For Quick Alerts
  ALLOW NOTIFICATIONS  
  For Daily Alerts

  ಸಮಂತಾ ಹೊಸ ಸಿನಿಮಾ 'ಯಶೋಧ' ಹಿಟ್ಟಾ ಫ್ಲಾಪಾ? ಚಿತ್ರ ನೋಡಿದವರು ಹೇಳಿದ್ದಿಷ್ಟು

  |

  ಏ ಮಾಯಾ ಚೇಸಾವೆ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ನಟಿ ಸಮಂತಾ ರುಥ್ ಪ್ರಭು ಚಿತ್ರರಂಗದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ನಟ ನಾಗಚೈತನ್ಯ ಅವರನ್ನು ವಿವಾಹವಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ನಟಿ ಸಮಂತಾ ವಿಚ್ಛೇದನ ಹೊಂದಿ ವಿವಾದಕ್ಕೊಳಗಾಗಿ ಮತ್ತೆ ಚಿತ್ರಗಳಲ್ಲಿ ಅಭಿನಯಿಸಲು ಆರಂಭಿಸಿ ಮೂರನೇ ಇನ್ನಿಂಗ್ಸ್‌ನ್ನೂ ಸಹ ಆರಂಭಿಸಿದ್ದಾರೆ.

  ವಿಚ್ಛೇದನದ ಬಳಿಕ ಪುಷ್ಪ ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ಸಮಂತಾ ತಮಿಳಿನಲ್ಲಿ ಕಾದುವಾಕುಲ ರೆಂಡು ಕಾದಲ್ ಎಂಬ ಚಿತ್ರದಲ್ಲಿ ಅಭಿನಯಿಸಿ ಅದರಲ್ಲೂ ಸಹ ಹಾಟ್ ಅವತಾರದಲ್ಲಿಯೇ ಕಾಣಿಸಿಕೊಂಡಿದ್ದರು. ವಿಚ್ಛೇದನದ ಬಳಿಕ ಸಮಂತಾ ಸಾಲು ಸಾಲು ಹಾಟ್ ಅವತಾರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳೂ ಸಹ ವ್ಯಕ್ತವಾಗಿದ್ದವು.

  ಹೀಗೆ ತನ್ನ ಸ್ಟಾರ್‌ಗಿರಿಯ ಉತ್ತುಂಗದಲ್ಲಿರುವಾಗಲೇ ಐಟಂ ಹಾಡಿಗೆ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದ್ದ ಸಮಂತಾ ರುಥ್ ಪ್ರಭು ಯಶೋಧಾ, ಶಾಕುಂತಲಂ ಹಾಗೂ ಖುಷಿ ರೀತಿಯ ಚಿತ್ರಗಳಲ್ಲಿ ಅಭಿನಯಿಸುತ್ತಿರುವುದನ್ನೂ ಸಹ ಘೋಷಿಸಿದ್ದರು. ಈ ಪೈಕಿ ಮೊದಲಿಗೆ ಯಶೋಧಾ ಚಿತ್ರ ಇಂದು ( ನವೆಂಬರ್ 11 ) ತೆರೆಗೆ ಅಪ್ಪಳಿಸಿದೆ. ಚಿತ್ರ ವೀಕ್ಷಿಸಿದ ಸಿನಿ ಪ್ರೇಕ್ಷಕರು ಚಿತ್ರ ಹೇಗಿದೆ ಎಂಬುದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ವೇದಿಕೆಯಲ್ಲಿ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

  ಟಾಲಿವುಡ್ ಕ್ವೀನ್ ಸಮಂತಾ ಎಂದ ಅಭಿಮಾನಿಗಳು

  ಟಾಲಿವುಡ್ ಕ್ವೀನ್ ಸಮಂತಾ ಎಂದ ಅಭಿಮಾನಿಗಳು

  ಮೊದಲಿಗೆ ನಿರ್ದೇಶಕರಾದ ಹರಿ ಶಂಕರ್ ಹಾಗೂ ಹರೀಶ್ ನಾರಾಯಣ್ ಯಶೋಧಾ ಮೂಲಕ ಸಮಂತಾ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಸೂಪರ್ ಸಕ್ಸಸ್ ಕಂಡಿರುವುದನ್ನು ಅಭಿಮಾನಿಗಳು ಮಾಡಿರುವ ಟ್ವೀಟ್‌ಗಳೇ ಹೇಳುತ್ತಿವೆ. ಚಿತ್ರ ವೀಕ್ಷಿಸಿದ ನಂತರ ಯಾವೊಬ್ಬ ಸಮಂತಾ ರುಥ್ ಪ್ರಭು ಅಭಿಮಾನಿಯೂ ಸಹ ಚಿತ್ರದ ಬಗ್ಗೆ ನೆಗೆಟಿವ್ ಮಾತನಾಡಿಲ್ಲ. ಇನ್ನು ಚಿತ್ರ ಮಾತ್ರವಲ್ಲದೇ ಈ ಚಿತ್ರದ ಮೂಲಕ ಸಮಂತಾ ಕ್ರೇಜ್ ಎಂಥದ್ದು ಎಂಬುದು ಸಾಬೀತಾಗಿದೆ, ಸಮಂತಾ ಟಾಲಿವುಡ್‌ನ ಕ್ವೀನ್ ಎಂದು ಸಮಂತಾ ಅಭಿಮಾನಿಗಳು ಗರ್ವದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

  ಚಿತ್ರ ಮೆಚ್ಚಿಕೊಂಡ ಕನ್ನಡ ಸಿನಿರಸಿಕ

  ಚಿತ್ರ ಮೆಚ್ಚಿಕೊಂಡ ಕನ್ನಡ ಸಿನಿರಸಿಕ

  ಇನ್ನು ಯಶೋಧಾ ಚಿತ್ರ ವೀಕ್ಷಿಸಿದ ನಂತರ ಕನ್ನಡ ಸಿನಿರಸಿಕರೊಬ್ಬರು ಚಿತ್ರದ ಕುರಿತು ಟ್ವೀಟ್ ಮಾಡಿದ್ದು 'ತುಂಬಾ ಒಳ್ಳೆಯ ಸಿನಿಮಾ, ಪ್ರತಿ ಮಹಿಳೆಗೂ ತಲುಪವಂತಹ ಚಿತ್ರ. ಸಮಂತಾ ಅವರಿಂದ ಎಂತಹ ಅತ್ಯದ್ಬುತ ಅಭಿನಯ' ಎಂದು ಬರೆದುಕೊಂಡಿದ್ದಾರೆ.

  ಪಕ್ಕಾ ತೆಲುಗು ಡೀಸೆಂಟ್ ಹಿಟ್

  ಪಕ್ಕಾ ತೆಲುಗು ಡೀಸೆಂಟ್ ಹಿಟ್

  ಚಿತ್ರ ವೀಕ್ಷಿಸಿದ ತಮಿಳು ಸಿನಿ ಪ್ರೇಮಿಯೊಬ್ಬ ಯಶೋಧಾ ವಿಮರ್ಶೆಯನ್ನು ಈ ರೀತಿ ಟ್ವೀಟ್ ಮಾಡಿದ್ದಾರೆ: ಇದೊಂದು ಸ್ಕೈ ಫೈ ಥ್ರಿಲ್ಲರ್, ಸರ್ರೋಗಸಿ ತಾಯ್ತತನದ ಗೀಳಿನ ಎಫೆಕ್ಟ್ ಅನ್ನು ಚೆನ್ನಾಗಿ ತೋರಿಸಿದ್ದಾರೆ. ಸಮಂತಾ ಅಚ್ಚುಕಟ್ಟಾಗಿ ನಟಿಸಿದ್ದಾರೆ, ತಾರಾಗಣ, ಕಂಟೆಂಟ್, ಸಾಹಸ, ಚಿತ್ರದ ರನ್‌ಟೈಮ್ ಹಾಗೂ ಹಿನ್ನೆಲೆ ಸಂಗೀತ ಸೂಪರ್, ಆದರೆ ಕೆಲವೆಡೆ ಲಾಜಿಕ್ ಹಾಗೂ ಎಮೋಷನಲ್ ದೃಶ್ಯಗಳು ಕೆಲಸ ಮಾಡಿಲ್ಲ, ಇದೊಂದು ಪಕ್ಕಾ ತೆಲುಗು ಚಿತ್ರ ಹಾಗೂ ಡೀಸೆಂಟ್ ವಿನ್ನರ್ ಎಂದು ಬರೆದುಕೊಂಡಿದ್ದಾರೆ.

  ತುಂಬಾ ದಿನಗಳ ನಂತರ ಒಳ್ಳೆ ಚಿತ್ರ; ಚಿತ್ರಮಂದಿರದಲ್ಲೇ ವೀಕ್ಷಿಸಿ

  ತುಂಬಾ ದಿನಗಳ ನಂತರ ಒಳ್ಳೆ ಚಿತ್ರ; ಚಿತ್ರಮಂದಿರದಲ್ಲೇ ವೀಕ್ಷಿಸಿ

  ಮತ್ತೋರ್ವ ಸಿನಿ ಪ್ರೇಮಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದು ಯಶೋಧಾ ಒಂದು ಅದ್ಭುತ ಚಿತ್ರ, ಇದನ್ನು ಚಿತ್ರಮಂದಿರಲ್ಲಿ ತಪ್ಪದೇ ನೋಡಿ, ಸಮಂತಾ ಹಾರ್ಡ್‌ವರ್ಕ್‌ಗೆ ಹ್ಯಾಟ್ಸ್ಆಫ್, ತುಂಬಾ ದಿನಗಳ ನಂತರ ಒಂದೊಳ್ಳೆ ಚಿತ್ರ ನೋಡಿದೆ ಎಂದು ಬರೆದುಕೊಂಡಿದ್ದಾರೆ.

  ಸದ್ಯ ಯಶೋಧಾ ಚಿತ್ರದ ಕುರಿತು ಚೆನ್ನಾಗಿದೆ, ಚಿತ್ರಮಂದಿರದಲ್ಲೇ ನೋಡಿ, ಮಿಸ್ ಮಾಡಿಕೊಳ್ಳಬೇಡಿ ಎಂಬ ಅಭಿಪ್ರಾಯಗಳೇ ಹೆಚ್ಚಾಗಿ ವ್ಯಕ್ತವಾಗುತ್ತಿದ್ದು ಚಿತ್ರದ ಬಗ್ಗೆ ನೆಗೆಟಿವ್ ಮಿಮರ್ಶೆ ಹೆಚ್ಚೇನೂ ಕಂಡುಬಂದಿಲ್ಲ.

  English summary
  Samantha Ruth Prabhu starrer Yashoda movie twitter review. Take a look.
  Friday, November 11, 2022, 15:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X