For Quick Alerts
ALLOW NOTIFICATIONS  
For Daily Alerts

ಚೆನ್ನೈ ಎಕ್ಸ್ ಪ್ರೆಸ್: ಮನರಂಜನೆಯೇ ಇಲ್ಲಿ ಕಿಂಗ್

By ಜೇಮ್ಸ್ ಮಾರ್ಟಿನ್
|

ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಬಿಡುಗಡೆಗೆ ಮುನ್ನವೇ ಸಿನಿರಸಿಕರ ಹೃದಯದಲ್ಲಿ ನಾಗಲೋಟ ಆರಂಭಿಸಿದ ಚಿತ್ರ. ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಪೈಸಾ ವಸೂಲ್ ಚಿತ್ರ ಎನ್ನಬಹುದು. ಒನ್ ಇಂಡಿಯಾ ಸೇರಿದಂತೆ ವೆಬ್ ತಾಣಗಳು ಹಾಗೂ ರಾಷ್ಟ್ರೀಯ ಸುದ್ದಿವಾಹಿನಿಗಳ ಮನರಂಜನಾ ವಿಭಾಗಗಳಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವಿಮರ್ಶೆ ಸಿಕ್ಕಿದೆ.

ರಂಜಾನ್ ದಿನ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆ ಕಂಡಿರುವ ರೋಹಿತ್ ಶೆಟ್ಟಿ ಅವರ ಚೆನ್ನೈ ಎಕ್ಸ್ ಪ್ರೆಸ್ ಪ್ರೇಕ್ಷಕರ ನಿರೀಕ್ಷೆಯ ಹಳಿಮೇಲೆ ಸಾಗಿದ್ದು, ಅಲ್ಲಲ್ಲಿ ಅನಗತ್ಯ ನಿಲ್ದಾಣದಲ್ಲಿ ಬ್ರೇಕ್ ಪಡೆದಿದ್ದು ಬಿಟ್ಟರೆ ಪಯಣ ಸುಖಕರ ಎನ್ನಬಹುದು.

ಉತ್ತರ ಭಾರತ ಹುಡುಗ ಆಕಸ್ಮಿಕವಾಗಿ ಚೆನ್ನೈ ಎಕ್ಸ್ ಪ್ರೆಸ್ ಏರುತ್ತಾನೆ ಅಲ್ಲಿ ದಕ್ಷಿಣ ಭಾರತದ ಹುಡುಗಿ ಮೀನಾ ಪರಿಚಯವಾಗುತ್ತದೆ. ಇಬ್ಬರ ಪಯಣ ಮುಂದೆ ಲವ್ ಸ್ಟೇಷನ್ ನಲ್ಲಿ ಬಂದು ನಿಲ್ಲುತ್ತದೆ. ರಾಹುಲ್ ಗೆ ಅಜ್ಜ ಅಜ್ಜಿ ಎಂದರೆ ಪ್ರಾಣ. ಮೀನಾಗೆ ಅಪ್ಪನೆಂದರೆ ಭಯಮಿಶ್ರಿತ ಗೌರವ. ಕೊಂಬನ್ ಗ್ರಾಮದ ಡಾನ್ ಮಗಳನ್ನು ನಾರ್ಥಿ ಹುಡ್ಗ ರಾಹುಲ್ ಗೆ ಹೇಗೆ ಮರಳು ಮಾಡಿ ಹೊತ್ತೊಯ್ಯುತ್ತಾನೆ ಎಂಬುದೇ ಕಥಾಸಾರ. ಒನ್ ಇಂಡಿಯಾ ಸೇರಿದಂತೆ ವಿವಿಧ ವಾಹಿನಿಗಳ ವಿಮರ್ಶೆಗಳ ಸಂಗ್ರಹ ಇಲ್ಲಿದೆ ನೋಡಿ....

ಬಾಲಿವುಡ್ ಹಂಗಾಮ: ತರಣ್ ಆದರ್ಶ್

ಬಾಲಿವುಡ್ ಹಂಗಾಮ: ತರಣ್ ಆದರ್ಶ್

ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕೆ 5ಕ್ಕೆ 4 ಸ್ಟಾರ್ ನೀಡಿದ್ದಾರೆ ತರಣ್ ಆದರ್ಶ್

ಚೆನ್ನೈ ಎಕ್ಸ್ ಪ್ರೆಸ್ ಇಡೀ ಚಿತ್ರದಲ್ಲಿ ರೋಹಿತ್ ಶರ್ಮ ಟ್ರೇಡ್ ಮಾರ್ಕ್ ಸ್ಟಾಂಪ್ ಛಾಪು ಮೂಡಿರುವುದನ್ನು ಕಾಣಬಹುದು. ಈ ಹಿಂದೆ ಶಾರುಖ್ -ದೀಪಿಕಾ ಜೋಡಿ entertainment, entertainment ಹಾಗೂ entertainment ಎಂದು ಓಂ ಶಾಂತಿ ಓಂ ನಲ್ಲಿ ಕಂಡಿದ್ದನ್ನು ಇಲ್ಲೂ ಕಾಣಬಹುದು. ಚಿತ್ರ ಬಿಡುಗಡೆಗೂ ಮುನ್ನ ಹುಟ್ಟಿಸಿದ ಕ್ರೇಜಿಗೆ ತಕ್ಕಂತೆ ಚಿತ್ರ ಮೂಡಿ ಬಂದಿದೆ

Koimoi ವಿಮರ್ಶೆ : 3 ಸ್ಟಾರ್

Koimoi ವಿಮರ್ಶೆ : 3 ಸ್ಟಾರ್

ರೋಮಾನ್ಸ್, ಹಾಸ್ಯ, ಸಾಹಸ ಹದವಾಗಿ ಬೆರೆತ ಮನರಂಜನೆ ಬೇಕೆನಿಸಿದರೆ ಸಂತಸವಾಗಿ ಸಮಯ ಕಳೆಯಬೇಕಾದರೆ ಈ ಚಿತ್ರವನ್ನು ತಪ್ಪದೆ ವೀಕ್ಷಿಸಿ...

ಎನ್ ಡಿಟಿವಿ ವಿಮರ್ಶೆ : 3 ಸ್ಟಾರ್

ಎನ್ ಡಿಟಿವಿ ವಿಮರ್ಶೆ : 3 ಸ್ಟಾರ್

ಸೈಬಲ್ ಚಟರ್ಜಿ : ಎಲ್ಲಾ ಮಸಾಲೆಗಳು ಹದವಾಗಿ ಬೆರೆತ ರುಚಿಕರವಾದ ಅಡುಗೆ ಹಸಿದವರಿಗೆ ಮೃಷ್ಟಾನದಂತೆ ಈ ಚಿತ್ರ ಅಭಿಮಾನಿಗಳ ಪಾಲಿಗೆ ಸಿಕ್ಕಿದೆ. ಯಾವುದು ಮಾರಾಟವಾಗಬಲ್ಲ ಉತ್ಪನ್ನ ಎಂಬುದು ಶೆಟ್ಟಿಗೆ ಚೆನ್ನಾಗಿ ಗೊತ್ತಿದೆ.

ದಿ ಟೈಮ್ಸ್ ಆಫ್ ಇಂಡಿಯಾ ; 3 ಸ್ಟಾರ್

ದಿ ಟೈಮ್ಸ್ ಆಫ್ ಇಂಡಿಯಾ ; 3 ಸ್ಟಾರ್

ಮೀನಾ ಅಯ್ಯರ್ : ಚಿತ್ರಕ್ಕೆ ಕಥೆ ನಿಜವಾಗಿಯೂ ಬೇಕೆ? ಸಣ್ಣ ಕಥೆಯ ಎಳೆಯನ್ನು ಹಿಡಿದುಕೊಂದು ಸನ್ನಿವೇಶಗಳ ಮೂಲಕ ಕಥೆ ಕಟ್ಟಿಕೊಟ್ಟರೆ ಸಾಲದೆ? ಅಲ್ಲಲ್ಲಿ ಕಥೆ ಕೊರತೆ ಕಂಡರೂ ಉಳಿದ ವಿಭಾಗಗಳು ಕಥೆಯನ್ನು ಮರೆಸುತ್ತವೆ

IANS ವಿಮರ್ಶೆ: 3 Stars

IANS ವಿಮರ್ಶೆ: 3 Stars

ಚೆನ್ನೈ ಎಕ್ಸ್ ಪ್ರೆಸ್ ಅಲ್ಲಲ್ಲಿ ಜಾಳು ಜಾಳೆನಿಸಿದರೂ ಶಾರುಖ್ ಖಾನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ. ಅಭಿಮಾನಿಗಳ ನಿರೀಕ್ಷೆ ಹುಸಿಯಾಗುವುದಿಲ್ಲ ಎಂಬುದು ಪ್ಲಸ್ ಪಾಯಿಂಟ್.

ಡಿಎನ್ಎ ವಿಮರ್ಶೆ

ಡಿಎನ್ಎ ವಿಮರ್ಶೆ

ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಮುಖ್ಯ ಉದ್ದೇಶ ಮನರಂಜನೆ. ಪಾಪ್ ಕಾರ್ನ್ ತಗೊಂಡು ಎಕ್ಸ್ ಪ್ರೆಸ್ ಟಿಕೆಟ್ ತೆಗೆದುಕೊಂಡು ಪ್ರಯಾಣದ ಸುಖ ಅನುಭವಿಸಿ ಮಿಕ್ಕೆಲ್ಲವನ್ನು ಮರೆತುಬಿಡಿ.

Rediff ವಿಮರ್ಶೆ : 2 and half stars

Rediff ವಿಮರ್ಶೆ : 2 and half stars

ಚೆನ್ನೈ ಎಕ್ಸ್ ಪ್ರೆಸ್ ಕೆಲವು ಕಡೆ ನಗೆಬುಗ್ಗೆ ಹುಟ್ಟಿಸುತ್ತದೆ ನಿಜ. ಆದರೆ, ಎಲ್ಲಾ ಮಸಾಲೆ ಚಿತ್ರಗಳ ಸಿದ್ಧಸೂತ್ರಕ್ಕೆ ಜೋತುಬಿದ್ದು ಯಶಸ್ವಿ ಚಿತ್ರವಾಗುವಲ್ಲಿ ವಿಫಲವಾಗಿದೆ : ಸುಕನ್ಯಾ ವರ್ಮ

ಎಮಿರೇಟ್ಸ್ ವಿಮರ್ಶೆ

ಎಮಿರೇಟ್ಸ್ ವಿಮರ್ಶೆ

ರೋಹಿತ್ ಕಾಮಿಡಿ ಹಬ್ಬ ಮತ್ತೊಮ್ಮೆ ಪ್ರೇಕ್ಷಕರಿಗೆ ಮುದ ನೀಡುತ್ತದೆ. ಅದರೆ, ಕೊನೆ ಕೊನೆಗೆ ಅದೇ ಹೆಚ್ಚಾಗಿ ಅತಿಯೆನಿಸುತ್ತದೆ. ಆದರೆ, ರೋಹಿತ್, ಶಾರುಖ್ ಮಸಾಲೆ ಚಿತ್ರಗಳನ್ನು ಮೆಚ್ಚುವವರಿಗೆ ಖಂಡಿತ ಮೋಸವಾಗಲಾರದು

ಒನ್ ಇಂಡಿಯ ವಿಮರ್ಶೆ : 3 ಸ್ಟಾರ್

ಒನ್ ಇಂಡಿಯ ವಿಮರ್ಶೆ : 3 ಸ್ಟಾರ್

ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಬ್ರ್ಯಾಂಡ್ ಶಾರುಖ್ ಹಾಗೂ ತಿಳಿ ಹಾಸ್ಯ ಪ್ರೇಕ್ಷಕರನ್ನು ರಂಜಿಸುತ್ತದೆ. ಕಥೆ ಮರೆತರೆ, ಹಾಡುಗಳನ್ನು ಸಹಿಸಿಕೊಂಡರೆ ಹಿತವೆನಿಸುತ್ತದೆ. ನಾಲ್ಕಾರು ದಕ್ಷಿಣ ಭಾರತದ ಸಿನಿಮಾಗಳನ್ನು ಮಿಕ್ಸ್ ಮಾಡಿ ಒಂದು ಸಿನಿಮಾ ಮಾಡಿದಂತೆ ಇದೆ. ಸೌಥ್ ಮಸಾಲೆ ಜತೆಗೆ ಹಿಂದಿ ಬಾಸುಮತಿ ಅಕ್ಕಿ ಬಿರಿಯಾನಿ ಮಾಡಿದಂತಿದೆ

ಬಾಲಿವುಡ್ ಲೈಫ್ ವಿಮರ್ಶೆ : 2 ಸ್ಟಾರ್

ಬಾಲಿವುಡ್ ಲೈಫ್ ವಿಮರ್ಶೆ : 2 ಸ್ಟಾರ್

ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಎದ್ದು ಕಾಣುವುದು ದೀಪಿಕಾ ಪಡುಕೋಣೆ ಹಾಗೂ ಅವರ ದಕ್ಷಿಣ ಭಾರತ ಶೈಲಿ ಉಡುಗೆ, ಹಾವ-ಭಾವ ಹಾಗೂ ಭಾಷೆ. ಶಾರುಖ್ ಚೇಷ್ಟೆ ನಗೆ ಉಕ್ಕಿಸಿದರೂ ಅವರ ವಯಸ್ಸಿಗೆ ತಕ್ಕ ಪಾತ್ರವಲ್ಲ ಹಾಗೂ ಅವರ ನಟನೆ ಬಗ್ಗೆ ನಿರೀಕ್ಷೆ ಸಲ್ಲ.

ಫಸ್ಟ್ ಪೋಸ್ಟ್ ವಿಮರ್ಶೆ

ಫಸ್ಟ್ ಪೋಸ್ಟ್ ವೆಬ್ ತಾಣದ ಚೆನ್ನೈ ವರದಿಗಾರರ ವಿಮರ್ಶೆ ನೋಡಿ

ಲೈವ್ ಮಿಂಟ್ ವಿಮರ್ಶೆ

ಲೈವ್ ಮಿಂಟ್ ವೆಬ್ ತಾಣದಿಂದ ಬಂದ ವಿಮರ್ಶೆ

English summary
B-Town's 'Baap Of Entertainment' Rohit Shetty's latest release Chennai Express featuring Shahrukh Khan and Deepika Padukone in the leads, has received positive reviews from film critics. Especially, Shahrukh-Deepika's rocking performances are major attractions of the film.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more