For Quick Alerts
  ALLOW NOTIFICATIONS  
  For Daily Alerts

  ಈ ವಾರ ತೆರೆಕಂಡ ಎಲ್ಲಾ 6 ಚಿತ್ರಗಳ ವಿಮರ್ಶೆ ಇಲ್ಲಿದೆ

  By Bharath Kumar
  |

  ಈ ವಾರ ಒಟ್ಟು ಏಳು ಚಿತ್ರಗಳು ಬಿಡುಗಡೆಯಾಗಿವೆ. ಯಾವ ಚಿತ್ರವನ್ನ ನೋಡ್ಬೇಕೋ ಯಾವ ಚಿತ್ರವನ್ನ ಬಿಡ್ಬೇಕೋ ಎನ್ನೋದು ಚಿತ್ರಪ್ರೇಮಿಗಳಿಗೆ ಗೊಂದಲವಾಗಿದೆ.

  ಇನ್ನು ರಿವ್ಯೂ ಬಂದ್ಮೇಲೆ ನೋಡ್ಕೊಂಡು ಯಾವ ಚಿತ್ರ ಚೆನ್ನಾಗಿದೆಯೋ ಆ ಸಿನಿಮಾ ನೋಡೋಣ ಅಂತಿದ್ದವರು ಈ ಸ್ಟೋರಿ ಓದಿ. ಯಾಕಂದ್ರೆ, ಈ ವಾರ ರಿಲೀಸ್ ಆದ ಆರು ಚಿತ್ರಗಳ ವಿಮರ್ಶೆ ಒಂದೇ ಕಡೆ ಸಿಗಲಿದೆ.

  ಹಾರರ್, ಸಸ್ಪೆನ್ಸ್, ಮಾಸ್, ಫುಲ್ ಕಾಮಿಡಿ, ಸೇರಿದಂತೆ ಎಲ್ಲ ಬಗೆಯ ಚಿತ್ರಗಳು ಚಿತ್ರಮಂದಿರಕ್ಕೆ ಬಂದಿದೆ. ಕರಾಳ ರಾತ್ರಿ, ಹಸಿರು ರಿಬ್ಬನ್, ಟ್ರಂಕ್, ಅಥರ್ವ, ಎಂಎಂಸಿಎಚ್ ಹಾಗೂ ಡಬ್ಬಲ್ ಇಂಜಿನ್ ಚಿತ್ರಗಳ ವಿಮರ್ಶೆ ಇಲ್ಲಿದೆ. ಮುಂದೆ ಓದಿ.....

  ಕರಾಳ ರಾತ್ರಿ ಹೇಗಿದೆ.?

  ಕರಾಳ ರಾತ್ರಿ ಹೇಗಿದೆ.?

  ನಿರ್ದೇಶಕ ದಯಾಳ್ ಪದ್ಮನಾಭನ್ ವೃತ್ತಿ ಜೀವನದಲ್ಲಿಯೇ 'ಆ ಕರಾಳ ರಾತ್ರಿ' ದಿ ಬೆಸ್ಟ್ ಸಿನಿಮಾ. ಪುಟ್ಟ ಕಥೆಯನ್ನ ಪರಿಣಾಮಕಾರಿ ಆಗಿ ತೋರಿಸುವಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಯಶಸ್ವಿ ಆಗಿದ್ದಾರೆ. ಈ ಚಿತ್ರ ಎಷ್ಟು ಸಿಂಪಲ್ ಆಗಿದ್ಯೋ, ಅಷ್ಟೇ ಚೆನ್ನಾಗಿದೆ. ಈ ವಾರಾಂತ್ಯದಲ್ಲಿ ಫ್ರೀ ಇದ್ದರೆ, 'ಆ ಕರಾಳಿ ರಾತ್ರಿ'ಯನ್ನ ಕಣ್ತುಂಬಿಕೊಳ್ಳಿ. ಪೂರ್ತಿ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ

  'ಆ ಕರಾಳ ರಾತ್ರಿ' ವಿಮರ್ಶೆ: ಚಿಕ್ಕ ಹಾಗೂ ಚೊಕ್ಕ ಚಿತ್ರ 'ಆ ಕರಾಳ ರಾತ್ರಿ' ವಿಮರ್ಶೆ: ಚಿಕ್ಕ ಹಾಗೂ ಚೊಕ್ಕ ಚಿತ್ರ

  'ಟ್ರಂಕ್' ವಿಮರ್ಶೆ

  'ಟ್ರಂಕ್' ವಿಮರ್ಶೆ

  'ಟ್ರಂಕ್' ಸಿನಿಮಾ ನೋಡುತ್ತಿದ್ದರೇ ಇದು ಹಾಲಿವುಡ್ ಅಥವಾ ಬಾಲಿವುಡ್ ಶೈಲಿಯ ಸಿನಿಮಾ ಎಂಬ ಭಾವನೆ ಬರುತ್ತೆ. ಯಾಕಂದ್ರೆ ಇದು ಟೆಕ್ನಿಕಲಿ ಸ್ಟ್ರಾಂಗ್ ಇರುವ ಸಿನಿಮಾ. ಆದ್ರೆ, ಕಥೆ-ಚಿತ್ರಕಥೆ ಪಕ್ಕಾ ಕನ್ನಡ ಸೊಗಡು. ಕನ್ನಡದಲ್ಲಿ ಇಂತಹ ಸಿನಿಮಾಗಳು ಕಡಿಮೆ. ಹಾಗಾಗಿ, ನೋಡಲು ಯಾವುದೇ ಅಭ್ಯಂತರವಿಲ್ಲ. ಮೇಕಿಂಗ್ ನಿಂದ ಇಷ್ಟವಾಗುತ್ತೆ. ಪೂರ್ತಿ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ

  ವಿಮರ್ಶೆ: ಥ್ರಿಲ್ಲಿಂಗ್ ಎಂಬ ಟಾನಿಕ್ ತುಂಬಿದ 'ಟ್ರಂಕ್' ವಿಮರ್ಶೆ: ಥ್ರಿಲ್ಲಿಂಗ್ ಎಂಬ ಟಾನಿಕ್ ತುಂಬಿದ 'ಟ್ರಂಕ್'

  'ಎಂ ಎಂ ಸಿ ಹೆಚ್' ವಿಮರ್ಶೆ

  'ಎಂ ಎಂ ಸಿ ಹೆಚ್' ವಿಮರ್ಶೆ

  'ಎಂ ಎಂ ಸಿ ಹೆಚ್' ಆಪ್ತ ಸ್ನೇಹಿತೆಯರಾದ ಮೇಘಾ (M), ಮಾಲಾ(M), ಛಾಯಾ(C), ಹರ್ಷಿತಾ (H) ಎಂಬ ನಾಲ್ಕು ಹುಡುಗಿಯರ ಕಥೆ. ಇಡೀ ಸಿನಿಮಾದ ಕೇಂದ್ರ ಬಿಂದು ಈ ನಾಲ್ಕು ಹುಡುಗಿಯರು. ಈ ನಾಲ್ಕು ಹುಡುಗಿಯರು ಸೇರಿ ಒಂದು ಕೋಲೆ ಮಾಡುತ್ತಾರೆ. ಆ ಕೊಲೆಯ ತನಿಖೆಯೇ ಇಡೀ ಚಿತ್ರದ ನಿರೂಪಣೆಯಾಗಿದೆ. ಮೋಸದ ಪ್ರೀತಿ, ಮಮತೆಯ ಸ್ನೇಹ ಎಂಬ ಕಥೆ ಹೊಂದಿರುವ 'ಎಂ ಎಂ ಸಿ ಹೆಚ್' ಚಿತ್ರವನ್ನು ಒಮ್ಮೆ ನೋಡಬಹುದು. ಪೂರ್ತಿ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ

  'MMCH' ವಿಮರ್ಶೆ : ಮೋಸದ ಪ್ರೀತಿ, ಮಮತೆಯ ಸ್ನೇಹ'MMCH' ವಿಮರ್ಶೆ : ಮೋಸದ ಪ್ರೀತಿ, ಮಮತೆಯ ಸ್ನೇಹ

  'ಹಸಿರು ರಿಬ್ಬನ್' ವಿಮರ್ಶೆ

  'ಹಸಿರು ರಿಬ್ಬನ್' ವಿಮರ್ಶೆ

  ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ಆದ್ರೆ, ಗಂಡು ದಿಕ್ಕಿಲ್ಲದ ಅಮ್ಮ-ಮಗಳಿಗೆ ಮೋಸ ಆದಾಗ ಇನ್ನೊಂದು ಹೆಣ್ಣು ನ್ಯಾಯಕ್ಕಾಗಿ ಹೋರಾಡುವ ಕಥೆ 'ಹಸಿರು ರಿಬ್ಬನ್'. ದುಡ್ಡಿಗಾಗಿ ನಂಬಿದವರಿಗೆ ಮೋಸ ಮಾಡುವ ನಯವಂಚಕನ ಸುತ್ತ ಹೆಣೆದಿರುವ ಈ ಚಿತ್ರವನ್ನ ನೈಜವಾಗಿ ಚಿತ್ರಿಸುವಲ್ಲಿ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಯಶಸ್ವಿ ಆಗಿದ್ದಾರೆ. ಪೂರ್ತಿ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ

  'ಹಸಿರು ರಿಬ್ಬನ್' ವಿಮರ್ಶೆ: ಸಂಬಂಧಗಳ ಪ್ರಾಮುಖ್ಯತೆ ಸಾರುವ ಚಿತ್ರ'ಹಸಿರು ರಿಬ್ಬನ್' ವಿಮರ್ಶೆ: ಸಂಬಂಧಗಳ ಪ್ರಾಮುಖ್ಯತೆ ಸಾರುವ ಚಿತ್ರ

  ಅಥರ್ವ ಸಿನಿಮಾ ಹೇಗಿದೆ.?

  ಅಥರ್ವ ಸಿನಿಮಾ ಹೇಗಿದೆ.?

  'ಅಥರ್ವ' ಪಕ್ಕ ಕಮರ್ಷಿಯಲ್ ಚಿತ್ರ. ಮನೋರಂಜನೆಗೆ ಬೇಕಿರುವಂತಹ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಮನೋರಂಜನೆ ಬಯಸುವವರು ವಾರಾಂತ್ಯದಲ್ಲಿ ಕುಟುಂಬ ಸಮೇತವಾಗಿ ಹೋಗಿ 'ಅಥರ್ವ' ಚಿತ್ರ ನೋಡಬಹುದು. ಪೂರ್ತಿ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ

  ವಿಮರ್ಶೆ : ದುಷ್ಟರ ಶಿಕ್ಷಕ ಸಮಾಜದ ರಕ್ಷಕ ಈ 'ಅಥರ್ವ' ವಿಮರ್ಶೆ : ದುಷ್ಟರ ಶಿಕ್ಷಕ ಸಮಾಜದ ರಕ್ಷಕ ಈ 'ಅಥರ್ವ'

  ಡಬ್ಬಲ್ ಇಂಜಿನ್ ಹೇಗಿದೆ.?

  ಡಬ್ಬಲ್ ಇಂಜಿನ್ ಹೇಗಿದೆ.?

  ಚಿತ್ರದ ಆರಂಭದಿಂದಲೂ ಕೊನೆಯವರೆಗೂ ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಸಂಭಾಷಣೆಯೇ ಪ್ರಮುಖ ಅಸ್ತ್ರ. ಟೈಟಲ್ ತಕ್ಕ ಹಾಗೆ ಡಬ್ಬಲ್ ಮೀನಿಂಗ್ ಡೈಲಾಗ್ ಗಳೇ ಹೆಚ್ಚಿದೆ. ಈ ಸಂಭಾಷಣೆಗಳೇ ನೋಡುಗರ ಕಿಕ್ ನೀಡಿದೆ. ಊರಿನಲ್ಲಿ ಅಡ್ಡಾದಿಡ್ಡಿ ಸುತ್ಕೊಂಡು, ಎಲ್ಲರ ಕಾಲೆಳೆದುಕೊಂಡು ಇರುವ ಮೂರು ಜನ ಪಡ್ಡೆ ಯುವಕರು (ಚಿಕ್ಕಣ್ಣ, ಪ್ರಭು, ಅಶೋಕ). ಅದೇ ಊರಿನಲ್ಲಿ ವಿಧವೆಯೊಬ್ಬಳು (ಸುಮನ್ ರಂಗನಾಥ್) ಕೈತುಂಬಾ ಸಾಲ ಮಾಡಿಕೊಂಡು ಜೀವನ ಮಾಡ್ತಿರ್ತಾಳೆ. ಈ ನಾಲ್ಕು ಜನಕ್ಕೂ ದುಡ್ಡು ಬೇಕು. ಆಗಲೇ ಗೊತ್ತಾಗೋದು ಸಿಡಿಲಿನ ಬಡಿತಕ್ಕೆ ಹೊಡೆದು ಹೋದ ಚಂಬಿಗೆ 100 ಕೋಟಿ ಬೆಲೆ ಇದೆ ಎಂದು. ಅದನ್ನ ಹುಡುಕಿ ತಂದು ಮಾರಿ ದುಡ್ಡು ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬರ್ತಾರೆ ಈ ಬಳಗ. ಆಮೇಲೆ ಏನಾಗುತ್ತೆ ಎಂಬುದೇ ಕಥೆ.

  ವಿಮರ್ಶೆ: 'ಡಬ್ಬಲ್' ಮನರಂಜನೆ ನೀಡುವ 'ಇಂಜಿನ್'ವಿಮರ್ಶೆ: 'ಡಬ್ಬಲ್' ಮನರಂಜನೆ ನೀಡುವ 'ಇಂಜಿನ್'

  English summary
  Dayal Padmanabhan's 'Aa Karala Ratri', Mussanje Mahesh's 'MMCH', Chikkanna starrer 'Double Engine', Pavan Teja's 'Atharva', well known poet H S Venkatesh Murthy's 'Hasiru Ribbon' and Rishika Sharma's 'Trunk' and 'love you 2' released this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X