Don't Miss!
- News
Ballari utsav: ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು
- Sports
IND vs NZ: ಭಾರತದ ಶುಭ್ಮನ್ ಗಿಲ್ ಬ್ಯಾಟಿಂಗ್ ಕುರಿತು ಪಿಸಿಬಿ ಮಾಜಿ ಅಧ್ಯಕ್ಷ ಹೇಳಿದ್ದೇನು?
- Finance
ಎಚ್ಡಿಎಫ್ಸಿಯಿಂದ 10ವರ್ಷದಲ್ಲಿ 30ಶತಕೋಟಿ ಸಂಗ್ರಹದ ಚಿಂತನೆ
- Technology
ಏರ್ಟೆಲ್ 5G+ ಯಿಂದ ರೈತರಿಗೆ ನೆರವು; ಭಾರೀ ಇಳುವರಿ ಪಡೆಯಬಹುದು!
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Dhamaka Twitter Review : ಹೇಗಿದೆ ರವಿತೇಜಾ, ಶ್ರೀಲೀಲಲಾ 'ಧಮಾಕಾ'? ಚಿತ್ರ ನೋಡಿದವರು ಹೇಳಿದ್ದಿಷ್ಟು
ಟಾಲಿವುಡ್ ಮಾಸ್ ಮಹಾರಾಜಾ ರವಿತೇಜಾ ಹಾಗೂ ಕನ್ನಡತಿ ಶ್ರೀಲೀಲಾ ನಟನೆಯ ಧಮಾಕಾ ಚಿತ್ರ ಇಂದು ( ಡಿಸೆಂಬರ್ 23 ) ವಿಶ್ವದಾದ್ಯಂತ ತೆರೆಗೆ ಬಂದಿದೆ. ಕ್ರಿಸ್‌ಮಸ್ ಹಬ್ಬದ ರಜಾ ದಿನಗಳಲ್ಲಿ ಸಿನಿ ರಸಿಕರು ಚಿತ್ರಮಂದಿರಗಳತ್ತ ಹೆಚ್ಚಾಗಿ ಮುಖ ಮಾಡುವ ಕಾರಣ ಈ ವಾರ ಸಾಕಷ್ಟು ಬಿಡುಗಡೆಯಾಗಿದ್ದು, ಕ್ರಿಸ್‌ಮಸ್ ವಿನ್ನರ್ ಯಾರಾಗಲಿದ್ದಾರೆ ಎಂದು ಕುತೂಹಲಕ್ಕೆ ಒಳಗಾಗಿದ್ದಾರೆ ಸಿನಿ ಪ್ರೇಕ್ಷಕರು.
ಇನ್ನು ಸಾಲು ಸಾಲು ಸೋಲು ಕಂಡಿರುವ ರವಿತೇಜಾಗೆ ಈ ಚಿತ್ರ ಗೆಲ್ಲಲೇಬೇಕಿದೆ. ಹೌದು, ರವಿತೇಜಾ ಅಭಿನಯದ ಖಿಲಾಡಿ ಹಾಗೂ ರಾಮಾರಾವ್ ಆನ್ ಡ್ಯೂಟಿ ಎರಡೂ ಚಿತ್ರಗಳೂ ಮಕಾಡೆ ಮಲಗಿವೆ. ಈಗಿನ ಟ್ರೆಂಡ್‌ಗೆ ತಕ್ಕ ಹಾಗೆ ರವಿತೇಜಾ ಸ್ಕ್ರಿಪ್ಟ್ ಆಯ್ಕೆ ಮಾಡುತ್ತಿಲ್ಲ, ಮತ್ತದೇ ಚಿತ್ರಕತೆ ಇರುವ ಚಿತ್ರಗಳನ್ನೇ ಆರಿಸಿ ಸೋಲುತ್ತಿದ್ದಾರೆ ಎಂಬ ಆರೋಪವಿದೆ. ಇದೇ ಆರೋಪಗಳು ಕಳೆದ ಎರಡು ಚಿತ್ರಗಳ ಸೋಲಿಗೆ ಕಾರಣವೂ ಸಹ ಹೌದು.
ಈ ಹಿಂದೆ ತನ್ನ ಎಂಟರ್‌ಟೈನರ್ ಚಿತ್ರಗಳಿಂದ ಗೆಲ್ಲುತ್ತಿದ್ದ ರವಿತೇಜಾ ಹೀನಾಯ ಸೋಲು ಕಂಡ ನಂತರ ಧಮಾಕಾ ಚಿತ್ರ ಕಮ್‌ಬ್ಯಾಕ್ ನೀಡಬಹುದಾ ಎಂಬ ಪ್ರಶ್ನೆ ಹಾಗೂ ನಿರೀಕ್ಷೆ ಎರಡೂ ಸಹ ಹುಟ್ಟಿಕೊಂಡಿತ್ತು. ಈ ಪ್ರಶ್ನೆಗಳಿಗೆ ಉತ್ತರವನ್ನು ಇಂದು ಬೆಳಗಿನ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಿ ಚಿತ್ರಮಂದಿರದಿಂದ ಹೊರಬಂದ ಸಿನಿ ರಸಿಕರು ನೀಡಿದ್ದಾರೆ. ಧಮಾಕಾ ಚಿತ್ರಕ್ಕೆ ಬಂದಿರುವ ಟ್ವಿಟರ್ ವಿಮರ್ಶೆಗಳು ಈ ಕೆಳಕಂಡಂತಿವೆ..

ಮತ್ತದೇ ಚಿತ್ರಕತೆ ಎಂದ ಸಿನಿ ರಸಿಕರು
ಕತೆಯನ್ನು ಆಯ್ದುಕೊಳ್ಳುವಲ್ಲಿ ರವಿತೇಜಾ ವಿಫಲರಾಗುತ್ತಿದ್ದಾರೆ ಎಂಬ ಆರೋಪ ಇದ್ದರೂ ಸಹ ರವಿತೇಜಾ ಈ ಬಾರಿಯೂ ಅದೇ ತಪ್ಪನ್ನು ಮಾಡಿದಂತಿದೆ. ಸಿನಿಮಾ ನೋಡಿ ಹೊರಬಂದ ಸಿನಿ ಬಹುತೇಕ ಸಿನಿ ರಸಿಕರು ಚಿತ್ರದ ಕತೆಯನ್ನು ಸುಲಭವಾಗಿ ಮೊದಲೇ ಊಹಿಸಿಬಿಡಬಹುದು, ಮತ್ತದೇ ಕತೆ ಚಿತ್ರದಲ್ಲಿದೆ ಎಂಬ ವಿಮರ್ಶೆಯನ್ನು ನೀಡುತ್ತಿದ್ದಾರೆ. ಯಾವ ನಟನ ಅಭಿಮಾನಿಯೂ ಆಗಿರದ ಬಹುತೇಕ ಸಿನಿ ರಸಿಕರು ಈ ಚಿತ್ರಕ್ಕೆ ಸಾಧಾರಣ, ಕುಟುಂಬ ಸಮೇತ ಒಮ್ಮೆ ನೋಡಬಹುದು, ನೋಡಲೇಬೇಕು ಎನ್ನುವಂತಹ ಸಿನಿಮಾವೇನಲ್ಲ ಎಂದು ಎರಡೂವರೆ ಸ್ಟಾರ್ ಕೊಟ್ಟಿದ್ದಾರೆ. ಅಲ್ಲಿಗೆ ಇದೊಂದು ಆವರೇಜ್ ಸಿನಿಮಾ ಎಂಬುದು ಖಚಿತವಾದಂತೆ.

ಸಿನಿಮಾ ಪೇಜಸ್ ರಿವ್ಯೂ
ಇನ್ನು ತೆಲುಗಿನಲ್ಲಿ ಚಿತ್ರಗಳನ್ನು ನೋಡಿ ಚಿತ್ರ ಚೆನ್ನಾಗಿದೆ ನೋಡಿ, ಚೆನ್ನಾಗಿಲ್ಲ ನೋಡಬೇಡಿ ಎಂದು ಹೇಳುವ ಹಲವಾರು ಆನ್‌ಲೈನ್ ಪೇಜ್‌ಗಳಿವೆ. ಈ ಪೇಜ್‌ಗಳ ವಿಮರ್ಶೆಯನ್ನು ನಂಬಿ ಚಿತ್ರಮಂದಿರಗಳಿಗೆ ತೆರಳುವ ಸಿನಿ ರಸಿಕರೂ ಸಹ ಇದ್ದಾರೆ. ಇನ್ನು ತೆಲುಗಿನ ಅಂತಹದ್ದೇ ಪೇಜ್ ಒಂದು ಧಮಾಕಾ ವಿಮರ್ಶೆಯನ್ನು ಪೋಸ್ಟ್ ಮಾಡಿದ್ದು, ಮತ್ತದೇ ಅವಧಿ ಮುಗಿದಿರುವ ಕಳಪೆ ಚಿತ್ರ ಎಂದು ಬರೆದುಕೊಂಡು ಐದಕ್ಕೆ ಕೇವಲ ಎರಡು ಸ್ಟಾರ್ ನೀಡಿದೆ. ತೆಲುಗಿನ ಹಳೆಯ ಮಸಾಲಾ ಚಿತ್ರಗಳ ಮಾದರಿಯಲ್ಲೇ ಧಮಾಕಾ ಕೂಡ ಇದೆ ಎಂದಿರುವ ಇವರು ರವಿತೇಜಾ ಎನರ್ಜಿ ಚೆನ್ನಾಗಿದೆ, ಆದರೆ ಇಂತಹ ಚೆನ್ನಾಗಿಲ್ಲದ ಕತೆಯನ್ನು ಆರಿಸಿಕೊಂಡರೆ ರವಿತೇಜಾ ಎಷ್ಟೇ ಕಷ್ಟಪಟ್ಟರೂ ಉಪಯೋಗವಿಲ್ಲ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗಷ್ಟೇ ಸೂಪರ್ರೋ ಸೂಪರ್ರು!
ಇನ್ನು ಈ ಚಿತ್ರ ಚಿಂದಿ, ಸೂಪರ್, ಬ್ಲಾಕ್‌ಬಸ್ಟರ್ ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳುತ್ತಿರುವುದು ರವಿತೇಜಾ ಅಭಿಮಾನಿಗಳು ಹಾಗೂ ಹಳೆಯ ಮಸಾಲಾ ತೆಲುಗು ಚಿತ್ರಗಳನ್ನು ಇಷ್ಟಪಡುವ ಸಿನಿ ರಸಿಕರು ಮಾತ್ರ. ಅಭಿಮಾನಿಗಳು ನಾವು ತೃಪ್ತಿಗೊಂಡಿದ್ದೇವೆ, ರವಿತೇಜಾ ಈಸ್ ಬ್ಯಾಕ್ ಎಂದು ಬರೆದುಕೊಳ್ಳುತ್ತಿದ್ದಾರೆ. ಇದೇ ಅಭಿಮಾನಿಗಳು ಈ ಹಿಂದೆ ಬಿಡುಗಡೆಗೊಂಡ ಖಿಲಾಡಿ ಹಾಗೂ ರಾಮಾರಾವ್ ಆನ್ ಡ್ಯೂಟಿ ಸಮಯದಲ್ಲೂ ಸಹ ಇದೇ ರೀತಿ ಟ್ವೀಟ್ ಮಾಡಿದ್ದರು.