twitter
    For Quick Alerts
    ALLOW NOTIFICATIONS  
    For Daily Alerts

    'ಕಾಲಾ' ವಿಮರ್ಶೆ: 'ರಾಜಕಾರಣಿ' ರಜನಿಗಾಗಿ 'ಕ್ರಾಂತಿಕಾರಿ' ಸಿನಿಮಾ.!

    |

    'ಕಾಲಾ'... 'ಕರಿಕಾಳನ್' ಎಂಬ ಗ್ಯಾಂಗ್ ಸ್ಟರ್ ಸುತ್ತ ಸುತ್ತುವ ಸಿನಿಮಾ ಎಂದೇ ಈವರೆಗೂ ಜನಜನಿತವಾಗಿತ್ತು. ಆದ್ರೆ, 'ಕಾಲಾ' ಗ್ಯಾಂಗ್ ಸ್ಟರ್ ಚಿತ್ರ ಅನ್ನೋದಕ್ಕಿಂತ ಹೆಚ್ಚಾಗಿ 'ಕ್ರಾಂತಿಕಾರಿ' ಸಿನಿಮಾ. ಸದ್ಯ ರಾಜಕೀಯಕ್ಕೆ ಪ್ರವೇಶ ಮಾಡಿರುವ ರಜನಿ ಇಮೇಜ್ ಗೆ ಹೇಳಿ ಮಾಡಿಸಿದ ಹಾಗಿದೆ ಈ ಚಿತ್ರ.

    Rating:
    3.5/5
    Star Cast: ರಜನಿಕಾಂತ್, ನಾನಾ ಪಾಟೇಕರ್, ಸಮುದ್ರಖಣಿ
    Director: ಪಾ.ರಂಜಿತ್

    ಯಾರೀ 'ಕಾಲಾ'.?

    ಯಾರೀ 'ಕಾಲಾ'.?

    ತಿರುನೆಲ್ವೇಲಿಯ ಗ್ಯಾಂಗ್ ಸ್ಟರ್... ಮುಂಬೈನ ಧಾರಾವಿ ಸ್ಲಂ ನ ಕಿಂಗ್ ಕರಿಕಾಳನ್ (ರಜನಿಕಾಂತ್). ಕೊಳಗೇರಿ ನಿವಾಸಿಗಳ ಜಾಗದ ಮೇಲೆ 'ಅಭಿವೃದ್ಧಿ' ಹೆಸರಿನಲ್ಲಿ ರಾಜಕಾರಣಿಗಳ ಕಣ್ಣು ಬಿದ್ದಾಗ ಹೋರಾಟದ ಹಾದಿ ಹಿಡಿಯುವ ಕರಿಕಾಳನ್ ಸುತ್ತ ಹೆಣೆದಿರುವ ಕಥೆಯೇ 'ಕಾಲಾ' ಸಿನಿಮಾ.

    ಸಿಂಪಲ್ ಸ್ಟೋರಿ

    ಸಿಂಪಲ್ ಸ್ಟೋರಿ

    ಹಾಗ್ನೋಡಿದ್ರೆ, 'ಕಾಲಾ' ಚಿತ್ರದ ಕಥೆ ತುಂಬಾ ಸಿಂಪಲ್ ಆಗಿದೆ. ತಮಿಳಿನಾಡಿನಿಂದ ಮುಂಬೈಗೆ ಬರುವ ವಲಸಿಗರು, ತಮ್ಮ ಹಕ್ಕುಗಳಿಗಾಗಿ ನಡೆಸುವ ಕ್ರಾಂತಿಯ ಅಧ್ಯಾಯ ಈ ಚಿತ್ರದ ಕಥಾಹಂದರ.

    ರಜನಿಯ ಸಿಂಪಲ್ ಎಂಟ್ರಿ

    ರಜನಿಯ ಸಿಂಪಲ್ ಎಂಟ್ರಿ

    'ಕಾಲಾ' ಚಿತ್ರದ ಕಥೆ ಎಷ್ಟು ಸಿಂಪಲ್ ಆಗಿದ್ಯೋ, ರಜನಿಕಾಂತ್ ರವರ ಇಂಟ್ರೋಡಕ್ಷನ್ ಕೂಡ ಅಷ್ಟೇ ಸಿಂಪಲ್ ಆಗಿದೆ. ಧಾಂ ಧೂಂ ಆಗಿ ಎಂಟ್ರಿಕೊಡದ ಕರಿಕಾಳನ್ (ರಜನಿ), ಮಕ್ಕಳ ಜೊತೆಗೆ ಕ್ರಿಕೆಟ್ ಆಡುವ ಮೂಲಕ ತೆರೆಮೇಲೆ ಕಾಣಿಸಿಕೊಳ್ತಾರೆ. ಕನಿಷ್ಟ ರಜನಿ ಸಿಕ್ಸರ್ ಬಾರಿಸಬಹುದೇನೋ ಎಂದುಕೊಂಡರೆ, ಅಲ್ಲಾಗುವುದೇ ಬೇರೆ.!

    ಹಾಗಂತ ಇದು ರಜನಿ ಸಿನಿಮಾ ಅಲ್ಲ ಎನ್ನುವ ಹಾಗಿಲ್ಲ.!

    ಹಾಗಂತ ಇದು ರಜನಿ ಸಿನಿಮಾ ಅಲ್ಲ ಎನ್ನುವ ಹಾಗಿಲ್ಲ.!

    ಅಭಿಮಾನಿಗಳು ರಜನಿ ಚಿತ್ರ ನೋಡುವುದೇ ಸ್ಟೈಲ್ ಗೆ, ಮಾಸ್ ಎಲಿಮೆಂಟ್ಸ್ ಗೆ. 'ಕಾಲಾ' ಚಿತ್ರದಲ್ಲೂ ಅಂತಹ ಝಬರ್ದಸ್ತ್ ಅಂಶಗಳು ಇಲ್ಲ ಎನ್ನುವ ಹಾಗಿಲ್ಲ. ರಜನಿ ಭಕ್ತರು ಇಷ್ಟ ಪಡುವ ಸ್ಲೋ ಮೋಷನ್ ನಡಿಗೆ, 360 ಡಿಗ್ರಿ ಶಾಟ್ಸ್, ಕ್ಲೋಸ್ ಅಪ್... ಎಲ್ಲವೂ 'ಕಾಲಾ'ದಲ್ಲಿದೆ. ಅದರಲ್ಲೂ ಮುಂಬೈ ಫ್ಲೈ ಓವರ್ ಮೇಲಿನ ಸ್ಟಂಟ್ ಸನ್ನಿವೇಶ ಅಭಿಮಾನಿಗಳ ಹಾರ್ಟ್ ಬೀಟ್ ರೈಸ್ ಮಾಡುತ್ತೆ.

    ರಜನಿಕಾಂತ್ ಪರ್ಫಾಮೆನ್ಸ್ ಬಗ್ಗೆ ಕೆಮ್ಮಂಗಿಲ್ಲ

    ರಜನಿಕಾಂತ್ ಪರ್ಫಾಮೆನ್ಸ್ ಬಗ್ಗೆ ಕೆಮ್ಮಂಗಿಲ್ಲ

    'ಕರಿಕಾಳನ್' ಆಗಿ ರಜನಿಕಾಂತ್ ಅಭಿನಯದ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಆಕ್ಷನ್ ಹಾಗೂ ಮಾಸ್ ಸನ್ನಿವೇಶಗಳಲ್ಲಿ ರಜನಿ ಖಂಡಿತ ನಿರಾಸೆ ಮಾಡಲ್ಲ.

    ಉಳಿದವರ ನಟನೆ

    ಉಳಿದವರ ನಟನೆ

    'ಕಾಲಾ' ಪತ್ನಿ ಸೆಲ್ವಿ ಪಾತ್ರಧಾರಿ ಈಶ್ವರಿ ರಾವ್ ನಟನೆಗೆ ಫುಲ್ ಮಾರ್ಕ್ಸ್ ಕೊಡಲೇಬೇಕು. ಇನ್ನೂ ನಾನಾ ಪಾಟೇಕರ್, ಅಂಜಲಿ ಪಾಟಿಲ್ ಹಾಗೂ ಹುಮಾ ಖುರೇಶಿ, ಸಮುದ್ರಖಣಿ ಅಭಿನಯ ಚೆನ್ನಾಗಿದೆ. ನಾನಾ ಪಾಟೇಕರ್ ಹಾಗೂ ರಜನಿ ನಡುವಿನ ದೃಶ್ಯಗಳು ಪಕ್ಕಾ ಪೈಸಾ ವಸೂಲ್.

    ಪಾ.ರಂಜಿತ್ ಶ್ರಮ ಮೆಚ್ಚಲಾರ್ಹ

    ಪಾ.ರಂಜಿತ್ ಶ್ರಮ ಮೆಚ್ಚಲಾರ್ಹ

    ರಜನಿಕಾಂತ್ ಅಭಿಮಾನಿಗಳಿಗೆ ಏನು ಬೇಕೋ, ಅದನ್ನ ತೆರೆಮೇಲೆ ಕೊಡುವಲ್ಲಿ ನಿರ್ದೇಶಕ ಪಾ.ರಂಜಿತ್ ಹಿಂದೇಟು ಹಾಕಿಲ್ಲ. ಫಸ್ಟ್ ಹಾಫ್ ಕೊಂಚ ಸ್ಲೋ, ಸೆಕೆಂಡ್ ಹಾಫ್ ನಲ್ಲಿ ಅಂತಹ ತಿರುವು ಇಲ್ಲ. 'ಕಾಲ' ಒಂದು ಬಾರಿ ನೋಡಲು ಅಡ್ಡಿ ಇಲ್ಲ. ನಿರ್ದೇಶಕನಾಗಿ ಪಾ.ರಂಜಿತ್ ಶ್ರಮ ಮೆಚ್ಚಲಾರ್ಹ.

    ಕಥೆಯಲ್ಲಿ ಹೊಸತನ ಇಲ್ಲ

    ಕಥೆಯಲ್ಲಿ ಹೊಸತನ ಇಲ್ಲ

    ಕಥೆಯಲ್ಲಿ ಹೊಸತನ ಇಲ್ಲ ಅಂದ್ರೂ, ರಜನಿ ಅಭಿನಯ ಹಾಗೂ ಸಿನಿಮಾದಲ್ಲಿರುವ ಸಂದೇಶ ಉತ್ತಮ ಚಿತ್ರವನ್ನ ನೋಡುವಂತೆ ಮಾಡುತ್ತದೆ. ಕ್ಯಾಮರಾ ವರ್ಕ್, ಬ್ಯಾಕ್ ಗ್ರೌಂಡ್ ಸ್ಕೋರ್ ಹಾಗೂ ಹಾಡುಗಳು ಓಕೆ.

    ಫೈನಲ್ ಸ್ಟೇಟ್ಮೆಂಟ್

    ಫೈನಲ್ ಸ್ಟೇಟ್ಮೆಂಟ್

    ಪಾ.ರಂಜಿತ್ ನಿರ್ದೇಶನದ 'ಕಬಾಲಿ'ಗೆ ಹೋಲಿಸಿದರೆ 'ಕಾಲಾ' ಪರ್ವಾಗಿಲ್ಲ. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೇ, 'ಕಾಲಾ' ನೋಡಿದರೆ ಇಷ್ಟವಾಗಬಹುದು.

    Read in English: Kaala Review
    English summary
    Read Super Star Rajinikanth starrer Pa Ranjith directorial 'Kaala' review.
    Saturday, September 29, 2018, 11:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X