For Quick Alerts
  ALLOW NOTIFICATIONS  
  For Daily Alerts

  ಪಕ್ಕಾ ಕಮರ್ಷಿಯಲ್ 'ವಾಸು' ನೋಡಿದ ವಿಮರ್ಶಕರು ಏನಂದರು.?

  By Harshitha
  |

  'ಅಕಿರ' ಸಿನಿಮಾದ ಬಳಿಕ ನಟ ಅನೀಶ್ ತೇಜೇಶ್ವರ್ ಅಭಿನಯಿಸಿರುವ ಚಿತ್ರವೇ 'ವಾಸು ನಾನ್ ಪಕ್ಕಾ ಕಮರ್ಷಿಯಲ್'. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್ ಟೇನರ್.

  ಮನರಂಜನೆಗೆ ಬೇಕಾದ ಎಲ್ಲಾ ಕಮರ್ಷಿಯಲ್ ಅಂಶಗಳೂ ಈ ಸಿನಿಮಾದಲ್ಲಿವೆ. ಹೀಗಾಗಿ ಇದು ಮಾಸ್ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುವ ಚಿತ್ರ. 'ವಾಸು'ವಿನ ಕಮರ್ಷಿಯಲ್ ಲವ್ ಸ್ಟೋರಿ ನೋಡಿ ಪ್ರೇಕ್ಷಕರಂತೂ ಜೈಕಾರ ಹಾಕಿದ್ದಾರೆ.

  ಆದ್ರೆ, ವಿಮರ್ಶಕರ ಪ್ರಕಾರ ಈ ಸಿನಿಮಾ ಹೇಗಿದೆ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರವನ್ನ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ...

  ಕಮರ್ಷಿಯಲ್ ಹುಡುಗನ ಫೀಲಿಂಗ್ ಸ್ಟೋರಿ: ಉದಯವಾಣಿ

  ಕಮರ್ಷಿಯಲ್ ಹುಡುಗನ ಫೀಲಿಂಗ್ ಸ್ಟೋರಿ: ಉದಯವಾಣಿ

  ಒಂದು ಕಮರ್ಷಿಯಲ್ ಸಿನಿಮಾ ಹೇಗಿರಬೇಕೋ ಹಾಗಿದೆ 'ವಾಸು'ವಿನ ಕಥೆ. ಒಂದು ಮಧ್ಯಮ ವರ್ಗದ ಸುಖೀ ಕುಟುಂಬದೊಂದಿಗೆ ತೆರೆದುಕೊಳ್ಳುವ ಸಿನಿಮಾ, ನಾಯಕನ ಫ್ರೆಂಡ್ಸ್, ಬಿಲ್ಡಪ್, ಲವ್‌, ಸಾಂಗ್ ... ಹೀಗೆ ಸಾಗುತ್ತದೆ. ಮೊದಲೇ ಹೇಳಿದಂತೆ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನೇನೂ ನಿರೀಕ್ಷಿಸಬಹುದೋ ಅವೆಲ್ಲವೂ ವಾಸುವಿನಲ್ಲಿ ಇದೆ. ಆ ಕಾರಣದಿಂದ ಮಾಸ್‌ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗಬಹುದು.

  ಅದು ಬಿಟ್ಟು, ಸಿನಿಮಾದಲ್ಲೊಂದು ಗಟ್ಟಿಕಥೆ ಬೇಕು, ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಸಿನಿಮಾವಾಗಿರಬೇಕು, ಕಥೆ ತುಂಬಾನೇ ಅಪ್‌ಡೇಟ್‌ ಆಗಿರಬೇಕು ಎಂದರೆ ನಿಮಗೆ 'ವಾಸು' ಅಷ್ಟೊಂದು ರುಚಿಸೋದು ಕಷ್ಟ. ಇಲ್ಲಿ ಹೇಳಿಕೊಳ್ಳುವಂತಹ ಗಟ್ಟಿಕಥೆಯಿಲ್ಲ. ಇಡೀ ಸಿನಿಮಾದಲ್ಲಿ ಇರೋದು ಒನ್ ಲೈನ್‌ ಕಥೆ. ಅದು ಲವ್‌ ಟ್ರ್ಯಾಕ್‌. ಅದನ್ನು ಬೆಳೆಸಿಕೊಂಡು ಹೋಗಿದ್ದಾರೆ. ಹಾಗಾಗಿ, ಇಲ್ಲಿ ಕಥೆಗಿಂತ ಸನ್ನಿವೇಶಗಳ ಮೂಲಕ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು - ರವಿಪ್ರಕಾಶ್ ರೈ

  ವಿಮರ್ಶೆ : ಪಕ್ಕಾ ಕಮರ್ಷಿಯಲ್ ಪ್ರೀತಿ ಪಾಠ ಹೇಳಿದ ವಾಸು

  ವಾಸು ಪಕ್ಕಾ ಮಾಸ್: ಕನ್ನಡ ಪ್ರಭ

  ವಾಸು ಪಕ್ಕಾ ಮಾಸ್: ಕನ್ನಡ ಪ್ರಭ

  ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಲವ್, ಸೆಂಟಿಮೆಂಟ್, ರೊಮ್ಯಾನ್ಸ್, ಆಕ್ಷನ್ ಎನ್ನುವ ಎಲ್ಲಾ ಕಮರ್ಷಿಯಲ್ ಅಂಶಗಳು ಇಲ್ಲಿವೆ. ಆ ಮೂಲಕ ಮನರಂಜನೆಯ ಭರ್ಜರಿ ಮಸಾಲೆ ಇಟ್ಟುಕೊಂಡು ತೆರೆ ಮೇಲೆ ಹೊಸದೊಂದು ಕತೆಯಲ್ಲಿ ಕಾಣಿಸಿಕೊಂಡಿದ್ದಾರೆ ಅನೀಶ್, ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾದಲ್ಲಿ ಅನೀಶ್ ಲುಕ್, ಆಕ್ಟಿಂಗ್ ಖದರ್ ಎರಡು ಬೇರೆಯದ್ದೇ ರೀತಿಯಲ್ಲಿವೆ. ಲವ್ ಬ್ರೇಕಪ್ ಕತೆಗಳು ಹೊಸದಲ್ಲದಿದ್ದರೂ, ಆ ಬ್ರೇಕಪ್ ಹಿಂದಿನ ಅಸಲಿಯತ್ತು ಏನು ಅನ್ನೋದನ್ನು ಪ್ರೇಕ್ಷಕನಿಗೆ ಗಾಢವಾಗಿ ತಟ್ಟುವ ಹಾಗೆ ನಿರ್ದೇಶಕರು ರೋಚಕವಾಗಿಯೇ ತೆರೆಗೆ ತಂದಿದ್ದಾರೆ. ನಿರೂಪಣೆಯೂ ಸಂಭಾಷಣೆಯೂ ಜೋರಾಗಿದೆ - ದೇಶಾದ್ರಿ ಹೊಸ್ಮನೆ

  ವಾಸು ಪಕ್ಕಾ ಕಮರ್ಶಿಯಲ್ ಸಿನಿಮಾ: ವಿಶ್ವವಾಣಿ

  ವಾಸು ಪಕ್ಕಾ ಕಮರ್ಶಿಯಲ್ ಸಿನಿಮಾ: ವಿಶ್ವವಾಣಿ

  ಚಿತ್ರದಲ್ಲಿ ನಾಯಕ ನಟ ಅನೀಶ್ ತೇಜೇಶ್ವರ್ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಈಗಾಗಲೇ ಸಾಮಾನ್ಯರ ಜೀವನಕ್ಕೆ ಹತ್ತಿರ ಎನ್ನಿಸುವ ಕಥೆಗಳಲ್ಲಿ ನಟಿಸಿ ಅಭ್ಯಾಸ ಇರುವ ಅನೀಶ್, ವಾಸು ಪಾತ್ರವನ್ನು ಸುಲಭವಾಗಿ ನಿಭಾಯಿಸಿದ್ದಾರೆ. ಇನ್ನು ನಾಯಕಿಯಾಗಿ ಕಾಣಿಸಿಕೊಂಡಿರುವ ನಿಶ್ವಿಕಾ ನಾಯ್ಡು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಾಯಕಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಕ್ ಶೆಟ್ಟಿ ಅಭಿನಯ ಚೆನ್ನಾಗಿದೆ. ನಾಯಕನನ್ನು ಒಂದು ಬಾರಿ ಆದರೂ ಸೋಲಿಸಬೇಕು ಎನ್ನುವ ಹಠ ಮಾಡುವ ಪಾತ್ರದಲ್ಲಿ ನಿರಂಜನ್ ಅಭಿನಯ ಚೆನ್ನಾಗಿದ್ದು ಚಿತ್ರದ ಇಬ್ಬರೂ ಖಳನಾಯಕರ ಅಭಿನಯ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತದೆ.

  Vasu Naan Pakka commercial review: Times of India

  Vasu Naan Pakka commercial review: Times of India

  The film has its good moments and these draw whistles, too. But the end could have been propelled with greater zing, given how the film is flirting with the commercial cinema territory, but ends up shortchanged for a simple conventional climax. Anish Tejeshwar excels as Vaasu, with his dances and flamboyance, and Nishvika Naidu matches him every bit in her feisty characterisation - Sunayana Suresh

  English summary
  Kannada Movie Vasu Naan Pakka commercial has received mixed response from the critics. Here is the collection of Vasu Naan Pakka commercial reviews from Top news papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X