»   » ಹಾಸ್ಯದ ಗುಳಿಗೆ 'ರಾಜ್‌ ವಿಷ್ಣು' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

ಹಾಸ್ಯದ ಗುಳಿಗೆ 'ರಾಜ್‌ ವಿಷ್ಣು' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಶರಣ್-ಚಿಕ್ಕಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಚಿತ್ರ 'ರಾಜ್‌ ವಿಷ್ಣು' ತೆರೆಕಂಡಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಸಹ ಈ ಹಿಂದೆ ಅವರ 'ಅಧ್ಯಕ್ಷ' ಚಿತ್ರ ನೋಡಿದಷ್ಟು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

  ಇಬ್ಬರು ಕಾಮಿಡಿ ನಟರು ಮತ್ತೆ ತೆರೆಮೇಲೆ ಕಮಾಲ್ ಮಾಡಿರುವ 'ರಾಜ್‌ ವಿಷ್ಣು' ಚಿತ್ರದ ನಗುವಿನ ಗುಳಿಗೆ ಪ್ರೇಕ್ಷಕ ವರ್ಗಕ್ಕೆ ಹೆಚ್ಚು ಇಷ್ಟವಾಗಿದೆ. ಅಂತೆಯೇ ಈ ಚಿತ್ರ ನಮ್ಮ ವಿಮರ್ಶಕರಿಗೂ ಮೆಚ್ಚಿಗೆ ಆಗಿದ್ಯಾ? ಸಿನಿಮಾ ಬಗ್ಗೆ ಅವರ ಅಭಿಪ್ರಾಯವೇನು? ಅದಕ್ಕೆ ಉತ್ತರ ಇಲ್ಲಿದೆ.

  ವಿಮರ್ಶೆ: 'ಅಧ್ಯಕ್ಷ'ರನ್ನು ನೆನಪಿಸಿದ 'ರಾಜ್‌ ವಿಷ್ಣು'

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ರಾಜ್ ವಿಷ್ಣು' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಈ ಕೆಳಗಿನಂತಿದೆ ಓದಿರಿ..

  ಲೇಬಲ್ ನೆಚ್ಚಿಕೊಂಡ ಕಾಮಿಡಿ ಟಾನಿಕ್: ವಿಜಯವಾಣಿ

  ತಮಿಳಿನ 'ರಜನಿ ಮುರುಗನ್' ಚಿತ್ರದ ರಿಮೇಕ್ ಈ 'ರಾಜ್ ವಿಷ್ಣು' ಚಿತ್ರದಲ್ಲಿ ಅಲ್ಲಲ್ಲಿ ಒಂದಷ್ಟು ದೃಶ್ಯಗಳನ್ನು ಬದಲಿಸಿರುವುದು ಬಿಟ್ಟರೆ, ಸಂಪೂರ್ಣ ಮೂಲಚಿತ್ರಕ್ಕೆ ನಿಷ್ಠರಾಗಿದ್ದಾರೆ ನಿರ್ದೇಶಕರು. 'ಅಧ್ಯಕ್ಷ' ಚಿತ್ರದಲ್ಲಿ ವರ್ಕೌಟ್ ಆಗಿದ್ದ ಶರಣ್-ಚಿಕ್ಕಣ್ಣ ಕಾಂಬಿನೇಷನ್ ಇಲ್ಲಿ ತುಸು ಮಂಕಾಗಿದೆ. ಸಂಭಾಷಣೆಯಲ್ಲಿ ಚುರುಕುತನವಿದೆ. ನಿರೂಪಣೆ ವೇಗವಾಗಿಲ್ಲದಿರುವುದು ಸ್ವಲ್ಪ ವಾಕರಿಗೆ ತರುತ್ತದೆ. ವೈಭವಿ ಮುದ್ದಾಗಿ ಕಾಣಿಸುತ್ತಾರೆ. ಶ್ರೀನಿವಾಸಮೂರ್ತಿ ನಟನೆಯಲ್ಲಿ ಖದರ್ ಇದ್ದರೆ, ಸಾಧು ಕೋಕಿಲ ನಗಿಸುವ ಕಾಯಕವನ್ನು ಮುಂದುವರೆಸಿದ್ದಾರೆ. ವಿಲನ್ ಆಗಿ 'ಭಜರಂಗಿ' ಲೋಕಿ ಇಷ್ಟವಾಗುತ್ತಾರೆ. ಟೈಟಲ್ ಸಾಂಗ್ ಬಿಟ್ಟರೆ ಉಳಿದ ಹಾಡುಗಳು ನೆನಪಿನಲ್ಲಿ ಉಳಿಯುವುದು ಕಷ್ಟ.

  ರಂಜನೆಯ ಪೊಟ್ಟಣದಲ್ಲಿ ಹಾಸ್ಯದ ಗುಳಿಗೆ: ಪ್ರಜಾವಾಣಿ

  ತಮಿಳಿನ 'ರಜನಿ ಮುರುಗನ್' ಚಿತ್ರದ ಕಥೆಯನ್ನು ತಮ್ಮದೇ ರೀತಿಯಲ್ಲಿ ಒಗ್ಗಿಸಿಕೊಂಡು ಪ್ರೇಕ್ಷಕರಿಗೆ ನಗುವಿನ ರಸದೌತಣ ಉಣಬಿಡಿಸಿದ್ದಾರೆ. ಶರಣ್-ಚಿಕ್ಕಣ್ಣ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕ ಸಫಲರಾಗಿದ್ದಾರೆ. ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದು, ಎಲ್ಲರ ಪಾತ್ರಗಳು ಗಮನಸೆಳೆಯುತ್ತವೆ. ರಾಜೇಶ್ ಕಟ್ಟ ಛಾಯಾಗ್ರಹಣ ಚಿತ್ರದ ಕೆಲವು ದೃಶ್ಯಗಳಿಗಷ್ಟೇ ಸೀಮಿತ. ಅರ್ಜುನ್ ಜನ್ಯ ಸಂಯೋಜನೆಯ ಹಾಡುಗಳು ಕೇಳುಗರಿಗೆ ಕಾಡುವುದಿಲ್ಲ - ಕೆ.ಎಚ್‌.ಓಬಳೇಶ್

  ಹೆಸರಲ್ಲಿ ಆರಾಧನೆ; ಮಿಕ್ಕಿದ್ದು ಮನರಂಜನೆ: ಉದಯವಾಣಿ

  ಕಥೆಯಲ್ಲಿ ಅಷ್ಟೇನೂ ವಿಶೇಷತೆ ಇಲ್ಲ. ಪ್ರೇಕ್ಷಕರನ್ನು ಹಿಡಿದಿಡುವ ಸನ್ನಿವೇಶವಾಗಲೀ ಅಥವಾ ಖುಷಿಪಡುವ ದೃಶ್ಯವಾಗಲೀ ಇಲ್ಲ. ಕೆಲವು ಪಾತ್ರಗಳು ಮತ್ತು ಸಂಭಾಷಣೆಗಳನ್ನು ಜನ ಎಂಜಾಯ್ ಮಾಡುತ್ತಾರೆ ಅಷ್ಟೆ. ಕೆ.ಮಾದೇಶ್ ಗೆ ಅವರ ಇತರೆ ಚಿತ್ರಗಳಂತೆ ಈ ಚಿತ್ರದಲ್ಲಿ ಹಿಡಿತ ಸಿಕ್ಕದಿರುವುದು ಕಾಣುತ್ತದೆ. ಶರಣ-ಚಿಕ್ಕಣ್ಣರಿಗೆ ಪಾತ್ರ ಹೊಸದಲ್ಲವಾದ್ದರಿಂದ ಲವಲವಿಕೆಯಿಂದ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ ನಟನೆ ಬಗ್ಗೆ ಏನು ಹೇಳುವುದೂ ಕಷ್ಟವೇ. ಆದರೆ, ಬಹಳ ಮುದ್ದಾಗಿ ಕಾಣಿಸುತ್ತಾರೆ. ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಮತ್ತು ರಾಜೇಶ್ ಕಟ್ಟ ಛಾಯಾಗ್ರಹಣ ಚೆನ್ನಾಗಿದೆ -ಚೇತನ್ ನಾಡಿಗೇರ್

  Raj Vishnu Movie Review: The Times of India

  The film has ample silly humour and gags, but is a rather slow in the narrative and lacks zing. The film has the required elements that one expects from a Sharan starrer, but it does not match up to an Adyaksha. The film is a mix of a family drama and a love story, laced with comedy. There are many interesting moments, but the narrative seems jagged. Sharan is entertaining, but the role seems rather repetitive and one wonders if he could do with something new. Chikkanna is funny and does what is required of him. Newbie Vaibhavi Shandilya looks good and is a promising talent. The ensemble cast do their bit. This film can be a good watch for Sharan and Chikkanna fans, with gags that can make one laugh, but be warned that the plot isn't the most solid one.

  English summary
  Kannada Actor Sharan and Chikkanna Starrer kannada movie 'Raj Vishnu' has recieved possitive response from Critics. The movie critics review is here..

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more