For Quick Alerts
  ALLOW NOTIFICATIONS  
  For Daily Alerts

  ಸೃಜನ್ 'ಹ್ಯಾಪಿ ಜರ್ನಿ' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?

  By Harshitha
  |

  ಟಾಕಿಂಗ್ ಸ್ಟಾರ್ ಸೃಜನ್ ಅಭಿನಯಿಸಿರುವ 'ಹ್ಯಾಪಿ ಜರ್ನಿ' ಸಿನಿಮಾಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಹ್ಯಾಪಿ ಜರ್ನಿ' ಸಿನಿಮಾ ನೋಡಿದ ಪ್ರೇಕ್ಷಕರು ಹ್ಯಾಪಿಯಾಗಿದ್ದಾರೆ.

  ಬರೀ ಪ್ರೇಕ್ಷಕರು ಮಾತ್ರ ಅಲ್ಲ, ನಟ ದರ್ಶನ್ ಕೂಡ 'ಹ್ಯಾಪಿ ಜರ್ನಿ' ಸಿನಿಮಾ ನೋಡಿ ಸೃಜನ್ ಲೋಕೇಶ್ ಬೆನ್ನು ತಟ್ಟಿದ್ದಾರೆ. 'ಹ್ಯಾಪಿ ಜರ್ನಿ' ಪಕ್ಕಾ ಪೈಸಾ ವಸೂಲ್ ಸಿನಿಮಾ ಅಂತ ಎಲ್ಲರೂ ಹೇಳುತ್ತಿರುವಾಗ, ಸಿನಿಮಾ ವಿಮರ್ಶಕರಿಗೆ ಹೇಗನಿಸ್ತು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಹ್ಯಾಪಿ ಜರ್ನಿ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ನೋಡಿ...

  ಹಾಸ್ಯ, ಪ್ರೀತಿ, ಕುತೂಹಲ, ವಿಚಿತ್ರಗಳ ಮಿಶ್ರಣ 'ಹ್ಯಾಪಿ ಜರ್ನಿ' - ಪ್ರಜಾವಾಣಿ

  ಹಾಸ್ಯ, ಪ್ರೀತಿ, ಕುತೂಹಲ, ವಿಚಿತ್ರಗಳ ಮಿಶ್ರಣ 'ಹ್ಯಾಪಿ ಜರ್ನಿ' - ಪ್ರಜಾವಾಣಿ

  ಆರಂಭದಲ್ಲಿ ಪ್ರೇಮಕಥೆಯಂತೆ, ಯುವ ಸ್ನೇಹಿತರ ನಡುವಿನ ಸಂಬಂಧಗಳ ಬಗ್ಗೆ ಮಾತನಾಡುವ ಸಿನಿಮಾದಂತೆ ಆರಂಭವಾಗುವ ‘ಹ್ಯಾಪಿ ಜರ್ನಿ' ಸಿನಿಮಾಕ್ಕೆ ಮಧ್ಯಂತರದ ವೇಳೆಗೆ ಹಾರರ್‌ ಲೇಪ ಸಿಕ್ಕಂತೆ ಭಾಸವಾಗುತ್ತದೆ. ಇದರ ಜೊತೆಯಲ್ಲೇ, ಕೊಲೆ ಪ್ರಕರಣವೊಂದರ ತನಿಖೆ ಈ ಎರಡು ಎಳೆಗಳ ನಡುವೆ ಸಾಗುತ್ತಿರುತ್ತದೆ - ಆದರೆ ಕೊಲೆಯ ತನಿಖೆ ನಡೆಯುತ್ತಿದೆ ಎಂಬುದು ಗೊತ್ತಾಗುವುದು ಸಿನಿಮಾದ ಕೊನೆಯಲ್ಲಿ. ಸೃಜನ್ ಲೋಕೇಶ್ ಅಭಿನಯ ವೀಕ್ಷಕರಲ್ಲಿ ಬೇಸರ ಮೂಡಿಸುವುದಿಲ್ಲ. ಸಿನಿಮಾದ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲವಾದರೂ, ಹಾಡುಗಳನ್ನು ಚಿತ್ರೀಕರಿಸಿದ ಸ್ಥಳಗಳು ನೆನಪಿನಿಂದ ಮರೆಯಾಗುವುದಿಲ್ಲ. ಒಂದಿಷ್ಟು ಹಾಸ್ಯ, ಒಂಚೂರು ಕುತೂಹಲ, ತುಸು ಪ್ರೀತಿ, ಸ್ವಲ್ಪ ವಿಚಿತ್ರ ಎನಿಸುವ ದೃಶ್ಯಗಳನ್ನು ಒಳಗೊಂಡ ಸಿನಿಮಾ ‘ಹ್ಯಾಪಿ ಜರ್ನಿ' - ವಿಜಯ್ ಜೋಷಿ

  ಪಯಣದಲ್ಲಿವೆ ಹಲವು ತಿರುವುಗಳು: ವಿಜಯ ಕರ್ನಾಟಕ

  ಪಯಣದಲ್ಲಿವೆ ಹಲವು ತಿರುವುಗಳು: ವಿಜಯ ಕರ್ನಾಟಕ

  ಈ ಪಯಣವೇ ಹಾಗೆ, ಅದು ಯಾವತ್ತಿಗೂ ಸುಗಮವಾದುದಲ್ಲ. ಹೊರಡುವ ದಾರಿ ಎಷ್ಟೇ ಆತ್ಮೀಯ ಅನಿಸಿದರೂ, ಅಲ್ಲೊಂದು ಅಪಘಾತ ಕುರುಹು ಸಿಗುತ್ತದೆ. ತಲುಪುವ ದಾರಿಯೂ ಒಂದೊಂದು ಬಾರಿ ಅಸ್ಪಷ್ಟತೆ ಮೂಡಿಸುತ್ತದೆ. ದಾರಿಗುಂಟು ಏರಿಳಿತವಿದ್ದರಂತೂ ಮುಗಿದೇ ಹೋಯಿತು, ಜೀವವೇ ಬಾಯಿಗೆ ಬಂದಂತಿರುತ್ತದೆ. ಇಂತಹ ಜರ್ನಿಯೊಂದರ ಕಹಾನಿಯನ್ನು 'ಹ್ಯಾಪಿ ಜರ್ನಿ' ಹೆಸರಿನಲ್ಲಿ ಚಿತ್ರ ಮಾಡಿದ್ದಾರೆ ನಿರ್ದೇಶಕ ಶ್ಯಾಮ್‌ ಶಿವಮೊಗ್ಗ. ಪಯಣದಲ್ಲಿ ಸಿಗಬಹುದಾದ ಎಲ್ಲ ಅನುಭವಗಳ ದರ್ಶನ ಇಲ್ಲಿದೆ. ಸಿನಿಮಾದ ಶೀರ್ಷಿಕೆ ನೋಡಿದಾಕ್ಷಣ ಇಲ್ಲೊಂದು 'ಪ್ರೇಮ ಪಯಣ' ಇರಬಹುದಾ ಎಂಬ ಅನುಮಾನ ಮೂಡುವುದು ಸಹಜ. ಇಂಥದ್ದೊಂದು ನಂಬಿಕೆ ಹುಟ್ಟಿಸುತ್ತಲೇ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಕತೆಯನ್ನು ಹೇಳುತ್ತಾರೆ ನಿರ್ದೇಶಕರು. ಹಾಗಾಗಿ ಶೀರ್ಷಿಕೆಯ ಅಡಿ ಬರಹದಲ್ಲಿಯೇ 'ತಿರುವುಗಳಿವೆ ಎಚ್ಚರಿಕೆ' ಎಂಬ ಸೂಚನೆಯನ್ನೂ ಅವರು ನೀಡುತ್ತಾರೆ - ಶರಣು ಹುಲ್ಲೂರು

  Srujan’s experimental Journey - The New Indian Express

  Srujan’s experimental Journey - The New Indian Express

  While the director had a good subject line and content in hand, he seems to have been confused on the genre of cinema he intended to build. The movie seems all over the place and isn't focused on either being a suspense thriller or a commecial entertainer. The newcomer has also failed to gauge Srujan's current popularity, underplaying the actor's performance abilities. With Happy Journey, Srujan aims to experiment as an actor and succeeds in showcasing the two shades of his character - A Sharadhaa

  Happy Journey Movie Review - Times of India

  Happy Journey Movie Review - Times of India

  The trouble with Happy Journey starts with its main cast -- a mismatched bunch of four guys and three girls who are supposed to be high-flying executives at an automobile firm, but are never really shown doing any work. They are also thick pals who live in adjacent houses (or was that one house?) and drink and party together pretty much every night. Seems idyllic, but it's not. There's an undercurrent of jealousy playing out among this group, which takes a rather ugly turn. That, just about sums up what Happy Journey is, but the narrative is far from straight forward. It is peppered with corny dialogues, low-brow comedy, a lacklustre romance between the lead pair, Srujan and Ameeta, a whodunnit murder mystery and an attempt at branding the Talking Star the new action hero in town, with some stunts thrown in and a close up of his newly-chiselled biceps.

  English summary
  Srujan Lokesh starrer Kannada Movie 'Happy Journey' has received mixed response from the critics. Here is the collection of 'Happy Journey' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X