For Quick Alerts
  ALLOW NOTIFICATIONS  
  For Daily Alerts

  ಕಾಂತಾರ ಹಿಟ್ಟಾ ಫ್ಲಾಪಾ? ನಿರ್ದೇಶಕ ರಿಷಬ್ ಶೆಟ್ಟಿಯನ್ನು ನಂಬಿ ಹೋದೆ ಆದ್ರೆ..? ಚಿತ್ರ ನೋಡಿದ ಪ್ರೇಕ್ಷಕ ಹೇಳಿದ್ದಿಷ್ಟು

  |

  ಇಂದಿನಿಂದ ( ಸೆಪ್ಟೆಂಬರ್ 30 ) ರಾಜ್ಯಾದ್ಯಂತ ಕಾಂತಾರ ಚಿತ್ರದ ಕಂಬಳದ ಓಟ ಆರಂಭಗೊಂಡಿದೆ. ಕರ್ನಾಟಕದ ಕರಾವಳಿ ಭಾಗದ ಪ್ರಮುಖ ಆಚರಣೆಯಾದ ಕೋಲಾ ಹಾಗೂ ದೈವ ನರ್ತನದ ಕುರಿತ ಮಾಹಿತಿಯನ್ನು ಕಾಂತಾರದ ಮೂಲಕ ತಿಳಿಸಿರುವ ರಿಷಬ್ ಶೆಟ್ಟಿ ಈ ಬಾರಿಯೂ ಸಹ ಸಿಕ್ಸರ್ ಬಾರಿಸಿದ್ದಾರೆ.

  ಇನ್ನು ಕಾಂತಾರ ಚಿತ್ರ ಇಂದು ಬಿಡುಗಡೆಯಾಗಿದ್ದರೆ ನಿನ್ನೆಯೇ ರಾಜ್ಯದ ವಿವಿಧ ನಗರಗಳು ಹಾಗೂ ಪಟ್ಟಣಗಳಲ್ಲಿ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಪ್ರೇಕ್ಷಕರು ಸಹ ಈ ಪೇಯ್ಡ್ ಪ್ರಿಮಿಯರ್ ಶೋಗಳ ಮೂಲಕ ಕಾಂತಾರ ದರ್ಶನವನ್ನು ಒಂದು ದಿನ ಮುಂಚಿತವಾಗಿಯೇ ಮಾಡಿದ್ದಾರೆ.

  ಹೀಗೆ ಕಾಂತಾರ ಪ್ರೀಮಿಯರ್ ಶೋ ನೋಡಿದ ನಟಿ ಮೋಹಕತಾರೆ ರಮ್ಯಾ ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ತನ್ನ ಗೆಳೆಯನ ಚಿತ್ರವನ್ನ ಕಣ್ತುಂಬಿಕೊಂಡ ರಕ್ಷಿತ್ ಶೆಟ್ಟಿ ಇದು ಎಂದಿಗೂ ಸಹ ನೆನಪಿನಲ್ಲಿ ಉಳಿಯುವಂತಹ ಚಿತ್ರವಾಗಲಿದೆ ಹಾಗೂ ಪ್ರೇಕ್ಷಕರಿಗೆ ಈ ಚಿತ್ರ ಖಡಾಖಂಡಿತವಾಗಿ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೀಗೆ ಕಾಂತಾರ ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬ ಸೆಲೆಬ್ರಿಟಿಯೂ ಸಹ ಚಿತ್ರ ಸೂಪರ್ ಎಂಬ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸುತ್ತಿದ್ದು, ಚಿತ್ರ ನೋಡಿದ ಸಾಮಾನ್ಯ ಪ್ರೇಕ್ಷಕ ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾನೆ ಎಂಬುದರ ಕುರಿತ ವಿವರ ಕೆಳಕಂಡಂತಿದೆ.

  ನಿರ್ದೇಶಕ ರಿಷಬ್ ಶೆಟ್ಟಿಯನ್ನು ನಂಬಿ ಹೋದೆ

  ನಿರ್ದೇಶಕ ರಿಷಬ್ ಶೆಟ್ಟಿಯನ್ನು ನಂಬಿ ಹೋದೆ

  ರಾಜಶೇಖರ್ ಎಂಬ ಸಿನಿ ಪ್ರೇಕ್ಷಕನೋರ್ವ ಕಾಂತಾರ ಚಿತ್ರ ವೀಕ್ಷಿಸಿದ ನಂತರ ತನ್ನ ಮನದಾಳದ ವಿಮರ್ಶೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ನಂಬಿ ಕಾಂತಾರಾ ಚಿತ್ರದ ಪ್ರೀಮಿಯರ್ ಶೋ ನೋಡಲು ಹೊರಟೆ, ಆದರೆ ಬರುವಾಗ 'ನಟ ರಿಷಬ್ ಶೆಟ್ಟಿ'ಯ ಅಭಿಮಾನಿಯಾಗಿ ಹೊರಬಂದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆ ಅತ್ಯದ್ಭುತ ಎಂಬುದನ್ನು ತಿಳಿಸಿದ್ದಾರೆ. ಪ್ರತಿಯೊಬ್ಬರ ಹಾಗೆ ಇವರೂ ಕೂಡ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ಕುರಿತು ಬರೆದುಕೊಂಡಿದ್ದಾರೆ.

  2022ರ ಎಲ್ಲಾ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಲ್ಲಬೇಕು

  2022ರ ಎಲ್ಲಾ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಲ್ಲಬೇಕು

  ಕರಾವಳಿ ಭಾಗದ ಸಂಸ್ಕೃತಿ ಮತ್ತು ಆಚರಣೆಯ ಕುರಿತು ಮೂಡಿಬಂದಿರುವ ಅತ್ಯದ್ಭುತ ಚಿತ್ರ ಕಾಂತಾರ ಎಂದು ಬರೆದುಕೊಂಡಿರುವ ಆಕಾಶ್ ಪಾಟೀಲ್ ಚಿತ್ರದ ಕಾಮಿಡಿ ಹಾಗೂ ಸಂಗೀತವನ್ನು ಹೊಗಳಿದ್ದಾರೆ ಮತ್ತು ಇವರೂ ಸಹ ಕೊನೆಯ ಇಪ್ಪತ್ತು ನಿಮಿಷಗಳನ್ನು ಹೊಗಳಿದ್ದು ರಿಷಬ್ ಶೆಟ್ಟಿ ಅಭಿನಯಕ್ಕೆ ಈ ವರ್ಷದ ಎಲ್ಲಾ ಪ್ರಶಸ್ತಿಗಳು ಸಲ್ಲಬೇಕು ಎಂದಿದ್ದಾರೆ.

  ಕಾಂತಾರ 5 ಸ್ಟಾರ್ ಸಿನಿಮಾ

  ಕಾಂತಾರ 5 ಸ್ಟಾರ್ ಸಿನಿಮಾ

  ಪ್ರಜ್ವಲ್ ಶೆಟ್ಟಿ ಎಂಬ ನೆಟ್ಟಿಗನೋರ್ವ ಕಾಂತಾರ ಮಾಸ್ಟರ್‌ ಪೀಸ್ ಎಂದು ಬರೆದುಕೊಂಡಿದ್ದಾರೆ. 5 ಸ್ಟಾರ್ ಚಿತ್ರಕ್ಕೆ ಕಾಂತಾರ ಅತ್ಯುತ್ತಮ ಉದಾಹರಣೆ ಎಂದಿರುವ ಇವರು ರಿಷಬ್ ಶೆಟ್ಟಿ ಕ್ಲೈಮ್ಯಾಕ್ಸ್ ನಟನೆಯನ್ನು ಕೊಂಡಾಡಿದ್ದಾರೆ. ಚಿತ್ರದ ಪ್ರತಿ ದೃಶ್ಯವನ್ನೂ ನೋಡುತ್ತಿರುವಾಗಲೂ ನಾವು ಆ ಸ್ಥಳದಲ್ಲಿಯೇ ಇದ್ದೇವೆ ಎಂದು ಭಾಸವಾಗುತ್ತದೆ ಚಿತ್ರ ಶುರುವಾದ 5 ನಿಮಿಷಗಳಲ್ಲಿಯೇ ನಾವು ಕಾಂತಾರ ಲೋಕಕ್ಕೆ ಪ್ರವೇಶಿಸಿ ಬಿಟ್ಟಿರುತ್ತೇವೆ ಎಂದು ಬರೆದುಕೊಂಡಿದ್ದಾರೆ.

  ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂ ಹುಡುಕುವುದು ಕಷ್ಟ!

  ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂ ಹುಡುಕುವುದು ಕಷ್ಟ!

  ಇನ್ನು ಕಾಂತಾರ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದ ಯಾವುದೇ ವೇದಿಕೆಯಲ್ಲಿ ಹುಡುಕಿದರೂ ಸಹ ನೆಗೆಟಿವ್ ವಿಮರ್ಶೆಯನ್ನು ಪತ್ತೆ ಹಚ್ಚುವುದು ತೀರಾ ಕಷ್ಟದ ಕೆಲಸ. ಕಾಂತಾರದ ಯಾವುದೇ ವಿಮರ್ಶೆ ತೆಗೆದುಕೊಂಡರೂ ಸಹ ಎಲ್ಲರೂ ಚಿತ್ರವನ್ನ ಹಾಡಿ ಹೊಗಳಿ ಕೊಂಡಾಡುವವರೇ. ಒಂದು ಚಿತ್ರ ನಿರೀಕ್ಷೆಗೂ ಮೀರಿ ಗೆಲುವನ್ನು ಸಾಧಿಸಿದೆ ಎಂಬುದನ್ನು ಹೇಳಲು ಇದಕ್ಕಿಂತ ಇನ್ನೇನು ಬೇಕು? ಇದು ರಿಶಬ್ ಶೆಟ್ಟಿಗೆ ಮತ್ತೊಂದು ಹಿಟ್ ಹೊಂಬಾಳೆಗೂ ಮತ್ತೊಂದು ಹಿಟ್.

  English summary
  Rishab Shetty starrer Kantara movie twitter review. Take a look
  Friday, September 30, 2022, 14:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X