For Quick Alerts
  ALLOW NOTIFICATIONS  
  For Daily Alerts

  'ವರ್ತಮಾನ' ಕಂಡು ಗೊಂದಲಗೊಂಡ ಕನ್ನಡ ಸಿನಿ ವಿಮರ್ಶಕರು!

  By Harshitha
  |

  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ 'ವರ್ತಮಾನ' ಸಿನಿಮಾ ಬಿಡುಗಡೆಗೊಂಡಿದೆ. ಭೂತ ಹಾಗೂ ಭವಿಷ್ಯತ್ ಗಳ ಚಿಂತೆಯಲ್ಲಿ ಬಂಧಿಯಾಗಿರುವ ನಾಯಕನ ಸುತ್ತ ಹೆಣೆದಿರುವ 'ವರ್ತಮಾನ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಕೋಡಿಂಗ್ ಮತ್ತು ಡಿ ಕೋಡಿಂಗ್ ಮಾದರಿಯಲ್ಲಿ ತಯಾರಾಗಿರುವ ಈ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ ಹಾಗೂ ಪ್ರಯೋಗ. ಚಿತ್ರಕಥೆಯನ್ನ ಅತ್ಯಂತ ಕ್ಲಿಷ್ಟಕರವಾಗಿ ಹೇಳಿರುವ ನಿರ್ದೇಶಕ ಉಮೇಶ್ ಅಂಶಿ ಸಾಮಾನ್ಯ ಜನರ ಮನಗೆಲ್ಲುವಲ್ಲಿ ಎಡವಿದ್ದಾರೆ.

  'ವರ್ತಮಾನ' ಚಿತ್ರವನ್ನ ಕಣ್ತುಂಬಿಕೊಂಡ ಬಳಿಕ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.? ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ವರ್ತಮಾನ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

  ವರ್ತಮಾನ: ಒಂದು ಬೌದ್ಧಿಕ ಕಸರತ್ತು - ಪ್ರಜಾವಾಣಿ

  ವರ್ತಮಾನ: ಒಂದು ಬೌದ್ಧಿಕ ಕಸರತ್ತು - ಪ್ರಜಾವಾಣಿ

  ಉಮೇಶ್‌ ವಂಶಿ ನಿರ್ದೇಶನದ ಈ ಸಿನಿಮಾ ವೀಕ್ಷಕನಿಗೆ ಮನೋರಂಜನೆ ನೀಡುವುದಕ್ಕಿಂತಲೂ ಹೆಚ್ಚಾಗಿ ಅವನ ಮನಸ್ಸಿನಲ್ಲಿ ಗೊಂದಲಗಳನ್ನು ಮೂಡಿಸುತ್ತದೆ. ಈ ಸಿನಿಮಾದ ಪೋಸ್ಟರ್ ಗಳಲ್ಲಿ ‘A movie for extraordinary minds' (ಅಸಾಧಾರಣ ಮನಸ್ಸಿನವರಿಗಾಗಿ ಒಂದು ಸಿನಿಮಾ) ಎನ್ನುವ ಮಾತು ಕಾಣಿಸುತ್ತದೆ. ಈ ಮಾತಿಗೆ ತಲೆದೂಗದೆ ವಿಧಿಯಿಲ್ಲ ಎನ್ನಬೇಕು! ಈ ಸಿನಿಮಾ ಒಂದು ಬೌದ್ಧಿಕ ಕಸರತ್ತಿನಂತೆ ಕಾಣಿಸುತ್ತದೆಯೇ ವಿನಾ, ಮನೋರಂಜನೆಯನ್ನು ಬಯಸಿ ಸಿನಿಮಾ ಮಂದಿರಗಳಿಗೆ ಬರುವ ವೀಕ್ಷಕನನ್ನು ಗುರಿಯಾಗಿಟ್ಟುಕೊಂಡು ಇದನ್ನು ಮಾಡಿರುವಂತೆ ಕಾಣಿಸುವುದಿಲ್ಲ. ಸಿನಿಮಾ ವೀಕ್ಷಿಸಿದ ನಂತರ ‘ಇದನ್ನು ತುಸು ಅರ್ಥ ಮಾಡಿಸಿಕೊಡಿ' ಎಂದು ಯಾರಲ್ಲಿ ಕೇಳಬಹುದು ಎಂಬ ಬಗ್ಗೆ ‘ಸಾಮಾನ್ಯ ಮನಸ್ಸು' ಇರುವವರು ಆಲೋಚಿಸಿದರೆ ತಪ್ಪಲ್ಲ!

  ಚಿತ್ರ ವಿಮರ್ಶೆ: 'ವರ್ತಮಾನ'ದ ಸಂಕಷ್ಟ ಅರಗಿಸಿಕೊಳ್ಳುವುದು ಕಷ್ಟ ಕಷ್ಟಚಿತ್ರ ವಿಮರ್ಶೆ: 'ವರ್ತಮಾನ'ದ ಸಂಕಷ್ಟ ಅರಗಿಸಿಕೊಳ್ಳುವುದು ಕಷ್ಟ ಕಷ್ಟ

  ಅಸ್ಪಷ್ಟ ಚಿತ್ರಗಳ ನಿಗೂಢ ಸಿನಿಮಾ - ವಿಜಯ ಕರ್ನಾಟಕ

  ಅಸ್ಪಷ್ಟ ಚಿತ್ರಗಳ ನಿಗೂಢ ಸಿನಿಮಾ - ವಿಜಯ ಕರ್ನಾಟಕ

  ಕ್ಲಿಷ್ಟಕರವಾದ ಕಥಾವಸ್ತುವನ್ನು ಸಾಂಕೇತಿಕವಾಗಿ ಹೇಳುತ್ತಾ ಹೊಸ ನಿರೂಪಣಾ ಶೈಲಿಯಲ್ಲಿ ಮೂಡಿಬಂದಿದೆ ವರ್ತಮಾನ. ಸಿನಿಮಾ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಕಂಟೆಂಪರರಿ ಸಂಪ್ರದಾಯದ ಶೈಲಿಯಲ್ಲಿ, ಹೆಚ್ಚಾಗಿ ಅಮೆರಿಕದಲ್ಲಿ ಕ್ರೈಂ ಮತ್ತು ಸೈಕಲಾಜಿಕಲ್ ಸ್ಟೋರಿಗಳನ್ನು ಸಂಕೇತಗಳ ಮೂಲಕ ಹೇಳುವ ವಿಧಾನದ ಛಾಯೆ ವರ್ತಮಾನ ಮೇಕಿಂಗ್ ನಲ್ಲಿ ನೋಡಬಹುದು. ಇಲ್ಲಿ ಏನನ್ನೂ ನೇರವಾಗಿ ಹೇಳುವುದಿಲ್ಲ. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಕಥೆ ಪ್ರಯಾಣ ಮಾಡುವುದಕ್ಕಿಂತ ಪ್ರೇಕ್ಷಕ ಟ್ರಾವೆಲ್ ಮಾಡಬೇಕಾಗುತ್ತದೆ - ಪದ್ಮಾ ಶಿವಮೊಗ್ಗ

  Varthamana Movie Review - Times of India

  Varthamana Movie Review - Times of India

  Umesh Amshi's directorial effort reiterates the fact that Kannada films need a good digital medium, too. Varthamana, if one were to go by the textbook, is like one of those neo-noir films that comes from the stables of avant garde makers in Europe. There is a lot happening and one is often left baffled by the goings on. One only is left wishing for a better digital reach for unique efforts like this to find its right audience - Sunayana Suresh

  Confused story, unpleasant dream: The New Indian Express

  Confused story, unpleasant dream: The New Indian Express

  The storytelling is unfocused and clumsy, and the director's lack of experience shows through. He has taken three years to tell this complex plot filled with suspense, but what we get is a confused narrative. Sanchari Vijay carries a hangover from his stage performances and he needs to temper his acting to suit the silver screen. Varthamana has a few senior actors and an unschooled cast, and their presence is hardly noticed - A Sharadhaa

  English summary
  Sanchari Vijay starrer Kannada Movie 'Varthamana' has received mixed response from the critics. Here is the collection of 'Varthamana' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X