For Quick Alerts
  ALLOW NOTIFICATIONS  
  For Daily Alerts

  ಸುನಿ ತೋರಿಸಿದ 'ಬಜಾರ್' ವಿಮರ್ಶಕರಿಗೆ ಇಷ್ಟ ಆಯ್ತಾ.?

  |

  'ಆಪರೇಷನ್ ಅಲಮೇಲಮ್ಮ' ಚಿತ್ರದ ಬಳಿಕ 'ಸಿಂಪಲ್' ಸುನಿ ಕೈಗೆತ್ತಿಕೊಂಡ ಚಿತ್ರವೇ 'ಬಜಾರ್'. ಭೂಗತ ಲೋಕದ ಕಥೆಯೊಳಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬೆರೆಸಿ 'ಬಜಾರ್' ಚಿತ್ರವನ್ನ ತಯಾರು ಮಾಡಿದ್ದಾರೆ ಸಿಂಪಲ್ ಸುನಿ.

  ಪಾರಿವಾಳ ಹಾರಾಟ ಸ್ಪರ್ಧೆ ಮತ್ತು ಅದರ ಹಿಂದಿನ ಬೆಟ್ಟಿಂಗ್ ದಂಧೆಯ ಕುರಿತು ಕಥೆ ಹೆಣೆದಿದ್ದಾರೆ ಸಿಂಪಲ್ ಸುನಿ. 'ಬಜಾರ್' ಮೂಲಕ ಧನ್ವೀರ್ ಎಂಬ ನಾಯಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಇನ್ನೂ ಅಭಿನಯದಲ್ಲಿ ಅದಿತಿಯಲ್ಲಿ ಸಿನಿ ಪ್ರಿಯರ ಮನ ಗೆದ್ದಿದ್ದಾರೆ.

  ಹಳೆ ಸೂತ್ರವಾಗಿದ್ದರೂ, ನಿರೂಪಣೆಯಲ್ಲಿ ಹೊಸತನ ಮೆರೆದಿರುವ 'ಬಜಾರ್' ಚಿತ್ರ ವಿಮರ್ಶಕರಿಗೆ ಇಷ್ಟ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಬಜಾರ್' ಚಿತ್ರವನ್ನ ವೀಕ್ಷಿಸಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

  'ಬಜಾರ್'ನಲ್ಲಿ ಕಂಡ ಬಿಡಿ ಚಿತ್ರಗಳು: ಪ್ರಜಾವಾಣಿ

  'ಬಜಾರ್'ನಲ್ಲಿ ಕಂಡ ಬಿಡಿ ಚಿತ್ರಗಳು: ಪ್ರಜಾವಾಣಿ

  ಸಿನಿಮಾದ ವಸ್ತು ವಿಷಯದಲ್ಲಿ ಭೂಗತಲೋಕದ ಕಥನ ಹಳೆಯ ಟ್ರೆಂಡ್. ಅದಕ್ಕೊಂದಿಷ್ಟು ನವಿರಾದ ಪ್ರೀತಿ ಬೆರೆಸಿ ನೋಡುಗರನ್ನು ಚಿತ್ರಮಂದಿರಕ್ಕೆ ಸೆಳೆಯುವ ತಂತ್ರಗಾರಿಕೆ ದಿನಮಾನವಿದು. 'ಬಜಾರ್' ಚಿತ್ರದಲ್ಲೂ ನಿರ್ದೇಶಕ ಸಿಂಪಲ್ ಸುನಿಗೆ ಇದೇ ಬಂಡವಾಳ. ಆದರೆ, ಈ ಹಳೆಯ ಸೂತ್ರದೊಟ್ಟಿಗೆ ಅವರು ಬಣ್ಣಬಣ್ಣದ ಪಾರಿವಾಳಗಳನ್ನು ಹಾರಿಬಿಟ್ಟು ಜಾಣತನ ಮೆರೆದಿದ್ದಾರೆ - ಕೆ.ಎಚ್.ಓಬಳೇಶ್

  ಫೆಬ್ರವರಿ 1ಕ್ಕೆ 'ಬಜಾರ್'ಗೆ ಬರ್ತಿದೆ 'ಅನುಕ್ತ'

  'ಬಜಾರ್'ನಲ್ಲಿ ಕಪೋತ ಜಗತ್ತಿನ ವಾತಾವರಣ: ವಿಜಯ ಕರ್ನಾಟಕ

  'ಬಜಾರ್'ನಲ್ಲಿ ಕಪೋತ ಜಗತ್ತಿನ ವಾತಾವರಣ: ವಿಜಯ ಕರ್ನಾಟಕ

  ಕಪೋತ ಜಗತ್ತಿನಲ್ಲಿ ಸಾಕಷ್ಟು ರೋಚಕ ಕಥೆಗಳಿದ್ದರೂ, ಅವುಗಳನ್ನು ತೆರೆಯ ಮೇಲೆ ತೋರಿಸುವ ಧೈರ್ಯ ತೋರಿರಲಿಲ್ಲ. ಈ ಕಥೆಗಳನ್ನು ಆಯ್ಕೆ ಮಾಡಿಕೊಂಡರೆ ಎಲ್ಲ ವರ್ಗದ ಜನರಿಗೂ ಸಿನಿಮಾ ತಲುಪುತ್ತಾ ಎಂಬ ಹಿಂಜರಿಕೆ ಕೂಡ ಇದ್ದಿರಬಹುದು. ಆದರೆ, ನಿರ್ದೇಶಕ ಸುನಿ ತಮ್ಮ ‘ಬಜಾರ್‌' ಸಿನಿಮಾದಲ್ಲಿ ಪಾರಿವಾಳ ಹಾರಾಟ ಸ್ಪರ್ಧೆ ಮತ್ತು ಅದರ ಹಿಂದಿನ ಬೆಟ್ಟಿಂಗ್ ದಂಧೆಯನ್ನು ಸಿನಿಮಾವಾಗಿಸಿದ್ದಾರೆ. ಈ ಚಿತ್ರವನ್ನು ಎಲ್ಲ ವರ್ಗದ ಜನರಿಗೆ ತಲುಪಿಸಲೆಂದೇ ಆಯಾ ವಯೋಮಾನದ ನೋಡುಗರ ಅಭಿರುಚಿಗೆ ತಕ್ಕಂತೆ ಚಿತ್ರಕಥೆ ಬರೆದಿದ್ದಾರೆ. ಹಾಗಾಗಿ ಬಜಾರ್‌ ಸಿನಿಮಾದಲ್ಲಿ ಲವ್‌ಸ್ಟೋರಿಯಿದೆ. ಮಾಸ್‌ ನೋಡುಗರು ಇಷ್ಟಪಡುವಂಥ ಮಚ್ಚುಗಳ ಆರ್ಭಟವಿದೆ. ಖಡಕ್ ಡೈಲಾಗ್‌ ಕೇಳುತ್ತವೆ. ಅಲ್ಲಲ್ಲಿ ಸಂಗೀತದ ಇಂಪಿದೆ. ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡ ಬಜಾರ್‌ನಂತೆಯೇ ಈ ಬಜಾರ್‌ ಸಿನಿಮಾ ಕಾಣಿಸುತ್ತದೆ - ಶರಣು ಹುಲ್ಲೂರು

  ಈ ವಾರ ತೆರೆಗೆ ಬರುತ್ತಿರುವ ಚಿತ್ರಗಳಿವು: ನಿಮ್ಮ ಆಯ್ಕೆ ಯಾವುದು.?

  ಹೊಸ ಮಚ್ಚು, ಅದೇ ಕಿಚ್ಚು: ಕನ್ನಡ ಪ್ರಭ

  ಹೊಸ ಮಚ್ಚು, ಅದೇ ಕಿಚ್ಚು: ಕನ್ನಡ ಪ್ರಭ

  ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಚಿತ್ರದ ನಾಯಕ ಧನ್ವೀರ್ ಆರಡಿ ವೀರ. ಸಿಕ್ಸ್ ಪ್ಯಾಕ್ ಅವರ ಹೆಗ್ಗಳಿಕೆ. ಮಚ್ಚು ಹಿಡಿಯುವ ಕಲೆಯನ್ನು ಮೊದಲ ಚಿತ್ರದಲ್ಲೇ ಸಾಧಿಸಿದ್ದು ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿ. ಗೊತ್ತಿಲ್ಲದ ಇಂಗ್ಲೀಷ್ ಮಾತನಾಡುವ, ಧರಿಸಿಲ್ಲದ ಸ್ಕರ್ಟನ್ನು ಧರಿಸಿ ಮುಜುಗರ ಅನುಭವಿಸುವ ಹುಡುಗಿಯಾಗಿ ಅದಿತಿ ಪ್ರಭುದೇವ ಅಭಿನಯ ಚೆಂದ - ರಾಜೇಶ್ ಶೆಟ್ಟಿ

  Bazaar Movie Review: Times of India

  Bazaar Movie Review: Times of India

  After Operation Almelamma, Suni is back with a mass entertainer Bazaar which has all the commercial ingredients. It strikes the right chord for most part of the movie. A forgotten sport like pigeon racing runs parallely with a love story, but a tighter narration could have made the difference as the story delves too much into pigeon racing and it's history which pegs back the story at times - Vinay Lokesh

  English summary
  Simple Suni Directorial Kannada Movie Bazaar has received mixed response from the critics. Here is the collection of Bazaar reviews from Top news papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X