»   » 'ರಿಕ್ತ' ಚಿತ್ರದ ಮುಗ್ದ ದೆವ್ವಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

'ರಿಕ್ತ' ಚಿತ್ರದ ಮುಗ್ದ ದೆವ್ವಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

Posted By:
Subscribe to Filmibeat Kannada

ಸಂಚಾರಿ ವಿಜಯ್ ಅಭಿನಯದ 'ರಿಕ್ತ' ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ರೆಗ್ಯುಲರ್ ದೆವ್ವಗಳನ್ನ ನೋಡಿ ಬೆಚ್ಚಿಬೀಳುತ್ತಿದ್ದ ಪ್ರೇಕ್ಷಕರು, ಮುಗ್ದ ದೆವ್ವವನ್ನ ಕಂಡು ನಗುತ್ತಿದ್ದಾರೆ. ಹಾಗಾದ್ರೆ, 'ರಿಕ್ತ' ಚಿತ್ರದ ದೆವ್ವವನ್ನ ನೋಡಿ ವಿಮರ್ಶಕರು ಏನಂದ್ರು?

ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ರಿಕ್ತ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ

''ಪ್ರೇಮಿಗಳಿಗೆ ಅತಿರಿಕ್ತ: ದೆವ್ವಗಳಿಗೆ ವ್ಯತಿರಿಕ್ತ!'' - ವಿಜಯವಾಣಿ

''ಈ ದೆವ್ವಕ್ಕೆ ‘ಪ್ರಕೃತಿ' ಅಂದರೆ ಪಂಚಪ್ರಾಣ. ಯಾರನ್ನೂ ಹೆದರಿಸದೆ ತಾನೇ ಹೆದರಿಕೊಳ್ಳುವ ವಿಕೃತಿ ಇಲ್ಲದ ಈ ದೆವ್ವ, ಅಲ್ಲಲ್ಲಿ ಕಾಮಿಡಿ ಕಚಗುಳಿ ನೀಡುತ್ತೆ. ಮೊದಲ ಚಿತ್ರವಾದರೂ, ಮುಗುಳ್ನಗೆಯಲ್ಲೇ ಗೆಲ್ಲುತ್ತಾರೆ ಪುಟ್ಟಣ್ಣ ಕಣಗಾಲ್ ಕುಟುಂಬದ ಕುಡಿ ನಾಯಕಿ ವಾಗ್ದೇವಿ ಅದ್ವಿಕಾ. ಸಿನಿಮಾದಲ್ಲಿ ಮೊದಲು ಸೆಳೆಯೋದೇ ಸಂಚಾರಿ ವಿಜಯ್ ನಟನೆ. ಚಿತ್ರ ಪೂರ್ತಿ ಆವರಿಸಿಕೊಂಡಿರುವವರೂ ಅವರೇ. ಮುಗ್ಧ ಪ್ರೇಮಿಯಾಗಿ, ಕಷ್ಟಪಟ್ಟು ಪ್ರೀತಿ ನಿವೇದಿಸುವ ವಿಜಯ್ ಆಪ್ತರಾಗುತ್ತಾರೆ. ದೆವ್ವದ ಅವತಾರದಲ್ಲೂ ಸಹ್ಯ ಎನಿಸುತ್ತಾರೆ. ಸತ್ತಮೇಲೂ ಪ್ರೀತಿಸುತ್ತೇನೆ ಎನ್ನುವವರು ‘ಭೂತ'ಕಾಲದಿಂದ ವರ್ತಮಾನಕ್ಕೆ ಬರುವುದೇ ಸೋಜಿಗ. ನಿರ್ದೇಶಕ ಅಮೃತ್​ಕುಮಾರ್ ಕಥೆಯ ಆಯ್ಕೆಯಲ್ಲಿ ಗೆದ್ದಿದ್ದರೂ, ನಿರೂಪಣೆ ಪೇಲವ ಅನಿಸುತ್ತದೆ. ಅಸಲಿ ಕಥೆ ಆರಂಭವಾಗುವುದೇ ಸೆಕೆಂಡ್ ಹಾಫ್​ನಲ್ಲಾದರೂ, ಚಿತ್ರಕಥೆಯಲ್ಲಿ ಮತ್ತಷ್ಟು ಬಿಗು ಬೇಕಿತ್ತು. ಒಂದೇ ಲೊಕೇಷನ್​ನಲ್ಲಿ ಗಿರಿಗಿಟ್ಲೆ ಹೊಡೆಯೋ ಚಿತ್ರಕಥೆ ಕಿರಿಕಿರಿ. ಮತ್ತಿನ್ನೇನೋ ಆಗಬಹುದು ಅಂತ ಪ್ರೇಕ್ಷಕ ಊಹಿಸುವಂತೆ ಮಾಡಿ, ಕೆಲವೆಡೆ ಜಾಳುಜಾಳು ಎನಿಸುವಂತಿದೆ''- ವಿಜಯವಾಣಿ

''ಬೆಚ್ಚಿ ಬೀಳುವ ದೆವ್ವದ ಕಥಾ ಪ್ರಸಂಗ''-ವಿಜಯ ಕರ್ನಾಟಕ

''ರಿಕ್ತ' ಹಾರರ್ ಚಿತ್ರವಾದರೂ ಸೂತ್ರವನ್ನ ಮುರಿದು ಮೃದು ಸ್ವಭಾವದ ಭೂತದ ಪ್ರೀತಿಯನ್ನ ತೆರೆಗೆ ತರಲಾಗಿದೆ. ಇಲ್ಲಿಯವರೆಗೂ ದೆವ್ವವನ್ನು ನೋಡಿ ಜನ ಹೆದರುತ್ತಿದ್ದರು. ಈ ಚಿತ್ರದಲ್ಲಿ ಜನರನ್ನ ನೋಡಿ ದೆವ್ವ ಹೆದರುತ್ತದೆ. ನಿರ್ದೇಶಕ ಅಮೃತ್ ಕುಮಾರ್ ಗೆ ಇದು ಮೊದಲು ಚಿತ್ರ. ಕತೆಗೆ ಜೀವ ತುಂಬಲು ನಿರ್ದೇಶಕರು ಇನ್ನಷ್ಟು ಶ್ರಮ ಹಾಕಬೇಕಿತ್ತು ಎನಿಸಿದರೆ ಆಶ್ಚರ್ಯವಿಲ್ಲ. ಬೆಚ್ಚಿಬೀಳಿಸುತ್ತದೆ ಎಂದು ಸಿನಿಮಾಗೆ ಹೋದರೆ ನಿರಾಶೆ ಖಂಡಿತ. ಯಾಕಂದ್ರೆ ಇದು ತಾನೇ ಬೆಚ್ಚಿಬೀಳುವ ದೆವ್ವ. ಸಂಚಾರಿ ವಿಜಯ್‌ ಯಾವ ಪಾತ್ರವಾದರೂ ಸರಿ ಜೀವ ತುಂಬಬಲ್ಲ ನಟ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಈ ಚಿತ್ರ. ಅವರ ಅಭಿನಯ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌. ಇನ್ನು ಹೊಸ ಹುಡುಗಿ ಅದ್ವಿಕಾ ಮೊದಲ ಚಿತ್ರವಾಗಿದ್ದರೂ ಪರವಾಗಿಲ್ಲ ಎನ್ನುವಂತೆ ನಟಿಸಿದ್ದಾರೆ. ಮಲೆನಾಡನ್ನು ಛಾಯಾಗ್ರಾಹಕ ಸುಂದರವಾಗಿ ಸೆರೆಹಿಡಿದಿದ್ದಾರೆ. ದೆವ್ವದ ಹೊಸ ರೂಪ ನೋಡಬಯಸುವವರು ಈ ಚಿತ್ರ ನೋಡಬಹುದು''-ವಿಜಯ ಕರ್ನಾಟಕ

Riktha Movie Review- Times Of India

''This film is a horror comedy, a genre that has been a favourite of the frontbenchers lately in Sandalwood. It sees an unlikely hero, which adds to the horror romcom element. The film has some interesting chills in the first half, whole the comedy in the second half adds a contrast. The story is an interesting amalgamation of many elements, but falls prey to some of the trappings of clichés of horror comedies in the end. Sanchari Vijay as the diffident yet lovestruck ghost is entertaining. Newbie Advika shows promise, while the rest of the cast do their bit'-Times Of India

''ಹೆದರಿಸದ ದೆವ್ವ: ಪ್ರೀತಿಸುವ ಆತ್ಮ''-ಫಿಲ್ಮಿಬೀಟ್ ಕನ್ನಡ

ಮನುಷ್ಯನಿಗೆ ಸಾವು ಇದೆ. ಆದ್ರೆ ಪ್ರೀತಿಗೆ ಸಾವಿಲ್ಲ'' ಎಂಬ ಮಾತನ್ನ ಪ್ರೂವ್ ಮಾಡಲು ಹೊರಟಿದೆ 'ರಿಕ್ತ'. ಸಾಮಾನ್ಯವಾಗಿ ಪ್ರೇಮಿಗಳು ಒಂದು ಮಾತನ್ನ ಹೇಳ್ತಾ ಇರ್ತಾರೆ. ನಾನು ಸತ್ತರೂ ನನ್ನ ಪ್ರೀತಿ ಸಾಯಲ್ಲ ಅಂತ. ಸತ್ತ ಮೇಲೆ ಅವರು ಹೇಗೆ ಪ್ರೀತಿ ಮಾಡ್ತಾರೆ ಎಂಬುದನ್ನ ಯಾರೊಬ್ಬರು ನೋಡಿರಲ್ಲ. ಆದ್ರೆ, ಸತ್ತ ಪ್ರೇಮಿಯೊಬ್ಬ, ತನ್ನ ಪ್ರೀತಿಯನ್ನ ಉಳಿಸಿಕೊಳ್ಳಲು ಹೇಗೆ ಪರಿತಪಿಸುತ್ತೇನೆ ಎಂಬ ಕಥೆಯೇ 'ರಿಕ್ತ'. ಪೂರ್ತಿ ವಿಮರ್ಶೆಗಾಗಿ ಇಲ್ಲಿದೆ ನೋಡಿ.['ರಿಕ್ತ' ವಿಮರ್ಶೆ: ಹೆದರಿಸದ 'ದೆವ್ವ', ಪ್ರೀತಿಸುವ ಆತ್ಮ!]

English summary
Kannada Actor Sanchari Vijay's 'Riktha' Movie has Received positive response from the critics. Here is the collection of ''Riktha' reviews by Top News Papers of Karnataka

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X