Don't Miss!
- News
Budget 2023; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ; ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ ನಾಯಕರು
- Finance
Budget 2023 Cheaper & Costlier Items : ಕೇಂದ್ರ ಬಜೆಟ್ ಬಳಿಕ ಯಾವೆಲ್ಲ ವಸ್ತುಗಳು ಅಗ್ಗ, ದುಬಾರಿ?
- Sports
ಅತಿರೇಕದ ಸಂಭ್ರಮಾಚರಣೆ: ಐಪಿಎಲ್ ದುಬಾರಿ ಆಟಗಾರನಿಗೆ ಬಿತ್ತು ದಂಡ
- Automobiles
ದೇಶದಲ್ಲಿ ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್ನೊಂದಿಗೆ.. ಎಲ್ಲ ದಾಖಲೆ ಪುಡಿಪುಡಿ?
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Technology
ಅಬ್ಬಬ್ಬಾ... ಈ ಅಂಬ್ರೇನ್ ಪವರ್ ಬ್ಯಾಂಕ್ನ ಬ್ಯಾಕಪ್ ಎಷ್ಟಿದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Mission Majnu Twitter Review; ಒಳ್ಳೆ ಚಿತ್ರವನ್ನು ನೇರ ಓಟಿಟಿ ಬಿಡುಗಡೆ ಮಾಡಿ ಕೆಟ್ಟರಲ್ಲ!
ಸದ್ಯ ಓಟಿಟಿ ಜಮಾನ ನಡೆಯುತ್ತಿದೆ. ಕೊರೊನಾ ವೈರಸ್ ಆಗಮನವಾದ ಬಳಿಕ ಈ ಓಟಿಟಿ ಹಾವಳಿ ಡಬಲ್ ಆಗಿದೆ. ಅಂದಿನ ದಿನಗಳಲ್ಲಿ ಥಿಯೇಟರ್ ಇಲ್ಲದ ಕಾರಣ ಹಲವು ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಈ ಪೈಕಿ ಕೆಲ ಚಿತ್ರಗಳು ದೊಡ್ಡ ಗೆಲುವನ್ನು ಸಾಧಿಸಿ ದೊಡ್ಡ ಮಟ್ಟದಲ್ಲಿಯೇ ಗುರುತಿಸಿಕೊಂಡವು. ವಿಶೇಷವಾಗಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಂಡು ಮೊದಲಿಗೆ ತೀವ್ರ ವಿರೋಧ ಎದುರಿಸಿದ್ದ ಸೂರ್ಯ ನಟನೆಯ ತಮಿಳು ಚಿತ್ರ ಸೂರರೈ ಪೊಟ್ರು ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟಿತು.
ಇನ್ನು ಮಲಯಾಳಂನ ಬಹು ನಿರೀಕ್ಷಿತ ಚಿತ್ರ ದೃಶ್ಯಂ 2 ಸಹ ಇದೇ ರೀತಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿತು. ಈ ಎರಡೂ ಚಿತ್ರಗಳನ್ನೂ ನೋಡಿದ ಸಿನಿ ರಸಿಕರು ಇಂತಹ ಒಳ್ಳೆಯ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೇ ಓಟಿಟಿಯಲ್ಲಿ ಬಿಡುಗಡೆ ಮಾಡಿ ತಪ್ಪು ಮಾಡಿದ್ರು ಎಂದು ಸಿನಿ ರಸಿಕರು ಬೇಸರವನ್ನೂ ಸಹ ವ್ಯಕ್ತಪಡಿಸಿದ್ದರು.
ಬಳಿಕ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಂಡ ಹಲವು ಚಿತ್ರಗಳು ಇದೇ ರೀತಿಯ ಪ್ರತಿಕ್ರಿಯೆಯನ್ನು ಪಡೆದುಕೊಂಡವು. ಇದೀಗ ಇಂತಹ ಚಿತ್ರಗಳ ಸಾಲಿಗೆ ರಶ್ಮಿಕಾ ಮಂದಣ್ಣ ನಟನೆಯ ಎರಡನೇ ಹಿಂದಿ ಚಿತ್ರ 'ಮಿಷನ್ ಮಜ್ನು' ಸೇರಿದಂತೆ ಕಾಣುತ್ತಿದೆ. ಹೌದು, ರಶ್ಮಿಕಾ ನಟನೆಯ ಎರಡನೇ ಬಾಲಿವುಡ್ ಚಿತ್ರ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಕಳೆದ ಜೂನ್ ತಿಂಗಳಿನಲ್ಲೇ ಚಿತ್ರಮಂದಿರಗಳಿಗೆ ಲಗ್ಗೆ ಇಡಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟು ಇಂದು ( ಜನವರಿ 20 ) ನೇರವಾಗಿ ಓಟಿಟಿಯಲ್ಲಿ ಪ್ರದರ್ಶನಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಮೊದಲ ದಿನ ವೀಕ್ಷಿಸಿದ ಸಿನಿ ರಸಿಕರು ಚಿತ್ರದ ವಿಮರ್ಶೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದು, ಈ ಕೆಳಕಂಡಂತೆ ಟ್ವೀಟ್‌ಗಳನ್ನು ಮಾಡಿದ್ದಾರೆ.

ಚಿತ್ರಮಂದಿರಲ್ಲಿ ಬಿಡುಗಡೆಯಾಗಬೇಕಿತ್ತು
ಮೊದಲ ದಿನ ಮಿಷನ್ ಮಜ್ನು ಚಿತ್ರದ ಬಗ್ಗೆ ಬರೆದುಕೊಂಡಿರುವ ಹಲವಾರು ಸಿನಿ ರಸಿಕರು ಉಲ್ಲೇಖಿಸಿರುವ ಸಾಮಾನ್ಯ ಸಾಲೆಂದರೆ 'ಈ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿತ್ತು' ಎಂಬುದು. ಹೌದು, ಮಿಷನ್ ಮಜ್ನು ಚಿತ್ರಕತೆ ಚೆನ್ನಾಗಿದ್ದು, ನಟ ಸಿದ್ದಾರ್ಥ್ ಮಲ್ಹೋತ್ರ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆ ಚೆನ್ನಾಗಿದೆ, ಶಂತಾನು ಬಾಗ್ಚಿ ಅವರ ನಿರ್ದೇಶನ ಪ್ರೇಕ್ಷಕನನ್ನು ಕೊನೆಯವರೆಗೆ ಬೇರೆಡೆ ಗಮನ ಕೊಡದ ಹಾಗೆ ಹಿಡಿದು ಕೂರಿಸಲಿದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ಬರೆದುಕೊಂಡಿರುವ ಬಹುತೇಕರು ಚಿತ್ರಕ್ಕೆ ಮೂರು, ಮೂರೂವರೆ ಹಾಗೂ ನಾಲ್ಕು ಸ್ಟಾರ್‌ಗಳ ರೇಟಿಂಗ್ ನೀಡಿದ್ದಾರೆ.

ನೂರು ಕೋಟಿಯ ಸಿನಿಮಾ
ಇನ್ನು ಚಿತ್ರದ ಬಗ್ಗೆ ಬರೆದುಕೊಂಡಿರುವ ರೋಹಿತ್ ಜೈಸ್ವಾಲ್ ಎಂಬ ಸಿನಿ ರಸಿಕ ಮಿಷನ್ ಮಜ್ನು ಒಂದು ಮಾಸ್ಟರ್ ಪೀಸ್ ಎಂದಿದ್ದಾರೆ. ಸ್ಪೈ ಥ್ರಿಲ್ಲರ್ ಚಿತ್ರವಾಗಿರುವ ಮಿಷನ್ ಮಜ್ನು ಕೊನೆಯವರೆಗೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲಿದ್ದು, ದೇಶಪ್ರೇಮವನ್ನು ಸಾರಿರುವ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಮಿಷನ್ ಮಜ್ನು ಚಿತ್ರತಂಡಕ್ಕೆ ಚಿತ್ರಮಂದಿರದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುತ್ತಿದ್ದರು ಹಾಗೂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಸುತ್ತಿತ್ತು ಎಂದು ಬರೆದುಕೊಂಡಿದ್ದಾರೆ.

ನೆಗೆಟಿವ್ ವಿಮರ್ಶೆ ಕಣ್ಣಿಗೆ ಬೀಳಲಿಲ್ಲ!
ಇತ್ತೀಚೆಗಿನ ದಿನಗಳಲ್ಲಿ ಬಿಡುಗಡೆಯ ದಿನ ನೆಗೆಟಿವ್ ವಿಮರ್ಶೆಗಳನ್ನು ಹೆಚ್ಚಾಗಿ ಪಡೆದುಕೊಳ್ಳದ ಬಾಲಿವುಡ್ ಚಿತ್ರ ಈ ಮಿಷನ್ ಮಜ್ನು ಎನ್ನಬಹುದು. ಚಿತ್ರದ ಕುರಿತು ಎಲ್ಲರೂ ಎಮೋಷನಲ್ ಮೂವಿ, ಚೆನ್ನಾಗಿದೆ, ಒಳ್ಳೆಯ ಚಿತ್ರ ಎಂದು ಬರೆದುಕೊಂಡಿದ್ದಾರೆಯೇ ಹೊರತು ನೆಗೆಟಿವ್ ರಿವ್ಯೂಗಳು ಕಣ್ಣಿಗೆ ಬೀಳಲಿಲ್ಲ. ಇನ್ನು ಗೂಗಲ್ ಹಾಗೂ ಐಎಂಡಿಬಿ ರೇಟಿಂಗ್ ಸಹ ಚಿತ್ರಕ್ಕೆ ಚೆನ್ನಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಕಾದುನೋಡಬೇಕಿದೆ.