For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ 2' ನೋಡಿ ಭಾರತೀಯ ಸಿನಿಮಾದ ಕಿಂಗ್ ಎಂದ ಪ್ರೇಕ್ಷಕರು

  By Suneel
  |

  ಭಾರತದ ಸಿನಿ ಪ್ರಿಯರು ಅತಿಹೆಚ್ಚು ಕಾತುರರಾಗಿ ನೋಡಲು ಕಾಯುತ್ತಿದ್ದ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಸಿನಿಮಾ ನಿನ್ನೆ(ಏಪ್ರಿಲ್ 27) ರಾತ್ರಿಯಿಂದಲೇ ದೇಶದ ಹಲವು ಕಡೆ ಪ್ರದರ್ಶನಗೊಂಡಿದೆ. ಅಂತು ಭಾರತೀಯ ಚಿತ್ರರಂಗದ ಬಹುದೊಡ್ಡ ಬಜೆಟ್ ಸಿನಿಮಾವನ್ನು ಹಲವರು ಈಗಾಗಲೇ ಕಣ್ತುಂಬಿಕೊಂಡಿದ್ದಾರೆ. ಅಲ್ಲದೇ ಮಿಲಿಯನ್ ಡಾಲರ್ ಪ್ರಶ್ನೆ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ? ಎಂಬುದಕ್ಕೂ ಹಲವರಿಗೆ ಉತ್ತರ ಸಿಕ್ಕಿದೆ.['ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!]

  'ಬಾಹುಬಲಿ -ದಿ ಬಿಗಿನ್ನಿಂಗ್' ಚಿತ್ರ ನೋಡಿ ಮಹಾಕಾವ್ಯ ಎಂದಿದ್ದ ಹಲವರು ಕುತೂಹಲದಿಂದ ನಿನ್ನೆ ರಾತ್ರಿಯೇ 'ಬಾಹುಬಲಿ -ದಿ ಕನ್ ಕ್ಲೂಶನ್' ಪ್ರೀಮಿಯರ್ ಶೋ ನೋಡಿದ್ದಾರೆ. ಅತ್ಯದ್ಭುತ ಗ್ರಾಫಿಕ್ಸ್ ರೋಮಾಂಚನ ಕಾರಿ ಯುದ್ಧ ಸನ್ನಿವೇಶಗಳನ್ನು ಹೊಂದಿರುವ 'ಬಾಹುಬಲಿ 2' ಸಿನಿಮಾ ನಿನ್ನೆ ರಾತ್ರಿಯಿಂದಲೇ ಪ್ರದರ್ಶನವಾಗುತ್ತಿದ್ದು, ಈಗಾಗಲೇ ಚಿತ್ರನೋಡಿದ ಸಿನಿ ಪ್ರೇಕ್ಷಕರು ಸಾಮಾಜಿಕ ತಾಣಗಳಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ. 'ಬಾಹುಬಲಿ' ಚಿತ್ರ ನೋಡಿದ ಪ್ರೇಕ್ಷಕರು ಟ್ವಿಟರ್ ನಲ್ಲಿ ನೀಡಿರುವ ವಿಮರ್ಶೆಗಳು ಇಲ್ಲಿವೆ. ಮುಂದೆ ಓದಿ...

  ಪ್ರಭಾಸ್ ಸೂಪರ್

  ಪ್ರಭಾಸ್ ಸೂಪರ್

  "ಬಾಹುಬಲಿ -ದಿ ಕನ್ ಕ್ಲೂಶನ್' ಚಿತ್ರ 'ಬಾಹುಬಲಿ -ದಿ ಬಿಗಿನ್ನಿಂಗ್' ಚಿತ್ರಕ್ಕಿಂತ ಮೂರು ಪಟ್ಟು ದೊಡ್ಡ ಸಿನಿಮಾ. ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತಿದೊಡ್ಡ ಚಿತ್ರ ಮೇಕಿಂಗ್ ಮಾಡಿದ ಕೀರ್ತಿ ಎಸ್.ಎಸ್.ರಾಜಮೌಳಿಗೆ ಸಲ್ಲುತ್ತದೆ. ಪ್ರಭಾಸ್ ಸೂಪರ್"- Vamsi KaKa

  ರಾಜಮೌಳಿ ರವರ ಮಹಾಕಾವ್ಯ

  ರಾಜಮೌಳಿ ರವರ ಮಹಾಕಾವ್ಯ

  " 'ಬಾಹುಬಲಿ 2' ಚಿತ್ರದಲ್ಲಿ ಹಲವು ಅದ್ಭುತಗಳು ಮತ್ತು ಪವರ್ ಸನ್ನಿವೇಶಗಳು ಇವೆ. ಈ ಮಹಾಕಾವ್ಯವನ್ನು ಹಲವು ಬಾರಿ ಮತ್ತೆ ನೋಡುತ್ತೇನೆ" - Dare ToSpeak

  ಅನುಷ್ಕ ಅಭಿನಯಕ್ಕೆ ಫುಲ್ ಮಾರ್ಕ್ಸ್

  ಅನುಷ್ಕ ಅಭಿನಯಕ್ಕೆ ಫುಲ್ ಮಾರ್ಕ್ಸ್

  " 'ಬಾಹುಬಲಿ 2' ನನ್ನ ಆಲೋಚನೆಗಳನ್ನು ಮತ್ತೆ ಒಟ್ಟುಗೂಡಿಸಿದೆ. ಅನುಷ್ಕಾ ತಮ್ಮ ಸೌಂದರ್ಯ, ಪ್ರೀತಿ, ಸೌರ್ಯ ದೃಶ್ಯಗಳಿಂದ ಮತ್ತೆ ಹಿಂದಿರಿಗಿದ್ದು ಕಣ್ಮನ ಸೆಳೆಯುತ್ತಾರೆ" - ಅಖಿಲ್ ಅಕ್ಕಿನೇನಿ

  ಕಿಂಗ್ ಆಫ್ ಇಂಡಿಯನ್ ಸಿನಿಮಾ

  ಕಿಂಗ್ ಆಫ್ ಇಂಡಿಯನ್ ಸಿನಿಮಾ

  "ಮೈಂಡ್ ಬ್ಲೋಯಿಂಗ್ ಮಹಾಕಾವ್ಯ, 'ಬಾಹುಬಲಿ -ದಿ ಕನ್ ಕ್ಲೂಶನ್' ಅತ್ಯದ್ಭುತವಾಗಿದ್ದು, ರಾಜಮೌಳಿ ಅವರ ಚಿತ್ರ ಕಿಂಗ್ ಆಫ್ ಇಂಡಿಯನ್ ಸಿನಿಮಾ ಆಗಿ ನಿಲ್ಲಲಿದೆ" - SPY-DER

  ನಿರೀಕ್ಷೆ ಮಿಸ್ ಆಗುತ್ತೆ

  ನಿರೀಕ್ಷೆ ಮಿಸ್ ಆಗುತ್ತೆ

  " ಬಾಹುಬಲಿ ಕನ್ ಕ್ಲೂಶನ್ ನಲ್ಲಿ ಕಟ್ಟಪ್ಪನ ಪಯಣ, ಕ್ಲೈಮ್ಯಾಕ್ಸ್ ಫೈಟ್ ಲಾಜಿಕ್ ಮತ್ತು ಭೌತಿಕತೆ ಎಲ್ಲವೂ ಮಿಸ್ಸಿಂಗ್! ಆದರೆ ಸಂಪೂರ್ಣ ಸಿನಿಮಾ ಮೈಂಡ್ ಬ್ಲೋಯಿಂಗ್" - ಗೌತಮ್

  ಬಾಲಿವುಡ್ ರೆಕಾರ್ಡ್ ಗಳ ಬ್ರೇಕ್

  ಬಾಲಿವುಡ್ ರೆಕಾರ್ಡ್ ಗಳ ಬ್ರೇಕ್

  " ಬಾಹುಬಲಿ 2 ಬಾಲಿವುಡ್ ನ ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತದೆ. ಯಾಕಂದ್ರೆ ಗೊಂದಲಮಯ ಪ್ರಶ್ಮಾರ್ಥಕ ಸಿನಿಮಾ" -ಶರ್ವಣ್ ಚೌಧರಿ

  ಚಿತ್ರದ ದೃಶ್ಯಗಳ ಬಗ್ಗೆ

  ಚಿತ್ರದ ದೃಶ್ಯಗಳ ಬಗ್ಗೆ

  " ಬಾಹುಬಲಿ ಸಿನಿಮಾದ ಪ್ರತಿಯೊಂದು ಫ್ರೇಮ್ ಸಹ ಸಿನಿ ಪ್ರಿಯರಿಗೆ ದಶಕಗಳ ಕಾಲ ನೆನಪಾಗುತ್ತದೆ. ಎಸ್.ಎಸ್.ರಾಜಮೌಳಿ ಅವರಿಗೆ ಥ್ಯಾಂಕ್" - ಅಸ್ಲಾಂ ಖಾನ್

  ಭಾರತ ಸಿನಿಮಾಗಳಿಗೆ ಮತ್ತೆ ವಸಂತ ಕಾಲ

  ಭಾರತ ಸಿನಿಮಾಗಳಿಗೆ ಮತ್ತೆ ವಸಂತ ಕಾಲ

  "ಆಕ್ಷನ್, ಚಿತ್ರದ ಕಥೆ, ಎಫೆಕ್ಟ್, ರೊಮ್ಯಾನ್ಸ್ ಎಲ್ಲವೂ ಇದೆ. ಸಿನಿ ಪ್ರಿಯರು ಚಿತ್ರದ ಬಗ್ಗೆ ಉತ್ಸಾಹ ಕಳೆದು ಕೊಳ್ಳದ ಭರವಸೆ ನೀಡುತ್ತದೆ. ಈ ಹಿಂದಿನ ಭಾರತೀಯ ಸಿನಿಮಾಗಳಲ್ಲಿ ಎಷ್ಟೇ ಹಾರ್ಡ್ ವರ್ಕ್ ಇದ್ದರೂ ಸಹ ಬಾಹುಬಲಿ ಚಿತ್ರದಲ್ಲಿರುವ ಎಫೆಕ್ಟ್ ಮತ್ತು ಗ್ರಾಫಿಕ್ಸ್ ಯಾವ ಚಿತ್ರದಲ್ಲಿಯೂ ಇಲ್ಲ. ಭಾರತ ಸಿನಿಮಾಗಳಿಗೆ ವಸಂತ ಕಾಲ ಶುರುವಾಗಲಿದೆ" - ಪ್ರಯಾಗ್ ಸೋನರ್

  ಎಲ್ಲ ಅಂಶಗಳಿಂದಲೂ ಉತ್ತಮ

  ಎಲ್ಲ ಅಂಶಗಳಿಂದಲೂ ಉತ್ತಮ

  " 'ಬಾಹುಬಲಿ 2' ಸಿನಿಮಾದ ಚಿತ್ರಕಥೆ, ನಿರ್ದೇಶನ ಎಲ್ಲರಿಗಿಂತ ಬಹುದೊಡ್ಡ ಸ್ಟಾರ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ" My life=SRK

  ನಿರ್ದೇಶಕರಿಗೆ ಕೈ ಮುಗಿದ ಪ್ರೇಕ್ಷಕ

  ನಿರ್ದೇಶಕರಿಗೆ ಕೈ ಮುಗಿದ ಪ್ರೇಕ್ಷಕ

  ' ಬಾಹುಬಲಿ 2 ಸಿನಿಮಾ ಬಗ್ಗೆ ವಿವರಿಸಲು ಪದಗಳೇ ಸಿಗುತ್ತಿಲ್ಲ. ಎಸ್.ಎಸ್.ರಾಜಮೌಳಿ ಗೆ ಹ್ಯಾಟ್ಸ್ ಆಫ್. ಚಿತ್ರತಂಡಕ್ಕೆ ನಮಸ್ಕಾರ" - ರವಿ ತೇಜ

  English summary
  SS Rajamouli directorial Most expected indian cinema 'Baahubali-2' twitter review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X