twitter
    For Quick Alerts
    ALLOW NOTIFICATIONS  
    For Daily Alerts

    'ಅಮ್ಮನ ಮನೆ'ಗೆ ಹೋಗಿ ಬಂದು ವಿಮರ್ಶಕರು ಮಾಡಿರುವ ಕಾಮೆಂಟ್ಸ್ ಇವು..

    |

    ಬಹು ಕಾಲದ ನಂತರ ನಟ-ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿರುವ ಸಿನಿಮಾ 'ಅಮ್ಮನ ಮನೆ'. ತಾಯಿ-ಮಗನ ಅನ್ಯೋನ್ಯ ಅನುಬಂಧ ಕುರಿತು ಸಾಗುವ 'ಅಮ್ಮನ ಮನೆ' ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗಿದೆ.

    ನಿಖಿಲ್ ಮಂಜೂ ನಿರ್ದೇಶನದ 'ಅಮ್ಮನ ಮನೆ' ಫ್ಯಾಮಿಲಿ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ. ವಾಸ್ತವಕ್ಕೆ ತೀರಾ ಹತ್ತಿರವಾಗಿರುವ ಈ ಸಿನಿಮಾ ಹೆಂಗಳೆಯರ ಮನ ಮಿಡಿಯುವುದರಲ್ಲಿ ಡೌಟ್ ಬೇಡ.

    'ಅಮ್ಮನ ಮನೆ' ಸಿನಿಮಾ ನೋಡಿ ಪ್ರೇಕ್ಷಕರಂತೂ ಖುಷಿಯಾಗಿದ್ದಾರೆ. ಅದೇ ರೀತಿ ವಿಮರ್ಶಕರೂ ಕೂಡ ತೃಪ್ತಿ ಪಟ್ಟಿದ್ದಾರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಅಮ್ಮನ ಮನೆ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    'ಅವಸರಕ್ಕಿಲ್ಲ ಅವಕಾಶ' : ಪ್ರಜಾವಾಣಿ

    'ಅವಸರಕ್ಕಿಲ್ಲ ಅವಕಾಶ' : ಪ್ರಜಾವಾಣಿ

    'ನಿಧಾನ'ಗತಿಗೆ ಒಂದು ವೈಶಿಷ್ಟ್ಯ ಇದೆ. ಅದು ಎಲ್ಲ ಕೆಲಸಗಳನ್ನೂ ಸಾವಧಾನವಾಗಿ, ಆಲೋಚಿಸಿ ಪೂರ್ಣಗೊಳಿಸುವಂತೆ ಮಾಡುತ್ತದೆ. ತಪ್ಪು ಮಾಡುವುದಕ್ಕೆ ಪೂರ್ಣ ಅವಕಾಶ ಕಲ್ಪಿಸುವ 'ಅವಸರ'ಕ್ಕೆ ವಿರುದ್ಧ ಇದು. ಬದುಕೇ ಅವಸರ ಆಗಿರುವ ಹೊತ್ತಿನಲ್ಲಿ ನಿಧಾನವೆಂಬುದು ಎಲ್ಲರಿಗೂ ರುಚಿಸದಿರಬಹುದು - ಆದರೆ ತನ್ನ ಮಹತ್ವವನ್ನೇನೂ ಕಳೆದುಕೊಳ್ಳುವುದಿಲ್ಲ.! ರಾಘವೇಂದ್ರ ರಾಜ್ ಕುಮಾರ್ ಅವರನ್ನು ದಶಕದ ನಂತರ ಸಿನಿ ತೆರೆಗೆ ಮರಳಿ ತಂದಿರುವ ಸಿನಿಮಾ 'ಅಮ್ಮನ ಮನೆ' ನಿಧಾನವೇ ಈ ಚಿತ್ರದುದ್ದಕ್ಕೂ ಕಂಡುಬರುವ ಸ್ಥಾಯಿ ಬಿಂದು - ವಿಜಯ್ ಜೋಷಿ

    Ammana mane review : ರಾಜೀವ ನಿಧಾನ.. ಸಂದೇಶವೇ ಪ್ರಧಾನ...Ammana mane review : ರಾಜೀವ ನಿಧಾನ.. ಸಂದೇಶವೇ ಪ್ರಧಾನ...

    ತೀವ್ರವಾಗಿ ಕಾಡದ ಅಮ್ಮ : ವಿಜಯ ಕರ್ನಾಟಕ

    ತೀವ್ರವಾಗಿ ಕಾಡದ ಅಮ್ಮ : ವಿಜಯ ಕರ್ನಾಟಕ

    ಕಲಾತ್ಮಕ ಸಿನಿಮಾ ಹೆಸರಲ್ಲಿ ಗಂಭೀರ ವಿಷಯಗಳನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ ಸ್ಯಾಂಡಲ್ ವುಡ್‌ ನಿರ್ದೇಶಕರು. ಈ ಹಿಂದೆ ನಿರ್ದೇಶಕ ನಿಖಿಲ್ ಮಂಜು ಚಿಂತನೆಗೆ ಹಚ್ಚುವಂತಹ ಕಥೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಿದೆ. ಆದರೆ, ಈ ಬಾರಿ 'ಅಮ್ಮನ ಮನೆ' ಯಂತಹ ವ್ಯಾಪಾರಿ ಸರಕನ್ನು ಸಿನಿಮಾವಾಗಿಸುವ ಪ್ರಯತ್ನ ಮಾಡಿದ್ದಾರೆ - ಶರಣು ಹುಲ್ಲೂರು

    'ಅಮ್ಮನ ಮನೆ'ಗೆ ರಾಜೀವನೇ ಆಸರೆ : ಉದಯವಾಣಿ

    'ಅಮ್ಮನ ಮನೆ'ಗೆ ರಾಜೀವನೇ ಆಸರೆ : ಉದಯವಾಣಿ

    "ಅಮ್ಮನ ಮನೆ' ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಅವರದ್ದು ಕುಟುಂಬದ ಜವಾಬ್ದಾರಿ ಹೊತ್ತ ಮಧ್ಯ ವಯಸ್ಕ ರಾಜೀವನ ಪಾತ್ರ. ಅಂಗ ವೈಕಲ್ಯವಿದ್ದರೂ, ಸ್ವಾಭಿಮಾನಿಯಾಗಿ ಅಮ್ಮನ ಮನೆಯನ್ನು ನಡೆಸಿಕೊಂಡು ಹೋಗುವ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಅವರದ್ದು ಅಚ್ಚುಕಟ್ಟಾದ ಅಭಿನಯ. ಅವರ ಹಾವ-ಭಾವ, ನಡೆ-ನುಡಿ ಎಲ್ಲವೂ ರಾಜೀವ ಪಾತ್ರಕ್ಕೆ ಒಪ್ಪುವಂತಿದೆ - ಜಿ.ಎಸ್.ಕಾರ್ತಿಕ್ ಸುಧನ್

    ರಾಘಣ್ಣ ಪುನರಾಗಮನದ ಮನೋಜ್ಞ ಚಿತ್ರಣ : ಕನ್ನಡ ಪ್ರಭ

    ರಾಘಣ್ಣ ಪುನರಾಗಮನದ ಮನೋಜ್ಞ ಚಿತ್ರಣ : ಕನ್ನಡ ಪ್ರಭ

    ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬರುವ ಅಮ್ಮ, ಹೆಂಡತಿ ಮತ್ತು ಮಗಳು ಎಂಬ ಮೂವರು ಅಮ್ಮಂದಿರ ಚಿತ್ರ ಇದು. ಅವರ ಮುದ್ದಿನ ಜೀವ ರಾಜೀವ. ಹೊಸ ರೀತಿಯ ಕತೆಯ ತೀವ್ರತೆಯನ್ನು ನಿರೂಪಣೆ ನುಂಗಿದೆ. ಸಮೀರ್ ಕುಲಕರ್ಣಿ ಸಂಗೀತದಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಡಿದ ಎರಡು ಹಾಡಿನಲ್ಲಿ ಅವರ ದಣಿವು ಕಾಣುತ್ತದೆ - ದೇಶಾದ್ರಿ ಹೊಸ್ಮನೆ

    Naturally slow and steady - Deccan Chronicle

    Naturally slow and steady - Deccan Chronicle

    High on sentiment and melodrama at times, it lacks pace and hence requires a bit of patience to experience the good things which Nikhil Manjoo attempts through his honest effort. Based a novel, which revolves around the life of a person who apart from facing his own challenging life, has to strike a balance between three most important women in his life - mother, wife and his daughter - Shashiprasad SM

    Ammana Mane Review - Times of India

    Ammana Mane Review - Times of India

    When it comes to performances, Raghavendra Rajkumar's given an endearing performance. Suchendra Prasad is a hoot, as always. Nikhilmanjoo, as the tough nut cop, is good. The women in the film seem to have been given overly sentimental characters. Ammana Mane touches upon some relevant issues and there is some occasional poignancy in the narrative, but the film ends up being jarring with regards to showcasing sentiments, and the pace doesn't help that either - Sunayana Suresh

    English summary
    Kannada Actor Raghavendra Rajkumar starrer Kannada Movie 'Ammana Mane' has received mixed response from the critics.
    Saturday, March 9, 2019, 14:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X