Don't Miss!
- Automobiles
ಸ್ಮಾರ್ಟ್ ಕೀ ಫೀಚರ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಜನಪ್ರಿಯ ಹೋಂಡಾ ಆಕ್ಟಿವಾ ಸ್ಕೂಟರ್
- Sports
ಈ ರೋಹಿತ್ ಶರ್ಮಾನನ್ನು ನಾನು ಇಷ್ಟ ಪಡುತ್ತೇನೆ: ಟೀಮ್ ಇಂಡಿಯಾ ನಾಯಕನ ಬಗ್ಗೆ ಮಂಜ್ರೇಕರ್ ಪ್ರಶಂಸೆ
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Technology
ಮೊಟೊರೊಲಾದಿಂದ ಎರಡು ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?
- News
Lakhimpur violence: ಸಚಿವರ ಪುತ್ರನ ಜಾಮೀನು ಅರ್ಜಿಗೆ ಇಂದು ಸುಪ್ರೀಂ ಕೋರ್ಟ್ ಆದೇಶ
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pathaan Twitter Review : 'ಪಠಾಣ್' ಗೆದ್ನಾ, ಸೋತ್ನಾ?
4 ವರ್ಷಗಳ ದೊಡ್ಡ ಬ್ರೇಕ್‌ನ ನಂತ ಶಾರುಖ್ ಖಾನ್ ಮತ್ತೆ 'ಪಠಾಣ್' ಆಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಚಿತ್ರ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಬೆಳ್ಳಂ ಬೆಳಗ್ಗೆ ಅಭಿಮಾನಿಗಳು ಸಿನಿಮಾ ನೋಡಿ ಬಂದಿದ್ದಾರೆ. ಟ್ವಿಟ್ಟರ್‌ನಲ್ಲಿ ಸಿನಿಮಾ ಹೇಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Pathaan Movie Release Live: 'ಪಠಾಣ್' ಸಿನಿಮಾ ಬಿಡುಗಡೆ, ವಿಶೇಷತೆಗಳೇನು?
ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಸಿನಿಮಾವನ್ನು ಯಶ್ ರಾಜ್ ಸಂಸ್ಥೆ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಿಂಗ್ ಖಾನ್ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದರೆ ನೆಗೆಟಿವ್ ರೋಲ್‌ನಲ್ಲಿ ಜಾನ್ ಅಬ್ರಹಾಂ ಮಿಂಚಿದ್ದಾರೆ. ರಿಲೀಸ್‌ಗೂ ಮೊದಲೇ ಈ ಸ್ಪೈ ಥ್ರಿಲ್ಲರ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ಸದ್ದು ಮಾಡಿತ್ತು. ಒಂದಷ್ಟು ವಿವಾದಗಳಿಂದ ಚರ್ಚೆ ಹುಟ್ಟಾಕ್ಕಿತ್ತು. ಕೆಲವೆಡೆ ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಕೂಡ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ವರ್ಷದ ಮೊದಲ ಬ್ಲಾಕ್‌ಬಸ್ಟರ್ 'ಪಠಾಣ್' ಎನ್ನುವ ಮಾತುಗಳು ಕೇಳಿಬರ್ತಿದೆ. ಶಾರುಖ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಟೈಗರ್ ರಾಥೋರ್ ಆಗಿ ಸಲ್ಮಾನ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು, 'ಟೈಗರ್' ಆರ್ಭಟಕ್ಕೂ ಒಳ್ಳೆ ಅಂಕ ಸಿಕ್ಕಿದೆ.
ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿತ್ತು. 3 ಲಕ್ಷ ಅಧಿಕ ಟಿಕೆಟ್ ಮಾರಾಟವಾಗಿ ಸಿನಿಮಾ ಸದ್ದು ಮಾಡಿತ್ತು. ಕ್ರೇಜ್‌ಗೆ ತಕ್ಕಂತೆ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ಇನ್ನು ಸಿನಿಮಾ ನೋಡಿರುವ ಪ್ರೇಕ್ಷಕರ ರಿವ್ಯೂ ಹೇಗಿದೆ ಎನ್ನುವುದನ್ನು ಮುಂದೆ ಓದಿ.

ಶಾರುಖ್ ಖಾನ್ ನಿಜಕ್ಕೂ ಅದ್ಭುತ
"ಟ್ರೈಲರ್ ನೋಡಿ ನೀವು ಕಥೆ ಇದೇ ಎಂದು ಊಹಿಸಿಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಟ್ರೈಲರ್‌ನಲ್ಲಿ ಕಥೆ ರಿವೀಲ್ ಆಗಿಲ್ಲ. ಫಸ್ಟ್ ಹಾಫ್ ಸಿಕ್ಕಾಪಟ್ಟೆ ಗ್ರಿಪ್ಪಿಂಗ್, ಇಂಟೆನ್ಸ್, ಥ್ರಿಲ್ಲಿಂಗ್ ಆಗಿದೆ. ಶಾರುಕ್ ಖಾನ್ ನಿಜಕ್ಕೂ ಅದ್ಭುತ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಹೈವೋಲ್ಟೇಜ್ ಆಕ್ಷನ್ ಡ್ರಾಮಾ
ಒಂದೊಳ್ಳೆ ಕಥೆ ಜೊತೆ ಮಾಡಿರುವ ಹೈವೋಲ್ಟೇಜ್ ಆಕ್ಷನ್ ಡ್ರಾಮಾ 'ಪಠಾಣ್'. ಸಿದ್ಧಾರ್ಥ್ ಆನಂದ್‌ರಿಂದ ನಿರೀಕ್ಷಿಸಿದಂತೆ ಕಥೆ ಹೇಳಿರುವ ರೀತಿ ಅದ್ಭುವಾಗಿದೆ. ಶಾರುಖ್ ಖಾನ್ ಪರ್ಫಾರ್ಮೆನ್ಸ್ ಔಟ್ ಸ್ಟ್ಯಾಂಡಿಂಗ್. ಜಾನ್ ಅಬ್ರಹಾಂ ಹಾಗೂ ದೀಪಿಕಾ ನಟನೆ ಕೂಡ ಉತ್ತಮವಾಗಿದೆ. ಇನ್ನು ಸಾಕಷ್ಟು ಸರ್‌ಪ್ರೈಸ್ ಮತ್ತು ಟ್ವಿಸ್ಟ್‌ಗಳು ಸಿನಿಮಾದಲ್ಲಿದೆ.

ಕಂಪ್ಲೀಟ್ ಪ್ಯಾಕೇಜ್ 'ಪಠಾಣ್'
"ಔಟ್ ಅಂಡ್ ಔಟ್ ಎಂಟರ್‌ಟೈನರ್. ನಿಜಕ್ಕೂ ಬೆಳ್ಳಿತೆರೆಯ ಚಮತ್ಕಾರ. ಇದಕ್ಕಿಂತ ಹೆಚ್ಚು ಕೇಳಲ್ಲ. ಅದ್ಭುತ ಸ್ಟೋರಿ ಲೈನ್. ಬಣ್ಣಿಸಲಾಗದ ನಟನೆ, ಬಹಳ ಸೊಗಸಾಗಿ ಟ್ವಿಸ್ಟ್ ಅಂಡ್ ಟರ್ನ್‌ಗಳನ್ನು ಇಡಲಾಗಿದೆ. ಒಂದು ಕಂಪ್ಲೀಟ್ ಪ್ಯಾಕೇಜ್ ಪಠಾಣ್."

'ಪಠಾಣ್' ಅದ್ಭುತ ಅನುಭವ
'ಪಠಾಣ್' ಚಿತ್ರಕ್ಕೆ 5ಕ್ಕೆ 4 ಅಂಕ. ವಿಎಫ್‌ಎಕ್ಸ್ ಅದ್ಭುತ. ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ಸೂಪರ್. ಶಾರುಕ್ ಖಾನ್ ಎಂಟ್ರಿಗೆ ಥಿಯೇಟರ್‌ಗಳು ಸ್ಟೇಡಿಯಂ ಆಗಿಬಿಡುತ್ತದೆ. ಬಿಜಿಎಂ ಬಹಳ ಚೆನ್ನಾಗಿದೆ. ವಿಶಾಲ್ ದದ್ಲಾನಿ, ಶೇಖರ್ ರಾವ್‌ಜಾನಿಗೆ ಧನ್ಯವಾದ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಪಠಾಣ್ ಅದ್ಬುತ ಅನುಭವ."

ಚಿತ್ರದಲ್ಲಿ ಎಲ್ಲವೂ ಇದೆ
ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ "ಪಠಾಣ್ ಬ್ಲಾಕ್‌ಬಸ್ಟರ್ ಸಿನಿಮಾ. ಪಠಾಣ್ ಚಿತ್ರದಲ್ಲಿ ಸ್ಟಾರ್ ಪವರ್, ಸ್ಟೈಲ್, ಸ್ಕೇಲ್, ಸಾಂಗ್ಸ್, ಆತ್ಮ ಹಾಗೂ ಸರ್‌ಪ್ರೈಸ್‌ಗಳು ಎಲ್ಲವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಖಡಕ್ ಕಂಬ್ಯಾಕ್ ಮಾಡಿರುವ ಶಾರುಖ್ ಖಾನ್ ಇದ್ದಾರೆ. 2023ರ ಮೊದಲ ಬ್ಲಾಕ್‌ಬಸ್ಟರ್ ಪಠಾಣ್" ಎಂದು ಬರೆದುಕೊಂಡಿದ್ದಾರೆ.