twitter
    For Quick Alerts
    ALLOW NOTIFICATIONS  
    For Daily Alerts

    'ಸತ್ಯವೇ ಹೇಳದ ಹರಿಶ್ಚಂದ್ರ'ನಿಗೆ ವಿರ್ಮಶಕರು ಏನಂದ್ರು?

    By Bharath Kumar
    |

    ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ತಮ್ಮ ಕಾಮಿಡಿ ಮೂಲಕ ರಂಜಿಸಿರುವ ಶರಣ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ.

    ಚಿತ್ರದ ಟೈಟಲ್ ಗೆ ವಿರುದ್ಧವಾದ ಕಥೆಯನ್ನ ಒಳಗೊಂಡಿರುವ 'ಸತ್ಯ ಹರಿಶ್ಚಂದ್ರ' ಚಿತ್ರಕ್ಕೆ ವಿಮರ್ಶಕರು ಏನಂದ್ರು? ಚಿತ್ರದಲ್ಲಿ ಏನು ಇಷ್ಟವಾಯಿತು? ಏನು ಇಷ್ಟವಾಗಿಲ್ಲ? ಈ ಪ್ರಶ್ನೆಗೆ ಉತ್ತರ ಮುಂದೆ ನೀಡಲಾಗಿದೆ.

    ಕರ್ನಾಟಕದ ಜನಪ್ರಿಯ ಪತ್ರಿಕೆಗಳು ಪ್ರಕಟಿಸಿರುವ ಸತ್ಯ ಹರಿಶ್ಚಂದ್ರ ಚಿತ್ರದ ವಿರ್ಮಶೆ. ಮುಂದೆ ಓದಿ

    ಸುಳ್ಳಿನ ಶೂರು ಆಧುನಿಕ ಹರಿಶ್ಚಂದ್ರ - ವಿಜಯ ಕರ್ನಾಟಕ

    ಸುಳ್ಳಿನ ಶೂರು ಆಧುನಿಕ ಹರಿಶ್ಚಂದ್ರ - ವಿಜಯ ಕರ್ನಾಟಕ

    ''ಸತ್ಯ ಹರಿಶ್ಚಂದ್ರ ಎಂದರೆ ಸತ್ಯಕ್ಕಾಗಿ ಎಂತಹ ಕಷ್ಟ ಬಂದರೂ ಸಹಿಸಿಕೊಳ್ಳುವ ರಾಜನ ಕತೆ. ಆದರೆ ಈ ಹರಿಶ್ಚಂದ್ರ ಸುಳ್ಳು ಹೇಳುವದರಲ್ಲಿ ನಿಸ್ಸೀಮ ಮತ್ತು ತನ್ನ ಸುಳ್ಳಿನಿಂದಾಗಿ ತೊಂದರೆಗೆ ಸಿಕ್ಕಿ ಹಾಕಿಕೊಂಡು ಹೇಗೆಲ್ಲ ಒದ್ದಾಡುತ್ತಾನೆ ಎಂಬುದೇ ಆಧುನಿಕ ಸತ್ಯ ಹರಿಶ್ಚಂದ್ರನ ಕತೆ. ಶರಣ್ ಅಭಿನಯದಲ್ಲಿ ಎಂದಿನಂತೆ ನೂರಕ್ಕೆ ನೂರು ಅಂಕ ಗಳಿಸುತ್ತಾರೆ. ಸಂಚಿತಾ ತೆರೆಯ ಮೇಲೆ ಚೆಂದವಾಗಿ ಕಾಣುತ್ತಾರೆ. ಶರತ್ ಲೋಹಿತಾಶ್ವ, ಚಿಕ್ಕಣ್ಣ, ಸಾಧು ಕೋಕಿಲ, ಸಂಚಾರಿ ವಿಜಯ..., ಭಾವನಾ ರಾವ್‌ ಅವರದು ಅಚ್ಚುಕಟ್ಟಾದ ಅಭಿನಯ. ಅರ್ಜುನ್‌ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಫೈಜಲ್ ಕ್ಯಾಮೆರಾ ಕೆಲಸ ಚೆನ್ನಾಗಿದೆ'' - ವಿಜಯ ಕರ್ನಾಟಕ

    ಸತ್ಯವೆಂದರೆ ಈ ಹರಿಶ್ಚಂದ್ರನಿಗೆ ಅಲರ್ಜಿ - ಪ್ರಜಾವಾಣಿ

    ಸತ್ಯವೆಂದರೆ ಈ ಹರಿಶ್ಚಂದ್ರನಿಗೆ ಅಲರ್ಜಿ - ಪ್ರಜಾವಾಣಿ

    ‘ಸತ್ಯ ಹರಿಶ್ಚಂದ್ರ' ಚಿತ್ರದ ಕಥೆಯಲ್ಲಾಗಲಿ, ಅದರ ನಿರೂಪಣೆಯಲ್ಲಾಗಲಿ ವಿಶೇಷ ಇಲ್ಲ. ಪ್ರೀತಿ, ಸುಳ್ಳು, ದ್ವಂದ್ವಾರ್ಥ, ತಾಯಿಯ ವಾತ್ಸಲ್ಯ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕ ದಯಾಳ್. ಚಿತ್ರದ ಕೆಲವು ದೃಶ್ಯಗಳಲ್ಲಿ ಶರಣ್, ಚಿಕ್ಕಣ್ಣ, ಸಾಧುಕೋಕಿಲ ಪ್ರೇಕ್ಷಕರಿಗೆ ನಗೆಯ ಕಚಗುಳಿ ಇಡುತ್ತಾರೆ. ಕೆಲವೆಡೆ ದ್ವಂದ್ವಾರ್ಥದ ಸಂಭಾಷಣೆಗಳು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತವೆ. ಸಂಚಿತಾ ಅಭಿನಯದಲ್ಲಿ ಇನ್ನೂ ಪಕ್ವತೆ ಬೇಕಿದೆ. ಅರ್ಜುನ್‌ ಜನ್ಯ ಸಂಗೀತದಲ್ಲಿ ಹೊಸದೇನು ಇಲ್ಲ. ಫೈಜಲ್ ಕ್ಯಾಮೆರಾ ಕೈಚಳಕ ಸೊಗಸಾಗಿದೆ. ಸುಳ್ಳಿನಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಹಾಗೂ ದ್ವಂದ್ವಾರ್ಥದ ಸಂಭಾಷಣೆ ಇಷ್ಟಪಡುವವರು ನೋಡಬಹುದಾದ ಸಿನಿಮಾ ‘ಸತ್ಯ ಹರಿಶ್ಚಂದ್ರ''- ಪ್ರಜಾವಾಣಿ

    ಕಾಮಿಡಿ ಸತ್ಯ ಮಿಕ್ಕಿದ್ದು ಮಿಥ್ಯ - ಉದಯವಾಣಿ

    ಕಾಮಿಡಿ ಸತ್ಯ ಮಿಕ್ಕಿದ್ದು ಮಿಥ್ಯ - ಉದಯವಾಣಿ

    ಶರಣ್ ಅವರ "ಸತ್ಯ ಹರಿಶ್ಚಂದ್ರ' ಪಂಜಾಬಿಯ "ಸಿಂಗ್‌ ವರ್ಸಸ್ ಕೌರ್' ಎಂಬ ಚಿತ್ರದ ರೀಮೇಕ್. ಶರಣ್ ಸಿನಿಮಾದಲ್ಲಿ ಕಾಣಸಿಗುವ ಎಲ್ಲಾ ಅಂಶಗಳು ಇಲ್ಲಿ ಇವೆ. ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ ಎಂದು ಹೇಳುವಂತಿಲ್ಲ. ಏಕೆಂದರೆ, ಇಲ್ಲೂ ಜಬರ್ದಸ್ತ್ ಆಕ್ಷನ್ ಇದೆ, ಚೇಸಿಂಗ್ ಇದೆ, ಒಂದಷ್ಟು ಫ್ಯಾಮಿಲಿ ಡ್ರಾಮಾ ಕೂಡಾ ಇದೆ. ಹಾಗಾಗಿ, ಇದೊಂದು ಫ್ಯಾಮಿಲಿ ಪ್ಯಾಕೇಜ್‌ ಎನ್ನಬಹುದು. ನಾಯಕ ಶರಣ್ ಗೆ ಇಂತಹ ಪಾತ್ರ ಹೊಸದೇನಲ್ಲ. ಕಥೆಯ ವಿಚಾರಕ್ಕೆ ಹೇಳಬೇಕಾದರೆ ಇದು ಕನ್ನಡಕ್ಕೆ ತೀರಾ ಹೊಸ ಬಗೆಯ ಕಥೆಯಂತೂ ಅಲ್ಲ. ಪ್ರೀತಿ, ಪ್ರೀತಿಗಾಗಿ ನೂರು ಸುಳ್ಳು ಹೇಳಬೇಕಾದ ಸನ್ನಿವೇಶ, ಗ್ಯಾಪಲ್ಲಿ ಮತ್ತೂಂದು ಟ್ರ್ಯಾಕ್‌, ತಾಯಿ ಸೆಂಟಿಮೆಂಟ್, ಒಂದಷ್ಟು ಪಂಚಿಂಗ್ ಡೈಲಾಗ್‌ ... ಕನ್ನಡಕ್ಕೆ ಈ ತರಹದ ಸಿನಿಮಾ ತೀರಾ ಹೊಸದೇನಲ್ಲ'' - ಉದಯವಾಣಿ

    Sathya Harishchandra - ಟೈಮ್ಸ್ ಆಫ್ ಇಂಡಿಯಾ

    Sathya Harishchandra - ಟೈಮ್ಸ್ ಆಫ್ ಇಂಡಿಯಾ

    ''Sathya Harishchandra is the village bumpkin, who majorly lies to ensure that his daily life moves on smoothly. When his lies land him in a troubled situation, he has to pursue love and win over the girl's heart. This is an adaptation of the Punjabi film Singh vs Kaur, which has been tailored to suit Sharan and his comic image. The film is visually appealing and has a couple of good songs too. Watch this is you are a hardcore Sharan fan. His gags could help you endure this long narrative'' - ಟೈಮ್ಸ್ ಆಫ್ ಇಂಡಿಯಾ

    English summary
    Kannada Actor Sharan Starrer Sathya harishchandra Movie Critics Review. ಶರಣ್ ನಾಯಕನಾಗಿ ಅಭಿನಯಿಸಿರುವ ಸತ್ಯ ಹರಿಶ್ಚಂದ್ರ ಚಿತ್ರದ ಬಗ್ಗೆ ಕರ್ನಾಟಕ ಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆ.
    Saturday, October 21, 2017, 11:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X