For Quick Alerts
  ALLOW NOTIFICATIONS  
  For Daily Alerts

  'ಮಾರುತಿ 800' ನೋಡಿದ ವಿಮರ್ಶಕರು 'ಜೈ'ಕಾರ ಹಾಕಿದ್ರಾ?

  By Harshitha
  |

  ನೃತ್ಯ ಸಂಯೋಜಕ ಕಮ್ ನಿರ್ದೇಶಕ ಹರ್ಷ ಬಗ್ಗೆ ಕೊಂಚ ನಿರೀಕ್ಷೆ ಜಾಸ್ತಿ. ಅದ್ರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ 'ಭಜರಂಗಿ' ಹಾಗೂ 'ವಜ್ರಕಾಯ' ದಂತಹ ಹಿಟ್ ಸಿನಿಮಾಗಳನ್ನ ಕೊಟ್ಟ ಮೇಲೆ ಹರ್ಷ ಬಗ್ಗೆ ಎಲ್ಲರ ಎಕ್ಸ್ ಪೆಕ್ಟೇಷನ್ಸ್ ದುಪ್ಪಟ್ಟಾಗಿತ್ತು.

  ಇನ್ನೂ ಕಾಮಿಡಿ ಸಿನಿಮಾಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಟ ಶರಣ್ ಹಾಗೂ ಹರ್ಷ 'ಜೈ ಮಾರುತಿ 800' ಚಿತ್ರದ ಮೂಲಕ ಒಂದಾಗುತ್ತಿದ್ದಾರೆ ಅಂದಾಗ, ಸಹಜವಾಗಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. [ವಿಮರ್ಶೆ: ಶರಣ್ ಅಭಿನಯದ, ಹರ್ಷ ನಿರ್ದೇಶನದ 'ಜೈ ಮಾರುತಿ 800']

  ಅತಿಯಾದ ನಿರೀಕ್ಷೆಗೋ ಏನೋ, 'ಜೈ ಮಾರುತಿ 800' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಜೈ ಮಾರುತಿ 800' ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಸಿಕ್ಕಿದ್ರೂ, ವಿಮರ್ಶಕರು ಮಾತ್ರ ಫುಲ್ ಮಾರ್ಕ್ಸ್ ಕೊಟ್ಟಿಲ್ಲ.

  ಕರ್ನಾಟಕದ ಜನಪ್ರಿಯ ಪತ್ರಿಕೆಗಳು ಪ್ರಕಟಿಸಿರುವ 'ಜೈ ಮಾರುತಿ 800' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

  ಗಂಭೀರ ಕಥೆಗೆ ಕಾಮಿಡಿ ಸ್ಪರ್ಶ - ಉದಯವಾಣಿ

  ಗಂಭೀರ ಕಥೆಗೆ ಕಾಮಿಡಿ ಸ್ಪರ್ಶ - ಉದಯವಾಣಿ

  'ಜೈ ಮಾರುತಿ 800' ಚಿತ್ರ ಮೇಲ್ನೋಟಕ್ಕೆ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ. ಸಾಮಾನ್ಯವಾಗಿ ಕಾಮಿಡಿ ಸಿನಿಮಾಗಳೆಂದರೆ ಕಥೆಗಿಂತ ಡೈಲಾಗ್ ಹಾಗೂ ಸನ್ನಿವೇಶಗಳಷ್ಟೇ ಮುಖ್ಯವಾಗುತ್ತದೆ. ಆದರೆ, ಹರ್ಷ ಮಾತ್ರ ಒಂದು ಗಟ್ಟಿ ಕಥೆಯೊಂದಿಗೆ ಕಾಮಿಡಿ ಸಿನಿಮಾ ಮಾಡಿದ್ದಾರೆ. ಆ ಕಥೆಯಲ್ಲಿ ಗಟ್ಟಿತನವಿದೆ, ಅದಕ್ಕೊಂದು ಫ್ಲ್ಯಾಶ್ ಬ್ಯಾಕ್ ಇದೆ. ಇಂತಿಪ್ಪ ಕಥೆಯನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ಹರ್ಷ. ಹಾಗೆ ನೋಡಿದರೆ ಇದೇ ಚಿತ್ರದ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಎಂದರೆ ತಪ್ಪಲ್ಲ - ರವಿಪ್ರಕಾಶ್ ರೈ

  ವೈರತ್ವದ ಬಾಟಲಿಯಲ್ಲಿನ ಅದೇ ಕಥಾನಕ - ಪ್ರಜಾವಾಣಿ

  ವೈರತ್ವದ ಬಾಟಲಿಯಲ್ಲಿನ ಅದೇ ಕಥಾನಕ - ಪ್ರಜಾವಾಣಿ

  ಒಬ್ಬ ರಾಜ. ಆತನಿಗೆ ಮಲ್ಲಯುದ್ಧವೆಂದರೆ ಅಚ್ಚುಮೆಚ್ಚು. ಪ್ರತಿ ವರ್ಷ ತನ್ನ ರಾಜ್ಯದಲ್ಲಿ ಮಲ್ಲಯುದ್ಧದ ಸ್ಪರ್ಧೆ ನಡೆಸಿ, ಗೆದ್ದವರಿಗೆ ಸನ್ಮಾನಿಸುವುದು ರಾಜನ ರೂಢಿ. ಒಂದು ವರ್ಷ ಸ್ಪರ್ಧೆಯಲ್ಲಿ ಎದುರಾಳಿಗಳಾದವರು ಬದ್ಧ ವೈರಿಗಳು. ಸ್ಪರ್ಧೆಯ ಅವಧಿ ಮುಗಿದರೂ ಯಾರೊಬ್ಬರೂ ಸೋಲದಿರುವುದನ್ನು ಕಂಡ ರಾಜ ತನ್ನ ರಾಜ್ಯವನ್ನು ಇಬ್ಬರಿಗೂ ಸಮವಾಗಿ ಹಂಚಿ, ಕೊನೆಯುಸಿರೆಳೆಯುತ್ತಾನೆ. ಸಿಂಹರಾಯಪುರ, ಗಜಪುರ ಪ್ರದೇಶಗಳನ್ನು ಪಡೆದುಕೊಂಡವರು ತಮ್ಮ ವೈರತ್ವವನ್ನು ಮುಂದುವರೆಸುತ್ತಾರೆ. ಅಲ್ಲಿನ ಜನರೂ ವೈರಿಗಳಾಗುತ್ತಾರೆ. ಸಿಂಹರಾಯಪುರದ ನಾಯಕ ನರಸಿಂಹನ ತಮ್ಮ ಚಿಕ್ಕಂದಿನಲ್ಲೇ ಅಪಘಾತದಲ್ಲಿ ತೀರಿಕೊಳ್ಳುತ್ತಾನೆ. ರಘು ಎಂಬ ಬಾಲಕನೇ ಸಾವಿಗೆ ಕಾರಣ ಎಂದುಕೊಂಡ ನರಸಿಂಹ ಆತನ ಕುಟುಂಬದವನ್ನು ಹಿಂಸಿಸುತ್ತಾನೆ. ಊರು ಬಿಟ್ಟು ಹೋದ ರಘು ಪೇಟೆಯಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ಸ್ನೇಹಿತ ಜೀವಾನಿಗೆ ತನ್ನ ಜೀವನ ವೃತ್ತಾಂತವನ್ನು ಹೇಳಿಕೊಳ್ಳುತ್ತಿರುವಾಗಲೇ ರಘು ಅಘಾತದಲ್ಲಿ ಸಾಯುತ್ತಾನೆ. ಮುಂದೆ ಜೀವಾ ತನ್ನ ಸ್ನೇಹಿತನ ಊರಿಗೆ ಹೋಗಿ ನರಸಿಂಹನ ಬಂಧನದಿಂದ ರಘುವಿನ ಕುಟುಂಬವನ್ನು ಪಾರು ಮಾಡಲು ಸೂತ್ರಗಳನ್ನು ಹೆಣೆಯುತ್ತಾನೆ.

  ಜೈ ಮಾರುತಿ ಎಂಟುನೂರು; ಮತ್ತದೇ ದೇವರು-ಊರು; ಅಗತ್ಯ ವಿಕ್ಸ್ ಆಕ್ಷನ್ ಐನೂರು - ಕನ್ನಡಪ್ರಭ

  ಜೈ ಮಾರುತಿ ಎಂಟುನೂರು; ಮತ್ತದೇ ದೇವರು-ಊರು; ಅಗತ್ಯ ವಿಕ್ಸ್ ಆಕ್ಷನ್ ಐನೂರು - ಕನ್ನಡಪ್ರಭ

  "ಚಂದಮಾಮ ಕಥೆ ಹೇಳ್ತಾ ಇದ್ಯೇನೋ?" ಎಂಬ ಸಂಭಾಷಣೆ ಬರೆಯುವುದಕ್ಕೂ ಮೊದಲು ಕೆಲವು ಚಂದಮಾಮ ಕಥೆಗಳನ್ನು ಕಥೆಗಾರ-ನಿರ್ದೇಶಕ ಓದಿದ್ದರೆ, ಇಂತಹ ಕೆಟ್ಟ ಚಿತ್ರಕಥೆಯ, ಅತಿ ಕೆಟ್ಟ ಸ್ಕ್ರಿಪ್ಟ್ ನ ಸಹವಾಸಕ್ಕೆ ಬೀಳುತ್ತಿರಲಿಲ್ಲವೇನೋ! ವಿಕ್ಷಿಪ್ತತೆಯೇ ವಿಜೃಂಭಿಸುವ ಈ ಸ್ಕ್ರಿಪ್ಟ್ ನಲ್ಲಿ ಮನರಂಜನೆ ಮೂರಾಬಟ್ಟೆಯಾಗಿರುವದಷ್ಟೇ ಅಲ್ಲ, ಪಾತ್ರಗಳಗಾಲಿ, ಸಿನೆಮಾದಲ್ಲಿ ನಡೆಯುವ ಘಟನೆಗಳಾಗಲೀ ಯಾವುವೂ ಒಂದು ಕ್ಷಣವೂ ಮನಸ್ಸಿಗೆ ಮುದ ನೀಡುವುದಿಲ್ಲ. ಕಾನೂನಿನ ಗಂಧ ಗಾಳಿಯೇ ಬೀಸದ, ಯಾರನ್ನು ಬೇಕಾದರೂ ಜೀತದಾಳು ಮಾಡಿಕೊಳ್ಳಬಹುದಾದ, ಉಸಿರೆತ್ತಿದರೆ ಹೊಡೆದಾಡಿಕೊಂಡು ಸಾಯುವ ಈ ಗ್ರಾಮಗಳ ಕಲ್ಪನೆಯನ್ನು ಮೂರನೇ ಬಾರಿಗೆ ಮತ್ತೆ ತೋರಿಸುತ್ತಿರುವುದು ಪ್ರೇಕ್ಷಕನಿಗೆ ಉಸಿರುಗಟ್ಟಿದ ಅನುಭವ. ಇವಕ್ಕೆ ಅಗತ್ಯವಾದ ಎಸ್ಟಾಬ್ಲಿಶ್ಮೆಂಟ್ ಇಲ್ಲದೆ ಮೂರನೇ ಬಾರಿಗೂ ಸಿನೆಮಾ ಸೊರಗಿದೆ. ಶರಣ್ ತಮ್ಮ ಎಂದಿನ ನಟನೆಯನ್ನು ಮುಂದುವರೆಸಿದ್ದು ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಸಿನೆಮಾ ನೋಡುವ ಬೇಸರಿಕೆಯನ್ನು ಇಮ್ಮಡಿಗೊಳಿಸುತ್ತಾರೆ. ಪಾತ್ರದ ಕೆಟ್ಟ ಪರಿಕಲ್ಪನೆಯೂ ಇರಬಹುದು, ಜಯಸಿಂಹನ ತಂಗಿಯ ಪಾತ್ರದಲ್ಲಿ ಶುಭಾ ಪೂಂಜಾ ಜೀವಮಾನದ ಅತಿ ಕೆಟ್ಟ ನಟನೆ ನೀಡಿದ್ದಾರೆ. ಮತೊಬ್ಬ ವಿಲನ್ ವೀರಪ್ಪ ಮಗಳಾಗಿ, ಶರಣ್ ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಶೃತಿ ಹರಿಹರನ್ ಕೂಡ ಬೇಸರ ಮೂಡಿಸುತ್ತಾರೆ. ಅರುಣ್ ಸಾಗರ್ ಮತ್ತು ಕಾದಾಡುವ ವಿಲನ್ ಗಳ ನಟನೆ ಕೂಡ ಇದಕ್ಕೆ ವಿರುದ್ಧವಲ್ಲ. ಇದಕ್ಕೆ ತಕ್ಕನಾದ ಅಬ್ಬರದ ಸಂಗೀತ ನೀಡಿರುವ ಅರ್ಜುನ್ ಜನ್ಯ ಪ್ರೇಕ್ಷಕರ ಸಹನೆಗೆ ಇನ್ನಷ್ಟು ಸವಾಲೆಸೆಯುತ್ತಾರೆ. - GN

  When even God can’t save the day - The Hindu

  When even God can’t save the day - The Hindu

  Jai Maruthi 800 does not have a story but does one thing spectacularly well. It demeans women, objectifies them and worse, makes them say dialogues that are vulgar and disgusting. Sample this: Smita (Shubha Poonja), the sister of one of the warring heads, has taken a liking to Jeeva. She goes up to him to seduce him and asks him if he wants to know her ‘body data' or biodata. Smitha then goes on to call herself panchamrutha, a treat for Jeeva. If this is not enough, the film is littered with jokes about rape, scenes where women are beaten and even kicked in the name of ‘humour'. - Archana Nathan

  Same old model! - Deccan Chronicle

  Same old model! - Deccan Chronicle

  A good film can be a commercial success, but not all commercially successful films are good. So, attempts to repeat their former glory, using the same old mould simply implies a lack of creative mind. Even the Pavana-putra, Anjani-suta Hanuman may not be laughing at this 800 model as much he showered his blessing on Bhajrangi and Vajrakaya! - Shashiprasad SM

  Jai Maruthi 800 Review - Bangalore Mirror

  Jai Maruthi 800 Review - Bangalore Mirror

  Among the actors, Arun Sagar stands out. Most characters veer between being serious and buffoonery. Sharan's six-packs and action in the climax fails to salvage the film. Whatever good that the art, music and cinematography departments managed look like frills on a story without substance. Even the fan following Sharan has managed in the last few years would find this vehicle lacking horsepower. - Shyam Prasad S

  Jai Maruthi 800 Review - Times of India

  Jai Maruthi 800 Review - Times of India

  Sharan, in his tailormade role, excels and the climax scenes featuring him sporting a six-pack with well-oiled abs are something new for his fans and will definitely draw whistles. Sruthi Hariharan has a typical Ms Goody-Two-Shoes role, which she owns with her subtle expressions and looks good in the songs too. Shubha Poonja, as the raunchy Smitha, is a hoot, especially for the front benchers and proves that she could handle comedy and glamorous role with equal ease as she does with her performance oriented roles. Saurav Lokesh and Madhu Guruswamy deserve special mention for their feisty performances as the two warring heads. The scenes featuring Kuri Pratap and Arun Sagar too are an added bonus for the masses. - Sunayana Suresh

  English summary
  Kannada Actor Sharan starrer 'Jai Maruthi 800' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X