For Quick Alerts
  ALLOW NOTIFICATIONS  
  For Daily Alerts

  ಯುಗಾದಿ ಹಬ್ಬದ ದಿನ ಬಚ್ಚನ್ ಗ್ರ್ಯಾಂಡ್ ಎಂಟ್ರಿ

  By Mahesh
  |

  ಅಭಿನಯ ಚಕ್ರವರ್ತಿ ಅಭಿಮಾನಿಗಳ ಪಾಲಿನ 'ಕಿಚ್ಚ' ಸುದೀಪ್ ಅವರ ಹೊಸ ಚಿತ್ರ ಬಚ್ಚನ್ ಗೆ ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ ಸಿಕ್ಕಿದೆ. ನಗರದ ಮಾಲ್ ಗಳಲ್ಲಿ ಬಚ್ಚನ್ ಹವಾ ಎದ್ದಿದೆ. ಶಶಾಂಕ್ ಹಾಗೂ ಬಚ್ಚನ್ ಕಾಂಬಿನೇಷನ್ ಗೆ ಪ್ರೇಕ್ಷಕ ಬಹುಪರಾಕ್ ಹೇಳಿದ್ದಾನೆ.

  ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಕಿಚ್ಚನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಬಚ್ಚನ್ ದೊಡ್ಡ ಕಟೌಟ್ ಆಕರ್ಷಕವಾಗಿದ್ದು, ಎಲ್ಲರನ್ನು ಸೆಳೆಯುತ್ತಿದೆ. ತ್ರಿವೇಣಿಯಲ್ಲಿ 300 ರಿಂದ 500 ರು ತನಕ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟವಾಗುತ್ತಿದೆ.

  ಸುದೀಪ್ ಚಿತ್ರಕ್ಕೆ ಸಿಕ್ಕಿರುವ ಅತಿದೊಡ್ಡ ಓಪನಿಂಗ್ ಬಚ್ಚನ್ ನೀಡುತ್ತಿದ್ದು, ಅಭಿಮಾನಿಗಳು ಟಿಕೆಟ್ ಗಾಗಿ ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಇನ್ನಷ್ಟು ಮಾಹಿತಿ ಚಿತ್ರದಲ್ಲಿ ಏನಿದೆ ಲೈವ್ ವರದಿ ಗಂಧದಗುಡಿ ತಂಡದಿಂದ ನಿಮಗಾಗಿ

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ನಗರದ ಎಲ್ಲಾ ಮಾಲ್ ಗಳಲ್ಲು ಬಚ್ಚನ್ ಚಿತ್ರದ್ದೇ ಸುದ್ದಿ. ಅಡ್ವಾನ್ಸ್ ಬುಕ್ಕಿಂಗ್ ಮಾಡಿದವರು ಬಚಾವ್, ಬಹುತೇಕ ಎಲ್ಲಾ ಮಾಲ್ ಗಳ ಮಾರ್ನಿಂಗ್ ಶೋ, ಇವನಿಂಗ್ ಒಂದು ಶೋ ಟಿಕೆಟ್ ಸೋಲ್ಡ್ ಔಟ್ ಆಗಿದೆ.

  ಕೆಂಪೇಗೌಡ ರಸ್ತೆ : 50 ಕ್ಕೂ ಅಧಿಕ ಕಿಚ್ಚನ ಅಭಿಮಾನಿಗಳು ಮೈಸೂರು ಬ್ಯಾಂಕ್ ಸರ್ಕಲ್ ನಿಂದ ತ್ರಿವೇಣಿ ಚಿತ್ರಮಂದಿರ ತನಕ ಬೈಕ್ ಮೆರವಣಿಗೆ ನಡೆಸಿದ್ದಾರೆ.

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಸದಾ ನಿನ್ನ ಕಣ್ಣಲೇ ಆಹಾ ಎಂಥಾ ರೋಮ್ಯಾಂಟಿಕ್ ಸಾಂಗ್ ..ಗೋಪಾಲನ್ ಮಾಲ್ ನಲ್ಲಿ ಚಿತ್ರದ ಆರಂಭಕ್ಕೂ ಮುನ್ನ ಈ ಹಾಡು ಹಾಕಿದ್ದಾರೆ. ಪ್ರೇಕ್ಷಕರ ಕಾತುರ ಹೆಚ್ಚಾಗಿದೆ.

  ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಶಂಕರ್ ಅವರು ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ.

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಚಿತ್ರದ ಆರಂಭದಲ್ಲೇ ಫೈಟಿಂಗ್: ಟೈಟಲ್ ಕಾರ್ಡ್ ಡಿಫೆರೆಂಟ್ ಆಗಿ ತೋರಿಸುವುದು ಶಶಾಂಕ್ ಕೌಶಲ್ಯಗಳಲ್ಲಿ ಒಂದು. ಈ ಚಿತ್ರ ಕೂಡಾ ವಿಭಿನ್ನ ಟೈಟಲ್ ಕಾರ್ಡ್ ನೊಂದಿಗೆ ಆರಂಭ. ಹಿನ್ನೆಲೆಯಲ್ಲಿ ದೊಡ್ಡ ಫೈಟಿಂಗ್ , ಬೈಕಿನಿಂದ ಬಂದ ಸುದೀಪ್ ಎಂಟ್ರಿಗೆ ಶಿಳ್ಳೆಗಳ ಸ್ವಾಗತ

  ತೆಲುಗು ನಟ ಜಗಪತಿ ಬಾಬು ಎಂಟ್ರಿ, ಫೈಟಿಂಗ್ ನಂತರ ಕಥೆಯ ಸಸ್ಪೆನ್ ಎಲಿಮೆಂಟ್ ಶುರು

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಸುದೀಪ್ ಪಿಎ ರೋಲ್ ನಲ್ಲಿ ಪ್ಯಾರ್ ಗೆ ಆಗ್ಬುಟ್ಟೈತೆ ಪರೋಲ್ ಎಂಟ್ರಿ. ಪ್ರೇಕ್ಷಕರು ಬೆಳ್ಳಿ ತೆರೆಯತ್ತ ಕಾಸು ಎಸೆಯುವುದನ್ನು ಈ ಹಿಂದೆ ನೋಡಿರಬಹುದು. ಬಚ್ಚನ್ ಚಿತ್ರದ ಪರದೆಯತ್ತ ಹೂಗಳ ರಾಶಿ ಎಸೆಯಲಾಗುತ್ತಿದೆ. ಸುದೀಪ್ ಕುಟುಂಬ ವರ್ಗ ಕೂಡಾ ತ್ರಿವೇಣಿ ಚಿತ್ರಮಂದಿರದಲ್ಲಿದ್ದಾರೆ.

  ಬುಲೆಟ್ ಪ್ರಕಾಶ್ ಅವರ ಇರಾನ್ ಇರಾಕ್, johnon ಕಾಮಿಡಿ ಸೂಪರ್ ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದೆ. ತೆರೆಯ ಮೇಲೆ ನೋಡಿ ಆನಂದಿಸಬೇಕು.

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಬಚ್ಚನ್ ಚಿತ್ರ ಟ್ವೀಟ್ ವಿಮರ್ಶೆ

  ಬುಕ್ಕಿಂಗ್ ನಲ್ಲೂ ಬಬ್ಬನ್ ಅಲೆ : ಬುಕ್ ಮೈ ಶೋ.ಕಾಂನಲ್ಲಿ ಕಿಚ್ಚ ಸುದೀಪ್ ಅವರ ಬಚ್ಚನ್ ಇಂಡಿಯಾ ಟಾಪ್ 10 ನಲ್ಲಿ ಸದ್ಯಕ್ಕೆ ಟಾಪ್ 5 ಸ್ಥಾನದಲ್ಲಿದೆ. ಹಾಡುಗಳ ಚಿತ್ರೀಕರಣ, ಫೈಟಿಂಗ್, ಸುದೀಪ್ ಡ್ಯಾನ್ಸ್ ಪ್ರೇಕ್ಷಕರನ್ನು ಮತ್ತೆ ಮತ್ತೆ ಚಿತ್ರಮಂದಿರದತ್ತ ಸೆಳೆಯುವ ನಿರೀಕ್ಷೆಯಿದೆ.

  ಸುದೀಪ್ ಚಿತ್ರಕ್ಕೆ ಭರ್ಜರಿ ಓಪನಿಂಗ್

  ಸುದೀಪ್ ಚಿತ್ರಕ್ಕೆ ಭರ್ಜರಿ ಓಪನಿಂಗ್

  ಮಧ್ಯಂತರ ತನಕ ಚಿತ್ರದಲ್ಲಿ ಸಕತ್ ಕಾಮಿಡಿ, ಫೈಟ್, ಚಿಂದಿ ಡೈಲಾಗ್ಸ್ ಇದೆ ಆದರೆ, ಹೆಚ್ಚಿನ ಕಥೆ ಕಂಡು ಬಂದಿಲ್ಲ. ಡೈಲಾಗ್ ಸ್ಯಾಂಪಲ್ ಒಂದು ನೋಡಿ: 'ಗೂಂಡಾಗಿರಿ ಮಾಡೋರಾ ಮುಂದೆ ಗಾಂಧಿಗಿರಿ ನಡೆಯೋದಿಲ್ಲ, ಬಚ್ಚನ್ ಗಿರಿನೇ ಬೇಕು'

  ಗಡಿದಾಟಿ ದುಬೈ ತಲುಪಿದ ಕಿಚ್ಚ: ಸ್ಥಳೀಯ ಕನ್ನಡ ಪರ ಸಂಘಟನೆಗಳ ಸಹಕಾರದಿಂದ ಗಲ್ಫ್ ಕನ್ನಡ ಮೂವೀಸ್ ಬ್ಯಾನರ್ ಅಡಿಯಲ್ಲಿ ದುಬೈನ ಅಲ್ಕೂಸ್ ಮಾಲ್, ಅಬುದಾಬಿಯ ಅಲ್ಡಾಡೊ ಹಾಗೂ ಗ್ರ್ಯಾಂಡ್ ಸಫೀರ್ ಹಾಗೂ ಶಾರ್ಜಾದ ಸ್ಟಾರ್ ಸಿನಿ ಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಪ್ರಿಲ್ 18,19 ಹಾಗೂ 20ರಂದು ಬಚ್ಚನ್ ಚಿತ್ರ ತೆರೆ ಕಾಣಲಿದೆ.

  ಒಟ್ಟಾರೆ ಅಭಿಪ್ರಾಯ

  ಒಟ್ಟಾರೆ ಅಭಿಪ್ರಾಯ

  ಬಳ್ಳಾರಿಗೆ ಭಾವನಾ ನೋಡಲು ಕಿಚ್ಚ ಸುದೀಪ್ ಹೋಗಿದ್ದೇಕೆ? ಡಾಕ್ಟರ್ ಭಾವನಾ ಕಥೆಯಲ್ಲಿ ಎಷ್ಟು ಮುಖ್ಯ ? ನಿಜವಾದ ಕಥೆ ಆರಂಭವಾಗುವುದೇ ಚಿತ್ರದ ದ್ವಿತೀಯಾರ್ಧದಲ್ಲಿ.. ಪರೂಲ್ ಹಾಗೂ ಸುದೀಪ್ ಅಭಿನಯಕ್ಕೆ ಫುಲ್ ಮಾರ್ಕ್ಸ್, ಟುಲಿಪ್ ಹಾಗೂ ಭಾವನಾ ಅವರಿಂದ ಕೂಡಾ ಉತ್ತಮ ಅಭಿನಯ..

  ಮೊದಲಾರ್ಧ ಹಾಸ್ಯ, ಫೈಟ್ ಗೆ ಸೀಮಿತ. ದ್ವಿತೀಯಾರ್ಧ ಕಥೆ, ಟ್ವಿಸ್ಟ್ ಹಾಗೂ ಉಪ್ಪಿ ಚಿತ್ರ ನೋಡಿದ ಅನುಭವ ಶಶಾಂಕ್ ನಿರೂಪಣೆಯಲ್ಲಿ ಹೊಸತನ, ಬೋರಿಂಗ್ ಅಂಶ ಕಡಿಮೆ.. ಒಟ್ಟಾರೆ ಚಿತ್ರಮಂದಿರದಿಂದ ಹೊರ ಬರುವ ಪ್ರೇಕ್ಷಕರಿಗೆ ಕಾಸಿಗೆ ತಕ್ಕ ಕಜ್ಜಾಯ

  English summary
  Much awaited movie of 2013 Sudeep starrer Bachchan gets grand opening on Yugadi day today(Apr.11) Sandalwood angry young man Sudeep and Shashank combination has three leading ladies in the movie.. Here is the tweet report, review and first highlights of movie by Gandhadagudi team

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X