For Quick Alerts
ALLOW NOTIFICATIONS  
For Daily Alerts

  'ಬಾಹುಬಲಿ'ಗಿಂತ ರಾಜಮೌಳಿಗೆ ಭೇಷ್ ಎನ್ನುತ್ತಿರುವ ವಿಮರ್ಶಕರು.!

  By ಫಿಲ್ಮಿಬೀಟ್ ಪ್ರತಿನಿಧಿ
  |

  ಭಾರಿ ಕುತೂಹಲ ಮೂಡಿಸಿದ್ದ 'ಬಾಹುಬಲಿ-2' ತೆರೆಗೆ ಬಂದಿದೆ. ಬಿಗ್ ಓಪನ್ನಿಂಗ್ ಕಂಡಿರುವ 'ಬಾಹುಬಲಿ-2' ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೇಲ್ನೋಟಕ್ಕೆ 'ಬಾಹುಬಲಿ-2' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.['ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!]

  ಅಮೋಘ ದೃಶ್ಯಕಾವ್ಯ ಹೊಂದಿರುವ 'ಬಾಹುಬಲಿ-2' ಸಿನಿಮಾ ಕಣ್ಣಿಗೆ ಹಬ್ಬ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ಇನ್ನೂ ಕೆಲವರು 'ಕಟ್ಟಪ್ಪ ಬಾಹುಬಲಿಯನ್ನ ಕೊಲ್ಲುವ ಕಾರಣ ಪೇಲವ' ಅಂತ ಬೇಸರ ಮಾಡಿಕೊಂಡಿದ್ದಾರೆ. ಹಾಗಾದ್ರೆ, 'ಬಾಹುಬಲಿ-2' ಸಿನಿಮಾ ಹೇಗಿದೆ.? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.[ಪರಾಕ್ರಮ ಮೆರೆದ 'ಬಾಹುಬಲಿ', ರಾಜಮೌಳಿ 'ಕಲ್ಪನೆ'ಗೆ ಮಿತಿಯಿಲ್ಲ]

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಬಾಹುಬಲಿ-2' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ವಿಮರ್ಶಕರು 'ಬಾಹುಬಲಿ' ಕುರಿತು ಏನೆಲ್ಲ ಹೇಳಿದ್ದಾರೆ ಅಂತ ನೀವೇ ಓದಿ....

  ಕಣ್ಕಟ್ಟು-ಕಥನ ಕೌತುಕದ ಜುಗುಲ್ಬಂದಿ - ಪ್ರಜಾವಾಣಿ

  ಅತಿರಂಜಿತ ದೃಶ್ಯಾವಳಿಗಳು ಪ್ರಧಾನವಾಗಿ, ಕಥೆ ಹಿನ್ನೆಲೆಗೆ ಸರಿದಿದ್ದ ‘ಬಾಹುಬಲಿ'ಯ ಮುಂದುವರೆದ ಆವೃತ್ತಿ ಅದಕ್ಕೆ ವಿರುದ್ಧವಾದ ದೆಸೆಯಲ್ಲಿದೆ. ರಂಜನೆಗಿಂತ ಮುಖ್ಯವಾಗಿ ಇಲ್ಲಿ ಕಥೆ ಹೇಳುವ ನಿರ್ದೇಶಕರ ಉಮೇದು ಕಾಣಿಸುತ್ತದೆ. ಭೋರ್ಗರೆವ ಜಲಪಾತದ ಮೊರೆತ, ಬಣ್ಣಬಣ್ಣದ ಹೂದೋಟದ ವಿಹಾರ, ಪ್ರೇಮವಿಲಾಸದ ಸಂಗತಿಗಳನ್ನು ಲವಲವಿಕೆಯಿಂದ ಹಾಗೂ ರಣರಂಗದಲ್ಲಿನ ಯುದ್ಧೋನ್ಮಾದವನ್ನು ಅಷ್ಟೇ ವೇಗವಾಗಿ ಚಿತ್ರಿಸಿದ್ದ ನಿರ್ದೇಶಕ ರಾಜಮೌಳಿ, ಇಲ್ಲಿ ತಮ್ಮ ಧಾಟಿಯನ್ನು ತುಸು ಬದಲಿಸಿದ್ದಾರೆ. ಗ್ರಾಫಿಕ್ಸ್‌ ತಂತ್ರಜ್ಞಾನದಿಂದ ಸೃಷ್ಟಿಯಾದ ಭವ್ಯ ಮಾಹಿಷ್ಮತಿ ಮತ್ತು ಕುಂತಲ ಸಾಮ್ರಾಜ್ಯಗಳು, ಹಡಗನ್ನು ವಿಮಾನದಂತೆ ಹಾರಿಸುವ ದೃಶ್ಯಗಳು ಕಲ್ಪನಾಲೋಕಕ್ಕೆ ಕೊಂಡೊಯ್ಯುತ್ತವೆ. ಯುದ್ಧದ ಸನ್ನಿವೇಶಗಳಲ್ಲಿ ಹಿಂದಿನದೇ ತೀವ್ರತೆಯಿದೆ. ಬಾಹುಬಲಿಯ ಎರಡೂ ಅವತಾರಗಳಲ್ಲಿ ಪ್ರಭಾಸ್‌ ಅತಿಮಾನುಷ ಶಕ್ತಿಯಾಗಿ ಕಾಣಿಸುತ್ತಾರೆ. ಇದಕ್ಕೆ ರಾಣಾ ದಗ್ಗುಬಾಟಿ ಸರಿಸಾಟಿಯಾಗಿ ನಿಲ್ಲುತ್ತಾರೆ - ಅಮಿತ್.ಎಂ.ಎಸ್

  ಸಾಹೋರೆ ಸಾಹೋರೆ ಬಾಹುಬಲಿ - ಉದಯವಾಣಿ

  'ಬಾಹುಬಲಿ-2' ಚಿತ್ರವನ್ನು 'ಬಾಹುಬಲಿ'ಯ ಫ್ಲ್ಯಾಶ್ ಬ್ಯಾಕ್ ಎಂದರೆ ತಪ್ಪಿಲ್ಲ. ಏಕೆಂದರೆ, ಈ ಚಿತ್ರದಲ್ಲಿ ಮುಕ್ಕಾಲು ಭಾಗದಷ್ಟು ಫ್ಲ್ಯಾಶ್ ಬ್ಯಾಕ್ ತುಂಬಿದೆ. ಆ ಕಥೆಯೆಲ್ಲಾ ಮುಗಿದ ನಂತರ ಈ ಚಿತ್ರ ಪ್ರಾರಂಭವಾಗುತ್ತದೆ. ಮತ್ತು ಬೇಗ ಮುಗಿಯುತ್ತದೆ. ಹಾಗೆ ನೋಡಿದರೆ, ಚಿತ್ರ ಹೇಗೆ ಮುಂದುವರಿಯಬಹುದು ಮತ್ತು ಹೇಗೆ ಮುಕ್ತಾಯವಾಗಬಹುದು ಎಂದು ಊಹಿಸುವುದು ಕಷ್ಟವಲ್ಲ. ಹಾಗೆ ಊಹಿಸಿದಂತೆಯೇ ಚಿತ್ರ ಮುಕ್ತಾಯವಾಗುತ್ತದೆ. ಚಿತ್ರ ಎಷ್ಟು ಚೆನ್ನಾಗಿದೆ ಎನ್ನುವುದಕ್ಕಿಂತ ರಾಜಮೌಳಿ ಎಂದ ದೊಡ್ಡ ಕನಸುಗಾರ ಬೃಹತ್ ಕನಸೊಂದನ್ನು ಕಣ್ತುಂಬಿಕೊಳ್ಳುವುದಕ್ಕಾದರೂ ನೋಡಲಡ್ಡಿಯಿಲ್ಲ - ಚೇತನ್ ನಾಡಿಗೇರ್

  'ಬಾಹುಬಲಿ-2' ವಿಮರ್ಶೆ: ವಿಜಯ ಕರ್ನಾಟಕ

  ತಾಂತ್ರಿಕವಾಗಿ ಸಿನಿಮಾ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಪ್ರತಿ ಫ್ರೇಮ್‌ನಲ್ಲೂ ವಿಜುವಲ್ ಎಫೆಕ್ಟ್ಸ್ ಮಾಯಾಜಾಲ ಕಾಣಿಸುತ್ತದೆ. ಅದಕ್ಕದೇ ಸಾಟಿ ಎಂಬಂತಿದೆ. ಗ್ರಾಫಿಕ್ ಸೀನ್‌ಗಳು ಮಾತ್ರ ಅತಿಯಾಗಿ ಕಾಣಿಸುತ್ತವೆ. ಹಿನ್ನೆಲೆ ಸಂಗೀತ ಚೆನ್ನಾಗಿದ್ದರೂ ಹಾಡುಗಳು ಮಾತ್ರ ಬಾಹುಬಲಿ ಭಾಗ 1ಕ್ಕೆ ಹೋಲಿಸಿದರೆ ಆವರೇಜ್ ಎನ್ನಬಹುದು. ರಾಜಮೌಳಿ ವಿಷನ್‌, ಅವರು ಅಂದುಕೊಂಡಂತೆ ತೆರೆಗೆ ತರುವುದರಲ್ಲಿ ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ತನ್ನ ಕೆಲಸಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಸಿನಿಮಾ ಫಸ್ಟ್ ಆಫ್ ಭಾಗದಲ್ಲಿನ ಕೆಲವು ಸೀನ್‌ಗಳನ್ನು ಎಡಿಟ್ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅದೇ ರೀತಿ ಸೆಕೆಂಡ್ ಆಫ್ ಸ್ವಲ್ಪ ನಿಧಾನಕ್ಕೆ ಸಾಗುತ್ತದೆ ಎಂಬ ಭಾವನೆ ಬರುತ್ತದೆ. ಒಟ್ಟಾರೆ ಬಾಹುಬಲಿ ದೃಶ್ಯಕಾವ್ಯವನ್ನು ತೆರೆ ಮೇಲೆ ಸೃಷ್ಟಿಸಿದ್ದರೂ...ಕಥೆಯ ದೃಷ್ಟಿಯಲ್ಲಿ ಆ ಹಂತಕ್ಕೆ ತಲುಪಲಿಲ್ಲ ಎಂದೇ ಹೇಳಬೇಕು. ಒಟ್ಟಾರೆ ಇದೊಂದು ಕ್ಲಾಸಿಕಲ್ ವಿಜುವಲ್ ವಂಡರ್.

  Baahubali-2 Movie Review: The Times of India

  Indian cinephiles must salute Rajamouli for his vision and ambition. He once again gives us our Benhur and Ten Commandments experience rolled into one. Of course it is CGI and VFX that grab you in your seat, but Baahubali also takes you on an emotional rollercoaster ride. The romance between Devasena and Amarendra has the Titanic fervour. While the performances of the lead cast are all believable, it is Peter Hein's action-with Baahubali doing the Van Damme split and some sweeps that set your spirits soaring - Meena Iyer

  Baahubali-2 Movie Review: Bangalore Mirror

  SS Rajamouli and his Bahubali franchise certainly do not need any introduction. While the franchise's first instalment Bahubali: The Beginning went on to be a massive hit in 2015 in all the language versions that it released in, it wasn't a film which came in with humungous expectations outside South India. But thanks to the fabulous performances in the film and with the makers managing to do a great job of sustaining and building up the interest level of the audience in the interim period leading up to the release of Bahubali: The Conclusion, this is now a movie phenomenon and not just a movie that has released this weekend - Sethumadhavan N

  English summary
  SS Rajamouli directorial 'Baahubali-2' has received positive response from critics. Here is the collection of 'Baahubali-2' reviews by Karnataka's Popular News papers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more