For Quick Alerts
  ALLOW NOTIFICATIONS  
  For Daily Alerts

  Ranganayaki Review: ಮಾರ್ಡನ್ ಯುಗದ ಮಾದರಿ ಹೆಣ್ಣು ಈ 'ರಂಗನಾಯಕಿ'

  |

  'ಐ ಯಾಮ್ ವರ್ಜಿನ್.. ಐ ಸ್ವಿಲ್ ಫಿಟ್ ಟು ಹ್ಯಾವ್ ಅಲ್ ರೈಟ್ಸ್ ಟು ಲೀವ್..'' ಇದು ಅತ್ಯಾಚಾರಕ್ಕೆ ಒಳಗಾದ ರಂಗನಾಯಕಿ ಹೇಳುವ ಮಾತು.

  'ರಂಗನಾಯಕಿ' ಎದುರು ನಿಂತ 'ದಂಡುಪಾಳ್ಯ' ಗ್ಯಾಂಗ್'ರಂಗನಾಯಕಿ' ಎದುರು ನಿಂತ 'ದಂಡುಪಾಳ್ಯ' ಗ್ಯಾಂಗ್

  ಅತ್ಯಾಚಾರಕ್ಕೆ ಒಳಗಾಗುವ ಒಬ್ಬ ಯುವತಿ ಹೇಗೆ ಆ ಘಟನೆಯಿಂದ ಹೊರಬರುತ್ತಾಳೆ. ಹೇಗೆ ಅದನ್ನು ಧೈರ್ಯವಾಗಿ ಎದುರಿಸುತ್ತಾಳೆ, ಸಮಾಜ ಆಕೆಯನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವುದು ರಂಗನಾಯಕಿ ಸಿನಿಮಾ ಕಥೆ. ಸಿನಿಮಾ ಮನರಂಜನೆಗೆ ಮಾತ್ರವಲ್ಲ, ಅದರಲ್ಲಿ ಒಂದು ಒಳ್ಳೆಯ ಸಂದೇಶ ಇರಬೇಕು ಎನ್ನುವವರಿಗೆ ಈ ಚಿತ್ರ ಬೆಸ್ಟ್ ಚಾಯ್ಸ್.

  Rating:
  3.5/5

  ಸಂಗೀತಾ ಟೀಚರ್ ರಂಗನಾಯಕಿ

  ಸಂಗೀತಾ ಟೀಚರ್ ರಂಗನಾಯಕಿ

  ರಂಗನಾಯಕಿ (ಅದಿತಿ ಪ್ರಭುದೇವ) ಸಂಗೀತ ಶಿಕ್ಷಕಿ. ಶಾಲೆಗೆ ಹೋಗಿ ಸಂಗೀತ ಪಾಠ ಮಾಡುವ ಈಕೆ ಸಂಗೀತದಂತೆ ಸಿಹಿಯಾದ ಹುಡುಗಿ. ಅದೇ ಶಾಲೆಯ ನಾಟಕದ ಶಿಕ್ಷಕ ಹಾಗೂ ಗಣಿತ ಶಿಕ್ಷಕ ಆಕೆಯನ್ನು ಪ್ರೀತಿಸುತ್ತಾರೆ. ಈ ಇಬ್ಬರಲ್ಲಿ ಮೊದಲು ಪ್ರೀತಿ ಹೇಳುವವನಿಗೆ ರಂಗನಾಯಕಿ ಜೋಡಿಯಾಗುತ್ತಾಳೆ. ಮದುವೆ ಆಗಬೇಕು ಎಂದು ನಿರ್ಧಾರ ಮಾಡುವ ಈಕೆಯ ಬದುಕಿನಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ.

  ಅತ್ಯಾಚಾರದ ವಿರುದ್ಧ ರಂಗನಾಯಕಿಯ ಹೋರಾಟ

  ಅತ್ಯಾಚಾರದ ವಿರುದ್ಧ ರಂಗನಾಯಕಿಯ ಹೋರಾಟ

  ಮದುವೆ ಆಗಲು ಸಿದ್ಧವಾಗಿರುವ ರಂಗನಾಯಕಿ ಮೇಲೆ ಅತ್ಯಾಚಾರ ಆಗುತ್ತದೆ. ಆ ಕೆಟ್ಟ ಘಟನೆಯ ನಂತರ ‌ಆಕೆ ಹೇಗೆ ಅದರಿಂದ ಹೊರ ಬರುತ್ತಾಳೆ, ಸುತ್ತ ಮುತ್ತ ಇರುವವರು ಆಕೆಯನ್ನು ಹೇಗೆ ಸ್ವೀಕರಿಸುತ್ತಾರೆ. ಸಮಾಜ ಆಕೆಯನ್ನು ಯಾವ ರೀತಿ ನೋಡುತ್ತದೆ, ಕೊನೆಗೆ ರಂಗನಾಯಕಿ ಹೇಗೆ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾಳೆ ಎನ್ನುವುದು ಚಿತ್ರದ ಕಥೆ.

  ಸ್ಟೈಲಿಷ್ ಫೋಟೋ ಶೂಟ್ ಮಾಡಿಸಿದ ಅದಿತಿ ಪ್ರಭುದೇವಸ್ಟೈಲಿಷ್ ಫೋಟೋ ಶೂಟ್ ಮಾಡಿಸಿದ ಅದಿತಿ ಪ್ರಭುದೇವ

  ಅದಿತಿ ಪ್ರಭುದೇವ ಅದ್ಭುತ ನಟನೆ

  ಅದಿತಿ ಪ್ರಭುದೇವ ಅದ್ಭುತ ನಟನೆ

  ಅದಿತಿ ಪ್ರಭುದೇವ ನಟನೆ ಮೇಲೆಯೇ ಇಡೀ ಸಿನಿಮಾ ನಿಂತಿದೆ. ರಂಗನಾಯಕಿ ಎನ್ನುವ ಹೆಸರಿಗೆ ಧಕ್ಕೆ ಆಗದಂತೆ ಅವರು ನಟಿಸಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳು ಸಿಗುವುದು ಕಷ್ಟವಾಗಿರುವಾಗ ಸಿಕ್ಕ ಅವಕಾಶವನ್ನು ಅದ್ಬುತವಾಗಿ ಅದಿತಿ ನಿರ್ವಹಿಸಿದ್ದಾರೆ. ಅವರ ನಟನೆ ಸಿನಿಮಾಗೆ ಶಕ್ತಿ ತುಂಬಿದೆ.

  ಅದಿತಿ ಪ್ರಭುದೇವ ಸಿನಿಮಾಗೆ ಅತಿಥಿಯಾಗಿ ಬಂದ ಆರ್ಯಅದಿತಿ ಪ್ರಭುದೇವ ಸಿನಿಮಾಗೆ ಅತಿಥಿಯಾಗಿ ಬಂದ ಆರ್ಯ

  ಉಳಿದ ಪಾತ್ರಗಳಿಗೆ ಕೆಲಸ ಕಡಿಮೆ

  ಉಳಿದ ಪಾತ್ರಗಳಿಗೆ ಕೆಲಸ ಕಡಿಮೆ

  ಅದಿತಿ ಪ್ರಭುದೇವ ಬಿಟ್ಟರೆ ಉಳಿದ ಪಾತ್ರಗಳು ಅಷ್ಟೊಂದು ಹೈಲೈಟ್ ಆಗಿಲ್ಲ. ನಾಯಕ ಶ್ರೀನಿ ಮತ್ತು ತ್ರಿವಿಕ್ರಮ್ ಪರ್ವಾಗಿಲ್ಲ. ಉಳಿದಂತೆ, ಲಾಸ್ಯ ನಾಗ್, ಸುಂದರ್ ರಾಜ್, ಪದ್ಮಾ ಶಿವಮೊಗ್ಗ ಸಿನಿಮಾದಲ್ಲಿ ‌ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕಥೆಯೇ ರಂಗನಾಯಕಿ ಪಾತ್ರದ ಮೇಲೆ ಇರುವ ಕಾರಣ ಉಳಿದ ಪಾತ್ರಗಳ ಕೆಲಸ ಕಡಿಮೆ.

  ಸೆಕೆಂಡ್ ಹಾಫ್ ಪರಿಣಾಮಕಾರಿಯಾಗಿದೆ

  ಸೆಕೆಂಡ್ ಹಾಫ್ ಪರಿಣಾಮಕಾರಿಯಾಗಿದೆ

  ಫಸ್ಟ್ ಹಾಫ್ ಹೋಲಿಕೆ ಮಾಡಿದರೆ, ಸಿನಿಮಾದ ಸೆಕೆಂಡ್ ಹಾಫ್ ಚೆನ್ನಾಗಿದೆ. ಅತ್ಯಾಚಾರದ ನಂತರ‌ ರಂಗನಾಯಕಿಯ ಜೀವನವನ್ನು ಇಲ್ಲಿ ತೋರಿಸಲಾಗಿದೆ. ಮೊದಲಾರ್ಧ ಇನ್ನಷ್ಟು ಚೆನ್ನಾಗಿ ಇದ್ದಿದ್ದರೆ, ಸಿನಿಮಾ ಇನ್ನು ಇಷ್ಟ ಆಗುತ್ತಿತ್ತು. ಇನ್ನೊಂದು ಕಡೆ ನಿರ್ದೇಶಕರು ಸಿನಿಮಾದ ಕಥೆ ಬಿಟ್ಟು ಆಚೆ ಹೋಗಿಲ್ಲ. ಕಮರ್ಷಿಯಲ್ ಅಂಶಗಳನ್ನು ತುರುಕಿಲ್ಲ.

  ಕೆಲವು ಸಂಗತಿಗಳನ್ನು ಮೆಚ್ಚಬೇಕು

  ಕೆಲವು ಸಂಗತಿಗಳನ್ನು ಮೆಚ್ಚಬೇಕು

  * ನಿರ್ದೇಶಕರು ಅತ್ಯಾಚಾರದ ದೃಶ್ಯಗಳನ್ನು ಯಾವುದೇ ವೈಭವಿಕರಣ ಇಲ್ಲದೆ ತೋರಿಸಿದ್ದಾರೆ.

  * ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಇಟ್ಟ ನಾಯಕಿಗೆ ನ್ಯಾಯ ಕೊಡಿಸಿದ್ದಾರೆ.

  * ಎಲ್ಲರೂ ಮೆಚ್ಚುವ ಒಂದು ಒಳ್ಳೆಯ ಸಂದೇಶ ನೀಡಿದ್ದಾರೆ.

  * ಒಳ್ಳೆಯ ಸಂಭಾಷಣೆಗಳನ್ನು ನವೀನ್ ಕೃಷ್ಣ ಬರೆದಿದ್ದಾರೆ.

  ಒಳ್ಳೆಯ ಸಂದೇಶ ನೀಡುವ ಚಿತ್ರ

  ಒಳ್ಳೆಯ ಸಂದೇಶ ನೀಡುವ ಚಿತ್ರ

  ಅತ್ಯಾಚಾರದಿಂದ ಜೀವ ಕಳೆದುಕೊಂಡ‌, ಅತ್ಯಾಚಾರದ ನೋವಿನಿಂದ ಹೊರಬರಲಾಗದ ಅನೇಕ ಪ್ರಕರಣಗಳು ನಡೆದಿದೆ. ಇಂತಹ ಘಟನೆಗಳಿಂದ ಹೊರಗೆ ಬರಬೇಕು. ಮಹಿಳೆಯರನ್ನು ಗೌರಸಬೇಕು ಎನ್ನುವ ಒಳ್ಳೆಯ ಸಂದೇಶವನ್ನು ಸಿನಿಮಾ ನೀಡಿದೆ. ಅತ್ಯಾಚಾರದ ನಂತರ ಆಕೆಗೆ ಇನ್ನೂ ಬದುಕುವ ಹಕ್ಕು ಇದೆ ಎಂದು ಸಮಾಜಕ್ಕೆ ನೆನಪು ಮಾಡಿದೆ.

  English summary
  Ranganayaki Kannada Movie Review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X