»   » ಚಿತ್ರ ವಿಮರ್ಶೆ : ಶ್ರೀಜಗದ್ಗುರು ಆದಿ ಶಂಕರ

ಚಿತ್ರ ವಿಮರ್ಶೆ : ಶ್ರೀಜಗದ್ಗುರು ಆದಿ ಶಂಕರ

By: ಶೇಖರ್
Subscribe to Filmibeat Kannada

ತೆಲುಗಿನ ಖ್ಯಾತ ಸಂಭಾಷಣಾಕಾರ, ನಟ, ಸಾಹಿತಿ ಜೆಕೆ ಭಾರವಿ ಕನ್ನಡಿಗರೂ ಪರಿಚಯ. ಅನ್ನಮಯ್ಯ, ಶ್ರೀ ರಾಮದಾಸು, ಶ್ರೀ ಮಂಜುನಾಥ ಹಾಗೂ ಪಾಂಡುರಂಗ ಮುಂತಾದ ಚಿತ್ರಗಳಿಗೆ ಚಿತ್ರ ಕಥೆ ಒದಗಿಸಿ ಯಶಸ್ವಿಯಾಗಿದ್ದ ಭಾರವಿ ಅವರು ನಿರ್ದೇಶಕನ ಕ್ಯಾಪ್ ಧರಿಸಿ ಶ್ರೀಜಗದ್ಗುರು ಆದಿ ಶಂಕರ ಚಿತ್ರವನ್ನು ತೆರೆಗೆ ತಂದಿದ್ದಾರೆ.

ಆದಿ ಶಂಕರಾಚಾರ್ಯರ ಜೀವನ ಆಧರಿಸಿದ ಕಥೆಯನ್ನು ತೆರೆಗೆ ಬಂದು ಯಶಸ್ವಿಯಾಗುವುದು ಕಷ್ಟದ ಕೆಲಸವೇ ಸರಿ. ಕನ್ನಡ ಚಿತ್ರರಂಗದ ಭೀಷ್ಮ ಜಿ.ವಿ ಅಯ್ಯರ್ ಅವರಂಥ ಸಾಹಸಿಗಳಿಂದ ಮಾತ್ರ ಸಾಧ್ಯ. ಆದರೆ, ವರಮಹಾಲಕ್ಷ್ಮಿ ಹಬ್ಬದ ಸೀಸನ್ ನಲ್ಲಿ ಆದಿಶಂಕರರ ಕುರಿತ ಚಿತ್ರ ತೆರೆಗೆ ಬಂದು ಭಾರವಿ ಅವರು ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ.

ಪ್ರಧಾನ ಪಾತ್ರದಲ್ಲಿ ಕೌಶಿಕ್, ಅಕ್ಕಿನೇನಿ ನಾಗಾರ್ಜುನ, ಮೋಹನ್ ಬಾಬು ಹಾಗೂ ಶ್ರೀಹರಿ ನಟಿಸಿದ್ದು, ನಾಗ್ ಶ್ರೀವಾಸ್ತವ್ ಅವರ ಸಂಗೀತ ತೆಲುಗು ಪ್ರೇಕ್ಷಕರ ಮನಮುಟ್ಟಿದೆ.

ಉತ್ತಮ ಚಿತ್ರಕಥೆ, ನಟನೆ, ವಸ್ತ್ರ ವಿನ್ಯಾಸ, ಸಂಭಾಷಣೆ, ಕಲೆ ಇದ್ದರೂ ವಿಷುವಲ್ ಎಫೆಕ್ಟ್, CGI ವರ್ಕ್ ಚಿತ್ರದ ಅಂದಗೆಡಿಸಿದೆ. ಮೆಗಾ ಸ್ಟಾರ್ ಚಿರಂಜೀವಿ ಅವರ ಹಿನ್ನೆಲೆ ದನಿಯೊಂದಿಗೆ ಚಿತ್ರ ಆರಂಭವಾಗುತ್ತದೆ. ಆದಿ ಗುರು ಶಂಕರಾಚಾರ್ಯರ ಶ್ರೇಷ್ಠತೆಯನ್ನು ಚಿರಂಜೀವಿ ದನಿಯಲ್ಲಿ ಕೇಳಿ ಪ್ರೇಕ್ಷಕರು ಥ್ರಿಲ್ ಆಗುತ್ತಾರೆ.

9ನೇ ಶತಮಾನದ ಗುರು ಆದಿ ಶಂಕರಾಚಾರ್ಯರ ಜೀವನ, ಅದ್ವೈತ ಸಿದ್ಧಾಂತ ಪ್ರತಿಪಾದನೆ, ಕೇರಳದಿಂದ ಭಾರತದೆಲ್ಲೆಡೆ ಸಂಚರಿಸಿ ಸನಾತನ ಹಿಂದೂ ಧರ್ಮ ಉಳಿಸಲು ಅವತರಿಸಿದ ಪರಮಶಿವನ ಎಂದೇ ಬಿಂಬಿಸಲಾಗಿದೆ. ಚಿತ್ರದ ಕಥೆ, ಇನ್ನಷ್ಟು ವಿವರ ಚಿತ್ರ ಸರಣಿಯಲ್ಲಿ ನೋಡಿ...

ಶಂಕರರು ಸನ್ಯಾಸಿಯಾದ ಕಥೆ

ಸಣ್ಣ ವಯಸ್ಸಿನಲೇ ಶಂಕರ ವೈರಾಗ್ಯ ಮೂಡುತ್ತದೆ. ಆಗ ಅಗ್ನಿ ದೇವ (ಟಿ ಭರಣಿ), ರುದ್ರಾಕ್ಷ ಋಷಿ( ಮೋಹನ್ ಬಾಬು) ಹಾಗೂ ಚಾಂಡಲ (ನಾಗಾರ್ಜುನ) ಅವರ ಸಹಕಾರದಿಂದ ಶಂಕರ ಸನ್ಯಾಸತ್ವ ಶಕ್ತಿ ಬಲಗೊಳ್ಳುತ್ತದೆ.

ಕಾಶಿಗೆ ತೆರಳುವ ಹಾದಿಯಲ್ಲಿ ಕಪಾಲ ಮಾರ್ತಂಡ ರಾಜ (ಸುಮನ್) ಸರ್ವಜ್ಞ ಪೀಠವನ್ನು ವಶ ಪಡಿಸಿಕೊಳ್ಳಲು ಯತ್ನಿಸುತ್ತಿರುವುದು ಶಂಕರರಿಗೆ ತಿಳಿಯುತ್ತದೆ. ದುಷ್ಟರಾಜನ ಕೈಗೆ ಜ್ಞಾನಪೀಠ ಸೇರದಂತೆ ಶಂಕರರು ಹೇಗೆ ತಡೆಗಟ್ಟುತ್ತಾರೆ ಎಂಬುದು ಮುಂದಿನ ಕಥಾನಕ

ಶಂಕರರ ಪಾತ್ರದಲ್ಲಿ

ಶಂಕರರ ಪಾತ್ರದಲ್ಲಿ ಹೊಸ ಪರಿಚಯವಾಗಿ ಬಂದಿರುವ ಕೌಶಿಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಈ ರೀತಿ ಸೌಮ್ಯ ಸ್ವಭಾವದ ಪಾತ್ರ ನಿಭಾಯಿಸುವುದು ತುಂಬಾ ಕಷ್ಟ. ಆದರೆ, ಕೌಶಿಕ್ ಪ್ರೇಕ್ಷಕರಿಗೆ ಶಂಕರರ ಸ್ಮರಣೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಕಿನೇನಿ ನಾಗಾರ್ಜುನ

ಶ್ರೀಜಗದ್ಗುರು ಆದಿ ಶಂಕರ ಚಿತ್ರದಲ್ಲಿ ಚಂಡಾಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎಂದಿನಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಮೋಹನ್ ಬಾಬು

ರುದ್ರಾಕ್ಷ ಋಷಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೋಹನ್ ಬಾಬು ಮೊದಲ ಬಾರಿಗೆ ಸಾವಧಾನ ಚಿತ್ತ ಪಾತ್ರದಲ್ಲಿ ಆರ್ಭಟ ಇಲ್ಲದ ನಟನೆಯನ್ನು ನೀಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇತರೆ ಪಾತ್ರಧಾರಿಗಳು

ಸಾಯಿಕುಮಾರ್, ಶ್ರೀಹರಿ, ಸುಮನ್, ಕೆ ಸತ್ಯನಾರಾಯಣ, ಮೈನಂಪಟಿ ಶ್ರೀರಾಮಚಂದ್ರ, ಮೀನಾ, ಕಮಲಿನಿ ಮುಖರ್ಜಿ, ಕಾಮ್ನಾ ಜೇಠ್ಮಲಾನಿ, ರೋಹಿಣಿ, ರೋಜಾ, ಪೊಸನಿ ಕೃಷ್ಣ ಮುರಳಿ, ಟಿ ಭರಣಿ ಸೇರಿದಂತೆ ದೊಡ್ಡ ಮಟ್ಟದ ತಾರಾಗಣವನ್ನು ಚಿತ್ರ ಹೊಂದಿದ್ದು, ಎಲ್ಲಾ ಪಾತ್ರಗಳಿಗೂ ತಕ್ಕ ಅವಕಾಶ ಕಲ್ಪಿಸಲಾಗಿದೆ.

ತಾಂತ್ರಿಕತೆ

ನಾಗ ಶ್ರೀವಾಸ್ತವ್ ಅವರ ಹಿನೆಲೆ ಸಂಗೀತ ಪ್ರಮುಖವಾಗಿ ಚಿತ್ರಕ್ಕೆ ಪೂರಕವಾಗಿದೆ. ಹಾಡುಗಳು ಸುಶ್ರಾವ್ಯವಾಗಿದೆ. ಸಿನಿಮಾಟೋಗ್ರಾಫಿ ಉತ್ತಮವಾಗಿದೆ. ಹೆಚ್ಚಿನ ವಿಶ್ಯುಷಲ್ ಎಫೆಕ್ಟ್ ನಿರೀಕ್ಷೆ ಇಲ್ಲದಿದ್ದರೆ ಚಿತ್ರದ ಎಲ್ಲಾ ವಿಭಾಗಗಳಲ್ಲೂ ಉತ್ತಮ ಫಲಿತಾಂಶ ಹೊರಬಿದ್ದಿದೆ. ಸಂಕಲನಕಾರರು ಇನ್ನಷ್ಟು ಕತ್ತರಿಯಾಡಿಸಿದ್ದರೆ ಚೆನ್ನಾಗಿರುತ್ತಿತ್ತು. ಭಾರವಿ ಅವರು ಚಿತ್ರಕಥೆ, ಸಂಭಾಷಣೆಗೆ ನೀಡಿದ ಮಹತ್ವ ನಿರ್ದೇಶನ, ನಿರೂಪಣೆಗೂ ನೀಡಿದ್ದರೆ ಚಿತ್ರ ಇನ್ನಷ್ಟು ಆಪ್ತವಾಗುತ್ತಿತ್ತು.

ಅಂತಿಮ ತೀರ್ಪು

ಒಟ್ಟಾರೆ, ಸಂಸಾರ ಸಮೇತ ಹೋಗಿ ಶ್ರೀಜಗದ್ಗುರು ಆದಿ ಶಂಕರರ ಜೀವನ ಕಥಾಮೃತ ಸವಿಯಲು ಅಡ್ಡಿಯಿಲ್ಲ. ಟಾಲಿವುಡ್ ನಲ್ಲಿ ಇತ್ತೀಚೆಗೆ ಬಂದಿರುವ ಚಿತ್ರಗಳಲ್ಲಿ ಇದು ಉತ್ತಮ ಪ್ರಯತ್ನ ಎನ್ನಬಹುದು. ಹಬ್ಬದ ಸೀಸನ್ ಚಿತ್ರದ ಜನಪ್ರಿಯತೆಗೆ ಪೂರಕವಾಗಿದೆ. ಶಂಕರರ ಜೀವನದ ಆಯ್ದ ಭಾಗವನ್ನು ಮಾತ್ರ ತೋರಿಸಲು ಯತ್ನಿಸಿರುವುದರಿಂದ ಚಿತ್ರ ನೋಡುವಂತಾಗಿದೆ.

ಚಿತ್ರದ ಟ್ರೇಲರ್ ನೋಡಿ

ಜೆಕೆ ಭಾರವಿ ಅವರ ಪ್ರಯತ್ನಕ್ಕೆ ಪ್ರೇಕ್ಷಕರು ಜೈ ಎನ್ನುವರೇ ಕಾದು ನೋಡಬೇಕಿದೆ.

English summary
JK Bharavi Sri Jagadguru Adi Shankara (SJAS) is devotional film starring Kaushik, Nagarjuna, Mohan Babu. Read Sri Jagadguru Adi Shankara movie review.
Please Wait while comments are loading...