twitter
    For Quick Alerts
    ALLOW NOTIFICATIONS  
    For Daily Alerts

    'Babru' review: ಅಮೆರಿಕದಲ್ಲಿ 'ಬಬ್ರೂ'ವಿನ ರೋಚಕ ಪಯಣ

    |

    ಪ್ರೀತಿಯನ್ನು ಹೇಳಿಕೊಳ್ಳಬೇಕೆಂದು ಉತ್ಸಾಹದಿಂದ ಹೊರಟಿರುವ ಯುವಕ ಅರ್ಜನ್, ಅದೇ ಊರಿಗೆ ಹೊರಟಿರುವ ಸನ, ಆಗಲೆ ಬುಕ್ ಮಾಡಿದ್ದ ಕಾರಿನಲ್ಲಿ ಪಯಣ ಬೆಳೆಸಲು ಬಂದ ಅರ್ಜುನ್ ಗೆ ಕಾರು ಸಿಗುವುದಿಲ್ಲ. ತಡವಾಗಿ ಬಂದ ಕಾರಣ ಕಾರು ಸನಾ ಪಾಲಾಗಿರುತ್ತೆ. ಆಗಲೆ ಅರ್ಜುನ್ ಮತ್ತು ಸನಾ ಇಬ್ಬರು ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಇಬ್ಬರು ಕನ್ನಡಿಗರಾದ ಕಾರಣ ಸ್ನೇಹಿತರಾಗಿ ಒಂದೆ ಕಾರಿನಲ್ಲಿ ಜರ್ನಿ ಪ್ರಾರಂಭಿಸುತ್ತಾರೆ. ಇಬ್ಬರನ್ನು ಒಂದು ಮಾಡಿದ್ದು ಬಬ್ರೂ ಕಾರು. ಬಬ್ರೂವಿನ ಪಯಣದಲ್ಲಿ ಏನೆಲ್ಲ ಏದುರಾಗುತ್ತೆ ಎನ್ನುವುದೆ ಸಿನಿಮಾ.

    Rating:
    3.5/5

    ಚಿತ್ರ: ಬಬ್ರೂ

    ನಿರ್ದೇಶಕ: ಸುಜಯ್ ರಾಮಯ್ಯ

    ನಿರ್ಮಾಪಕ: ಸುಮನ್ ನಗರ್ಕರ್

    ಕಲಾವಿದರು: ಸುಮನ್ ನಗರ್ಕರ್, ಮಹಿ ಹಿರೇಮಠ್, ಗಾನಾ ಭಟ್ ಇತರರು

    ಬಿಡುಗಡೆ: 6 ಡಿಸೆಂಬರ್ 2019

    ಅಮೆರಿಕ ಸುತ್ತಾಡಿದ ಅನುಭವ

    ಅಮೆರಿಕ ಸುತ್ತಾಡಿದ ಅನುಭವ

    ಅರ್ಜುನ್ ಮತ್ತು ಸನಾ ಇಬ್ಬರು ಅಮೆರಿಕದಿಂದ ಕೆನಡಾಗೆ ಪಯಣ ಬೆಳೆಸುತ್ತಾರೆ. ಪ್ರಿಯತಮೆಯನ್ನು ಭೇಟಿಯಾಗಲು ಅಮೆರಿಕದಿಂದ ಕೆನಡಾದ ವ್ಯಾಂಕೋವರ್ ಗೆ ಹೊರಟಿರುವ ಅರ್ಜುನ್ ಗೆ ಸನಾ ಜೊತೆಯಾಗುತ್ತಾರೆ. ಬಬ್ರೂವಿನ ಪಯಣದಿಂದ ಪ್ರಾರಂಭವಾಗುವ ಸಿನಿಮಾ ನೋಡುಗರಿಗೆ ಇಡೀ ಅಮೆರಿಕಾ ಸುತ್ತಾಡಿದ ಅನುಭವ ನೀಡುತ್ತೆ. ಇಡೀ ಸಿನಿಮಾ ಅಮೆರಿಕದಲ್ಲಿಯೆ ಚಿತ್ರೀಕರಣ ಮಾಡಲಾಗಿದೆ. ಅಮೆರಿಕದ ಸುಂದರ ತಾಣಗಳಲ್ಲಿ ಬಬ್ರೂವನ್ನು ಸೆರೆಹಿಡಿಲಾಗಿದೆ.

    ಡಿಸೆಂಬರ್ 6ಕ್ಕೆ ಸಸ್ಪೆನ್ಸ್, ಥ್ರಿಲ್ಲಿಂಗ್ ತಿರುವುಗಳ 'ಬಬ್ರೂ' ತೆರೆಗೆಡಿಸೆಂಬರ್ 6ಕ್ಕೆ ಸಸ್ಪೆನ್ಸ್, ಥ್ರಿಲ್ಲಿಂಗ್ ತಿರುವುಗಳ 'ಬಬ್ರೂ' ತೆರೆಗೆ

    ಬಬ್ರೂವಿನ ರೋಚಕ ಜರ್ನಿ

    ಬಬ್ರೂವಿನ ರೋಚಕ ಜರ್ನಿ

    ಬಬ್ರೂವಿನಲ್ಲಿ ಪಯಣ ಶುರು ಮಾಡಿದ ಸನಾ(ಸುಮನ್ ನಗರ್ ಕರ್) ಮತ್ತು ಅರ್ಜುನ್( ಮಹಿ ಹಿರೇಮಠ್) ಇಬ್ಬರಿಗೂ ಅನೇಕ ಘಟನೆಗಳು ಎದುರಾಗುತ್ತ ಹೋಗುತ್ತೆ. ಸನಾ ಯಾರು ಆಕೆಯ ಹಿನ್ನಲೆ ಏನು ಇನ್ನುವುದು ಅರ್ಜುನ್ ಗೆ ಗೊತ್ತಿಲ್ಲ. ಆದರೆ ಅರ್ಜುನ್ ಬಗ್ಗೆ ಗೊತ್ತಿದ್ದರು ಗೊತ್ತಿಲ್ಲದ ಹಾಗೆಯೆ ನಟಿಸುತ್ತ ಜರ್ನಿ ಮಾಡುವ ಸನಾ. ಕೆನಡ ಕಡೆ ಹೋಗುತ್ತಿದ್ದ ಬಬ್ರೂ ದಾರಿ ಮಧ್ಯದಲ್ಲಿ ಪಂಕ್ಚರ್ ಆಗುತ್ತೆ. ಬಬ್ರೂಗೆ ಪಂಕ್ಚರ್ ಹಾಕುವ ನೆಪದಲ್ಲಿ ಮತ್ತೋರ್ವ ಪಯಣದಲ್ಲಿ ಸೇರಿಕೊಳ್ಳುತ್ತಾರೆ. ಅವರೆ ವಿದೇಶಿ ನಟ ರೇ ಟೊಸ್ಟಾಡೊ. ಚಿತ್ರದ ಮೊದಲ ಭಾಗ ಮಂದಗತಿಯಲ್ಲಿ ಸಾಗುತ್ತೆ.

    ಇಂಟ್ರಸ್ಟಿಂಗ್ ಆಗಿದೆ ಎರಡನೆ ಭಾಗ

    ಇಂಟ್ರಸ್ಟಿಂಗ್ ಆಗಿದೆ ಎರಡನೆ ಭಾಗ

    ಸುಂದರ ಪಯಣ ದಿಢೀರನೆ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ರಿಕೋ ಎನ್ನುವ ವ್ಯಕ್ತಿ ಯಾರನ್ನೊ ಹುಡುಕುತ್ತ ಬಬ್ರೂವಿನಲ್ಲಿ ಪಯಣಿಸುತ್ತಿದ್ದವರನ್ನು ಹಿಂಬಾಲಿಸುತ್ತ ಬರುತ್ತಿರುತ್ತಾನೆ. ಆತ ತನ್ನ ದಾರಿಗೆ ಅಡ್ಡ ಬಂದವರನ್ನೆಲ್ಲ ಕೊಲೆ ಮಾಡುತ್ತಿರುತ್ತಾನೆ. ಎರಡನೆ ಭಾಗ ಕೊಲೆ, ಡ್ರಗ್ಸ್, ಹಣ, ಸೈಕೋ ಪಾತ್ರದ ಎಂಟ್ರಿ ಹೀಗೆ ಅನೇಕ ಘಟನೆಗಳು ಎದುರಾಗುವ ಪಯಣ ಮತ್ತಷ್ಟು ರೋಚಕತೆ ಪಡೆದುಕೊಳ್ಳುತ್ತದೆ. ಆದರೆ ಯಾವುದೆ ಹಿನ್ನಲೆ ಇಲ್ಲದೆ ದಿಢೀರನೆ ನಡೆಯುವ ಅನೇಕ ಘಟನೆಗಳು ನೋಡುಗರನ್ನು ಗೊಂದಲಕ್ಕೆ ಸಿಲುಕಿಸುತ್ತೆ. ಗೊಂದಲದ ಜೊತೆಗೆ ಮುಂದೇನಾಗುತ್ತೆ ಎನ್ನುವ ಕುತೂಹಲ ಕೂಡ ಪ್ರೇಕ್ಷಕರನ್ನು ಕಾಡುತ್ತಿರುತ್ತೆ.

    ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ ಸುಮನ್ ನಗರ್ಕರ್ ಸಿನಿಮಾ 'ಬಬ್ರೂ'ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ ಸುಮನ್ ನಗರ್ಕರ್ ಸಿನಿಮಾ 'ಬಬ್ರೂ'

    ಕುತೂಹಲ ಹೆಚ್ಚಿಸುವ ರೇ ಟೊಸ್ಟಾಡೊ ಪಾತ್ರ

    ಕುತೂಹಲ ಹೆಚ್ಚಿಸುವ ರೇ ಟೊಸ್ಟಾಡೊ ಪಾತ್ರ

    ಇಬ್ಬರು ಪಯಣಿಸುತ್ತಿದ್ದ ಜರ್ನಿಯಲ್ಲಿ ರೇ ಟೊಸ್ಟಾಡೊ ಎಂಟ್ರಿ ನಂತರ ಬಬ್ರೂ ಪಯಣ ಇಂಟ್ರಸ್ಟಿಂಗ್ ಎನಿಸಿದರು, ಅದೆ ಸಮಯಕ್ಕೆ ಒಂದಿಷ್ಟು ಗೊಂದಲ ಕೂಡ ನೋಡುಗರನ್ನು ಸುತ್ತುವರೆಯುತ್ತೆ. ಟೊಸ್ಟಾಡೊ ಒಳ್ಳೆಯವನಾ, ಕೆಟ್ಟವನಾ? ಆತ ಯಾಕೆ ಇವರ ಜೊತೆ ಸೇರಿಕೊಂಡ? ಇಬ್ಬರ ಜರ್ನಿಯಲ್ಲಿ ದಿಢೀರನೆ ಎದುರಾಗುವ ಟೊಸ್ಟಾಡೊ, ಸನಾ ಅಥವಾ ಅರ್ಜುನ್ ಗೆ ಮೊದಲೆ ಪರಿಚಯವಿದ್ದನಾ ಎನ್ನುವ ಪ್ರಶ್ನೆ ಮೂಡಿಸುತ್ತೆ. ಗೊಂದಲದಲ್ಲೆ ಟೊಸ್ಟಾಡೊ ಪಾತ್ರ ಕೊನೆಗೊಳ್ಳುತ್ತ, ಪಯಣ ಮತ್ತೊಂದು ತಿರುವು ಪಡೆದುಕೊಳ್ಳುತ್ತೆ.

    ಅಸ್ಪಷ್ಟವಾದ ಮಿಸ್ ಕಾರ್ಲ್ ಮತ್ತು ರಿಕೊ ಪಾತ್ರ

    ಅಸ್ಪಷ್ಟವಾದ ಮಿಸ್ ಕಾರ್ಲ್ ಮತ್ತು ರಿಕೊ ಪಾತ್ರ

    ಒಂದೆಡೆ ಸನಾ ಅರ್ಜುನ್ ಮತ್ತು ಟೊಸ್ಟಾಡೊ ಬಬ್ರೂವಿನ ಜೊತೆ ಪಯಣ ಬೆಳೆಯುತ್ತಿದ್ದರೆ ಮತ್ತೊಂದೆಡೆ ಇನ್ನೊಂದು ಕಥೆ ಸಾಗುತ್ತಿರುತ್ತೆ. ಮಿಸ್ ಕಾರ್ಲಳನ್ನು ಬಚಾವ್ ಮಾಡುವುದಾಗಿ ಹೇಳಿ ಕರೆದುಕೊಂಡು ಹೋಗುವ ವ್ಯಕ್ತಿಯೊಬ್ಬ ಕೊನೆಗೆ ಆಕೆಯನ್ನೆ ಕಿಡ್ನಾಪ್ ಮಾಡುತ್ತಾನೆ. ಆಕೆ ಯಾರು, ಏನಕ್ಕೆ ಕಿಡ್ನಾಪ್ ಮಾಡಿದರು ಎನ್ನುವುದು ಅಸ್ಪಷ್ಟ. ಮಿಸ್ ಕಾರ್ಲ್ ಪದೇ ಪದೇ ಫೋನಿನಲ್ಲಿ ರಿಕೊ ರಿಕೊ ಎಂದು ಬಾಯ್ ಫ್ರೆಂಡ್ ರಿಕೋ ಜೊತೆ ಮಾತನಾಡುತ್ತಿರುತ್ತಾಳೆ. ಆದರೆ ರಿಕೋ ಬಬ್ರೂವನ್ನು ಹಿಂಬಾಲಿಸುತ್ತಿರುತ್ತಾನೆ.

    ನಟನೆ ಹೇಗಿದೆ?

    ನಟನೆ ಹೇಗಿದೆ?

    ಅನೇಕ ವರ್ಷಗಳ ಬಳಿಕ ಅಂದರೆ ಸುಮಾರು 15 ವರ್ಷಗಳ ನಂತರ ಸುಮನ್ ಬಣ್ಣ ಹಚ್ಚಿದ್ದಾರೆ. ಬೆಳದಿಂಗಳ ಬಾಲೆಯ ಅಭಿನಯ ಅದ್ಭುತ. ಇನ್ನು ಅರ್ಜುನ್ ಪಾತ್ರದಾರಿ ಮಹಿ ಹಿರೇಮಠ್ ಮೊದಲ ಸಿನಿಮಾದಲ್ಲೆ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಚಿಕ್ಕ ಪಾತ್ರವಾದರು ಗಾನಾ ಭಟ್ ನಟನೆ ಮೆಚ್ಚಲೆ ಬೇಕು. ಕನ್ನಡಿಗರು ಕಮ್ಮಿ ಇದ್ದರು ಪ್ರತಿಯೊಬ್ಬರು ಅದ್ಭುತವಾಗಿ ನಟಿಸಿದ್ದಾರೆ.

    'ಬೆಳದಿಂಗಳ ಬಾಲೆ' ಸುಮನ್ ನಗರ್ ಕರ್ ಇದೀಗ 'ಬ್ರಾಹ್ಮಿ''ಬೆಳದಿಂಗಳ ಬಾಲೆ' ಸುಮನ್ ನಗರ್ ಕರ್ ಇದೀಗ 'ಬ್ರಾಹ್ಮಿ'

    ಕೊನೆಯದಾಗಿ

    ಕೊನೆಯದಾಗಿ

    ಸಿನಿಮಾ ಕೊಂಚ ಬೋರೆನಿಸಿದರು ಕುಟುಂಬ ಸಮೇತರಾಗಿ ಹೋಗಿ ಬಬ್ರೂವಿನ ಪಯಣದಲ್ಲಿ ಭಾಗಿಯಾಗಬಹುದು. ರೋಚಕ ಜರ್ನಿಯಲ್ಲಿ ನೀವು ಭಾಗಿಯಾದರೆ ಅಮೆರಿಕ ಸುತ್ತಾಡಿದ ಅನುಭವ ನಿಮಗೂ ಆಗುತ್ತೆ.

    English summary
    Kannada famous actress Suman Nagarkar starrer Babru kannada film review.
    Monday, January 6, 2020, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X