twitter
    For Quick Alerts
    ALLOW NOTIFICATIONS  
    For Daily Alerts

    'ಒಂದ್ ಕಥೆ ಹೇಳ್ಲಾ' ಚಿತ್ರ ನೋಡಿ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

    |

    ಗಾಂಧಿನಗರದಲ್ಲಿ ಹೆಚ್ಚು ಹೈಪ್ ಕ್ರಿಯೇಟ್ ಮಾಡಿಕೊಳ್ಳದೇ, ವಿವಾದಕ್ಕೀಡಾಗದೇ, ಒಂದಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿರುವ ಸಿನಿಮಾ 'ಒಂದ್ ಕಥೆ ಹೇಳ್ಲಾ'. ಇದು ಔಟ್ ಅಂಡ್ ಔಟ್ ಹಾರರ್ ಕಮ್ ಥ್ರಿಲ್ಲರ್ ಚಿತ್ರ. ಇಲ್ಲಿ ಒಂದಲ್ಲಾ ಎರಡಲ್ಲಾ.. ಒಟ್ಟು ಐದು ಕಥೆಗಳಿವೆ. ಈ ಐದು ಕಥೆಗಳನ್ನು ಹೇಳಿರುವ ಶೈಲಿಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದಾರೆ.

    ಹೌದು.. 'ಒಂದ್ ಕಥೆ ಹೇಳ್ಲಾ' ಚಿತ್ರ ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪಿದೆ. ಸಿನಿಮಾದಲ್ಲಿ ಇರುವ ಥ್ರಿಲ್ಲಿಂಗ್ ಅಂಶಗಳು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿದೆ. ಎಲ್ಲಾ ಹೊಸ ಕಲಾವಿದರೇ ಇದ್ದರೂ, ಎಲ್ಲರ ಅಭಿನಯ ಅಚ್ಚುಕಟ್ಟಾಗಿದೆ. ನಿರ್ದೇಶಕ ಗಿರೀಶ್ ಪ್ರಯತ್ನ ಮೆಚ್ಚುವಂಥದ್ದು.

    ಪ್ರೇಕ್ಷಕರು ಮೆಚ್ಚಿರುವ 'ಒಂದ್ ಕಥೆ ಹೇಳ್ಲಾ' ವಿಮರ್ಶಕರಿಗೂ ಹಿಡಿಸಿದ್ಯಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಒಂದ್ ಕಥೆ ಹೇಳ್ಲಾ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ಹೇಳಿದ ಕತೆಯನ್ನು ಕೇಳಬಹುದು - ಕನ್ನಡ ಪ್ರಭ

    ಹೇಳಿದ ಕತೆಯನ್ನು ಕೇಳಬಹುದು - ಕನ್ನಡ ಪ್ರಭ

    ನಾಲ್ಕು ಉಪಕತೆಗಳುಳ್ಳ ಒಂದು ಕತೆಯನ್ನು ಕುತೂಹಲಕಾರಿಯಾಗಿ ನೋಡಿಸಿಕೊಂಡು ಹೋಗುವಂತೆ ಹೇಳಿರುವುದೇ ಈ ಸಿನಿಮಾದ ಪ್ಲಸ್ಸು. ನಿರ್ದೇಶಕ ಗಿರೀಶ್ ಅವರಿಗೆ ಸಮರ್ಥವಾಗಿ ಕತೆ ಹೇಳುವ ಕಲೆ ಸಿದ್ಧಿಸಿದೆ ಅನ್ನುವುದಕ್ಕೆ ಸಾಕ್ಷಿ. ಈ ಸಿನಿಮಾದ ಪ್ಯಾಟರ್ನ್ ಹೊಸತು ಅನ್ನಿಸುವುದಿಲ್ಲ. ಆದರೆ ಕತೆ ಹೇಳುವವರು ಬೋರ್ ಮಾಡಿಲ್ಲ. ಕತೆ ಕೇಳಲು ಅಡ್ಡಿಯಿಲ್ಲ - ರಾಜೇಶ್ ಶೆಟ್ಟಿ

    Ondh Kathe Hella Review : ಹಾರರ್ ಪ್ರಿಯರಿಗೆ ಆಪ್ತವಾಗುವ ಸಿನಿಮಾOndh Kathe Hella Review : ಹಾರರ್ ಪ್ರಿಯರಿಗೆ ಆಪ್ತವಾಗುವ ಸಿನಿಮಾ

    ಬೆಚ್ಚಿ ಬೀಳಿಸಿ ಥ್ರಿಲ್ ಆಗಿಸುವ ಚಿಕ್ಕ ಚಿಕ್ಕ ಕಥೆಗಳ ಗುಚ್ಛ - ವಿಜಯ ಕರ್ನಾಟಕ

    ಬೆಚ್ಚಿ ಬೀಳಿಸಿ ಥ್ರಿಲ್ ಆಗಿಸುವ ಚಿಕ್ಕ ಚಿಕ್ಕ ಕಥೆಗಳ ಗುಚ್ಛ - ವಿಜಯ ಕರ್ನಾಟಕ

    ಹಾರರ್ ಕಥೆಗಳಿಗೆ ಯಾವುದೇ ತಲೆಬುಡ ಇರುವುದಿಲ್ಲ, ಅಂತಹ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದಾಗ ಅದಕ್ಕೆ ಲಾಜಿಕ್‌ಗಳೂ ಇರುವುದಿಲ್ಲ. ಆದರೆ ಥ್ರಿಲ್ಲಿಂಗ್ ಆಗಿ ತೆರೆ ಮೇಲೆ ತಂದರೆ ಸಿನಿಮಾ ಖಂಡಿತಾ ಗೆಲ್ಲುತ್ತದೆ. ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದು ಅವುಗಳಲ್ಲಿ ಕೆಲವು ಯಶಸ್ವಿಯಾಗಿವೆ. ಇನ್ನು ಕೆಲವು ಯಾರಿಗೂ ಗೊತ್ತಾಗದ ಹಾಗೆ ಮರೆಯಾಗಿವೆ. ಆ ಗೆದ್ದ ಸಾಲಿನಲ್ಲಿ ಸೇರಲು ಎಲ್ಲ ಲಕ್ಷಣಗಳು ಈ ಒಂದು ಕಥೆ ಹೇಳ್ಲಾ ಸಿನಿಮಾದಲ್ಲಿ ಕಾಣುತ್ತವೆ - ಹರೀಶ್ ಬಸವರಾಜ್

    ಗಮನ ಸೆಳೆಯುವ ಸಿನಿಮಾ - ವಿಜಯ ಕರ್ನಾಟಕ

    ಗಮನ ಸೆಳೆಯುವ ಸಿನಿಮಾ - ವಿಜಯ ಕರ್ನಾಟಕ

    ಈ ಸಿನಿಮಾದಲ್ಲಿ ಕಥೆ ಮತ್ತು ಚಿತ್ರಕಥೆಯೇ ನಾಯಕ. ಇದು ಐದು ಹಾರರ್ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಹೇಳಿದ ಮೊಟ್ಟ ಮೊದಲ ಸಿನಿಮಾ. ಜತೆಗೆ ದಕ್ಷಿಣ ಭಾರತದಲ್ಲೇ ಆ ರೀತಿ ಪ್ರಯತ್ನದ ಮೊದಲ ಚಿತ್ರ ಎಂಬ ಖ್ಯಾತಿಯನ್ನೂ ಪಡೆದುಕೊಂಡಿತ್ತು. ಈ ಐದು ಕಥೆಗಳನ್ನು ನಿರ್ದೇಶಕ ಗಿರೀಶ್‌ ಚಿಕ್ಕದಾಗಿ ಚೊಕ್ಕವಾಗಿ ಎಲ್ಲಿಯೂ ಬೋರ್‌ ಹೊಡೆಸದಂತೆ ಹೇಳಿರುವುದರ ಜತೆಗೆ ಸೀಟಿನ ತುದಿಗೆ ಕೂರಿಸುವಂತೆ ಚಿತ್ರಕಥೆ ಬರೆದು ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಕೊನೆಯ ಹದಿನೈದು ನಿಮಿಷಗಳು ಚಿತ್ರದ ಹೈಲೈಟ್‌. ಗಿರೀಶ್‌ ನಿರ್ದೇಶನದ ಜತೆಯಲ್ಲಿ ಉಪಕಥೆಯೊಂದರಲ್ಲಿ ನಾಯಕರಾಗಿಯೂ ನಟಿಸಿ ಗಮನ ಸೆಳೆಯುತ್ತಾರೆ - ಹರೀಶ್ ಬಸವರಾಜ್

    Ondh Kathe Hella - Times of India

    Ondh Kathe Hella - Times of India

    Director Girish G has decided to do an anthology of horror tales - a concept that hasn't been often explored in Sandalwood. This film tries to mix different styles of thriller tales that have been woven together by one thread. What works for the film is that it stays clear from the gimmicks and tropes used in horror films. At the same time, the scary quotient in the film is relatively less, which can work in both ways - Sunayana Suresh

    English summary
    Kannada Movie 'Ond Kathe Hella' has received good response from the critics.
    Saturday, March 9, 2019, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X