For Quick Alerts
ALLOW NOTIFICATIONS  
For Daily Alerts

  ಶಾರುಖ್ ಖಾನ್ 'ರಯೀಸ್'ಗೆ ವಿಮರ್ಶಕರು ಫುಲ್ ಫಿದಾ!

  By Bharath Kumar
  |

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ರಯೀಸ್' ಚಿತ್ರ, ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

  ಲಿಕ್ಕರ್ ದಂಧೆಯ ಸುತ್ತ ನಡೆಯೋ ಚಿತ್ರಕಥೆಯಲ್ಲಿ ಶಾರುಖ್ ಖಾನ್ ಡಾನ್ ಆಗಿ ಮಿಂಚಿದ್ದಾರೆ. ತೆರೆಮೇಲೆ ಮತ್ತೊಮ್ಮೆ ಡಾನ್ ಆಗಿ ಅಬ್ಬರಿಸಿರುವ ಕಿಂಗ್ ಖಾನ್ ಅಭಿನಯಕ್ಕೆ ಪ್ರೇಕ್ಷಕರು ಮಾತ್ರವಲ್ಲ ವಿಮರ್ಶಕರು ಕೂಡ ಮೋಡಿಯಾಗಿದ್ದಾರೆ.[ಟ್ವಿಟರ್ ವಿಮರ್ಶೆ: ಶಾರುಖ್ ಖಾನ್ 'ರಯೀಸ್' ಗೆ ಶಹಬ್ಬಾಸ್]

  ಹಾಗಾದ್ರೆ, ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ರಯೀಸ್' ಚಿತ್ರದ ವಿಮರ್ಶೆ ಹೇಗಿದೆ ಅಂತ ಇಲ್ಲಿದೆ ಓದಿ....

  ಡಾನ್ ಈಸ್‌ ಬ್ಯಾಕ್‌-ವಿಜಯ ಕರ್ನಾಟಕ

  80 ಮತ್ತು 90ರ ದಶಕದ ಕತೆಯಲ್ಲಿ ಶಾರುಖ್, ಶಾನ್ ದಾರ್‌ ಪರ್ಫಾಮನ್ಸ್ ನೀಡಿದ್ದಾರೆ. ಹೀಗಾಗಿ ಇವರ ಫಿಲ್ಮ್ ಕರಿಯರ್ ನಲ್ಲಿ 'ರಯೀಸ್' ಪ್ರಮುಖ ಚಿತ್ರವಾಗಲಿದೆ. ರಯೀಸ್ ಚಿತ್ರದಲ್ಲಿ ರೌಡಿಸಂ, ಗುಜರಾತ್‌ನ ಲಿಕ್ಕರ್ ಮಾಫಿಯಾ, ದಕ್ಷ ಅಧಿಧಿಕಾರಿಗೆ ಭ್ರಷ್ಟರು ನೀಡುವ ಉಪಟಳ, ಲವ್‌, ಅಭಿಮಾನಿಗಳು ಇಷ್ಟ ಪಡುವ ಫೈಟ್ಸ್ ಎಲ್ಲವೂ ಇದೆ. ಅದು ರೆಟ್ರೋ ಸ್ಟೈಲ್ ನಲ್ಲಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇನ್ನು ಸಿನಿಮಾದಲ್ಲಿ ಗಮನಸೆಳೆಯುವ ಮತ್ತೊಂದು ಅಂಶ ಕನ್ನಡಿಗ ರವಿವರ್ಮಾ ಅವರ ಸಾಹಸ ದೃಶ್ಯಗಳು. ಸಾಕಷ್ಟು ನೈಜವಾಗಿ ಫೈಟ್ಸ್ ಗಳನ್ನು ರವಿವರ್ಮಾ ಕಟ್ಟಿಕೊಟ್ಟಿದ್ದಾರೆ. ಪಾಕ್‌ ನಟಿ ಮಹಿರಾ ಖಾನ್‌ ಬದಲಿಗೆ ನಮ್ಮವರನ್ನೇ ಆಯ್ಕೆ ಮಾಡಬಹುದಿತ್ತೇನೊ. ಅಷ್ಟೇನೂ ಕೆಲಸ ಇಲ್ಲದೇ ಸುಂದರವಾಗಿಯೂ ಇಲ್ಲದ ನಟಿಯನ್ನು ಶಾರುಖ್ ಕರೆತಂದು ಸುಮ್ಮನೆ ವಿವಾದ ಮಾಡಿಕೊಂಡರು. ಇನ್ನುಳಿದ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಮ್‌ ಸಂಪತ್‌ ಸಂಗೀತದಲ್ಲಿ ಎರಡು ಹಾಡುಗಳಷ್ಟೇ ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಶಾರುಖ್, ರಯೀಸ್ ಸಿನಿಮಾದಿಂದ ಗೆಲುವನ್ನು ದಾಖಲಿಸುವ ಭರವಸೆ ಮೂಡಿಸಿದ್ದಾರೆ.

  ರಯೀಸ್ ಮದ್ಯದ ದಂಧೆಯಲ್ಲಿ ಪ್ರೇಕ್ಷಕರು ಬಂಧಿ-ವಿಜಯವಾಣಿ

  ರಯೀಸ್ ಸಿನಿಮಾದ ಮೊದಲರ್ಧ ನೋಡಿಸಿಕೊಂಡು ಹೋದರೆ, ದ್ವಿತೀಯಾರ್ಧದಲ್ಲಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿದ್ದಾರೆ ನಿರ್ದೇಶಕ ರಾಹುಲ್. ಮದ್ಯದ ಗುಂಗಿನಲ್ಲಿ ಕುರ್ಚಿಗೆ ತಲೆ ಒರಗಿಸುವ ಪ್ರೇಕ್ಷಕರಿಗೆ, ‘ಲೈಲಾ ಓ ಲೈಲಾ..' ಹಾಡಿನ ಮೂಲಕ ಬಡಿದೆಬ್ಬಿಸುತ್ತಾರೆ ಸನ್ನಿ ಲಿಯೋನ್. ‘ಜಾಲಿಮಾ..' ಎಂಬ ರೊಮ್ಯಾಂಟಿಕ್ ಗೀತೆ ತಕ್ಕ ಮಟ್ಟಿಗೆ ಕೇಳಲು ಇಷ್ಟವಾಗುತ್ತೆ. ಮಿಕ್ಕಂತೆ ರಾಮ್ ಸಂಪತ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಅಷ್ಟಾಗಿ ಕಾಡುವುದಿಲ್ಲ.

  'ರಯೀಸ್' ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಶಾರುಖ್. ಪಾತ್ರಕ್ಕೆ ಹೊಂದಿಕೊಂಡಿರುವ ಅವರ ದೇಹಭಾಷೆ, ಅದಕ್ಕೆ ತಕ್ಕಂತೆ ಲುಕ್ ಬದಲಿಸಿಕೊಂಡಿರುವ ಶಾರುಖ್, ಮದ್ಯದ ದೊರೆಯಾಗಿ ಸಿನಿಪ್ರಿಯರಲ್ಲಿ ನಶೆ ಏರಿಸುತ್ತಾರೆ. ಆಸಿಯಾ ಪಾತ್ರದಲ್ಲಿ ನಟಿಸಿರುವ ಪಾಕಿಸ್ತಾನಿ ನಟಿ ಮಹಿರಾ ಖಾನ್, ನಟನೆಯಲ್ಲಿ ತುಂಬ ಸಪ್ಪೆ. ಅತುಲ್ ಕುಲಕರ್ಣಿ ಮದ್ಯ ಮಾಫಿಯಾದ ದೊರೆಯಾಗಿ, ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸ್ನೇಹಿತನ ಪಾತ್ರಧಾರಿ ಮೊಹಮದ್ ಅಯೂಬ್ ಉತ್ತಮವಾಗಿ ನಟಿಸಿದ್ದಾರೆ. ಅಂತಿಮವಾಗಿ ಎಲ್ಲರ ನೆನಪಿನಲ್ಲಿ ಉಳಿಯುವ ಮತ್ತು ಕಾಡುವ ಪಾತ್ರ ನವಾಜುದ್ದೀನ್ ಸಿದ್ದಿಕಿಯದ್ದು. ಪೊಲೀಸ್ ಆಫೀಸರ್ ಜೈದೀಪ್ ಪಾತ್ರಕ್ಕೊಂದು ಗಾಂಭೀರ್ಯತೆ ತಂದುಕೊಟ್ಟಿದ್ದಾರೆ ಅವರು. ಎಂದಿನ ಶೈಲಿಯ ಶಾರುಖ್ ಸಿನಿಮಾಗಳಿಗೆ ಹೊಲಿಸಿದರೆ, ಈ ಚಿತ್ರ ಭಿನ್ನವೆನಿಸುತ್ತದೆ.

  ಅಮಲಿನೊಳಗೆ ಸಿಲುಕಿದ ಕಥೆ- ಪ್ರಜಾವಾಣಿ

  'ಡಾನ್ 2' ಚಿತ್ರದಲ್ಲಿ ಪಾತಕಿಯ ಪೋಷಾಕು ಧರಿಸಿದ್ದ ಶಾರುಖ್ ಖಾನ್, ಕಡಿಮೆ ತೂಕದ ಪಾತ್ರದೊಳಗೆ ಇಳಿಯುವ ಸಾಹಸ ಮಾಡಿದ್ದಾರೆ. ಅಕ್ರಮ ಚಟುವಟಿಕೆಗಳೇ ತುಂಬಿರುವ ತನ್ನ ಸುತ್ತಲಿನ ಪ್ರಪಂಚದೊಳಗೆ ಒಂದಾಗುವ 'ರಯೀಸ್', ಅದನ್ನು ಆಳುವ ಮಟ್ಟಕ್ಕೆ ಏರುವ ಹಪಹಪಿಗೆ ಒಳಗಾಗುವುದು ಮತ್ತು ಸಂಘರ್ಷದೊಳಗೆ ಸಿಲುಕುವುದು ಕಥೆಯ ವಸ್ತು.

  ಶಾರುಖ್ ಇಡೀ ಸಿನಿಮಾದ ಕೇಂದ್ರವಾದರೂ, ಸಿದ್ದಿಕಿ ಅಭಿನಯ ಅವರ ವರ್ಚಸ್ಸನ್ನು ಮೀರುತ್ತದೆ. ರಾಜಕಾರಣ, ಪೊಲೀಸರ ಭ್ರಷ್ಟಾಚಾರ, ತಣ್ಣಗೆ ಕಾಣುವ ಭೂಗತ ಪ್ರಪಂಚದಲ್ಲಿನ ಕ್ರೌರ್ಯ, ಇವೆಲ್ಲವುಗಳ ಮುಖಗಳನ್ನು ಅನೇಕ ಹಿಂದಿ ಚಿತ್ರಗಳು ಚಿತ್ರಿಸಿವೆ. ನಿರ್ದೇಶಕರು ಅವುಗಳನ್ನೇ ಇಲ್ಲಿ ಸ್ಫೂರ್ತಿಯಾಗಿ ಪಡೆದುಕೊಂಡಿದ್ದಾರೆ. ಶಾರುಖ್ ಮತ್ತು ಮಹಿರಾ ಖಾನ್ ಪ್ರೇಮಕಥೆಗೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಚಿಕ್ಕದಾಗಿದ್ದರೂ ಈ ಪ್ರೇಮ ಪ್ರಸಂಗಗಳು ಮುದ ನೀಡುತ್ತವೆ. ಪಾಕಿಸ್ತಾನದ ನಟಿ ಮಹಿರಾ ಖಾನ್ ನಟನೆಯಲ್ಲಿ ಶಾರುಖ್ಗೆ ಸಾಟಿಯಾಗುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರ ಪಾತ್ರಕ್ಕೆ ಸಿಕ್ಕಿರುವ ಅವಕಾಶ ಕಡಿಮೆ. ತಾಂತ್ರಿಕವಾಗಿ 'ರಯೀಸ್' ಪ್ರಖರವಾಗಿದೆ. ದೀಪಾ ಭಾಟಿಯ ಸಂಕಲನ ಮತ್ತು ಮೋಹನನ್ ಛಾಯಾಗ್ರಹಣ ನಿರ್ದೇಶನದ ವೈಫಲ್ಯಗಳನ್ನು ಮರೆಮಾಚಿಸುವ ಸಾಹಸ ಮಾಡುತ್ತದೆ. ರಾಮ್ ಸಂಪತ್ ಸಂಗೀತಕ್ಕೆ ಪ್ರಾಮುಖ್ಯವಿಲ್ಲ. ಸನ್ನಿ ಲಿಯೋನ್ ಕಾಣಿಸಿಕೊಂಡಿರುವ ಹಳೆಯ ಹಾಡಿನ ಹೊಸ ಅವತರಣಿಕೆ ಚಿತ್ರದ ಆಕರ್ಷಣೆಗಳಲ್ಲಿ ಒಂದು.

  SHAH RUKH KHAN'S PERFORMANCE IS LOUD- Banglore Mirror

  In one of the lesser melodramatic scenes from this film, we see SRK as the eponymous Raees, breaking down. His cheeks swell up like a puri and his head shakes like he's having a seizure and even though not a single tear rolls out of his eyes, from the odd groan, we're assured that he's crying. His performance in the scene seems like a reaction to being forced to watch this film twice.


  The film may be set in the '80s but it also takes the cinematic liberties that films made in the era did. In the action scenes, SRK mounts walls and leaps over buildings with the agility of Contra. But this is barely enough to make up for his loud and lazy performance. SRK's ardent fans have endured the actor's terrible film choices for long. It's about time they wake up and bite into the red chilli.

  English summary
  Bollywood actor Shahrukh Khan Starrer Raees Movie has Received Good response from the critics. Here is the collection of ''Raee' reviews by Top News Papers of Karnataka

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more