»   » 'ಪದ್ಮಾವತ್' ಮೊದಲ ವಿಮರ್ಶೆ: ಮೂಕವಿಸ್ಮಿತಗೊಳಿಸುವ ಬನ್ಸಾಲಿ ದೃಶ್ಯಕಾವ್ಯ

'ಪದ್ಮಾವತ್' ಮೊದಲ ವಿಮರ್ಶೆ: ಮೂಕವಿಸ್ಮಿತಗೊಳಿಸುವ ಬನ್ಸಾಲಿ ದೃಶ್ಯಕಾವ್ಯ

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

''ಪದ್ಮಾವತ್' ಸಿನಿಮಾದಲ್ಲಿ ಇತಿಹಾಸ ತಿರುಚಲಾಗಿದೆ. ರಜಪೂತ ಸಮುದಾಯವನ್ನ ಕೀಳಾಗಿ ಬಿಂಬಿಸಲಾಗಿದೆ'' ಎಂಬೆಲ್ಲ ಆರೋಪಗಳು ಕೇಳಿಬಂದಿದ್ದವು. ಇದೇ ಕಾರಣಕ್ಕೆ ಉಗ್ರ ಪ್ರತಿಭಟನೆ ಕೂಡ ನಡೆಯಿತು. ಆದ್ರೆ, ರಜಪೂತ ಸಂಪ್ರದಾಯ, ಸಂಸ್ಕೃತಿಗೆ ಒತ್ತು ನೀಡಿ, ರಾಣಿ ಪದ್ಮಾವತಿ ಚಾರಿತ್ರ್ಯಕ್ಕೆ ಧಕ್ಕೆ ತರದಂತೆ 'ಪದ್ಮಾವತ್' ಸಿನಿಮಾ ತೆರೆಗೆ ತರುವಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಯಶಸ್ವಿ ಆಗಿದ್ದಾರೆ.

ಚಿತ್ರ: ಪದ್ಮಾವತ್
ನಿರ್ದೇಶನ: ಸಂಜಯ್ ಲೀಲಾ ಬನ್ಸಾಲಿ
ಸಂಗೀತ: ಸಂಜಯ್ ಲೀಲಾ ಬನ್ಸಾಲಿ
ಬ್ಯಾಕ್ ಗ್ರೌಂಡ್ ಸ್ಕೋರ್: ಸಂಚಿತ್ ಬಲ್ಹಾರಾ
ಛಾಯಾಗ್ರಹಣ: ಸುದೀಪ್ ಚಟರ್ಜಿ
ತಾರಾಗಣ: ದೀಪಿಕಾ ಪಡುಕೋಣೆ, ಶಾಹೀದ್ ಕಪೂರ್, ರಣ್ವೀರ್ ಸಿಂಗ್ ಮತ್ತು ಇತರರು
ಬಿಡುಗಡೆ: ಜನವರಿ 25, 2018

ಕಥಾಹಂದರ

ಚಿತ್ತೋರ್ ರಾಜ ಮಹಾರಾವಲ್ ರತನ್ ಸಿಂಗ್ (ಶಾಹೀದ್ ಕಪೂರ್), ರಾಣಿ ಪದ್ಮಾವತಿ (ದೀಪಿಕಾ ಪಡುಕೋಣೆ) ಹಾಗೂ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖುಲ್ಜಿ ಸುತ್ತ ಹೆಣೆದಿರುವ ಕಥೆ 'ಪದ್ಮಾವತ್'. 1540 ರಲ್ಲಿ ಮಲಿಕ್ ಮೊಹಮ್ಮದ್ ಜಯಾಸಿ ರಚಿಸಿರುವ ಮಹಾಕಾವ್ಯ 'ಪದ್ಮಾವತ್' ಆಧರಿಸಿರುವ ಚಿತ್ರವೇ 'ಪದ್ಮಾವತ್'.

'ಪದ್ಮಾವತಿ' ಎಕ್ಸ್ ಕ್ಲೂಸಿವ್ ವಿಮರ್ಶೆ: ವಿವಾದದ ಮಧ್ಯೆ ಸಿನಿಮಾ ನೋಡಿದ ಪತ್ರಕರ್ತ

ದೀಪಿಕಾ-ಶಾಹೀದ್ ಅಭಿನಯ ಹೇಗಿದೆ.?

ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ರಾಣಿ ಪದ್ಮಾವತಿ ಆಗಿ ದೀಪಿಕಾ ಪಡುಕೋಣೆ ಅಭಿನಯ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ. ರಾಜಪೂತ ರಾಜ ಮಹಾರಾವಲ್ ರತನ್ ಸಿಂಗ್ ಆಗಿ ಶಾಹೀದ್ ಕಪೂರ್ ನಟನೆ ಅಮೋಘ. ಅದಕ್ಕೆ ಸಾಕ್ಷಿ ಚಿತ್ರದಲ್ಲಿ ಇರುವ ಚದುರಂಗದ ದೃಶ್ಯ.

ರಣ್ವೀರ್ ಸಿಂಗ್ ಪರ್ಫಾಮೆನ್ಸ್ ಚೆನ್ನಾಗಿದ್ಯಾ.?

ಅಲ್ಲಾವುದ್ದೀನ್ ಖಿಲ್ಜಿ ಆಗಿ ರಣ್ವೀರ್ ಸಿಂಗ್ ಪರ್ಫಾಮೆನ್ಸ್ ಅಕ್ಷರಶಃ ಅದ್ಭುತ. 'ಪದ್ಮಾವತ್' ಸಿನಿಮಾ ನೋಡಿದ್ಮೇಲೆ, ಐತಿಹಾಸಿಕ ಪಾತ್ರ ಅಲ್ಲಾವುದ್ದೀನ್ ಖಿಲ್ಜಿ ಹೆಸರು ಕೇಳಿದ ಕೂಡಲೇ ನಿಮಗೆ ಭಯವುಂಟಾದ್ರೆ ಅಥವಾ ದ್ವೇಷಿಸಲು ಶುರು ಮಾಡಿದರೆ ಅದಕ್ಕೆ ನೇರ ಹೊಣೆ ರಣ್ವೀರ್ ಸಿಂಗ್. ಅಷ್ಟರಮಟ್ಟಿಗೆ ಪರಕಾಯ ಪ್ರವೇಶಿಸಿ ರಣ್ವೀರ್ ಸಿಂಗ್ ಅಭಿನಯಿಸಿದ್ದಾರೆ.

ಉಳಿದವರ ಆಕ್ಟಿಂಗ್.?

ಉಳಿದಂತೆ ಮಲಿಕ್ ಕಾಫುರ್ ಪಾತ್ರಧಾರಿ ಜಿಮ್ ಸರ್ಬ್ ಹಾಗೂ ಅದಿತಿ ರಾವ್ ಹೈದರಿ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಬ್ರ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆಂದ

ಸಂಚಿತ್ ಬಲ್ಹಾರಾ ಅವರ ಪವರ್ ಫುಲ್ ಬ್ಯಾಕ್ ಗ್ರೌಂಡ್ ಸ್ಕೋರ್ ಇಲ್ಲದೇ ಹೋಗಿದ್ದರೆ 'ಪದ್ಮಾವತ್' ಸಿನಿಮಾ ಮಹಾ ದೃಶ್ಯ ಕಾವ್ಯ ಆಗಲು ಸಾಧ್ಯವೇ ಆಗುತ್ತಿರಲಿಲ್ಲ. ಹಾಗೇ, ಸಂಜಯ್ ಲೀಲಾ ಬನ್ಸಾಲಿ ಸಂಯೋಜಿಸಿರುವ ಹಾಡುಗಳು ಕೂಡ ನಿಮ್ಮ ತಲೆ ತೂಗುವಂತೆ ಮಾಡುತ್ತದೆ.

ಕ್ಲೈಮ್ಯಾಕ್ಸ್ ಸನ್ನಿವೇಶ ಸೂಪರ್

ತಾವು ಎಂಥಾ ಜಾದುಗಾರ ಅಂತ ಸಂಜಯ್ ಲೀಲಾ ಬನ್ಸಾಲಿ 'ಪದ್ಮಾವತ್' ಸಿನಿಮಾ ಮೂಲಕ ಮತ್ತೆ ಸಾಬೀತು ಪಡಿಸಿದ್ದಾರೆ. ಇಡೀ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಪ್ರೇಕ್ಷಕರನ್ನ ಹಿಡಿದು ಕೂರಿಸುವಲ್ಲಿ ಸಂಜಯ್ ಲೀಲಾ ಬನ್ಸಾಲಿ ಯಶಸ್ವಿ ಆಗಿದ್ದಾರೆ.

ಮೈನಸ್ ಪಾಯಿಂಟ್ಸ್ ಏನು.?

ಮೊದಲಾರ್ಧಲ್ಲಿ ಸಂಕಲನ ಇನ್ನೂ ಚುರುಕಾಗಿರಬೇಕಿತ್ತು. ಕೆಲ ದೃಶ್ಯಗಳಲ್ಲಿ ಕನ್ಟಿನ್ಯೂಟಿ ಮಿಸ್ ಆಗಿದೆ. 'ಪದ್ಮಾವತ್' ಚಿತ್ರದ ಕೆಲ ದೃಶ್ಯಗಳನ್ನ ನೋಡಿದ್ರೆ, ಬನ್ಸಾಲಿ ಅವರ ಹಿಂದಿನ ಸಿನಿಮಾಗಳ ಕೆಲ ದೃಶ್ಯಗಳು ನೆನಪಿಗೆ ಬರುತ್ತದೆ ಅನ್ನೋದು ಬಿಟ್ಟರೆ ಸಿನಿಮಾದಲ್ಲಿ ಅಂತಹ ಮೈನಸ್ ಅಂಶಗಳು ಇಲ್ಲ.

ಖಂಡಿತ ಮೋಸ ಇಲ್ಲ

ತಾಂತ್ರಿಕವಾಗಿ ಅದ್ಭುತವಾಗಿರುವ 'ಪದ್ಮಾವತ್' ಚಿತ್ರ ಖಂಡಿತ ನೋಡುವಂಥದ್ದು. ಕೊಟ್ಟ ಕಾಸಿಗೆ 'ಪದ್ಮಾವತ್' ಸಿನಿಮಾ ಮೋಸ ಮಾಡುವುದಿಲ್ಲ.

English summary
Read Deepika Padukone, Ranveer Singh, Shahid Kapoor starrer Sanjay Leela Bhansali directorial Bollywood Movie 'Padmaavat' review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada