twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!

    By Harshitha
    |

    ಬಿಡುಗಡೆ ಆಗಿರುವ ಏಕೈಕ ಟ್ರೈಲರ್ ನಲ್ಲಿ 'ಕಬಾಲಿ ಡಾ' ಡೈಲಾಗ್ ನೋಡಿ ಇದೊಂದು ಪಕ್ಕಾ ಮಾಸ್ ಸಿನಿಮಾ ಇರಬಹುದು, ಹೇಳಿ ಕೇಳಿ ರಜನಿಕಾಂತ್ ಸಿನಿಮಾ ಅಲ್ವಾ ಅಂತ ಯದ್ವಾ ತದ್ವಾ ನಿರೀಕ್ಷೆ ಇಟ್ಟುಕೊಂಡು ನೀವೇನಾದರೂ ಚಿತ್ರಮಂದಿರಕ್ಕೆ ನುಗ್ಗಿದರೆ ನಿಮ್ಮ ಸಂಭ್ರಮ ಕೇವಲ ಮೂವತ್ತು ನಿಮಿಷಕ್ಕೆ ಕೊನೆಯಾಗುತ್ತೆ. ಯಾಕಂದ್ರೆ, 'ನೆರುಪ್ಪು ಡಾ' ಪೂರ್ತಿ 'ನಿಧಾನ ಡಾ'.! ಎಲ್ಲಕ್ಕಿಂತ ಹೆಚ್ಚಾಗಿ ಇದು 'ರಂಜಿತ್' ಸಿನಿಮಾ ಡಾ.!

    ರಜನಿಕಾಂತ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಟೇಕ್ ಆಫ್ ಆದರೂ ಅದೇ ಸ್ಪೀಡ್ ಮೇನ್ಟೇನ್ ಮಾಡುವಲ್ಲಿ ನಿರ್ದೇಶಕ ಪಾ.ರಂಜಿತ್ ಸೋತಿದ್ದಾರೆ. [ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!]

    ಇಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿರುವ 'ಕಬಾಲಿ' ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

    Rating:
    3.0/5

    ಚಿತ್ರ : ಕಬಾಲಿ
    ನಿರ್ಮಾಣ : ಕಲೈಪುಲಿ.ಎಸ್.ಧನು
    ಕಥೆ, ಚಿತ್ರಕಥೆ, ನಿರ್ದೇಶನ : ಪಾ ರಂಜಿತ್
    ಸಂಕಲನ : ಪ್ರವೀಣ್.ಕೆ.ಎಲ್
    ಸಂಗೀತ : ಸಂತೋಷ್ ನಾರಾಯಣನ್
    ಛಾಯಾಗ್ರಹಣ : ಜಿ.ಮುರಳಿ
    ತಾರಾಗಣ : ರಜನಿಕಾಂತ್, ರಾಧಿಕಾ ಆಪ್ಟೆ, ದಿನೇಶ್, ಧನ್ಸಿಕಾ ಮತ್ತು ಇತರರು.

    ಸಿಂಪಲ್ ಕಥೆ

    ಸಿಂಪಲ್ ಕಥೆ

    ಮಲೇಶಿಯಾದಲ್ಲಿ ಇರುವ ಓರ್ವ ಗ್ಯಾಂಗ್ ಸ್ಟರ್ ಸುತ್ತ ನಡೆಯಬಹುದಾದ ಸಿಂಪಲ್ ಕಥೆ 'ಕಬಾಲಿ'. 25 ವರ್ಷಗಳ ಕಾಲ ಜೈಲು ವಾಸ ಅನುಭವಿಸಿ ಹೊರಬರುವ ಕಬಾಲೀಸ್ವರನ್ ಅಲಿಯಾಸ್ ಕಬಾಲಿ (ರಜನಿಕಾಂತ್) ಮುಂದಿರುವ ಸವಾಲುಗಳು ಹಾಗೂ ಫ್ಲ್ಯಾಶ್ ಬ್ಯಾಕ್ ಕಥನಗಳೇ ಈ ಚಿತ್ರ. ['ಕಬಾಲಿ' ನೋಡಲು ಹೋಗಿ 'ಕುರಿ' ಆದ ಪ್ರೇಕ್ಷಕರು.!]

    ಜೈಲು ವಾಸ ಯಾಕೆ.?

    ಜೈಲು ವಾಸ ಯಾಕೆ.?

    'ಕಬಾಲಿ' ಚಿತ್ರದ ಮುಖ್ಯ ತಿರುವು ಇದೇ. ಮಲೇಶಿಯಾದಲ್ಲಿ ಹಿಂದುಳಿದಿರುವ ತಮಿಳರ ಪರ ದನಿ ಎತ್ತುವ ಕಬಾಲಿ, 'ಡಾನ್' ಆಗುವುದು ಹೇಗೆ.? ಜೈಲು ವಾಸ ಅನುಭವಿಸಲು ಕಾರಣವೇನು.? ಕಬಾಲಿ ಸೇಡು ತೀರಿಸಿಕೊಳ್ಳುವುದು ಹೇಗೆ ಎಂಬ ಕುತೂಹಲ ಇದ್ರೆ, ನೀವು ಚಿತ್ರ ನೋಡಿ....

    ರಜನಿ ಆಕ್ಟಿಂಗ್ ಬಗ್ಗೆ ಕೇಳ್ಬೇಕಾ.?

    ರಜನಿ ಆಕ್ಟಿಂಗ್ ಬಗ್ಗೆ ಕೇಳ್ಬೇಕಾ.?

    ವಯಸ್ಸು ಅರವತ್ತು ದಾಟಿದ್ರೂ, ರಜನಿ ಚಾರ್ಮ್ ಕೊಂಚ ಕೂಡ ಕಡಿಮೆ ಆಗಿಲ್ಲ. 'ಕಬಾಲಿ' ಸಿನಿಮಾದಲ್ಲಿ ಪ್ರಸ್ತುತ ವಯಸ್ಸಿಗೆ ತಕ್ಕ ಪಾತ್ರ ನಿರ್ವಹಿಸಿರುವ ರಜನಿಕಾಂತ್ 'ಸ್ಟೈಲ್ ಗೆ ಕಿಂಗ್' ಎಂಬುದನ್ನು ಮಗದೊಂದು ಬಾರಿ ಪ್ರೂವ್ ಮಾಡಿದ್ದಾರೆ. ಡ್ಯಾನ್ಸ್ ಮತ್ತು ಸ್ಟಂಟ್ಸ್ ನಲ್ಲಿ ರಜನಿ ಬೊಂಬಾಟ್.

    ರಾಧಿಕಾ ಆಪ್ಟೆ ಅಭಿನಯ ಹೇಗಿದೆ.?

    ರಾಧಿಕಾ ಆಪ್ಟೆ ಅಭಿನಯ ಹೇಗಿದೆ.?

    ಮೊದಲ ಬಾರಿಗೆ ವಯಸ್ಸಿಗೆ ಮೀರಿದ ಪಾತ್ರ ಪೋಷಿಸಿರುವ ರಾಧಿಕಾ ಆಪ್ಟೆ ಅಭಿನಯ ಅಚ್ಚುಕಟ್ಟಾಗಿದೆ.

    ಧನ್ಸಿಕಾ ಆಕ್ಷನ್ ಕ್ವೀನ್.!

    ಧನ್ಸಿಕಾ ಆಕ್ಷನ್ ಕ್ವೀನ್.!

    ಆಕ್ಷನ್ ಕ್ವೀನ್ ಆಗಿ ಧನ್ಸಿಕಾ ಗಮನ ಸೆಳೆಯುತ್ತಾರೆ. ರಜನಿಕಾಂತ್ ಜೊತೆಗೆ ಧನ್ಸಿಕಾ ಜುಗಲ್ಬಂದಿ ಚೆನ್ನಾಗಿ ಮೂಡಿಬಂದಿದೆ.

    ಉಳಿದವರ ಕಥೆ.?

    ಉಳಿದವರ ಕಥೆ.?

    ಕಿಶೋರ್, ಜಾನ್ ವಿಜಯ್, ರಿತ್ವಿಕಾ, ದಿನೇಶ್ ರವಿ ಮತ್ತು ವಿನ್ಸ್ಟನ್ ಚಾವೋ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

    ಪ್ಲಸ್ ಪಾಯಿಂಟ್ ಏನು.?

    ಪ್ಲಸ್ ಪಾಯಿಂಟ್ ಏನು.?

    'ಕಬಾಲಿ' ಚಿತ್ರದ ಏಕೈಕ ಪ್ಲಸ್ ಪಾಯಿಂಟ್ ಅಂದ್ರೆ ಅದು 'ತಲೈವಾ' ರಜನಿಕಾಂತ್. ಒಂದು ಸೀದಾ-ಸಾದಾ ಚಿತ್ರವನ್ನ ಕಡೆಯವರೆಗೂ ತಾಳ್ಮೆಯಿಂದ ನೋಡುವಂತೆ ಮಾಡುವವರು ರಜನಿಕಾಂತ್ ಮಾತ್ರ.

    ಕ್ಯಾಮರಾ ವರ್ಕ್ ಸೂಪರ್

    ಕ್ಯಾಮರಾ ವರ್ಕ್ ಸೂಪರ್

    ಮಲೇಶಿಯಾ ನ ಎಷ್ಟು ಸಾಧ್ಯವೋ ಅಷ್ಟು ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿದ್ದಾರೆ ಜಿ.ಮುರಳಿ.

    ಸಂಗೀತ ಚೆನ್ನಾಗಿದೆ

    ಸಂಗೀತ ಚೆನ್ನಾಗಿದೆ

    ಸಂತೋಷ್ ನಾರಾಯಣನ್ ಕಂಪೋಸ್ ಮಾಡಿರುವ 'ನೆರುಪ್ಪು ಡಾ' ಮತ್ತು 'ಮಾಯಾ ನದಿ' ಹಾಡುಗಳು ಚೆನ್ನಾಗಿದೆ. ಚಿತ್ರಕಥೆಯ ಮೂಡ್ ಗೆ ತಕ್ಕಂತೆ ಹಿನ್ನಲೆ ಸಂಗೀತ ಪೂರಕವಾಗಿದೆ.

    ಮಾಸ್ ಅಭಿಮಾನಿಗಳಿಗೆ ಅಲ್ಲ 'ಕಬಾಲಿ'

    ಮಾಸ್ ಅಭಿಮಾನಿಗಳಿಗೆ ಅಲ್ಲ 'ಕಬಾಲಿ'

    ರಜನಿ ಎಂಟ್ರಿ, ಇಂಟರ್ ವಲ್ ನಲ್ಲಿ ಟ್ವಿಸ್ಟ್ ಮತ್ತು ಕ್ಲೈಮ್ಯಾಕ್ಸ್ ಬಿಟ್ಟರೆ, 'ಕಬಾಲಿ' ಚಿತ್ರದಲ್ಲಿ ಹೇಳಿಕೊಳ್ಳುವಂಥದ್ದು ಏನೂ ಇಲ್ಲ. ಮೊದಲು ರಿಲೀಸ್ ಆಗಿದ್ದ 'ಕಬಾಲಿ' ಟ್ರೈಲರ್ ನಲ್ಲಿ 'ಮಾಸ್' ಫೀಲ್ ಇತ್ತು. ಆದ್ರೆ ಅದಕ್ಕೆ ತದ್ವಿರುದ್ಧವಾಗಿದೆ ಇಡೀ ಸಿನಿಮಾ. ಮಾಸ್ ಸಿನಿಮಾಗಳನ್ನ ಇಷ್ಟ ಪಡುವವರಿಗೆ 'ಕಬಾಲಿ' ಹಿಡಿಸುವುದು ಕಷ್ಟ ಕಷ್ಟ.

    ಇದು 'ರಂಜಿತ್' ಸಿನಿಮಾ, ರಜನಿ ಸಿನಿಮಾ ಅಲ್ಲ.!

    ಇದು 'ರಂಜಿತ್' ಸಿನಿಮಾ, ರಜನಿ ಸಿನಿಮಾ ಅಲ್ಲ.!

    'ಕಬಾಲಿ' ರಜನಿಕಾಂತ್ ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ರಂಜಿತ್ ಸಿನಿಮಾ ಅಂತ ಧಾರಾಳವಾಗಿ ಹೇಳಬಹುದು. ಯಾಕಂದ್ರೆ, ಕೆಲ ಸನ್ನಿವೇಶಗಳು ರಂಜಿತ್ ರವರ ಹಿಂದಿನ 'ಮದ್ರಾಸ್' ಸಿನಿಮಾ ನೆನಪಿಸುತ್ತದೆ. ರಜನಿಕಾಂತ್ ಇಮೇಜ್ ಗೆ ಕಮರ್ಶಿಯಲ್ ಎಲಿಮೆಂಟ್ಸ್ 'ಕಬಾಲಿ' ಚಿತ್ರದಲ್ಲಿ ಕೊಂಚ ಕಮ್ಮಿ ಇದೆ.

    ಸ್ಲೋ ಮೋಷನ್ ಸಿನಿಮಾ.!

    ಸ್ಲೋ ಮೋಷನ್ ಸಿನಿಮಾ.!

    ಮೊದಮೊದಲ ವೇಗವಾಗಿ ಸಾಗಿದರೂ, ಫ್ಲ್ಯಾಶ್ ಬ್ಯಾಕ್ ಹೇಳುವ ನೆಪದಲ್ಲಿ 'ಕಬಾಲಿ' ಸ್ಲೋ ಆಗುತ್ತದೆ.

    ಫೈನಲ್ ಸ್ಟೇಟ್ ಮೆಂಟ್.!

    ಫೈನಲ್ ಸ್ಟೇಟ್ ಮೆಂಟ್.!

    ನೀವು ಅಪ್ಪಟ ರಜನಿಕಾಂತ್ ಫ್ಯಾನ್ ಆಗಿದ್ದರೆ, ಒಮ್ಮೆ ನೋಡಲು 'ಕಬಾಲಿ' ಅಡ್ಡಿಯಿಲ್ಲ. ಆದ್ರೆ ಅತಿಯಾದ ನಿರೀಕ್ಷೆ ಹೊತ್ತುಕೊಂಡು ಸಿನಿಮಾ ನೋಡಬೇಡಿ. 'ಪಡೆಯಪ್ಪ', 'ಭಾಷಾ' ತರಹ 'ಕಬಾಲಿ' ಇಲ್ಲ. ಹೀಗಾಗಿ ನಿಮ್ಮ ನಿರೀಕ್ಷೆ ಹುಸಿ ಆದರೆ, ಅದಕ್ಕೆ ಹೊಣೆ ಯಾರೂ ಅಲ್ಲ.

    ವಿಡಿಯೋ ನೋಡಿ...

    'ಕಬಾಲಿ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿದ ಬೆಂಗಳೂರು ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ಏನು ಅಂತ ತಿಳಿಯಲು ಈ ವಿಡಿಯೋ ನೋಡಿ....

    English summary
    Super Star Rajinikanth starrer Tamil Movie 'Kabali' has hit the screens today (June 22nd). Narration of the film is slow. But Rajinikanth steals the show. Here is the review of the film.
    Friday, July 22, 2016, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X