twitter
    For Quick Alerts
    ALLOW NOTIFICATIONS  
    For Daily Alerts

    ಥ್ರಿಲ್ಲಿಂಗ್ ಸಿನಿಮಾ 'ತ್ರಾಟಕ' ನೋಡಿದ್ಮೇಲೆ, ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?

    By Harshitha
    |

    ಪಕ್ಕಾ ಕ್ರೈಂ ಥ್ರಿಲ್ಲರ್ ಚಿತ್ರವಾಗಿರುವ 'ತ್ರಾಟಕ' ರಾಜ್ಯಾದ್ಯಂತ ಬಿಡುಗಡೆ ಆಗಿದೆ. ರೋಚಕ ಅಂಶಗಳನ್ನು ಹೊಂದಿರುವ 'ತ್ರಾಟಕ' ಚಿತ್ರಕ್ಕೆ ಒಳ್ಳೆಯ ಓಪನ್ನಿಂಗ್ ಕೂಡ ಲಭಿಸಿದೆ. ರಾಹುಲ್ ಐನಾಪುರ್, ಹೃದಯ ಅವಂತಿ, ಅಜಿತ್ ಜಯರಾಜ್ ಮುಂತಾದವರು ಅಭಿನಯಿಸಿರುವ 'ತ್ರಾಟಕ' ಚಿತ್ರಕಥೆ ನಿಗೂಢ ಕೊಲೆಗಳ ತನಿಖೆಯ ಸುತ್ತ ಸಾಗುತ್ತದೆ.

    ಮೊದಲಾರ್ಧ ಕುಂಟುತ್ತಾ ಸಾಗುವ 'ತ್ರಾಟಕ' ದ್ವಿತೀಯಾರ್ಧದಲ್ಲಿ ವೇಗ ಪಡೆದುಕೊಳ್ಳುತ್ತದೆ. ಉತ್ತಮ ಮೇಕಿಂಗ್ ಹೊಂದಿರುವ 'ತ್ರಾಟಕ' ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಆದ್ರೆ, ವಿಮರ್ಶಕರಿಗೆ.?

    ಕೆಲವು ಕಡೆ ಲಾಜಿಕ್ ಮಿಸ್ ಆಗಿರುವುದರಿಂದ ವಿಮರ್ಶಕರು 'ತ್ರಾಟಕ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ತ್ರಾಟಕ' ಚಿತ್ರವನ್ನ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿವೆ, ನೋಡಿರಿ...

    ಸರಣಿ ಕೊಲೆ, ನಿಗೂಢ ಬಲೆಯ 'ತ್ರಾಟಕ' : ಪ್ರಜಾವಾಣಿ

    ಸರಣಿ ಕೊಲೆ, ನಿಗೂಢ ಬಲೆಯ 'ತ್ರಾಟಕ' : ಪ್ರಜಾವಾಣಿ

    ಕಥೆಗೆ ಲಯ ಸಿಗುವುದೇ ದ್ವಿತೀಯಾರ್ಧದಲ್ಲಿ. ಕೊಲೆಗಾರ ಯಾರು ಎನ್ನುವ ಗುಟ್ಟನ್ನು ಕೊನೆಯವರೆಗೂ ನಿರ್ದೇಶಕರು ಬಿಟ್ಟುಕೊಡುವುದಿಲ್ಲ. ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಲ್ಲಿ ನಿರ್ದೇಶಕರು ಬಳಸಿರುವ ತಂತ್ರಗಾರಿಕೆ ಮೆಚ್ಚುಗೆ ಆಗುತ್ತದೆ. ದೇವ್ ನ ಇಬ್ಬರು ಸ್ನೇಹಿತರಲ್ಲಿ ಒಬ್ಬ ಈ ಕೊಲೆಗಳನ್ನು ಮಾಡಿರುತ್ತಾನೆ. ಆತ ಏಕೆ ಈ ಕೃತ್ಯ ಎಸಗುತ್ತಾನೆ ಎನ್ನುವುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು. ರಾಹುಲ್ ಐನಾಪುರ ಇನ್ನಷ್ಟು ಪ್ರಖರವಾಗಿ ಪಾತ್ರಕ್ಕೆ ಜೀವ ತುಂಬುವ ಅವಕಾಶವನ್ನು ಕೈಚೆಲ್ಲಿದ್ದಾರೆ - ಕೆ.ಎಚ್.ಓಬಳೇಶ್

    'ತ್ರಾಟಕ' ವಿಮರ್ಶೆ : ಅವರ್ ಬಿಟ್.. ಇವರ್ ಬಿಟ್.. ಇವರ್ಯಾರು?'ತ್ರಾಟಕ' ವಿಮರ್ಶೆ : ಅವರ್ ಬಿಟ್.. ಇವರ್ ಬಿಟ್.. ಇವರ್ಯಾರು?

    ರಹಸ್ಯ ಬೇಧಿಸಲು ಮೂರನೆಯ ಕಣ್ಣು ತೆರೆಯಿರಿ : ಉದಯವಾಣಿ

    ರಹಸ್ಯ ಬೇಧಿಸಲು ಮೂರನೆಯ ಕಣ್ಣು ತೆರೆಯಿರಿ : ಉದಯವಾಣಿ

    "ತ್ರಾಟಕ' ಒಂದು ಕ್ರೈಮ್ ಥ್ರಿಲ್ಲರ್‌. ಜೊತೆಗೆ ಮರ್ಡರ್ ಮಿಸ್ಟರಿ ಬೇರೆ. ಸಾಮಾನ್ಯವಾಗಿ ಮರ್ಡರ್ ಮಿಸ್ಟ್ರಿ ಚಿತ್ರಗಳಲ್ಲಿ ಕೊಲೆಗಳಾಗುತ್ತಾ ಹೋಗುತ್ತವೆ ಮತ್ತು ಒಬ್ಬ ತನಿಖಾಧಿಕಾರಿ ತನಿಖೆ ಮಾಡುತ್ತಾ ಹೋಗುತ್ತಾನೆ.

    ಆದರೆ, ತನಿಖಾಧಿಕಾರಿಯೇ ಆ ಕೊಲೆಗಳ ಹಿಂದಿದ್ದರೆ? ಹಾಗಂತ ಅವನೇ ಕೊಲೆಗಾರ ಇರಬಹುದು ಎಂಬ ತೀರ್ಮಾನಕ್ಕೆ ಬರುವುದು ಕಷ್ಟ. ಇಲ್ಲಿ ಇನ್ನೂ ಒಂದಿಷ್ಟು ಕಾಣದ ಕೈಗಳಿವೆ. ಆದರೆ, ಆ ಕಾಣದ ಕೈ ಯಾರದ್ದು ಅಂತ ಗೊತ್ತಾಗಬೇಕಿದ್ದರೆ, ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ಕಾಯಬೇಕು. ಅಲ್ಲಿಯವರೆಗೂ ಶಿವಗಣೇಶ್, ಕೊಲೆಗಾರ ಯಾರು ಎಂದು ಹೇಳದೆ ಕೊನೆಯವರೆಗೂ ಸತಾಯಿಸಿಸುತ್ತಾರೆ. ಆ ಮಟ್ಟಿಗಿನ ಒಂದು ಚಿತ್ರಕಥೆ ಮಾಡಿಕೊಂಡಿದ್ದಾರೆ ನಿರ್ದೇಶಕ ಶಿವಗಣೇಶ್.

    ಮೊದಲರ್ಧ ತ್ರಾಸದಾಯಕ, ಮಿಕ್ಕರ್ಧ ಬಹುರೋಚಕ : ಕನ್ನಡ ಪ್ರಭ

    ಮೊದಲರ್ಧ ತ್ರಾಸದಾಯಕ, ಮಿಕ್ಕರ್ಧ ಬಹುರೋಚಕ : ಕನ್ನಡ ಪ್ರಭ

    ಮರ್ಡರ್ ಮಿಸ್ಟ್ರಿ ಸಿನಿಮಾಗಳಲ್ಲಿ ಪತ್ತೇದಾರಿಕೆಯ ನಿರೂಪಣಾ ಶೈಲಿಯೇ ಮುಖ್ಯ. ಹಾಡು, ಸಂಗೀತ, ಕ್ಯಾಮರಾಗಳಾಚೆ ಗಟ್ಟಿಯಾದ ನಿರೂಪಣೆಯೊಂದಿಗೆ ಅದು ಎಷ್ಟರಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಬಲ್ಲದು ಎನ್ನುವುದರ ಮೇಲೆ ಆ ಸಿನಿಮಾದ ಹಣೆಬರಹ ಡಿಸೈಡ್ ಆಗುತ್ತೆ. ಸದ್ಯಕ್ಕೀಗ ಪ್ರೇಕ್ಷಕರ ಪಾಲಿಗೆ ಅಂಥದ್ದೊಂದು ಥ್ರಿಲ್ ತ್ರಾಟಕದಲ್ಲೂ ಇದೆ. ಆದ್ರೆ, ಫಸ್ಟ್ ಹಾಫ್ ಬೋರು, ಸೆಕೆಂಡ್ ಹಾಫ್ ಜೋರು. ಸೆಕೆಂಡ್ ಹಾಫ್ ನ ಥ್ರಿಲ್ಲಿಂಗ್ ಅನುಭವ ಕಾಣಬೇಕಾದ್ರೆ, ಮೊದಲಾರ್ಧದ ತ್ರಾಸಿನ ಪಯಣ ಸವೆಸಲೇಬೇಕು - ದೇಶಾದ್ರಿ ಹೊಸ್ಮನೆ.

    Trataka Movie Review - Times of India

    Trataka Movie Review - Times of India

    Trataka is a spiritual practice that allows one to align the senses well enough to awaken and open the 'third eye'. But for a passing mention in the second half, one wonders the significance of the title as even metaphorically it doesn't fit. Leaving that aside, the film has an interesting murder thriller plot and has been shot stylistically. The film, though, ends up seeming a tad too long with unwanted elements like an item song - Sunayana Suresh

    English summary
    Kannada Movie Trataka has received mixed response from the critics. Here is the collection of Trataka reviews from Top news papers.
    Sunday, September 2, 2018, 12:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X