twitter
    For Quick Alerts
    ALLOW NOTIFICATIONS  
    For Daily Alerts

    '6-5=2' ವಿಮರ್ಶೆ: ಮೀಟರ್ ಇರುವವರಿಗೆ ಮಾತ್ರ

    By Super
    |

    ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಪ್ರಯೋಗಾತ್ಮಕ ಚಿತ್ರಗಳ ಸಾಲಿಗೆ '6-5=2'ವನ್ನು ಹೊಸದಾಗಿ ಸೇರಿಸಿಕೊಳ್ಳಬಹುದು. ಹೊಸತನ್ನು ನಿರೀಕ್ಷಿಸುತ್ತಿರುವ ಪ್ರೇಕ್ಷಕ ಬಳಗಕ್ಕೆ ಈ ಸಿನಿಮಾ ಖಂಡಿತ ನಿರಾಸೆಪಡಿಸಲ್ಲ. ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಟ್ರೇಲರೇ ಹಿಂಗಿದ್ದರೆ ಇನ್ನು ಸಿನಿಮಾ ಹೆಂಗಿರುತ್ತದೋ ಎಂದುಕೊಂಡು ಬಂದವರಿಗೆ ಮೋಸವಾಗಲ್ಲ. ಆರು ಮಂದಿ ಯುವಕರ ಜೀವನದಲ್ಲಿ ನಡೆದ ನೈಜ ಘಟನೆಯೇ ಚಿತ್ರದ ಕಥಾವಸ್ತು. ಚಾರಣಕ್ಕೆ ಹೊರಡುವ ಈ ಯುವಕರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ.

    Rating:
    3.5/5

    2010ರಲ್ಲಿ ನಡೆದ ನೈಜ ಘಟನೆ ಆಧಾರಿಸಿದ ಚಿತ್ರವಿದು. ರಮೇಶ್ ಮತ್ತು ಐದು ಮಂದಿ ಗೆಳೆಯರು ಚಾರಣ ಹೊರಡುತ್ತಾರೆ. ಅವರಲ್ಲಿ ಮೂರು ಮಂದಿ ಸಾವಪ್ಪುತ್ತಾರೆ, ಇನ್ನಿಬ್ಬರು ನಾಪತ್ತೆಯಾಗುತ್ತಾರೆ. ಈ ಘಟನೆ ನಡೆದ ಒಂಭತ್ತು ದಿನಗಳ ಬಳಿಕ ರಮೇಶ್ ಬಳಸಿದ್ದ ಕ್ಯಾಮೆರಾ ಸಿಗುತ್ತದೆ. ಅದರಲ್ಲಿ ದಾಖಲಾಗಿರುವ ನೈಜ ಸನ್ನಿವೇಶಗಳೇ ಚಿತ್ರದ ಕಥಾವಸ್ತು.

    ಸಾಕ್ಷ್ಯಚಿತ್ರದಂತೆ ಭಾಸವಾಗುವ ಚಿತ್ರ

    ಸಾಕ್ಷ್ಯಚಿತ್ರದಂತೆ ಭಾಸವಾಗುವ ಚಿತ್ರ

    ಇದು ಸಿನಿಮಾಗಿಂತಲೂ ಹೆಚ್ಚಾಗಿ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ. ಛಾಯಾಗ್ರಹಣದಲ್ಲಿ ಆಸಕ್ತಿ ಇರುವ ರಮೇಶ್ ತಾವು ಹೊರಡುತ್ತಿರುವ ಚಾರಣದ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಹೊಸ ಕ್ಯಾಮೆರಾ ಖರೀದಿಸುತ್ತಾನೆ. ಜೊತೆಗೆ ಅವನ ಗೆಳೆಯರಾದ ನವೀನ್, ಪ್ರಕಾಶ್, ಕುಮಾರ್, ದೀಪಾ ಹಾಗೂ ಸೌಮ್ಯಾ ಸಹ ಇರುತ್ತಾರೆ.

    ಚಾರಣಕ್ಕೆ ಹೊರಡುವ ಆರು ಮಂದಿ

    ಚಾರಣಕ್ಕೆ ಹೊರಡುವ ಆರು ಮಂದಿ

    ಈ ಆರು ಮಂದಿ ಆಯ್ಕೆ ಮಾಡಿಕೊಳ್ಳುವ ಚಾರಣ ತಾಣ ಮೈಸೂರು ಬಳಿಯ ದಟ್ಟ ಅರಣ್ಯ ಪ್ರದೇಶ. ತಮ್ಮ ಹೆಸರುಗಳನ್ನು ಫಾರೆಸ್ಟ್ ಗಾರ್ಡ್ ಬಳಿ ನಮೂದಿಸಿ ಪಯಣ ಸಾಗಿಸುತ್ತಾರೆ. ಒಂದೇ ದಿನದಲ್ಲಿ ಚಾರಣ ಮುಗಿಸಿ ಮನೆಗೆ ಮರಳುವ ಯೋಜನೆ ಅವರದು.

    ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುವ ಕಥೆ

    ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುವ ಕಥೆ

    ಆದರೆ ಚಾರಣ ಅರ್ಧಕ್ಕೆ ನಿಂತುಹೋಗುತ್ತದೆ. ದಟ್ಟ ಕಾಡಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆಗ ಹಲವಾರು ವಿಚಿತ್ರ ಘಟನೆಗಳು ಸಂಭವಿಸುತ್ತವೆ. ತಮ್ಮ ಕ್ಯಾಂಪ್ ಸುತ್ತಮುತ್ತ ಕೆಲವು ಸೋಜಿಗದ ಘಟನೆಗಳು ನಡೆಯುತ್ತವೆ. ಇದೆಲ್ಲಾ ಕಾಮನ್ ಎಂದು ಸುಮ್ಮನಾಗುತ್ತಾರೆ. ಅಲ್ಲಿಂದ ಕಥೆ ಚಿತ್ರ ವಿಚಿತ್ರ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ.

    ಆರು ಮಂದಿಯೂ ಸೇಫ್ ಆಗಿ ಮನೆಗೆ ಬರ್ತಾರಾ?

    ಆರು ಮಂದಿಯೂ ಸೇಫ್ ಆಗಿ ಮನೆಗೆ ಬರ್ತಾರಾ?

    ಕಡೆಗೆ ಆರು ಮಂದಿಯೂ ಸೇಫ್ ಆಗಿ ಮನೆಗೆ ಹಿಂತಿರುಗುತ್ತಾರಾ? ಕಾಡಿನಲ್ಲಿ ನಡೆಯುವ ಅನಿಶ್ಚಿತ ಘಟನೆಗಳು ಏನು? ನಿಜವಾಗಿಯೂ ದೆವ್ವಗಳು ಇವೆಯೇ? ನೈಜವಾದ ವಿಡಿಯೋ ಸಹ ಚಿತ್ರದಲ್ಲಿದೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಿ ಥ್ರಿಲ್ ಆಗಿ.

    ಕುತೂಹಲಭರಿತವಾಗಿ ಸಾಗುವ ಕಥೆ

    ಕುತೂಹಲಭರಿತವಾಗಿ ಸಾಗುವ ಕಥೆ

    ಚಿತ್ರದಲ್ಲಿ ಛಾಯಾಗ್ರಾಹಕನಾಗಿ ರಮೇಶ್ ಪಾತ್ರ ಗಮನಾರ್ಹವಾಗಿದೆ. 'ಸ್ವರ್ಣಲತಾ ಕಂಬೈನ್ಸ್' ಅವರಿಗೆ ಒರಿಜಿನಲ್ ವಿಡಿಯೋ ಸಿಕ್ಕಿದ್ದರೂ ಅದರ ಒಂದು ಎಳೆಯನ್ನು ಮಾತ್ರ ತೋರಿಸಿದ್ದಾರೆ. ಇದು ನಿಜಕ್ಕೂ ನಡೆದ ಘಟನೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

    ಚಿತ್ರದ ಗಮನಾರ್ಹ ಅಂಶ ನಿರೂಪಣೆ

    ಚಿತ್ರದ ಗಮನಾರ್ಹ ಅಂಶ ನಿರೂಪಣೆ

    ಚಿತ್ರದ ಪ್ರಮುಖ ಅಂಶ ಎಂದರೆ ಈ ರೀತಿಯ ಕೌತುಕ ಕಥೆಯನ್ನು ಅದ್ಭುತವಾಗಿ ನಿರೂಪಿಸಿರುವುದು, ಚಿತ್ರಕ್ಕೆ ಹೊಸದೊಂದು ಆಯಾಮವನ್ನು ತಂದಿದೆ. ಒಂದು ವೇಳೆ ನಿರೂಪಣೆಯಲ್ಲಿ ಸೋತಿದ್ದರೆ ಚಿತ್ರ ಸಪ್ಪೆಯಾಗುತ್ತಿತ್ತು.

    ಇಷ್ಟಕ್ಕೂ ಇದು ನೈಜ ವಿಡಿಯೋನಾ?

    ಇಷ್ಟಕ್ಕೂ ಇದು ನೈಜ ವಿಡಿಯೋನಾ?

    ಜಲಪಾತದ ಬಳಿಯ ದೃಶ್ಯಗಳು, ಕ್ಯಾಮೆರಾ ಚಲನೆಯನ್ನು ನೋಡಿದರೆ ಚಿತ್ರದಲ್ಲಿ ಬಳಸಿಕೊಂಡಿರುವ ನೈಜ ವಿಡಿಯೋ ಬಗ್ಗೆ ನಂಬಿಕೆಯೂ ಬರುತ್ತದೆ.

    ಮೀಟರ್ ಇರುವವರಿಗೆ ಮಾತ್ರ

    ಮೀಟರ್ ಇರುವವರಿಗೆ ಮಾತ್ರ

    ಹಾರರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಇನ್ನಷ್ಟು ಥ್ರಿಲ್ ಕೊಡುತ್ತದೆ. ದೆವ್ವ ಭೂತ ಚಿತ್ರಗಳನ್ನು ನೋಡಬೇಕು ಎಂದು ಹಂಬಲಿಸುವವರಿಗೆ ಈ ಚಿತ್ರ ಇನ್ನಷ್ಟು ಭಯಭೀತಿಗೊಳಿಸುತ್ತದೆ. ಆದರೆ ದುರ್ಬಲ ಹೃದಯಿಗಳು ಹೋಗದೇ ಇರುವುದೇ ವಾಸಿ. ಚಿತ್ರ ನೋಡಿದವರು ಕನಿಷ್ಠ ಒಂದು ತಿಂಗಳು ಚಾರಣ ಎಂದುಕೊಳ್ಳುವುದಿಲ್ಲ. ಅಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ.

    English summary
    Kananda film six minus five equals two 6-5=2 review. It is a must watch movie for the people, who admires the horror movies. It is only for the people, who are brave-hearted. You will feel like never going for a trek at least for a month.
    Wednesday, October 14, 2015, 12:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X