For Quick Alerts
ALLOW NOTIFICATIONS  
For Daily Alerts

  'ಅಮ್ಮಚ್ಚಿಯೆಂಬ ನೆನಪು' ಚಿತ್ರ ನೋಡಿ ಭೇಷ್ ಎಂದ್ರಾ ವಿಮರ್ಶಕರು.?

  |

  ವೈದೇಹಿ ಅವರ 'ಅಮ್ಮಚ್ಚಿಯೆಂಬ ನೆನಪು', 'ಅಕ್ಕು' ಹಾಗೂ 'ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು' ಕಥೆಗಳನ್ನು ಆಧಾರಿಸಿ ಚಂಪಾ ಶೆಟ್ಟಿ ನಿರ್ದೇಶಿಸಿರುವ ಚಿತ್ರ 'ಅಮ್ಮಚ್ಚಿಯೆಂಬ ನೆನಪು' ತೆರೆಗೆ ಬಂದಿದೆ.

  80-90ರ ದಶಕದಲ್ಲಿ ಮಹಿಳೆಯರು ಎದುರಿಸಿದ ಕಟ್ಟುಪಾಡುಗಳ ಕುರಿತ ಮಹಿಳಾ ಪ್ರಧಾನ ಚಿತ್ರವಿದು. ರಾಜ್.ಬಿ.ಶೆಟ್ಟಿ, ವಿಶ್ವನಾಥ ಉರಾಳ, ದೀಪಿಕಾ ಆರಾಧ್ಯ, ವೈಜಯಂತಿ ಅಡಿಗ ಮುಂತಾದವರು ಅಭಿನಯಿಸಿರುವ 'ಅಮ್ಮಚ್ಚಿಯೆಂಬ ನೆನಪು' ಕ್ಲಾಸ್ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ.

  ವೈದೇಹಿ ಅವರ ಆಶಯಕ್ಕೆ ತಕ್ಕಂತೆ ತೆರೆಗೆ ಬಂದಿರುವ 'ಅಮ್ಮಚ್ಚಿಯೆಂಬ ನೆನಪು' ಚಿತ್ರವನ್ನ ನೋಡಿ ವಿಮರ್ಶಕರು ಭೇಷ್ ಅಂದ್ರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಅಮ್ಮಚ್ಚಿಯೆಂಬ ನೆನಪು' ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

  'ವೆಂಕಪ್ಪಯ್ಯ ಸತ್ತ' ಎನ್ನುವ ಅಮ್ಮಚ್ಚಿಯ ದನಿ - ಪ್ರಜಾವಾಣಿ

  ಇದು ಸ್ತ್ರೀ ಕೇಂದ್ರಿತ ಚಿತ್ರ. ಕಟ್ಟಳೆಗಳನ್ನು ಮೀರಿ ನಿಲ್ಲಲು ಯತ್ನಿಸುವ ಹೆಣ್ಣುಮಗಳಾಗಿ ಅಮ್ಮಚ್ಚಿ (ವೈಜಯಂತಿ ಅಡಿಗ) ಕಾಣಿಸಿಕೊಳ್ಳುತ್ತಾಳೆ. ಮದುವೆಯಾಗಿ, ಮದುವೆಯ ನಂತರ ಗಂಡನಿಂದ ಮೋಸಹೋಗಿ, ಮಾನಸಿಕ ಅಸ್ವಸ್ಥೆಯಾಗಿ, ಎಲ್ಲರಿಂದಲೂ ಉಪೇಕ್ಷೆಗೆ ಒಳಗಾಗುವ ಪಾತ್ರ ‘ಅಕ್ಕು'ವಿನದ್ದು (ದೀಪಿಕಾ ಆರಾಧ್ಯ). ಎಳೆಯ ವಯಸ್ಸಿನಲ್ಲೇ ವಿಧವೆಯಾಗಿ, ದೈಹಿಕ ಹಸಿವುಗಳನ್ನೆಲ್ಲ ‘ಎದೆಯನ್ನು ಕಲ್ಲು ಮಾಡಿಕೊಂಡು' ಕರಗಿಸಿಕೊಂಡ ಪಾತ್ರ ಪುಟ್ಟಮ್ಮತ್ತೆಯದ್ದು (ರಾಧಾಕೃಷ್ಣ ಉರಾಳ). ಹೆಣ್ಣುಮಕ್ಕಳ ಮೇಲೆ ಕೈಮಾಡುವುದು, ತಮ್ಮ ಇಷ್ಟಗಳನ್ನು ಅವರ ಮೇಲೆ ಹೇರುವುದು ಸಹಜ ಎಂದು ನಂಬಿಕೊಂಡ ಪಾತ್ರಗಳು ವಾಸು (ವಿಶ್ವನಾಥ ಉರಾಳ) ಮತ್ತು ವೆಂಕಪ್ಪಯ್ಯ (ರಾಜ್ ಬಿ. ಶೆಟ್ಟಿ) - ವಿಜಯ್ ಜೋಷಿ

  ವಿಮರ್ಶೆ: 'ಅಮ್ಮಚ್ಚಿ'ಯ ನೆನಪು ಮನರಂಜನೆಯ ಸರಕಲ್ಲ, ಇದೊಂದು ಭಾವನೆ

  ಕಥೆ ಮೂರು ಭಾವಗಳು ನೂರಾರು - ವಿಜಯವಾಣಿ

  ವೈದೇಹಿ ಅವರ ಆಶಯಕ್ಕೆ ತಕ್ಕಂತೆ ಚಿತ್ರ ಕಟ್ಟಿಕೊಡುವ ಕೆಲಸ ಇಡೀ ತಂಡದಿಂದಾಗಿದೆ. ಹೆಣ್ಣು ಸ್ವತಂತ್ರಳು. ಆಕೆಗೂ ಆಸೆ-ಆಕಾಂಕ್ಷೆಗಳಿವೆ. ಇಷ್ಟದ ಪತಿಯನ್ನು ಆಯ್ದುಕೊಳ್ಳುವ ಹಕ್ಕು ಅವಳಿಗೂ ಇದೆ. ಅದೆಲ್ಲವನ್ನೂ 80-90ರ ಕಾಲಘಟ್ಟದಲ್ಲಿ ಹೇಗೆ ಹತ್ತಿಕ್ಕಲಾಗುತ್ತಿತ್ತು.? ಪುರುಷ ಪ್ರಧಾನ ಸಮಾಜದಲ್ಲಿ ಹಳ್ಳಿಗಾಡಿನ ಸಂಪ್ರದಾಯ, ಕಟ್ಟುಪಾಡುಗಳಿಗೆ ಮಹಿಳೆಯಾದವಳು ಹೇಗೆ ಸಿಲುಕಿ ನರಳುತ್ತಿದ್ದಳು ಎಂಬುದನ್ನು ಕಣ್ಣಿಗೆ ರಾಚುವಂತೆ, ಮಾರ್ಮಿಕವಾಗಿ ಕಟ್ಟಿಕೊಡುವ ಕೆಲಸ 'ಅಮ್ಮಚ್ಚಿ ಎಂಬ ನೆನಪು' ಸಿನಿಮಾದಲ್ಲಾಗಿದೆ - ಮಂಜು ಕೊಟಗುಣಸಿ

  ಅಮ್ಮಚ್ಚಿ, ಅಕ್ಕುವಿನ ಹೋರಾಟದ ಕಥೆ - ವಿಜಯ ಕರ್ನಾಟಕ

  ಹೆಣ್ಣಿಗೆ ಹಿಂದಿನಿಂದಲೂ ಹೆಚ್ಚು ಆಯ್ಕೆಗಳಿಲ್ಲ, ವಯಸ್ಸಿಗೆ ಬರುವವರೆಗೂ ಪೋಷಕರ ಆಯ್ಕೆಗಳಲ್ಲೇ ಬೆಳೆಯುವ ಆಕೆ, ಮದುವೆಯಾದ ಮೇಲೆ ತನ್ನ ಗಂಡನ ಅಂಕೆ ಮತ್ತು ಆಯ್ಕೆಗೆ ಹೊಂದಿಕೊಂಡು ಬದುಕುತ್ತಾಳೆ. ಧೈರ್ಯದಿಂದ ಎದುರಿಸಬೇಕಾದ ಸಾಕಷ್ಟು ಸನ್ನಿವೇಶಗಳಲ್ಲಿ ಆಕೆ ಭಯದಿಂದ ಮುದುಡಿ ಕುಳಿತಿರುತ್ತಾಳೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಜೀವನ ನಡೆಸುವ ಅಮ್ಮಚ್ಚಿ ಮತ್ತು ಅಕ್ಕು ಎಂಬ ಇಬ್ಬರು ಹೆಣ್ಣುಮಕ್ಕಳ ಕಥೆಯೇ ಅಮ್ಮಚ್ಚಿಯೆಂಬ ನೆನಪು. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮತ್ತು ಡಬ್ಬಿಂಗ್ ಕಲಾವಿದೆಯೂ ಆಗಿರುವ ಚಂಪಾ ಪಿ. ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವೈದೇಹಿ ಅವರ ಅಕ್ಕು ನಾಟಕ ಮತ್ತು ಅಮ್ಮಚ್ಚಿ ಎಂಬ ನೆನಪು ಕಥೆಗಳನ್ನು ಇಟ್ಟುಕೊಂಡು ಅವುಗಳಿಗೆ ಸಿನಿಮಾ ಸ್ಪರ್ಶ ನೀಡಿದ್ದಾರೆ ಚಂಪಾ - ಹರೀಶ್ ಬಸವರಾಜ್

  Ammachi Yemba Nenapu Review - Times of India

  Vaidehi is one of the more celebrated voices in Kannada literature. This film sees her weave three short stories written by her into one tale. The film is directed by theatreperson Champa Shetty, who has previously adapted Vaidehi's work on stage. This is not a film that has instant entertainment for the fast food generation. Instead, the tale takes its time to unfold as it weaves itself into a beautiful narrative that not just captures the ethos of its setting, but also subtly touches upon pertinent issues in a poignant way - Sunayana Suresh

  English summary
  Kannada Movie Ammachi Yemba Nenapu has received good response from the critics. Here is the collection of Ammachi Yemba Nenapu reviews from Top news papers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more