For Quick Alerts
  ALLOW NOTIFICATIONS  
  For Daily Alerts

  ವಿಮರ್ಶಕರ ಮನಗೆಲ್ಲುವಲ್ಲಿ 'ಕಿಚ್ಚು' ಯಶಸ್ವಿ ಆಯ್ತಾ.?

  By Harshitha
  |

  ಗಿರಿಜನರ ಬದುಕು ಹಾಗೂ ಪರಿಸರ ಸಂರಕ್ಷಣೆ ಕುರಿತಾದ ಕಥೆ ಹೊಂದಿರುವ ಸಿನಿಮಾ 'ಕಿಚ್ಚು'. ಧ್ರುವ್ ಶರ್ಮಾ ಅಭಿನಯದ ಕೊನೆಯ ಚಿತ್ರ 'ಕಿಚ್ಚು' ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ.

  ಪ್ರದೀಪ್ ರಾಜ್ ಆಕ್ಷನ್ ಕಟ್ ಹೇಳಿರುವ, ರಾಗಿಣಿ ದ್ವಿವೇದಿ ಹಾಗೂ ಅಭಿನಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಮಿಂಚಿರುವ 'ಕಿಚ್ಚು' ಚಿತ್ರ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

  ಹಾಗಾದ್ರೆ, 'ಕಿಚ್ಚು' ಚಿತ್ರ ವಿಮರ್ಶಕರ ಮನಗೆಲ್ಲುವಲ್ಲಿಯೂ ಯಶಸ್ವಿ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಕಿಚ್ಚು' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

  ಕಾನನದ 'ಕಿಚ್ಚು' ಸಂಘರ್ಷವೇ ಹೆಚ್ಚು - ಪ್ರಜಾವಾಣಿ

  ಕಾನನದ 'ಕಿಚ್ಚು' ಸಂಘರ್ಷವೇ ಹೆಚ್ಚು - ಪ್ರಜಾವಾಣಿ

  ಅರಣ್ಯದೊಳಗೆ ಮತ್ತು ಅದರ ಸುತ್ತಮುತ್ತ ರೆಸಾರ್ಟ್‌ ಹಾವಳಿ ಉಲ್ಬಣಿಸಿದೆ. ಇದು ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷಕ್ಕೂ ಮುನ್ನುಡಿ ಬರೆದಿದೆ. ಇನ್ನೊಂದೆಡೆ ಅರಣ್ಯವಾಸಿಗಳ ಆರ್ತನಾದ ಅಧಿಕಾರಸ್ಥರ ದರ್ಪದ ಮುಂದೆ ಕ್ಷೀಣವಾಗುತ್ತಿದೆ. ಕಾಡಿನ ಉಳಿವಿಗೆ ಶ್ರಮಿಸುತ್ತಿರುವ ಗಿರಿಜನರ ಅರಣ್ಯರೋದನೆಯನ್ನು ‘ಕಿಚ್ಚು' ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರದೀಪ್‌ ರಾಜ್ - ಕೆ.ಎಚ್.ಓಬಳೇಶ್

  'ಕಿಚ್ಚು' ವಿಮರ್ಶೆ: ಕಾನನದ ಉಳಿವಿಗಾಗಿ ಕಿಚ್ಚಿನ ಕದನ'ಕಿಚ್ಚು' ವಿಮರ್ಶೆ: ಕಾನನದ ಉಳಿವಿಗಾಗಿ ಕಿಚ್ಚಿನ ಕದನ

  ಮರದೊಳಗಿನ ಕಿಚ್ಚು ಎದೆಯೊಳಗೆ ಇಳಿದ ಪರಿ - ವಿಜಯ ಕರ್ನಾಟಕ

  ಮರದೊಳಗಿನ ಕಿಚ್ಚು ಎದೆಯೊಳಗೆ ಇಳಿದ ಪರಿ - ವಿಜಯ ಕರ್ನಾಟಕ

  ಕಾಡನಂಚಿನ ಜನರ ಕಥೆ ಅಂದಾಕ್ಷಣ ನಿರ್ದೇಶಕರಿಗೆ ನೆನಪಾಗುವುದೇ ಈ ಎರಡು ಅಂಶಗಳು. ಒಂದು, ಕಾಡು ಉಳಿಸಿ ಅಭಿಯಾನ. ಮತ್ತೊಂದು ನಕ್ಸಲೀಯರ ಸಮಸ್ಯೆ. ಈ ಎರಡರ ಸುತ್ತ ಗಿರಿಕಿ ಹೊಡೆದ ಅನೇಕ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅದಕ್ಕೆ ಹೊಸ ಸೇರ್ಪಡೆ ‘ಕಿಚ್ಚು' ಚಿತ್ರ. ಇಲ್ಲಿಯೂ ಕಾಡಿನ ಬಗ್ಗೆ ಕಳಕಳಿಯಿದೆ. ನಕ್ಸಲಿಸಂ ಬಗ್ಗೆ ಪ್ರಸ್ತಾಪವಿದೆ. ಇವುಗಳನ್ನು ಹೇಳುತ್ತಲೇ ಪುಟ್ಟದೊಂದು ಲವ್‌ಸ್ಟೋರಿಯನ್ನೂ ತೋರಿಸುತ್ತಾರೆ ನಿರ್ದೇಶಕರು. ಹಾಗಾಗಿ ಮರದೊಳಗಿನ ಮತ್ತು ಮನಸಿನೊಳಗಿನ ‘ಕಿಚ್ಚು' ಸಿನಿಮಾದುದ್ದಕ್ಕೂ ಪಸರಿಸಿದೆ - ಶರಣು ಹುಲ್ಲೂರು

  ಕಾಡ ಹಾದಿಯ ರಕ್ತ ಚರಿತ್ರೆ - ಉದಯವಾಣಿ

  ಕಾಡ ಹಾದಿಯ ರಕ್ತ ಚರಿತ್ರೆ - ಉದಯವಾಣಿ

  ಕಾಡು ಕಡಿದು ರೆಸಾರ್ಟ್‌ ಮಾಡೋದನ್ನು ವಿರೋಧಿಸಿ, ಮಾತಿಗೆ ಮಾತು ಬೆಳೆದು ಒಂದು ಕೊಲೆ ನಡೆದೇ ಹೋಗುತ್ತದೆ. ಅಲ್ಲಿಂದ ಕೊಲೆಗಳ ಸರಣಿ ಮುಂದುವರೆಯುತ್ತದೆ. ಒಂದು ಕೊಲೆ ಮುಂದೆ ಏಳೆಂಟು ಕೊಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕೊಲೆಯಿಂದ ಆರಂಭವಾಗಿ ಕೊಲೆಯಲ್ಲೇ ಅಂತ್ಯವಾಗುತ್ತದೆ. ಅಷ್ಟೂ ಕೊಲೆಗಳಿಗೆ ಕಾರಣ ತಂಡವೊಂದರ ಕಿಚ್ಚು. ನಿರ್ದೇಶಕ ಪ್ರದೀಪ್‌ ರಾಜ್‌ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿಕೊಂಡು ಬಂದವರಿಗೆ "ಕಿಚ್ಚು' ಹೊಸದಾಗಿ ಕಾಣುತ್ತದೆ - ರವಿಪ್ರಕಾಶ್ ರೈ

   Kichchu Movie Review - Times of India

  Kichchu Movie Review - Times of India

  Kichchu might not be a drama that keeps you in the edge of your seat, but it has its heart set in the right place. The fact that there are some good performances that complement the intent is an added bonus. Right from the lead actors to Ragini, to the supporting cast - they seem to have been cast aptly. Sudeep's cameo is not the usual starry one, but his words resonate and are relevant to all. Go ahead and watch the film, especially if you like to watch films minus all the regular dose of masala found in the commercial potboilers. This might just be what you were looking for - Sunayana Suresh

  English summary
  Kannada Actress Ragini Dwivedi and Dhruv Sharma starrer Kannada Movie 'Kichchu' has received good response from the critics. Here is the collection of 'Kichchu' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X