Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೇಸ್ 3 ವಿಮರ್ಶೆ: ಸಲ್ಲು ಅಭಿಮಾನಿಗಳಿಗೆ ಆಕ್ಷನ್-ಥ್ರಿಲ್ಲರ್ ರಸದೌತಣ
ಬಹು ನಿರೀಕ್ಷಿತ ರೆಮೋ ಡಿಸೊಝಾ ನಿರ್ದೇಶನದ ಆಕ್ಷನ್-ಥ್ರಿಲ್ಲರ್ ಚಿತ್ರ 'ರೇಸ್ 3', ದೇಶದಾದ್ಯಂತ ಇಂದು ತೆರೆಗೆ ಬಂದಿದೆ. ಸಲ್ಮಾನ್ ಖಾನ್ ಅಭಿಮಾನಿಗಳಿ ಈದ್ ವಿಶೇಷವಾಗಿ ಚಿತ್ರವನ್ನ ಬಿಡುಗಡೆ ಮಾಡಿದ್ದು ಚಿತ್ರ ನೋಡಿದ ಅಭಿಮಾನಿಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
'ರೇಸ್' ಸಿನಿಮಾದ ಮೂರನೇ ಅವತರಣಿಕೆ ಇದಾಗಿದ್ದು ಸಲ್ಮಾನ್ ಖಾನ್ ಸೇರಿದಂತೆ ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವೆಲಿನ್ ಫೆರ್ನಾಂಡಿಸ್, ಡೈಸಿ ಷಾ ಮತ್ತು ಸಾಕಿಬ್ ಸಲೀಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈದ್ ಹಬ್ಬಕ್ಕೆ ಸಲ್ಲು ಕೊಟ್ಟಿರೋ ಗಿಫ್ಟ್ ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು
ಹಬ್ಬದ ದಿನದಂದು ಸಿನಿಮಾ ನೋಡಿರುವ ಅಭಿಮಾನಿಗಳು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಎಲ್ಲೆಡೆ ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ 'ರೇಸ್3' ಚಿತ್ರದ ಬಗ್ಗೆ ಟ್ವಿಟ್ಟರ್ ಅಪ್ಡೇಟ್ ಏನಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಸಲ್ಲು ಸಿನಿಮಾ ಮೆಚ್ಚಿದ ದುಬೈ ಪ್ರೇಕ್ಷಕ
Aarohan Pokharel @ImAarohan "#race3 Dubai Review . ಸಲ್ಮಾನ್ ಖಾನ್ ಅಭಿನಯದ ಮೊದಲ ಥ್ರೀಡಿ ಸಿನಿಮಾ 'ರೇಸ್ 3' ಹಬ್ಬಕ್ಕೆ ಉತ್ತಮ ಉಡುಗೊರೆ. ಚಿತ್ರದ ಹೈಲೆಟ್ ಅಂದರೆ ಸಲ್ಮಾನ್ ಖಾನ್ ಹಾಗೂ ಬಾಬಿ ಡಿಯೋಲ್ ಪಾತ್ರಗಳು. ಸಲ್ಮಾನ್ ಖಾನ್ ಎಂಟ್ರಿ ತುಂಬಾ ಚೆನ್ನಾಗಿದೆ. ದುಬೈನಲ್ಲಿನ ಪ್ರೇಕ್ಷಕರು ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ.

ಸಾಮಾನ್ಯ ಸಿನಿಮಾ 'ರೇಸ್ 3'
ISPN @im_spn ' ರೇಸ್ 3' ಸಾಮಾನ್ಯ ಸಿನಿಮಾ, ಕಲಾವಿದರ ಅಭಿನಯ ಬೇಸರ ತಂದಿದೆ. ಫಸ್ಟ್ ಆಫ್ ನಲ್ಲೇ 4 ಹಾಡುಗಳು ಬೇಕಿರಲಿಲ್ಲ. ಮೊದಲಾರ್ಧದಲ್ಲಿ ಸಲ್ಮಾನ್ ಖಾನ್ ರನ್ನು ಸೈಡ್ ಲೈನ್ ಮಾಡಲಾಗಿದೆ.

ಅಭಿಮಾನಿಗಳಿಗೆ ಇಷ್ಟವಾಗದ ಸಹಕಲಾವಿದರು
Prince Prithvi @PrincePrithvi PLUS :ಸಲ್ಮಾನ್ ಖಾನ್ , ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ಅಭಿನಯ ಸೂಪರ್ ಕೆಲ ಆಕ್ಷನ್ ಸೀನ್ ಗಳು ಚೆನ್ನಾಗಿ ಮೂಡಿ ಬಂದಿದೆ. ಫಸ್ಟ್ ಆಫ್ ನಲ್ಲಿ ಬರುವ ಹಾಡುಗಳು, ಸಂಭಾಷಣೆ ಮತ್ತು ಸಹ ಕಲಾವಿದರ ಅಭಿನಯ ಚಿತ್ರಕ್ಕೆ ಮೈನೆಸ್ ಪಾಯಿಂಟ್.

'ರೇಸ್ 3' ಒಳ್ಳೆಯ ಸಿನಿಮಾ
@Jolly_Jinu ದುಬೈ ಸಿನಿಮಾ ವೀಕ್ಷಕರ ಪ್ರಕಾರ 'ರೇಸ್3' ಉತ್ತಮ ಸಿನಿಮಾ. 'ಕಿಕ್' ಹಾಗೂ 'ಭಾಗಿ2' ಚಿತ್ರಗಳಿಂತಲೂ ಚೆನ್ನಾಗಿದೆ. ಈ ಚಿತ್ರವೂ ಕೂಡ ಸಲ್ಮಾನ್ ಖಾನ್ ಹಿಟ್ ಲೀಸ್ಟ್ ಸೇರಿದರೆ ಸಾಕು.