ಡೈಲಾಗ್ ಬೆಂಕಿ' ಎಂದು ಅಭಿಮಾನಿಯೊಬ್ಬರು ಚಿಕ್ಕದಾಗಿ ವಿಮರ್ಶೆ ಮಾಡಿದ್ದಾರೆ.

ಈ ಮೊದಲು ಇಂತ ಸಿನಿಮಾ ನೋಡಿಲ್ಲ
'ಈ ಮೊದಲು ಯುವರತ್ನ ಅಂತ ಸಿನಿಮಾವನ್ನು ನಾನು ನೋಡಿರಲಿಲ್ಲ. ಇದು ಹೊಂಬಾಳೆ ಫಿಲ್ಮ್ಸ್ ನ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ. ಪುನೀತ್ ರಾಜ್ ಕುಮಾರ್ ಯಂಗ್ ಆಗಿ ಕಾಣಿಸಿಕೊಂಡಿರುವ ಈ ಬದಲಾವಣೆ ಅದ್ಭುತವಾಗಿದೆ.' ಎಂದು ಹೇಳಿದ್ದಾರೆ.

ಎಂಟ್ರಿ ಫೈಟ್- ಹಾಡು ನೋಡಿ ರೋಮಾಂಚನಗೊಂಡೆ
'ಎಂಟ್ರಿ ಫೈಟ್ ಮತ್ತು ಹಾಡು ನೋಡಿ ರೋಮಾಂಚನಗೊಂಡೆ. ಒಂದು ಲೈನ್ ನಲ್ಲಿ ಹೇಳಬೇಕೆಂದರೆ ಅತ್ಯಂತ ಅದ್ಭುತವಾಗಿದೆ. ಕುತೂಹಲ ಕಾಪಾಡಿಕೊಂಡಿದ್ದಾರೆ. ಹಿನ್ನಲೆ ಸಂಗೀತ ಅದ್ಭುತವಾಗಿದೆ. ಪವರ್ ಸ್ಟಾರ್ ಯಂಗ್ ಆಗಿ ಕಾಣಿಸಿಕೊಂಡ ಬದಲಾವಣೆ ಅದ್ಭುತವಾಗಿದೆ' ಎಂದು ಹೇಳಿದ್ದಾರೆ.