»   » 'ಪಾದರಸ'ನ ಚೆಲ್ಲಾಟಗಳನ್ನು ನೋಡಿ ವಿಮರ್ಶಕರು ಏನಂದರು.?

'ಪಾದರಸ'ನ ಚೆಲ್ಲಾಟಗಳನ್ನು ನೋಡಿ ವಿಮರ್ಶಕರು ಏನಂದರು.?

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ನಾನು ಅವನಲ್ಲ ಅವಳು' ಸಿನಿಮಾದಲ್ಲಿ ಮಂಗಳಮುಖಿಯಾಗಿ, '6ನೇ ಮೈಲಿ' ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ, 'ಕೃಷ್ಣ ತುಳಸಿ' ಸಿನಿಮಾದಲ್ಲಿ ಕುರುಡನಾಗಿ... ಹೀಗೆ ಒಂದೊಂದು ಸಿನಿಮಾದಲ್ಲಿ ಒಂದೊಂದು ವಿಭಿನ್ನ ಪಾತ್ರ ಪೋಷಿಸುತ್ತಾ ಬರುತ್ತಿರುವ ನಟ ಸಂಚಾರಿ ವಿಜಯ್ 'ಪಾದರಸ' ಸಿನಿಮಾದಲ್ಲಿ ಪ್ಲೇ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.

  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ 'ಪಾದರಸ' ಸಿನಿಮಾ ಬಿಡುಗಡೆ ಆಗಿದೆ. ಹೃಷಿಕೇಶ್ ಜಂಬಗಿ ನಿರ್ದೇಶನ ಮಾಡಿರುವ 'ಪಾದರಸ' ಸಿನಿಮಾ ಹರೆಯದ ಹುಡುಗರಿಗೆ ಇಷ್ಟ ಆಗಿದೆ.

  ಕಾಮಿಡಿ, ಟ್ರಾಜೆಡಿ... ಎಲ್ಲದರ ಮಿಶ್ರಣವಾಗಿರುವ 'ಪಾದರಸ' ಸಿನಿಮಾ ನೋಡಿದ ವಿಮರ್ಶಕರು ಏನಂದರು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಪಾದರಸ' ಸಿನಿಮಾದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ನೋಡಿರಿ...

  ಆಟ, ಚೆಲ್ಲಾಟಗಳ ಸಿನಿಮಾ: ವಿಜಯ ಕರ್ನಾಟಕ

  ಚಿತ್ರದ ಬಹುತೇಕ ಭಾಗ ಪಾದರಸನ ಆಟಗಳು, ಚೆಲ್ಲಾಟಗಳಿಂದ ಕೂಡಿದೆ. ಎಷ್ಟು ಅತಿರೇಕಕ್ಕೆ ಇದು ಹೋಗುತ್ತದೆ ಎಂದರೆ ನೋಡುವವರಿಗೆ ಪಾದರಸನ ಕ್ಯಾರೆಕ್ಟರ್‌ ಬಹಳ ಕಿರಿಕಿರಿಯನ್ನುಂಟು ಮಾಡುತ್ತದೆ. ಇಲ್ಲಿ ಸಂಚಾರಿ ವಿಜಯ್‌ ಪಾತ್ರ ಪೂರ್ಣ ನೆಗೆಟಿವ್‌. ಪ್ರಮುಖವಾಗಿ ಕೆಲ ಘಟನೆಗಳು ಪ್ರೇಕ್ಷಕನಿಗೆ ಚಿತ್ರಮಂದಿರದಿಂದ ಎದ್ದು ಹೋಗಬೇಕು ಎನ್ನಿಸುವಷ್ಟು ಕಿರಿಕಿರಿ ಉಂಟು ಮಾಡುತ್ತವೆ. ಆದರೆ, ಕೊನೆಯಲ್ಲಿ ಇದಕ್ಕೆ ಅರ್ಥವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಸಫಲರಾಗಿದ್ದಾರೆ - ಪದ್ಮಾ ಶಿವಮೊಗ್ಗ

  ವಿಮರ್ಶೆ : 'ಪ್ಲೇ ಬಾಯ್ ಪಾದರಸ' ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ!

  ಸರಸ+ವಿರಸ=ಪಾದರಸ - ಉದಯವಾಣಿ

  ಬಹುಶಃ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಿಟ್ಟರೆ, ಚಿತ್ರದಲ್ಲಿ ವಿಶೇಷವೇನಿಲ್ಲ. ಇದುವರೆಗೂ ಮಾಡದಂತಹ ಒಂದು ವಿಭಿನ್ನ ಪಾತ್ರದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಅದು ಅವರಿಗೆ ಸ್ವಲ್ಪ ಹೆಚ್ಚಾದಂತೆ ಕಾಣುತ್ತದೆ. ಆದರೂ ವಿಜಯ್‌ ತಮ್ಮ ಶಕ್ತಿಮೀರಿ, ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಒದ್ದಾಡಿದ್ದಾರೆ. ಇದೊಂದು ಅಂಶ ಬಿಟ್ಟರೆ, ಚಿತ್ರದಲ್ಲಿ ಹೊಸತನವಾಗಲೀ, ವಿಶೇಷತೆಗಳಾಗಲೀ ಕಡಿಮೆಯೇ - ಚೇತನ್ ನಾಡಿಗೇರ್

  ಇದು ಪಾದರಸ, ಬರಿಯ ಕಸ, ಕೊನೆಗೆ ವಿಧಿವಶ - ಪ್ರಜಾವಾಣಿ

  ತೆರೆಯ ಮೇಲೆ ಪಾದರಸನ ಚೇಷ್ಟೆಗಳು ಬಹುಬೇಗ ಬೇಸರ ಹುಟ್ಟಿಸುತ್ತವೆ. ಹಲವು ಬಾರಿ ಕ್ರೌರ್ಯದ ಗಡಿ ದಾಟುವ ಅವನ ವರ್ತನೆಗಳಿಗೂ ಕೊನೆಯಲ್ಲಿ ನೀಡುವ ಸಮಜಾಯಿಷಿಗೂ ಹೊಂದಾಣಿಕೆಯೇ ಆಗುವುದಿಲ್ಲ. ಖುಷಿಯಾಗಿರುವುದು ಅಥವಾ ನೋವನ್ನು ಮರೆಯುವುದಕ್ಕೆ ದುಶ್ಚಟಗಳಿಗೆ ದಾಸರಾಗುವುದೊಂದೇ ಮಾರ್ಗ ಎಂದು ನಿರ್ದೇಶಕರು ಹೇಳಹೊರಟಿದ್ದಾರೆಯೇ ಎಂಬ ಅನುಮಾನವೂ ಹುಟ್ಟುತ್ತವೆ - ಪದ್ಮನಾಭ ಭಟ್

  Padarasa Movie - Times of India

  This film has a mixture of elements, such a humour, sorrow, misery and innocence. The first half of the film will leave you in splits, thanks to the hilarious content, while the second half is slightly more serious. Thanks to all these elements, this is a time-pass movie, making it a good watch for the weekend - Nithya Mandyam

  English summary
  Kannada Movie Padarasa has received mixed response from the critics. Here is the collection of Padarasa reviews from Top news papers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more