For Quick Alerts
  ALLOW NOTIFICATIONS  
  For Daily Alerts

  'ಕಾಲಾ' ಮೊದಲ ವಿಮರ್ಶೆ: 4 ಸ್ಟಾರ್ ಕೊಟ್ಟ ದುಬೈ ವಿಮರ್ಶಕ, ಹೇಗಿದೆ.?

  By Bk
  |
  Kaala Movie Review | ಪಕ್ಕಾ ಪೈಸಾ ವಸೂಲ್ ಸಿನಿಮಾ ಕಾಲಾ | Filmibeat Kannada

  ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ನಾಳೆ ಮುಂಜಾನೆಯೇ ತೆರೆಕಾಣುತ್ತಿದ್ದು, ಈಗಲೇ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಜಮಾಯಿಸುವಂತೆ ಮಾಡಿದೆ. ಆದ್ರೆ, ಈ ಸಿನಿಮಾ ಕರ್ನಾಟಕದಲ್ಲಿ ವಿವಾದಿಂದಲೇ ಹೆಚ್ಚು ಸುದ್ದಿಯಾಗಿದೆ.

  ಕರ್ನಾಟದಲ್ಲಿ ಮಾತ್ರವಲ್ಲದೇ ತಮಿಳುನಾಡಿನಲ್ಲೂ ಕೂಡ 'ಕಾಲಾ' ವಿವಾದಗಳನ್ನ ಎದುರಿಸುತ್ತಿದೆ. ಹೀಗಾಗಿ, ಈ ಚಿತ್ರದಲ್ಲಿ ಅಂತಹದ್ದೇನಿದೆ ಎಂಬ ಕುತೂಹಲ, ನಿರೀಕ್ಷೆ ಎಲ್ಲರನ್ನ ಕಾಡುತ್ತಿದೆ. ಅಧಿಕೃತವಾಗಿ ನಾಳೆ ರಿಲೀಸ್ ಆಗಲಿರುವ 'ಕಾಲಾ' ಚಿತ್ರದ ಮೊದಲ ವಿಮರ್ಶೆ ಇಂದೇ ಬಹಿರಂಗವಾಗಿದೆ.

  ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಕಾಲಾ ?ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಕಾಲಾ ?

  ದುಬೈನ ವಿಮರ್ಶಕ ಹಾಗೂ ಸೆನ್ಸಾರ್ ಮಂಡಳಿಯ ಸದಸ್ಯ ಉಮರ್ ಸಂಧು 'ಕಾಲಾ' ಚಿತ್ರವನ್ನ ನೋಡಿ, ಚಿತ್ರದ ರಿವ್ಯೂ ಬರೆದಿದ್ದಾರೆ. ಕಾಲಾ ನೋಡಿ ವಿಸ್ಮಯರಾಗಿರುವ ಉಮರ್ ಚಿತ್ರಕ್ಕೆ ನಾಲ್ಕು ಸ್ಟಾರ್ ಕೊಟ್ಟಿದ್ದಾರೆ. ವಿಶೇಷ ಅಂದ್ರೆ 'ಬಾಹುಬಲಿ' ಚಿತ್ರದ ಮೊದಲ ರಿವ್ಯೂ ಪ್ರಕಟ ಮಾಡಿದ್ದು ಕೂಡ ಇದೇ ವ್ಯಕ್ತಿ. ಹಾಗಿದ್ರೆ, 'ಕಾಲಾ' ಚಿತ್ರದ ಪೂರ್ತಿ ವಿಮರ್ಶೆ ಮುಂದೆ ಓದಿ.....

  ರಜನಿಗೆ ಹೊಸ ಮಾರ್ಕೆಟ್ ಸೃಷ್ಠಿಸಿದ ಪಾ ರಂಜಿತ್

  ರಜನಿಗೆ ಹೊಸ ಮಾರ್ಕೆಟ್ ಸೃಷ್ಠಿಸಿದ ಪಾ ರಂಜಿತ್

  ''ರಜನಿಕಾಂತ್ ಅವರನ್ನ ಈ ಹಿಂದೆ ಎಂದೂ ಈ ರೀತಿ ನೋಡಿರಲಿಲ್ಲ. ಅವರ ಸ್ಟೈಲ್, ಲುಕ್, ಬಾಡಿ ಲಾಂಗ್ವೇಜ್ ಎಲ್ಲದರಲ್ಲೂ ಹೊಸ ಹುಮ್ಮಸ್ಸು ಎದ್ದು ಕಾಣುತ್ತಿದೆ. ರಜನಿಕಾಂತ್ ಅವರಿಗಿದ್ದ ಇಮೇಜ್ ಬದಲಿಸಿ, ಹೊಸದೊಂದು ಮಾರುಕಟ್ಟೆ ಸೃಷ್ಠಿಸುವಲ್ಲಿ ನಿರ್ದೇಶಕ ಪಾ ರಂಜಿತ್ ಯಶಸ್ವಿಯಾಗಿದ್ದಾರೆ. ಪಾ ರಂಜಿತ್ ನಿರ್ದೇಶನ ಮಾಡಿರುವ ಕಲರ್ ಫುಲ್ ಸಿನಿಮಾದಲ್ಲಿ ಅತ್ಯುತ್ತಮವಾದ ಸಾಹಸಮಯ ದೃಶ್ಯಗಳು ಗಮನ ಸೆಳೆಯುತ್ತೆ. ರಜನಿಕಾಂತ್ ಅಭಿನಯದ 'ಕಾಲಾ' ಬ್ಲ್ಯಾಕ್ ಬಸ್ಟರ್ ಆಗಿದೆ. ರಜನಿಕಾಂತ್ ಸ್ಟೈಲ್ ಆಕ್ಷನ್, ಡೈಲಾಗ್ ಸೂಪರ್ ಆಗಿದೆ'' ಎಂದು ದುಬೈ ವಿಮರ್ಶಕರ ಉಮರ್ ಸಂಧು ಬರೆದುಕೊಂಡಿದ್ದಾರೆ.

  ತಾಂತ್ರಿಕವಾಗಿ ಕಾಲಾ ಹೊಸ ಕ್ರಾಂತಿ

  ತಾಂತ್ರಿಕವಾಗಿ ಕಾಲಾ ಹೊಸ ಕ್ರಾಂತಿ

  ''ತಾಂತ್ರಿಕವಾಗಿ ಕಾಲಾ ಹೊಸ ಕ್ರಾಂತಿ. ಪೈಸಾ ವಸೂಲ್ ಕಥೆ ಮತ್ತು ಚಿತ್ರಕಥೆ. ರೋಚಕವಾದ ಸಾಹಸ ದೃಶ್ಯಗಳು. ಕಣ್ಮನ ಸೆಳೆಯುವ ಸಿನಿಮಾಟೋಗ್ರಫಿ. ಸ್ಲಂನಲ್ಲಿ ಹಾಕಿರುವ ಸೆಟ್ ದೃಶ್ಯಗಳು ಸಖತ್ ಆಗಿದೆ. ಹಿನ್ನೆಲೆ ಸಂಗೀತ ಅದ್ಭುತ. ಸಂಕಲನ ಮೋಡಿ ಮಾಡಿದ್ದು, ನಿರ್ದೇಶಕ ಪಾ ರಂಜಿತ್ ಗ್ರೇಟ್ ಎನಿಸಿಕೊಂಡಿದ್ದಾರೆ'' - ಉಮರ್ ಸಂಧು

  'ಕಾವೇರಿ' ಜೊತೆಗೆ 'ಕಾಲಾ'ಗೆ ಕಾಡುತ್ತಿರುವ 5 ವಿವಾದಗಳು.!'ಕಾವೇರಿ' ಜೊತೆಗೆ 'ಕಾಲಾ'ಗೆ ಕಾಡುತ್ತಿರುವ 5 ವಿವಾದಗಳು.!

  ಕಲಾವಿದರ ಅಭಿನಯಕ್ಕೆ ಫುಲ್ ಮಾರ್ಕ್ಸ್

  ಕಲಾವಿದರ ಅಭಿನಯಕ್ಕೆ ಫುಲ್ ಮಾರ್ಕ್ಸ್

  ''ಸಿನಿಮಾ ಪೂರ್ತಿ ಬೋರ್ ಮಾಡುವ ಯಾವುದೇ ದೃಶ್ಯವಿಲ್ಲ. ರಜನಿಕಾಂತ್ ಅವರ ಫರ್ಫಾಮೆನ್ಸ್ ಗೆ ಪ್ರಶಸ್ತಿ ಸಿಕ್ಕರೂ ಅಚ್ಚರಿಯಿಲ್ಲ. ಎಲ್ಲ ರೀತಿಯಲ್ಲೂ ಕಿಕ್ ನೀಡಿದ್ದಾರೆ. ನಾನಾ ಪಟೇಕರ್ ಅವರಂತೂ ಚಿಂದಿ ಫರ್ಫಾಮೆನ್ಸ್. ಹುಮಾ ಖುರೇಶಿ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲ ಪೋಷಕ ನಟರು ಕೂಡ ಉತ್ತಮ ಸಾಥ್ ನೀಡಿದ್ದಾರೆ'' - ಉಮರ್ ಸಂಧು.

  ಕೊನೆಯದಾಗಿ....

  ಕೊನೆಯದಾಗಿ....

  ''ಕೊನೆಯದಾಗಿ 'ಕಾಲಾ' ಸಿನಿಮಾ ಭರ್ಜರಿ ಓಪನಿಂಗ್ ಮಾಡಲಿದೆ. ಬಾಕ್ಸ್ ಆಫೀಸ್ ನಲ್ಲಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡೋದಂತೂ ಪಕ್ಕಾ. ಕಾಲಾ ಚಿತ್ರದ ನಿರ್ಮಾಪಕರು, ವಿತಕರಕರು ಎಲ್ಲವೂ ಖುಷಿ ಪಡುವ ವಿಚಾರ. ಒಟ್ನಲ್ಲಿ ಕಾಲಾ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾ'' ಎಂದು ವಿಮರ್ಶೆ ಬರೆದು ಉಮರ್ ಸಂಧು ನಾಲ್ಕು ಸ್ಟಾರ್ ಕೊಟ್ಟಿದ್ದಾರೆ.

  ಸುಪ್ರೀಂ ಕೋರ್ಟ್ ನಿಂದಲೂ 'ಕಾಲಾ' ಬಿಡುಗಡೆಗೆ ಗ್ರೀನ್ ಸಿಗ್ನಲ್ಸುಪ್ರೀಂ ಕೋರ್ಟ್ ನಿಂದಲೂ 'ಕಾಲಾ' ಬಿಡುಗಡೆಗೆ ಗ್ರೀನ್ ಸಿಗ್ನಲ್

  English summary
  Super Star Rajinikanth kaala is releasing tomorrow in the theatres and here is the review of the film that is published first on the internet. UAE based Critic Umair Sandhu published the review of the movie on his personal blog and rated 4 stars for the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X