twitter
    For Quick Alerts
    ALLOW NOTIFICATIONS  
    For Daily Alerts

    ಕೆಂಪು ಬಾವುಟ ಹೊತ್ತ 'ರಿಕ್ಕಿ'ಗೆ ವಿಮರ್ಶಕರು 'ಲಾಲ್ ಸಲಾಂ' ಅಂದ್ರಾ?

    By Suneetha
    |

    ಪ್ರೀತಿಯ ಸಂಕೇತ ಕೆಂಪು ಹಾಗೆ ರಕ್ತದ ಬಣ್ಣವೂ ಕೆಂಪು ಇವೆರಡರಲ್ಲಿ ಇಬ್ಬರು ಯುವ ಪ್ರೇಮಿಗಳು ಪಡುವ ಪಾಡಿನ ಕಥೆ-ವ್ಯಥೆಯೇ ರಿಶಬ್ ಶೆಟ್ಟಿ ಅವರ 'ರಿಕ್ಕಿ' ಸಿನಿಮಾ.

    ಕೇಂದ್ರ ಸರ್ಕಾರದ 'SEZ' ಎಂಬ ಯೋಜನೆಯು ನಾಯಕಿಯ ಬದುಕನ್ನು ಯಾವ ರೀತಿ ಬಲಿ ತೆಗೆದುಕೊಳ್ಳುತ್ತದೆ. ತಾನು ಮದುವೆಯಾಗಬೇಕಿದ್ದ ತನ್ನ ಪ್ರೀತಿಯ ಹುಡುಗಿ 'ನಕ್ಸಲಿಸಂ'ಗೆ ಸೇರಿದಾಗ ಆಕೆಯನ್ನು ನಾಯಕ ಅಲ್ಲಿಂದ ಹೇಗೆ ಬಚಾವ್ ಮಾಡಿಸುತ್ತಾನೆ ಮುಂತಾದ ಕುತೂಹಲಗಳು ಸಿನಿಮಾದಲ್ಲಿವೆ.[ಪ್ರೀತಿ-ಸಮರಗಳ ನಡುವೆ ನಜ್ಜುಗುಜ್ಜಾಗುವ 'ರಿಕ್ಕಿ'ಗೆ ಸಲಾಂ ]

    ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿರುವ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರ 'ರಿಕ್ಕಿ' ಸಿನಿಮಾಗೆ ನಮ್ಮ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.[ಶೆಟ್ರ 'ರಿಕ್ಕಿ'ಯಲ್ಲಿ ಕಿಚ್ಚ ಸುದೀಪ್ ಅವರ ಮಸ್ತ್ ಮ್ಯಾಜಿಕ್]

    ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಹರಿಪ್ರಿಯಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ರಿಕ್ಕಿ' ಸಿನಿಮಾಗೆ ವಿಮರ್ಶಕರು ನೀಡಿರುವ ಅಭಿಪ್ರಾಯಗಳ ಕಲೆಕ್ಷನ್ಸ್ ಇಲ್ಲಿದೆ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

    'ಕೆಂಪು ನೆತ್ತರಿನಲ್ಲಿ ಅರಳಿತು ಅಮರ ಪ್ರೇಮ - ವಿಜಯ ಕರ್ನಾಟಕ

    'ಕೆಂಪು ನೆತ್ತರಿನಲ್ಲಿ ಅರಳಿತು ಅಮರ ಪ್ರೇಮ - ವಿಜಯ ಕರ್ನಾಟಕ

    ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ರಾಧಾ ( ಹರಿಪ್ರಿಯಾ ) ನಕ್ಸಲೈಟ್ ಆಗುತ್ತಾಳೆ. ಸ್ಪೆಶಲ್ ಎಕಾನಮಿಕ್ ಜೋನ್ (ಎಸ್.ಇ.ಜೆಡ್)ನಿಂದಾಗಿ ಮನೆ, ಅಪ್ಪ-ಅಮ್ಮನನ್ನು ಕಳೆದುಕೊಳ್ಳುವ ರಾಧಾ, ಸಾಂದರ್ಭಿಕ ಒತ್ತಡದಿಂದಾಗಿ ನಕ್ಸಲೈಟ್ ಆಗುತ್ತಾಳೆ. ಆದರೆ ರಾಧಾಳೇ ಉಸಿರು ಎಂದು ಪ್ರೀತಿಸುವ ರಿಕ್ಕಿ ( ರಕ್ಷಿತ್ ಶೆಟ್ಟಿ)ಗೆ ರಾಧಾ, ನಕ್ಸ್‌ಲೈಟ್ ಆಗಿರುವ ವಿಷಯ ತಿಳಿದು ಕುಸಿದು ಬೀಳುತ್ತಾನೆ. ಅಷ್ಟೇ ಅಲ್ಲ; ಅವಳನ್ನು ನಕ್ಸಲೈಟ್ ಗುಂಪಿನಿಂದ ವಾಪಸ್ಸು ಕರೆದುಕೊಂಡು ಬಂದು ಬಾಳ್ವೆ ನಡೆಸಲು ಪ್ರಯತ್ನಿಸುತ್ತಾನೆ. ಅವರಿಬ್ಬರೂ ತಮ್ಮ ಪ್ರೀತಿ ಉಳಿಸಿಕೊಳ್ಳುತ್ತಾರಾ? ರಾಧಾ, ನಕ್ಸಲೈಟ್ ಗುಂಪಿನಿಂದ ಹೊರ ಬರುವುದಕ್ಕೆ ಆಗುತ್ತದಾ..? ಇದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತದೆ. - ಎಚ್.ಮಹೇಶ್[ರಿಕ್ಕಿ ಮೇನಿಯಾ ಶುರು, ಟ್ವಿಟ್ಟರ್ ನಲ್ಲಿ ಹವಾ ಹೇಗಿದೆ?]

    'ನಕ್ಸಲ್ ನಳಿಕೆಯಲ್ಲಿ ಕೆಂಗುಲಾಬಿ' - ಪ್ರಜಾವಾಣಿ

    'ನಕ್ಸಲ್ ನಳಿಕೆಯಲ್ಲಿ ಕೆಂಗುಲಾಬಿ' - ಪ್ರಜಾವಾಣಿ

    ಕೆಂಪು ಗುಲಾಬಿ ಪ್ರೀತಿಯ ಸಂಕೇತವಾದಂತೆ ಕಮ್ಯುನಿಸಂ/ನಕ್ಸಲ್‌ವಾದದ ಸಂಕೇತವೂ ಕೆಂಪು. ನಕ್ಸಲ್ ಮತ್ತು ಎರಡು ಹೃದಯಗಳ ಹೋರಾಟ ಮೇಳೈಸಿದ ಸಿನಿಮಾ ‘ರಿಕ್ಕಿ'. ಕೈ ತಪ್ಪಿರುವ ತನ್ನಾಕೆಯನ್ನು ಮರಳಿ ತನ್ನ ಹೃದಯದ ತಾವಿಗೆ ಕರೆತರಲು ರಾಧಾಕೃಷ್ಣ ಹೋರಾಟಕ್ಕಿಳಿದರೆ, ಇನಿಯನ ಕೆಂಗುಲಾಬಿಯನ್ನು ಮುಡಿಯಿಂದ ಜಾರಿಸಿ ತನಗಾದ ನೋವುಗಳಿಗೆ ಬಂದೂಕಿನ ಮೂಲಕ ಪರಿಹಾರ ಕಂಡುಕೊಳ್ಳಲು ರಾಧೆ ತುಳಿಯುವುದು ನಕ್ಸಲಿಸಂ ಹಾದಿಯನ್ನು. ಎರಡೂ ಹೋರಾಟದ ಹಾದಿಗಳೇ. ಗುರಿ ಬೇರೆ. ಈ ಹಿನ್ನೆಲೆಯಲ್ಲಿ ‘ರಿಕ್ಕಿ' ಪ್ರೀತಿ ಮತ್ತು ಪ್ರತೀಕಾರದ ಹೋರಾಟದ ಚಿತ್ರ. ಒಂದು ಸೂಕ್ಷ್ಮ-ಪರಿಣಾಮಕಾರಿ ವಿಷಯವನ್ನೇ ಎತ್ತಿಕೊಂಡು ರಿಷಬ್ ಕಥೆ ನಿರೂಪಿಸಿದ್ದಾರೆ.- ಡಿ.ಎಂ.ಕುರ್ಕೆ ಪ್ರಶಾಂತ್

    'ಕೆಂಪಾದವೋ ನೋವು ಒಲವಾದವೋ' - ವಿಜಯವಾಣಿ

    'ಕೆಂಪಾದವೋ ನೋವು ಒಲವಾದವೋ' - ವಿಜಯವಾಣಿ

    ವಿಶೇಷ ಆರ್ಥಿಕ ವಲಯ (ಎಸ್​ಇಝುಡ್) ಎಂಬ ಸರ್ಕಾರದ ನೀತಿಗೆ ಮಲೆನಾಡಿನ ಒಂದು ಕುಟುಂಬ ಬಲಿಯಾಗುತ್ತೆ, ಇದರ ವಿರುದ್ಧ ತಿರುಗಿಬೀಳುವ ಆ ಮನೆಮಗಳು ಸಂಘರ್ಷದ ಹಾದಿ ಹಿಡಿಯುತ್ತಾಳೆ. ‘ದ್ವೇಷಕ್ಕೆ ದ್ವೇಷ, ಹಲ್ಲಿಗೆ ಹಲ್ಲು, ರಕ್ತಕ್ಕೆ ರಕ್ತ' ಅಂತ ಸಮರ ಸಾರುತ್ತಾರೆ ಕೆಂಪು ಹೋರಾಟಗಾರರು. ಪ್ರೀತಿಯ ಬಲೆಯಲ್ಲಿರುವ ಹೆಣ್ಣು, ನಿಶ್ಚಿತಾರ್ಥ ಮಾಡಿಕೊಂಡು ಹಸೆಮಣೆಯೇರಬೇಕಾದ ಹೆಣ್ಣು ದಿಢೀರ್ ನಕ್ಸಲ್ ಆಗಿಬಿಟ್ಟರೆ? ಪ್ರೀತಿಸಿ, ಮದುವೆ ಕನಸು ಕೊಟ್ಟಿಕೊಂಡಿರುವ ಆ ಮದುಮಗನ ಪಾಡೇನಾಗಬೇಡ... ಸೂಕ್ಷ್ಮ ಎನ್ನುವುದಕ್ಕಿಂತ ಕಠಿಣ ವಿಷಯವೊಂದನ್ನು ಎತ್ತಿಕೊಂಡು ಅದಕ್ಕೆ ಸ್ವಲ್ಪ ಪ್ರೀತಿ ಬೆರೆಸಿ ಸಿನಿಮಾ ಮಾಡಿರುವ ರಿಷಬ್ ಪ್ರಯತ್ನವನ್ನು ಮೆಚ್ಚಲೇಬೇಕು.

    ' lOVE STORY WITH A NAXAL BACKDROP' - Bangalore Mirror

    ' lOVE STORY WITH A NAXAL BACKDROP' - Bangalore Mirror

    In that sense, actor-turned-director Rishab Shetty's directorial debut is a bold film. Without taking sides, Shetty has managed to use naxalism as the backdrop of this love story. The film is also beautiful, with excellent cinematography, soothing music and delectable performances.

    'ಕ್ರಾಂತಿಯ ಸೊಕ್ಕಿಗೆ ಪ್ರೀತಿಯೊಂದೇ ದಿಕ್ಕು' - ಉದಯವಾಣಿ

    'ಕ್ರಾಂತಿಯ ಸೊಕ್ಕಿಗೆ ಪ್ರೀತಿಯೊಂದೇ ದಿಕ್ಕು' - ಉದಯವಾಣಿ

    ಎಸ್.ಇ ಝೆಡ್ (ವಿಶೇಷ ಆರ್ಥಿಕ ವಲಯ) ಅನ್ನೋದು ಬಂದು ಶ್ರಿಸಾಮಾನ್ಯರ ಜಮೀನನ್ನೇ ಕಸಿದುಕೊಳ್ಳತೊಡಗುತ್ತದೆ. ತನ್ನ ವ್ಯವಸ್ಥೆ ತನಗೆ, ತನ್ನವರಿಗೆ ರಕ್ಷಣೆ ಕೊಡದೇ ಹೋದಾಗ ತಾವೇ ಒಂದು ವ್ಯವಸ್ಥೆ ಹುಟ್ಟು ಹಾಕಿಕೊಳ್ಳಬೇಕು ಅನ್ನುವುದಕ್ಕೆ ಹುಟ್ಟಿದ್ದು ನಕ್ಸಲಿಸಂ. ದುರಾದೃಷ್ಟಕ್ಕೆ ಅಂಥ ಒಂದು ಪರ್ಯಾಯ ಸರ್ಕಾರ ವ್ಯವಸ್ಥೆಯೇ ಅವಳ ಜಗತ್ತಾಗುತ್ತದೆ. ಪ್ರೀತಿಯ ಜಗತ್ತಲ್ಲಿ ಒಂದಾಗಿದ್ದ ಅವರು ಈಗ ಪ್ರತ್ಯೇಕ ಜಗತ್ತು ಕಟ್ಟಿಕೊಂಡಿದ್ದಾರೆ. ತನ್ನ ಪ್ರೇಯಸಿಯ ಒಂದು ನೂಲ ಎಳೆಯೂ ಸಿಕ್ಕಿಕೊಳ್ಳದಂತೆ ಆ ಜಗತ್ತಿನಿಂದ ಹುಷಾರಾಗಿ ತನ್ನವಳನ್ನು ಹೇಗೆ ಎಳೆದು ವಾಪಾಸ್ ಪ್ರೀತಿಯ ಜಗತ್ತಿಗೆ ಅವನು ಹೇಗೆ ಸೇರಿಸುತ್ತಾನೆ, ಅದಕ್ಕೆ ತೆರಬೇಕಾದ ಬೆಲೆ ಏನು? ಇದನ್ನು ಹೇಳುವ ಸಿನಿಮಾ 'ರಿಕ್ಕಿ'. - ವಿಕಾಸ್ ನೇಗಿಲೋಣಿ.

    Ricky: Love in the time of conflict - The Hindu

    Ricky: Love in the time of conflict - The Hindu

    Rishab has used the demolition of the house of agriculturist Gregory Patrao in Kalavaru village for SEZ purposes, and the gunning down of ‘police informer' Seshaiah Gowdlu, effectively. The film's strength is in how it handles the tender love between its protagonists. But Rishab could have focussed more on etching the characters of the Naxal leader and on the dialogue delivery by some characters. In his urge to make the film poetic, he has let pass dialogues that come off as stilted and without emotions.

    'ಕಾಡಿನಲ್ಲಿ ಕಳೆದು ಹೋದ ಜೀವನಪ್ರೀತಿ' - ಕನ್ನಡ ಪ್ರಭ

    'ಕಾಡಿನಲ್ಲಿ ಕಳೆದು ಹೋದ ಜೀವನಪ್ರೀತಿ' - ಕನ್ನಡ ಪ್ರಭ

    ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮ ಕಥೆಯಲ್ಲಿ ಕಾಣುವ ರಿಕ್ಕಿ ಮತ್ತು ರಾಧಾ. ನಿರೀಕ್ಷೆಯಂತೆ ಇಬ್ಬರಿಗೂ ನಿಶ್ಚಿತಾರ್ಥವಾಗುತ್ತದೆ. ರಿಕ್ಕಿ ಪ್ರಾಜೆಕ್ಟ್ ಕೆಲಸದ ಮೇಲೆ ಕಾಶ್ಮೀರಕ್ಕೆ ಹೋಗುತ್ತಾನೆ. ಇತ್ತ ರಾಧಾಳ ಕುಟುಂಬದಲ್ಲಿ ಎಸ್.ಇ ಝೆಡ್ ಎನ್ನುವ ಬಿರುಗಾಳಿ ಸದ್ದು ಮಾಡುತ್ತದೆ. ಮನೆ ಕಳೆದುಕೊಳ್ಳುವ ಆತಂಕದಲ್ಲಿ ರಾಧಾಳ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮನೆ ಯಜಮಾನನ ಸಾವು ನೋಡಿ ರಾಧಾಳ ಅಮ್ಮ ಕುಸಿದು ಬೀಳುತ್ತಾಳೆ. ಅಪ್ಪ-ಅಮ್ಮನಿಂದ ದೂರವಾಗುವ ರಾಧಾಳ ಮನೆಯನ್ನೂ ಸರ್ಕಾರ ಕಿತ್ತುಕೊಳ್ಳುತ್ತದೆ. ಕಣ್ಣೀರು ನೆತ್ತರಾಗಿ ನೆಲವನ್ನು ಅಪ್ಪಿಕೊಳ್ಳುವ ಹೊತ್ತಿನಲ್ಲಿ ನಟ ಸುದೀಪ್ ಧ್ವನಿಯ ಜತೆ ಕಾಣಿಸಿಕೊಳ್ಳುವ ನಕ್ಸಲರ ಹಿಂದೆ ರಾಧಾ ಹೊರಡುತ್ತಾಳೆ. ರಿಕ್ಕಿಯ ಎದೆಯಲ್ಲಿ ಬೆಚ್ಚಗೆ ಬದುಕು ಕಟ್ಟಿಕೊಳ್ಳಬೇಕಾದ ಪಾರಿವಾಳ ಕಾಡಿನ ಹಾದಿ ತುಳಿಯುತ್ತದೆ. ಊರಿಗೆ ಬರುವ ರಿಕ್ಕಿಗೆ ರಾಧಾ ಕುಟುಂಬದ ವ್ಯಥೆ ಗೊತ್ತಾಗಿ ಕಾಡಿನಿಂದ ಆಕೆಯನ್ನು ಹೊರ ತರುವ ಸಾಹಸವೇ ಮುಂದಿನ ಕಥೆ.-ಆರ್.ಕೇಶವಮೂರ್ತಿ.

    English summary
    Kannada Movie 'Ricky' Critics Review. Actor Rakshit Shetty, Actress Haripriya, Actor Pramod Shetty Starrer 'Ricky' has received mixed response from the critics. here is the collection of reviews by Top News Papers of Karnataka. The movie is directed by debudent Director Rishab Shetty.
    Saturday, January 23, 2016, 12:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X