»   » ಚಿತ್ರ ವಿಮರ್ಶೆ: 'ವರ್ತಮಾನ'ದ ಸಂಕಷ್ಟ ಅರಗಿಸಿಕೊಳ್ಳುವುದು ಕಷ್ಟ ಕಷ್ಟ

ಚಿತ್ರ ವಿಮರ್ಶೆ: 'ವರ್ತಮಾನ'ದ ಸಂಕಷ್ಟ ಅರಗಿಸಿಕೊಳ್ಳುವುದು ಕಷ್ಟ ಕಷ್ಟ

Posted By:
Subscribe to Filmibeat Kannada

''ಹಿಂದೆ ನೋಡಿ... ಇನ್ನೂ ಸ್ವಲ್ಪ ಹಿಂದೆ ನೋಡಿ... ಅಲ್ಲಿಂದಲೇ ಚಿತ್ರ ಪ್ರಾರಂಭ'' ಎಂಬ ಸೂಚನೆಯಿಂದ ಶುರು ಆಗುವ 'ವರ್ತಮಾನ' ಅಪ್ಪಟ ಪ್ರಯೋಗಾತ್ಮಕ ಚಿತ್ರ. ನಾಯಕನ ಭೂತ, ಭವಿಷ್ಯ ಹಾಗೂ ವರ್ತಮಾನದ ಸಂಕಷ್ಟವನ್ನ ಸಾರುವ ಚಿತ್ರವೇ 'ವರ್ತಮಾನ'

ಚಿತ್ರ: ವರ್ತಮಾನ

ನಿರ್ದೇಶನ: ಉಮೇಶ್ ಅಂಶಿ

ನಿರ್ಮಾಣ: ಮನು ಬೆಳ್ಳಿಮನೆ, ಹೇಮಾವತಿ (ಅಲ್ಟಿಮೇಟ್ ಮೂವೀಸ್)

ಛಾಯಾಗ್ರಹಣ: ಗೋವಿಂದ್, ವೆಂಕಟಾಚಲ

ಸಂಗೀತ: ಸರವಣ

ತಾರಾಗಣ: ಸಂಚಾರಿ ವಿಜಯ್, ಸಂಜನಾ ಪ್ರಕಾಶ್ ಮತ್ತು ಇತರರು

ಬಿಡುಗಡೆ: ಏಪ್ರಿಲ್ 6, 2018

'ವರ್ತಮಾನ'ದಲ್ಲಿ ನಡೆಯುವುದೇನು.?

Behind every great fortune there is a crime (ಯಾವುದೇ ಅದೃಷ್ಟದ ಹಿಂದೆ ಒಂದು ಅಪರಾಧವಿದೆ) ಎಂಬ ಮಾತಿನಿಂದ ಪ್ರೇರಿತನಾಗಿ ಅಪರಾಧ ಎಸಗಲು ಮುಂದಾಗುವ ಅನಂತ (ಸಂಚಾರಿ ವಿಜಯ್)ನ ಮನಸ್ಸಿನೊಳಗಿನ ಪಯಣವೇ ಈ ಸಿನಿಮಾ.

ಭ್ರಮೆಯೋ, ಕಲ್ಪನೆಯೋ, ಕನಸೋ.?

ಅಕ್ಕ (ವಾಣಿಶ್ರೀ) ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಅನಂತ್ (ಸಂಚಾರಿ ವಿಜಯ್) ಮಾನಸಿಕ ಅಸ್ವಸ್ಥನೋ... ಅಥವಾ ವರ್ತಮಾನದಲ್ಲಿ ಬದುಕಲು ಆಗದೆ ಭ್ರಮೆಯಲ್ಲಿದ್ದಾನೋ... ಇಲ್ಲ ಎಲ್ಲವೂ ಕೆಟ್ಟ ಕನಸೋ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುವ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ಈ 'ವರ್ತಮಾನ'.

ನಟ-ನಟಿಯರ ಪರ್ಫಾಮೆನ್ಸ್ ಹೇಗಿದೆ.?

'ಆದರ್ಶ' ಹುಡುಕಿಕೊಂಡು ಹೋಗುವ ಅನಂತನಾಗಿ ಸಂಚಾರಿ ವಿಜಯ್ ಅಭಿನಯದ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ನಾಯಕಿ ಸಂಜನಾ ಪ್ರಕಾಶ್ ನಟನೆಗೆ ಅಷ್ಟು ಸ್ಕೋಪ್ ಇಲ್ಲ. ಉಳಿದವರೆಲ್ಲರೂ ಹೊಸಬರಾದರೂ, ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಹೆಚ್ಚು ಡೈಲಾಗ್ಸ್ ಇಲ್ಲ

ಬಹುತೇಕ ನಿಧಾನಗತಿಯಲ್ಲೇ ಸಾಗುವ 'ವರ್ತಮಾನ' ಸಿನಿಮಾದಲ್ಲಿ ಹೆಚ್ಚು ಡೈಲಾಗ್ಸ್ ಇಲ್ಲ. ಹಾಡುಗಳಂತೂ ಇಲ್ಲವೇ ಇಲ್ಲ. ವಿಭಿನ್ನವಾದ ಸ್ಕ್ರೀನ್ ಪ್ಲೇ ಹೊಂದಿರುವ ಈ ಚಿತ್ರದ ಕಥೆ ಅಷ್ಟು ಸುಲಭವಾಗಿ ಪ್ರೇಕ್ಷಕರಿಗೆ ಅರ್ಥ ಆಗಲ್ಲ. ಅಷ್ಟಕ್ಕೂ, ಚಿತ್ರದಲ್ಲಿ ಕಥೆ ಇದ್ಯಾ ಅನ್ನೋ ಡೌಟ್ ಪ್ರೇಕ್ಷಕರಿಗೆ ಕಾಡದೇ ಇರಲ್ಲ. ಪಾತ್ರಧಾರಿಗಳು, ಅವರ ಹಿನ್ನಲೆ, ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಸಿನಿಮಾದಲ್ಲಿ ನಿರ್ದೇಶಕರು ಕ್ಲಾರಿಟಿ ನೀಡುವ ಗೋಜಿಗೂ ಹೋಗಿಲ್ಲ. ಸಿನಿಮಾ ಮುಗಿದ ಮೇಲೂ ಪ್ರೇಕ್ಷಕರ ಗೊಂದಲ ಪರಿಹಾರ ಆಗಲ್ಲ.

ಕ್ಯಾಮರಾ ವರ್ಕ್, ಸಂಗೀತ ಹೇಗಿದೆ?

ಗೋವಿಂದ್, ವೆಂಕಟಾಚಲ ಛಾಯಾಗ್ರಹಣ ಓಕೆ. ಸರವಣ ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರ ಕಥೆಯ ವೇಗವನ್ನ ಹೆಚ್ಚಿಸುವಲ್ಲಿ ಸಹಾಯ ಮಾಡಿಲ್ಲ. ಸಂಕಲನಕಾರ ವಿಶ್ವ ಕತ್ರಿ ಪ್ರಯೋಗ ಪರಿಣಾಮಕಾರಿ ಆಗಿಲ್ಲ.

ಮಾಸ್ ಪ್ರೇಕ್ಷಕರಿಗಲ್ಲ

ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ ಅನ್ನೋದು ಸತ್ಯ. ಆದ್ರೆ, ರೆಗ್ಯುಲರ್ ಕಮರ್ಶಿಯಲ್ ಸಿನಿಮಾಗಳನ್ನ ಇಷ್ಟಪಡುವವರಿಗಲ್ಲ ಈ 'ವರ್ತಮಾನ'. ಪ್ರೇಕ್ಷಕರ ತಲೆಗೆ ಕೆಲಸ ಕೊಡುವ 'ವರ್ತಮಾನ' ಚಿತ್ರವನ್ನ ಪ್ರಯೋಗಾತ್ಮಕ ಚಿತ್ರಗಳನ್ನ ಮೆಚ್ಚುವವರು ನೋಡಬಹುದು.

English summary
Read Sanchari Vijay starrer Kannada Movie 'Varthamana' review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X