»   » ಮಾಸ್ಟರ್ ಪೀಸ್ 'ಪದ್ಮಾವತ್' ನೋಡಿ ಹೊಗಳಿದ ಟ್ವೀಟಿಗರು

ಮಾಸ್ಟರ್ ಪೀಸ್ 'ಪದ್ಮಾವತ್' ನೋಡಿ ಹೊಗಳಿದ ಟ್ವೀಟಿಗರು

Posted By:
Subscribe to Filmibeat Kannada

ಅಂತೂ ಇಂತೂ ವಿವಾದಾತ್ಮಕ ಚಿತ್ರ 'ಪದ್ಮಾವತ್' ತೆರೆಕಂಡಿದೆ. ರಾಷ್ಟ್ರಾದ್ಯಂತ ಇಂದು 'ಪದ್ಮಾವತ್' ಸಿನಿಮಾ ಪ್ರದರ್ಶನಗೊಳ್ಳಲಿದೆ. ಅದಕ್ಕೂ ಮುನ್ನವೇ ಪತ್ರಿಕಾ ಮಿತ್ರರಿಗೆ, ರಜಪೂತ ಸಮುದಾಯಕ್ಕೆ ಸೇರಿದಂತೆ ಹಲವರಿಗೆ ನಿನ್ನೆ ಸ್ಪೆಷಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. 'ಪದ್ಮಾವತ್' ಚಿತ್ರವನ್ನ ಕಣ್ತುಂಬಿಕೊಂಡ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರು ಟ್ವಿಟ್ಟರ್ ನಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

'ಪದ್ಮಾವತ್' ಸಿನಿಮಾ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮಾಸ್ಟರ್ ಪೀಸ್ ಅಂತೆಲ್ಲ ವಿಮರ್ಶಕರು ಟ್ವಿಟ್ಟರ್ ನಲ್ಲಿ ಹಾಡಿ ಹೊಗಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಅಭಿನಯ, ಶಾಹೀದ್ ಕಪೂರ್ ಪರ್ಫಾಮೆನ್ಸ್, ರಣ್ವೀರ್ ಸಿಂಗ್ ಅಬ್ಬರದ ಬಗ್ಗೆ ಟ್ವಿಟ್ಟರ್ ನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬನ್ನಿ ಹಾಗಾದ್ರೆ, 'ಪದ್ಮಾವತ್' ಸಿನಿಮಾ ಬಗ್ಗೆ ಯಾರೆಲ್ಲ ಏನಂತ ಟ್ವೀಟ್ ಮಾಡಿದ್ದಾರೆ ಅಂತ ನೋಡ್ಕೊಂಡ್ ಬರೋಣ...

ಹೆಮ್ಮೆ ಪಡುವ ಸಿನಿಮಾ

''ಪದ್ಮಾವತ್' ಚಿತ್ರದ ಬಗ್ಗೆ ಇಡೀ ಚಿತ್ರರಂಗ ಹಾಗೂ ಇಡೀ ದೇಶ ಹೆಮ್ಮೆ ಪಡಬೇಕು. ಹಾಗೇ ಎಷ್ಟು ಬೇಗ ಆಗುತ್ತೋ, ಅಷ್ಟು ಬೇಗ ನೋಡಬೇಕು'' ಎಂದು ಅಮುಲ್ ವಿಕಾಸ್ ಮೋಹನ್ ಟ್ವೀಟ್ ಮಾಡಿದ್ದಾರೆ.

ಪಟ್ಟಾಭಿಷೇಕ ಮಾಡಬೇಕು

''ಅಲ್ಲಾವುದ್ದೀನ್ ಖಿಲ್ಜಿ ಇಳಿದು ಬಂದು ರಣ್ವೀರ್ ಸಿಂಗ್ ರನ್ನ 'ಸುಲ್ತಾನ್-ಎ-ಹಿಂದ್' ಎಂದು ಪಟ್ಟಾಭಿಷೇಕ ಮಾಡಬೇಕು. ಅಂತಹ ಅಭಿನಯ ನೀಡಿದ್ದಾರೆ ರಣ್ವೀರ್ ಸಿಂಗ್'' - ಅತುಲ್ ಮೋಹನ್

ಮಾಸ್ಟರ್ ಪೀಸ್

''ಔಟ್ ಸ್ಟ್ಯಾಂಡಿಂಗ್ ಮಾಸ್ಟರ್ ಪೀಸ್'' ಎಂದು 'ಪದ್ಮಾವತ್' ಚಿತ್ರದ ಬಗ್ಗೆ ಬಣ್ಣಿಸಿರುವ ತರಣ್ ಆದರ್ಶ್ ಚಿತ್ರಕ್ಕೆ 4 1/2 ಸ್ಟಾರ್ ನೀಡಿದ್ದಾರೆ.

English summary
Read Deepika Padukone, Ranveer Singh, Shahid Kapoor starrer Sanjay Leela Bhansali directorial Bollywood Movie 'Padmaavat' twitter review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada