»   » ಸಿಂಪಲ್ ಲವ್ ಸ್ಟೋರಿಗೆ ಗ್ರ್ಯಾಂಡ್ ಓಪನಿಂಗ್

ಸಿಂಪಲ್ ಲವ್ ಸ್ಟೋರಿಗೆ ಗ್ರ್ಯಾಂಡ್ ಓಪನಿಂಗ್

Posted By:
Subscribe to Filmibeat Kannada

ಸಿಂಪಲ್ ಆಗೊಂದು ಲವ್ ಸ್ಟೋರಿ ಶೀರ್ಷಿಕೆ ಉದ್ದ ಎಷ್ಟು ದೊಡ್ಡದಿದೆ ಟ್ಯಾಗ್ ನೀಡಲು ಸಾಧ್ಯವಿಲ್ಲದ್ದಷ್ಟು ಉದ್ದ ಇದೆ. ಟ್ಯಾಗ್ ಎಂದರೆ ನಮ್ಮ ವರದಿ ಕೊನೆಯಲ್ಲಿ ನೀವು ಕಾಣುವ ಪದಗಳು, ಇವುಗಳನ್ನು ಕ್ಲಿಕ್ ಮಾಡಿದರೆ ಆ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಲೇಖನಗಳು ನಿಮಗೆ ಸಿಗುತ್ತದೆ

ಅದು ಹಾಗಿರಲಿ, ಫೇಸ್ ಬುಕ್, ಟ್ವಿಟರ್, ಆಂಡ್ರಾಯ್ಡ್ ಆಪ್ ಸೇರಿದಂತೆ ಎಲ್ಲೆಡೆ ಚಿತ್ರದ ಪ್ರಚಾರ ಭರ್ಜರಿಯಾಗಿ ಆಗಿದೆ. ಟ್ರೈಲರ್ ನಲ್ಲಿ ಕಂಡಿದ್ದು ತೆರೆಯ ಮೇಲೆ ಹೇಗೆ ಮೂಡಿದೆ ಎಂಬ ಕುತೂಹಲದಿಂದ ರಾಜ್ಯದಾದ್ಯಂತ ಸಿನಿ ರಸಿಕರು ಥೇಟರ್ ಗಳತ್ತ ಮುಗಿ ಬಿದ್ದಿದ್ದಾರೆ.

ನಿರ್ದೇಶಕ ಸುನಿ ಅಲಿಯಾಸ್ ಸುನಿಲ್ ಅವರ ಚೊಚ್ಚಲ ಪ್ರಯತ್ನವಿದು. ಹೇಮಂತ್ ನಿರ್ಮಿಸಿರುವ ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಹಣವಿದೆ. ಚಿತ್ರದ ಟ್ರೇಲರ್ ಗಳು ಆರಂಭದಿಂದಲೂ ಕುತೂಹಲ ಕೆರಳಿಸುತ್ತಾ ಬಂದಿವೆ. ತುಘ್ಲಕ್ ಖ್ಯಾತಿಯ ರಕ್ಷಿತ್ ಶೆಟ್ಟಿ ಹಾಗೂ ಮನ್ವಂತರ ಸೀರಿಯಲ್ ಖ್ಯಾರಿಯ ಶ್ವೇತಾ ಶ್ರೀವಾತ್ಸವ್ ಚಿತ್ರದ ನಾಯಕ ನಾಯಕಿ. ಚಿತ್ರದ ಓಪನಿಂಗ್ ಹೇಗಿದೆ.. ಟ್ವಿಟ್ಟರ್ ನಲ್ಲಿ ಚಿತ್ರಪ್ರೇಮಿಗಳು ಕೊಟ್ಟ ಒನ್ ಲೈನ್ ವಿಮರ್ಶೆ ಎಲ್ಲವೂ ಮುಂದಿನ ಚಿತ್ರ ಸರಣಿಯಲ್ಲಿ ನಿಮಗಾಗಿ.. ಸಂಪೂರ್ಣ ಚಿತ್ರವಿಮರ್ಶೆ ನಿರೀಕ್ಷಿಸಿ

ಆನ್ ಲೈನ್ ಬುಕ್ಕಿಂಗ್ ಗೊಂದಲ

ಜನಪ್ರಿಯ ಆನ್ ಲೈನ್ ಬುಕ್ಕಿಂಗ್ ತಾಣ bookmyshow. com ನಲ್ಲಿ ಸ್ಟಾರ್ ಗಳಿಲ್ಲದ ಈ ಚಿತ್ರ ಟಾಪ್ 5 ಸ್ಥಾನಕ್ಕೇರಿದೆ. ಬೆಂಗಳೂರಿನ ಯಾವ ಮಾಲ್ ಸ್ಕ್ರೀನ್ ಗಳಲ್ಲಿ ಸಂಜೆ ಹಾಗೂ ರಾತ್ರಿ ಪ್ರದರ್ಶನ ಇಲ್ಲದಿರುವುದು ಸಾಫ್ಟ್ ವೇರ್ ಕ್ಷೇತ್ರ ಚಿತ್ರ ಅಭಿಮಾನಿಗಳಿಗೆ ಕಿರಿಕಿರಿ ಉಂಟು ಮಾಡಿದೆ.

ಎಲ್ಲೆಡೆ ಟಿಕೆಟ್ ಸೋಲ್ಡ್ ಔಟ್

ಹಾಸನದಲ್ಲಿ ಸ್ಟಾರ್ ನಟರ ಚಿತ್ರಗಳು ಹೌಸ್ ಫುಲ್ ಕಾಣುವುದೇ ಕಷ್ಟ. ಆದರೆ, SOLS ಚಿತ್ರದ ಬಾಲ್ಕನಿ ಅವಧಿಗೆ ಮುನ್ನವೇ ಸೋಲ್ಡ್ ಔಟ್. ಬೆಂಗಳೂರಿನ ಮುಖ್ಯ ಥೇಟರ್ ಅನುಪಮದಲ್ಲಿ ಮಾರ್ನಿಂಗ್ ಶೋ ಹೌಸ್ ಫುಲ್ . ಚಿತ್ರ ತಂಡ ಬೆಳಗ್ಗಿನಿಂದ ಸಂಜೆ ತನಕ ಇದೇ ಥೇಟರ್ ನಲ್ಲಿ ಇರುವ ನಿರೀಕ್ಷೆಯಿದೆ.

ಡೈಲಾಗ್ ಗಳೆ ಜೀವಾಳ

"ಗಳಿಗೆ ಸಿದ್ಧ ಒಳಗೊಳಗೆ ಮಾಡ್ದಾ ಅಂದಂಗೆ. ಇನ್ನೊಂದು ಡೈಲಾಗ್ ಹಿಂಗಿದೆ...ಕೈ ಬಿಡ್ತೀಯಾ, ನಿನ್ನಲ್ಲೇ ಕೇಳ್ತಾ ಇರೋದು, ಕೈ ಬಿಡ್ತೀಯಾ... ಹಲೋ, ಹಿಡ್ಕೊಂಡಿರೋ ಕೈ ಬಿಡ್ತೀಯಾಂತಾ..."

"ಕೂತ್ಕೊಂಡು ರಂಗೋಲಿ ಹಾಕೋ ನಿನಗೇ ಇಷ್ಟು ಪೊಗರಿರಬೇಕಾದರೆ ನಿಂತ್ಕೊಂಡು ಧಮ್ ಹೊಡೆಯೋ ನನಗೆಷ್ಟಿರ ಬೇಡ..."

"ಮೇಣದಬತ್ತಿ ಎಷ್ಟೇ ಉದ್ದಾ ಇದ್ರು ಫ್ಲೇಮ್ ಒಂದೇ!"

ಓಪನಿಂಗ್ ಸೀನ್'

ರೇಡಿಯೋಸಿಟಿ ಖ್ಯಾತ ಆರ್ ಜೆ ರಚನಾ ಜೊತೆ ನಾಯಕ ರಕ್ಷಿತ್ ಶೆಟ್ಟಿ ಮಾತುಕತೆ

ಸಿಂಪಲ್ ಆಗಿ ತನ್ನ ಕಥೆ ನಿರೂಪಿಸಿದ ನಾಯಕ ನಟಿ ಶ್ವೇತಾ.

ಮಧ್ಯಂತರ ತನಕ ಚಿತ್ರ ಸರಾಗವಾಗಿ ಸಾಗುತ್ತದೆ. ಫ್ಲಾಶ್ ಬ್ಯಾಕ್ ನಲ್ಲಿ ಕಥೆ ಹೇಳುವ ಕಲೆ ಸರಿಯಾಗಿ ಬಳಕೆಯಾಗಿದೆ

ಮಧ್ಯಂತರದ ತನಕ ಆಹ್ಲಾದಕರ ಹಿನ್ನೆಲೆ ಸಂಗೀತ, ಫ್ಲಾಶ್ ಬ್ಯಾಕ್ ನಿರೂಪಣೆ, ಸಾಂಗ್ಸ್ ದೃಶ್ಯ ವೈಭವ ಜೊತೆಗೆ ಮಸ್ತ್ ಡೈಲಾಗ್ಸ್ ಗಳು ನಿಮ್ಮನ್ನು ಹಿಡಿದಿಡಲಿದೆ.

ಲವ್ ಗುರು ಪಾತ್ರದಲ್ಲಿ ಶ್ರೀನಗರ ಕಿಟ್ಟಿ

ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರ ತಂಡ ಹೇಳುತ್ತಾ ಬಂದಿತ್ತು. ಅದರಂತೆ ಕಿಟ್ಟಿಗೆ ಒಳ್ಳೆ ರೋಲ್ ಸಿಕ್ಕಿದೆ.

ಬಾನಲಿ ಬದಲಾಗೋ ಹಾಡು ನೋಡಿ ರೋಮಾಂಚನಗೊಂಡಿದ್ದ ಅಭಿಮಾನಿಗಳಿಗೆ ಸ್ಮೈಲ್ ಇರುವಂತೆ ಸರಾಸರಿ ಹಾಡು ಕೂಡಾ ಇಷ್ಟವಾಗಲಿದೆ.

ಛಾಯಾಗ್ರಾಹಕ ಮನೋಹರ್ ಜೋಶಿ ಹಾಗೂ ಸ್ಪೆಷಲ್ ಎಫೆಕ್ಟ್ ಸಚಿನ್ ಕೈಚಳಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಮಧ್ಯಂತರ ನಂತರವೂ ಚಿತ್ರ ಬೋರ್ ಹೊಡೆಸುತ್ತಿಲ್ಲ

ಸಂಪೂರ್ಣ ಚಿತ್ರವಿಮರ್ಶೆ ನಿರೀಕ್ಷಿಸಿ

ಚಿತ್ರದ ಮೊದಲಾರ್ಧ ನೀಡಿದ ಕಿಕ್, ದ್ವಿತೀಯಾರ್ಧ ನೀಡದಿದ್ದರೂ ನಿರ್ದೇಶಕ ಸುನಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಸಂಗೀತ ಛಾಯಾಗ್ರಹಣ ಎಲ್ಲವೂ ಸೂಪರ್.. ಬಹುತೇಕ ಹೊಸಬರೇ ಇರುವ ಚಿತ್ರಕ್ಕೆ ಕನ್ನಡ ಅಭಿಮಾನಿಗಳ ಬೆಂಬಲ ಸಿಕ್ಕರೆ ಮತ್ತೊಂದು ಸೂಪರ್ ಹಿಟ್ ಸ್ವಮೇಕ್ ಚಿತ್ರವಾಗಿ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಬೆಳೆಯಲಿದೆ. ಕಡಿಮೆ ಪಾತ್ರಧಾರಿಗಳು ಮುನಾಲ್ಕು ಚಿತ್ರಗಳಿಗೆ ಸಾಕಾಗುವಷ್ಟು ಸಂಭಾಷಣೆ ಚಿತ್ರದ ಮೈನಸ್ ಅಂಶ

English summary
Simple aagond love story- Twitter Live Report and one line review by enthusiastic Kannada movie lovers from Gandhadagudi forum

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada