For Quick Alerts
ALLOW NOTIFICATIONS  
For Daily Alerts

  ಆದಿಯ ಪ್ರಸ್ತ ಪುರಾಣ ನೋಡಿದ ವಿಮರ್ಶಕರು ಏನಂದರು.?

  |

  ಶಶಾಂಕ್, ಮೋಕ್ಷ, ಅಹಲ್ಯಾ ಸುರೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಆದಿ ಪುರಾಣ' ಚಿತ್ರ ಬಿಡುಗಡೆ ಆಗಿದೆ. ಹದಿಹರೆಯದ ಹುಡುಗನ ಮದುವೆ ಕಥೆ ಹೊಂದಿರುವ 'ಆದಿ ಪುರಾಣ' ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಸಿನಿಮಾ.

  ಕಾಶೀನಾಥ್ ಸಿನಿಮಾಗಳ ಸಾಫ್ಟ್ ಪ್ರತಿಯಂತೆ ಇರುವ 'ಆದಿ ಪುರಾಣ' ಚಿತ್ರದಲ್ಲಿ ಅಡಲ್ಟ್ ಕಾಮಿಡಿ ಹೆಚ್ಚಾಗಿದೆ. ಯುವ ಮನಸ್ಸುಗಳ ತಲ್ಲಣಗಳನ್ನು ಹೊಂದಿರುವ 'ಆದಿ ಪುರಾಣ' ಚಿತ್ರ ಕಾಲೇಜು ಹುಡುಗರಿಗೆ ಇಷ್ಟವಾಗಿದೆ.

  ಫಸ್ಟ್ ನೈಟ್ ಪುರಾಣ ಹೊಂದಿರುವ 'ಆದಿ ಪುರಾಣ' ಚಿತ್ರವನ್ನ ನೋಡಿದ ವಿಮರ್ಶಕರು ಏನಂತಾರೆ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಆದಿ ಪುರಾಣ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

  ಆದಿಯ ಅಸ್ತವ್ಯಸ್ತ ಪ್ರಸ್ತ ಪುರಾಣ - ಪ್ರಜಾವಾಣಿ

  ಅಡಲ್ಟ್ ಕಾಮಿಡಿ ಸಿನಿಮಾಗಳನ್ನು ಮಾಡುವುದರಲ್ಲಿ ಕಾಶೀನಾಥ್ ಅವರನ್ನು ಮೀರಿಸಿದವರು ಕನ್ನಡದಲ್ಲಿ ಇನ್ನೊಬ್ಬರಿಲ್ಲ. ಕಾಶೀನಾಥ್ ತನ್ನ ಗುರು ಸಮಾನರು ಎಂದು ಹೇಳಿಕೊಂಡಿರುವ ಮೋಹನ್ ಕಾಮಾಕ್ಷಿ ಸಹ ತಮ್ಮ ನಿರ್ದೇಶನದ 'ಆದಿ ಪುರಾಣ'ದಲ್ಲಿ ಅಡಲ್ಟ್ ಕಾಮಿಡಿ ವಸ್ತುವನ್ನೇ ಆಯ್ದುಕೊಂಡಿದ್ದಾರೆ. ಆದರೆ ವಸ್ತುವಿನ ಆಯ್ಕೆಯಲ್ಲಿರುವ ಗುರುಭಕ್ತಿ ಚಿತ್ರಕಥೆಯಲ್ಲಾಗಲಿ, ನಿರ್ದೇಶನ ಕೌಶಲದಲ್ಲಿಯಾಗಲಿ ಕಾಣಿಸುವುದಿಲ್ಲ. ಹಾಗಾಗಿ, 'ಆದಿ ಪುರಾಣ' ಆ ಕ್ಷಣದ ವೀಕ್ಷಣೆಯ ಮನರಂಜನೆಯನ್ನೂ ಕೊಡುವುದಿಲ್ಲ. ಅದರಾಚೆಯ ಹೊಸ ತಿಳುವಳಿಕೆಯನ್ನೂ ಮೂಡಿಸುವುದಿಲ್ಲ - ಪದ್ಮನಾಭ ಭಟ್

  ವಿಮರ್ಶೆ : ಹರೆಯದ ಆದಿಯ ಫಸ್ಟ್ ನೈಟ್ ಪುರಾಣ

  ಒಂದು ರಾತ್ರಿಯ ಕತೆ ಮತ್ತು ವ್ಯಥೆ - ಕನ್ನಡ ಪ್ರಭ

  ನಿರ್ದೇಶಕ, ನಟ, ನಿರ್ಮಾಪಕ ಕಾಶಿನಾಥ್ ಅವರ ಚಿತ್ರಗಳ ಸಾಫ್ಟ್ ಪ್ರತಿಯಂತಿರುವ 'ಆದಿ ಪುರಾಣ' ಸಂಸಾರದ ಸರಸಗಳಿಂದ ಹೆಜ್ಜೆ ಹೆಜ್ಜೆಗೂ ವಂಚನೆಗೊಳ್ಳುವ ಹುಡುಗನ ಕತೆ - ಕೇಶು

  ಆದಿಯುದ್ದಕ್ಕೂ ತವಕ ತಲ್ಲಣ - ಉದಯವಾಣಿ

  ಇಲ್ಲಿ "ಮೊದಲ ರಾತ್ರಿ'ಯ ಸ್ವಾರಸ್ಯವೇ ಹೈಲೆಟ್‌. ಹಾಗಂತ, ಬೇರೇನೂ ಇಲ್ಲವೆಂದವಲ್ಲ. ಯುವಕನ ತಳಮಳ, ತಾಳ್ಮೆ, ಬಯಕೆ, ಆತುರ, ಕಾತುರ ಇವೆಲ್ಲವನ್ನೂ ಒಂದೆಡೆ ಕಲೆಹಾಕಿ, ಈಗಿನ ಕಾಲದ ಹುಡುಗರ ಪೀಕಲಾಟವನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಹೊಡಿ, ಬಡಿ, ಕಡಿ ಎಂಬ ಶಬ್ಧದಿಂದ ಆಚೆ ಬಂದು, ಸಂಪ್ರದಾಯಸ್ಥ ಕುಟುಂಬದ ಹುಡುಗ, ಹುಡುಗಿಯ ಶಾಸ್ತ್ರಬದ್ಧ ಮದುವೆ, ನೂತನ ದಂಪತಿಯ ಸಾಂಗತ್ಯ, ಲಾಲಿತ್ಯವನ್ನು ತೋರಿಸುವುದರ ಜೊತೆಗೊಂದು ಸಣ್ಣ ಸಂದೇಶ ಕಟ್ಟಿಕೊಡಲಾಗಿದೆ.

  Aadi Purana Review - Times of India

  Adi Purna is a breezy romantic comedy that is filled with double entendres. The movie has punchy dialogues that are humourous, but good only in patches. The story doesn't go beyond Aditya's life, which gets limited to dating a girl and getting married, which never gives impetus to the flagging story line, making it a tedious watch - Vinay Lokesh

  English summary
  Kannada Movie Adi Purana has received mixed response from the critics. Here is the collection of Adi Purana reviews from Top news papers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more