twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ಕವಿ ಎಚ್.ಎಸ್.ವಿ ಅವರ 'ಹಸಿರು ರಿಬ್ಬನ್'ಗೆ ಮನಸೋತರೇ ವಿಮರ್ಶಕರು.?

    By Harshitha
    |

    ಖ್ಯಾತ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ 'ಹಸಿರು ರಿಬ್ಬನ್' ರಾಜ್ಯಾದ್ಯಂತ ಬಿಡುಗಡೆ ಆಗಿದೆ. ತಮ್ಮದೇ ಆತ್ಮಚರಿತ್ರೆಯಾದ 'ಅನಾತ್ಮಕ ಕಥನ'ದಿಂದ ಒಂದು ಅಧ್ಯಾಯವನ್ನು ತೆಗೆದುಕೊಂಡು 'ಹಸಿರು ರಿಬ್ಬನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ ಎಚ್.ಎಸ್.ವಿ.

    ಮುಗ್ಧ ಹೆಂಗಸರ ಸುತ್ತ ಸುತ್ತುವ ಕಥೆ ಇದಾಗಿದ್ದು, ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳು ಕಡಿಮೆ. ಆದರೂ, ಹಣಕ್ಕಿಂತ ಸಂಬಂಧಗಳೇ ಮುಖ್ಯ ಎಂಬ ಸಂದೇಶ ಸಾರುವ ಈ ಚಿತ್ರ ವಿಮರ್ಶಕರಿಗೆ ಹಿಡಿಸಿದೆ.

    'ಹಸಿರು ರಿಬ್ಬನ್' ಸಿನಿಮಾ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ನೋಡಿ...

    ಮುಗ್ಧ ಹೆಣ್ಣುಗಳ ಜಗತ್ತು: ವಿಜಯ ಕರ್ನಾಟಕ

    ಮುಗ್ಧ ಹೆಣ್ಣುಗಳ ಜಗತ್ತು: ವಿಜಯ ಕರ್ನಾಟಕ

    ಚಿತ್ರದ ಕಥೆಯಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಒಮ್ಮೆ ನಂಬಿಕೆ, ಪ್ರೀತಿ ಕಳೆದುಕೊಂಡರೆ ಮತ್ತೆ ಅದನ್ನು ಸಂಪಾದಿಸುವುದು ಕಷ್ಟ ಎನ್ನುವ ಅಂಶ. ಮನಸ್ಸು ಮುರಿದರೆ ಅದು ಎಂದಿಗೂ ಸರಿ ಹೋಗದು. ಹಾಗಾದರೂ ತಪ್ಪು ಮಾಡಿದವನನ್ನು ದೊಡ್ಡವರು ಕ್ಷಮಿಸಬಹುದು. ಆದರೆ, ಎಳೆ ಮಕ್ಕಳ ಮನಸ್ಸಿನ ಮೇಲೆ ಅದು ಎಂಥ ಪರಿಣಾಮ ಬೀರುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮುಗ್ಧ ಮನಸ್ಸಿನ ಸ್ತ್ರೀಯರ ನಿಷ್ಕಲ್ಮಷ ಪ್ರೀತಿಯನ್ನು ಚಿತ್ರದಲ್ಲಿ ನೋಡಬಹುದು. ಹೆಣ್ಣು ಮಕ್ಕಳು ಪರಸ್ಪರ ತುಡಿಯುವುದನ್ನು ತೋರಿಸಲಾಗಿದೆ. ಚಿತ್ರದಲ್ಲಿ ಹಾಡುಗಳನ್ನು ಎಚ್‌.ಎಸ್‌.ವೆಂಕಟೇಶ್‌ ಮೂರ್ತಿಯವರೇ ಬರೆದಿದ್ದು ಸಾಹಿತ್ಯ ಮನಸ್ಸಿಗೆ ಮುದ ನೀಡುತ್ತದೆ. ಹಾಡುಗಳು ಚಿತ್ರದ ಹೈಲೈಟ್‌ - ಪದ್ಮಾ ಶಿವಮೊಗ್ಗ

    'ಹಸಿರು ರಿಬ್ಬನ್' ವಿಮರ್ಶೆ: ಸಂಬಂಧಗಳ ಪ್ರಾಮುಖ್ಯತೆ ಸಾರುವ ಚಿತ್ರ'ಹಸಿರು ರಿಬ್ಬನ್' ವಿಮರ್ಶೆ: ಸಂಬಂಧಗಳ ಪ್ರಾಮುಖ್ಯತೆ ಸಾರುವ ಚಿತ್ರ

    ಮಾನವೀಯ ಸಂಬಂಧಗಳ ಕಟ್ಟುವ ರಿಬ್ಬನ್: ಉದಯವಾಣಿ

    ಮಾನವೀಯ ಸಂಬಂಧಗಳ ಕಟ್ಟುವ ರಿಬ್ಬನ್: ಉದಯವಾಣಿ

    ಸಾಹಿತಿಗಳೊಬ್ಬರು ಸಿನಿಮಾ ಮಾಡುವಾಗ, ಎಲ್ಲಿ ತಮ್ಮ ತನವನ್ನು ಕಳೆದುಕೊಳ್ಳುತ್ತಾರೋ ಎಂಬ ಭಯ ಅವರ ಓದುಗವಲಯದಲ್ಲಿ ಸಹಜವಾಗಿಯೇ ಇರುತ್ತದೆ. ಆದರೆ, ವೆಂಕಟೇಶಮೂರ್ತಿಗಳು ತಮ್ಮ ತನವನ್ನು ಕಳೆದುಕೊಳ್ಳದೆಯೇ, ಮನೆ ಮಂದಿಯೆಲ್ಲಾ ಕುಳಿತು ಒಂದು ಸದಭಿರುಚಿಯ ಚಿತ್ರವನ್ನು ಮಾಡಿದ್ದಾರೆ. ಇಲ್ಲಿ ಅವರು ಕಳೆದು ಹೋಗುತ್ತಿರುವ ಮಾನವೀಯ ಸಂಬಂಧಗಳ ಬಗ್ಗೆ, ಹಣಕ್ಕಾಗಿ ಸಂಬಂಧವನ್ನು ದೂರ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ತಮ್ಮದೇ ಆತ್ಮಚರಿತ್ರೆಯಾದ "ಅನಾತ್ಮಕ ಕಥನ'ದಿಂದ ಒಂದು ಅಧ್ಯಾಯವನ್ನು ತೆಗೆದುಕೊಂಡಿದ್ದಾರೆ. ವೆಂಕಟೇಶಮೂರ್ತಿ ಅವರ "ಹಸಿರು ರಿಬ್ಬನ್‌' ಚಿತ್ರದ ವಿಶೇಷವೆಂದರೆ, ಇದೊಂದು ಸಾಮಾನ್ಯ ಮನುಷ್ಯರ ಕಥೆ. ಒಬ್ಬ ಸಾಮಾನ್ಯ ಮನುಷ್ಯ ಯಾವುದೇ ಘಟನೆಗೆ ಹೇಗೆ ಪ್ರತಿಕ್ರಯಿಸುತ್ತಾನೋ, ಅದನ್ನೇ ತೆರೆಯ ಮೇಲೆ ತರಲಾಗಿದೆ. ಪ್ರೇಕ್ಷಕರಿಗೆ ಇಡೀ ಕಥೆ ತಮ್ಮ ಸುತ್ತಮುತ್ತಲೇ ನಡೆಯುತ್ತಿದೆಯೇನೋ ಎನಿಸುವಷ್ಟು ಆಪ್ತವಾಗಿ ಇಡೀ ವಾತಾವರಣವನ್ನು ಕಟ್ಟಿಕೊಡಲಾಗಿದೆ - ಚೇತನ್

    ಕವಿಯ ಕುಂಚದಲ್ಲಿ ಅರಳಿದ ವರ್ಣಚಿತ್ರ: ಕನ್ನಡಪ್ರಭ

    ಕವಿಯ ಕುಂಚದಲ್ಲಿ ಅರಳಿದ ವರ್ಣಚಿತ್ರ: ಕನ್ನಡಪ್ರಭ

    'ಹಸಿರು ರಿಬ್ಬನ್' ಎಂಬ ಹೆಸರಿನಲ್ಲಿಯೇ ಮುಗ್ಧತೆ, ಸಂಸ್ಕೃತಿ ಹಾಗೂ ಸಮೃದ್ಧಿಗಳ ಸಂಕೇತವಿದೆ. ಇವೆಲ್ಲವನ್ನೂ ನಿರ್ದೇಶಕರಾದ ಖ್ಯಾತ ಸಾಹಿತಿ ಡಾ.ವೆಂಕಟೇಶ್ ಮೂರ್ತಿ ಅವರು ಮೊದಲ ಚಿತ್ರವೆನ್ನುವ ಯಾವುದೇ ಅಳುಕಿಲ್ಲದೇ ಸಮರ್ಥವಾಗಿ ಪ್ರಸ್ತುತ ಪಡಿಸಿದ್ದಾರೆ. ಕತೆ, ಚಿತ್ರಕಥೆ, ಹಾಡುಗಳನ್ನೂ ಬರೆದು ನಿರ್ದೇಶಿಸಿದ್ದಾರೆ - ಸಂಕೇತ್ ಗುರುದತ್

    Reminds Benegal's Katha Sagar: Bangalore Mirror

    Reminds Benegal's Katha Sagar: Bangalore Mirror

    A soft, subtle, leisurely narrated heartwarming story. It would have made a very good hour-long episode in a decent television serial. You may be reminded of Shyam Benegal's Katha Sagar which had stories sourced from literature across India. I t has become a film, maybe because television no longer wants good stories. But Hasiru Ribbon does not have enough complexity to become a film. So it ends up like a very good episode in a serial you end up watching on a big screen - Shyam Prasad S

    English summary
    Kannada Movie Hasiru Ribbon has received mixed response from the critics. Here is the collection of 'Hasiru Ribbon' reviews from Top news papers.
    Sunday, July 15, 2018, 16:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X